ಶ್ರೀದೇವಿ ಸಾವಿಗೆ ಬಿಗ್​ ಟ್ವಿಸ್ಟ್​: ಮೃತ ದೇಹ ಭಾರತಕ್ಕೆ ತರುವುದು ಮತ್ತಷ್ಟು ವಿಳಂಬ


Updated:February 27, 2018, 9:42 AM IST
ಶ್ರೀದೇವಿ ಸಾವಿಗೆ ಬಿಗ್​ ಟ್ವಿಸ್ಟ್​: ಮೃತ ದೇಹ ಭಾರತಕ್ಕೆ ತರುವುದು ಮತ್ತಷ್ಟು ವಿಳಂಬ
  • Share this:
ನ್ಯೂಸ್ 18 ಕನ್ನಡ

ಮುಂಬೈ(ಫೆ.27): ಮೋಹಕ ತಾರೆ ಶ್ರೀದೇವಿ ಮೃತದೇಹ ಭಾರತಕ್ಕೆ ತರುವುದು ಇನ್ನೊಂದಿಷ್ಟು ತಡವಾಗಲಿದೆ. ಯಾವಾಗ ಶವ ಬರುತ್ತದೆ ಎನ್ನುವುದು ಭಾರತೀಯ ರಾಯಭಾರಿ ಕಚೇರಿಗೂ ಗೊತ್ತಿಲ್ಲ.

ನಟಿ ಶ್ರೀದೇವಿ ದುಬೈನಲ್ಲಿ ಮರಣ ಹೊಂದಿದ್ದು ಹೃದಯಾಘಾತದಿಂದ ಅಲ್ಲ. ಬಾತ್​ ಟಬ್​ನಲ್ಲಿ ಮುಳುಗಿ ಸತ್ತಿರುವುದಾಗಿ ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಬಳಿಕ ಶ್ರೀದೇವಿ ಮೃತದೇಹ ಭಾರತಕ್ಕೆ ತರುವುದು ಮತ್ತಷ್ಟು ವಿಳಂಬವಾಗುತ್ತಿದೆ. ಯಾಕೆಂದರೆ ಶವ ಹಸ್ತಾಂತರಕ್ಕೆ ದುಬೈ ಪೊಲೀಸರ ಇನ್ನೊಂದು ಅನುಮತಿ ಸಿಗಬೇಕಂತೆ.

ಶವ ಹಸ್ತಾಂತರದ ಬಗ್ಗೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಯುಎಇ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಆದರೆ ಶವ ಸಿಗಬೇಕಾದ್ರೆ ಇನ್ನೊಂದು ಕ್ಲಿಯರೆನ್ಸ್ ಸಿಗಬೇಕು ಅಂತ ಯುಎಇಯ ಭಾರತೀಯ ರಾಯಭಾರಿ ನವ್​ದೀಪ್ ಸೂರಿ ತಿಳಿಸಿದ್ದಾರೆ. ಇದು ಪೊಲೀಸರ ಆಂತರಿಕ ವಿಚಾರ, ಆ ಬಗ್ಗೆ ನಮಗೇನು ಗೊತ್ತಿಲ್ಲ ಎಂದಿದ್ದಾರೆ.

ಯುಎಇ ಸರ್ಕಾರದ ಪ್ರಕ್ರಿಯೆ ಮುಗಿಯುವ ತನಕ ಮೃತದೇಹ ಯಾವಾಗ ರವಾನೆ ಮಾಡಬಹುದು ಎಂಬುದಕ್ಕೆ ಸಮಯ ನಿಗಧಿ ಮಾಡಲು ಸಾಧ್ಯವಿಲ್ಲ ಅಂತ ತಿಳಿಸಿದ್ದಾರೆ. ಸದ್ಯ ದುಬೈ ಪೊಲೀಸರು ಪ್ರಕರಣದ ತನಿಖೆ ನಡೆಸ್ತಿದ್ದು, ಶ್ರೀದೇವಿ ಪತಿ ಬೋನಿ ಕಪೂರ್​ರನ್ನ ತೀವ್ರ ವಿಚಾರಣೆ ನಡೆಸಿದ್ದಾರೆ. ಒಟ್ನಲ್ಲಿ ಶ್ರೀದೇವಿ ಮೃತದೇಹ ಮುಂಬೈಗೆ ಬರುವುದು ಇನ್ನಷ್ಟು ತಡವಾಗುವ ಸಾಧ್ಯತೆ ಇದೆ.
First published: February 27, 2018, 9:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading