ಉಗ್ರರ ಅಡಗುತಾಣದ ಮೇಲೆ ದಾಳಿ ಮಾಡಿದ ಶ್ರೀಲಂಕಾ ಸೇನೆ; ಆರು ಮಕ್ಕಳು ಸೇರಿ 15 ಜನರ ಸಾವು

ದಾಳಿಯಲ್ಲಿ ಸಾವನ್ನಪ್ಪಿದ್ದಉಗ್ರರಲ್ಲಿ ಮೂವರು ಆತ್ಮಾಹುತಿ ದಾಳಿಕೋರ ಆಗಿದ್ದಾರೆ. ಮನೆಯಲ್ಲಿ ಒಂದು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆ ನಡೆದಿದ್ದು, ಶನಿವಾರ ಮುಂಜಾನೆ ದೇಹಗಳನ್ನು ವಶಕ್ಕೆ ಪಡೆಯಲಾಗಿದೆ.

Seema.R | news18
Updated:April 27, 2019, 12:45 PM IST
ಉಗ್ರರ ಅಡಗುತಾಣದ ಮೇಲೆ ದಾಳಿ ಮಾಡಿದ ಶ್ರೀಲಂಕಾ ಸೇನೆ; ಆರು ಮಕ್ಕಳು ಸೇರಿ 15 ಜನರ ಸಾವು
ಶ್ರೀಲಂಕಾ ಪೊಲೀಸ್​​
  • News18
  • Last Updated: April 27, 2019, 12:45 PM IST
  • Share this:
ಕೊಲೊಂಬೋ (ಏ.27): ಈಸ್ಟರ್​ ದಿನದಂದು ಇಸ್ಲಾಮಿಕ್​ ಸ್ಟೇಟ್ ಉಗ್ರ ಸಂಘಟನೆ​ ನಡೆಸಿದ ದಾಳಿ ಸಂಬಂಧ ಉಗ್ರರ ಅಡಗುತಾಣಗಳ ಮೇಲೆ ಶ್ರೀಲಂಕಾ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಆರು ಮಕ್ಕಳು ಸೇರಿದಂತೆ 15 ಜನರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಶುಕ್ರವಾರ ರಾತ್ರಿ ಸಮ್ಮನ್​ತುರೈನಲ್ಲಿ ಶಂಕಿತ ಉಗ್ರರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ 15 ಜನ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ವಕ್ತಾರ ರುವನ್​ ಗುಣಶೇಖರ ತಿಳಿಸಿದ್ದಾರೆ.

ಶಂಕಿತ ಉಗ್ರರು ಅಡಗಿರುವ ಕುರಿತು ಶುಕ್ರವಾರ ರಾತ್ರಿ ನಮಗೆ ಮಾಹಿತಿ ತಿಳಿಯಿತು. ಅವರ ಬಳಿ ಮೂರು ಸ್ಪೋಟಕಗಳಿದ್ದು ಅವುಗಳನ್ನು ಉಡಾಯಿಸಲು ಅವರು ಸಜ್ಜಾಗಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯೇ ಅವರು ಅಡಗಿದ್ದ ಮನೆಯನ್ನು ಸುತ್ತುವರೆದು ಕಾರ್ಯಾಚರಣೆ ನಡೆಸಿದೆವು. ಈ ವೇಳೆ ಕನಿಷ್ಠ ಮೂರು ಜನರು ಗಾಯಗೊಂಡಿದ್ದಾರೆ.  ಇನ್ನು ದಾಳಿಯಲ್ಲಿ ಸಾವನ್ನಪ್ಪಿದ್ದಉಗ್ರರಲ್ಲಿ ಮೂವರು ಆತ್ಮಾಹುತಿ ದಾಳಿಕೋರರಾಗಿದ್ದಾರೆ. ಮನೆಯಲ್ಲಿ ಒಂದು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆ ನಡೆದಿದ್ದು, ಶನಿವಾರ ಮುಂಜಾನೆ ದೇಹಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನು ಓದಿ: ಕೊಲಂಬೋದಲ್ಲಿ ಸರಣಿ ಬಾಂಬ್​ ಸ್ಫೋಟಿಸಿದ 9 ಆತ್ಮಾಹುತಿ ದಾಳಿಕೋರರಲ್ಲಿ ಓರ್ವ ಮಹಿಳೆಯೂ ಇದ್ದಳು; ರಕ್ಷಣಾ ಸಚಿವ

ಈಸ್ಟರ್​ ದಿನದಂದು ನಡೆದ ದಾಳಿಯ ರೂವಾರಿ ನಾವೇ ಎಂದು ಐಸಿಸ್​ ಸಂಘಟನೆ ಹೊಣೆ ಹೊತ್ತು ಕೊಂಡ ಬಳಿಕ ಶ್ರೀಲಂಕಾ ಸೇನೆ ದೇಶದಲ್ಲಿ ಅಡಗಿರುವ ಉಗ್ರರ ದಮನಕ್ಕೆ ಮುಂದಾಗಿದ್ದು, ಇದರ ಅಂಗವಾಗಿ ದೇಶದ ಪೂರ್ವಭಾಗದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆ ವೇಳೆ ಸೇನಾ ಸಿಬ್ಬಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬ.ಂದಿದೆ,

ಇನ್ನು ರಕ್ಷಣಾ ವೈಫಲ್ಯದಿಂದ ದೇಶದಲ್ಲಿ ನಡೆದ ಭಾರೀ ಅನಾಹುತದ ಕುರಿತು ಪಶ್ಚಾತಾಪ ವ್ಯಕ್ತಪಡಿಸಿರುವ ಅಧಿಕಾರಿಗಳು, ಈ ಘಟನೆಗೆ ಎಲ್ಲರೂ ಹೊಣೆ ಹೊತ್ತಿದ್ದೇವೆ. ಮತ್ತು ದೇಶದ ಜನರ ಸುರಕ್ಷತೆ ಕಾಪಾಡುವಲ್ಲಿ ವಿಫಲರಾದ ಕಾರಣ ನಾವು ದೇಶದ ಜನರಿಗೆ ಕ್ಷಮೆ ಕೋರುತ್ತೇವೆ ಎಂದು ಸರ್ಕಾರದ ಅಧಿಕೃತ ಖಾತೆಯಿಂದ ಟ್ವೀಟ್​​ ಮಾಡಲಾಗಿದೆ.

First published: April 27, 2019, 12:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading