Sri Lanka Crisis: ಸಾಲದ ಸುಳಿಯಲ್ಲಿ ಸಿಲುಕಿದ ಶ್ರೀಲಂಕಾ! ದ್ವೀಪರಾಷ್ಟ್ರದ ಮುಂದಿನ ಗತಿಯೇನು?

1948 ರಲ್ಲಿ ಸ್ವಾತಂತ್ರ್ಯದ ನಂತರ ಶ್ರೀಲಂಕಾ ದೇಶದ ಇತಿಹಾಸದಲ್ಲಿ ಇದೊಂದು ಹಿಂದೆಂದೂ ಕಂಡುಬರದ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ಸಂಕಷ್ಟವಾಗಿದ್ದು ವಿದೇಶಿ ವಿನಿಮಯದ ಅತಿ ಗಂಭೀರ ಕೊರತೆಯೇ ಇದಕ್ಕೆ ಕಾರಣವಾಗಿದ್ದು ಈ ಕೊರತೆಯಿಂದಾಗಿಯೇ ದೇಶವು ಏಪ್ರಿಲ್ 18 ರಂದು ಸಾರ್ವಭೌಮ ಬಾಂಡ್‌ಗಳ ಮೇಲಿನ ಎರಡು ಕೂಪನ್ ಗಳ ಹಣ ಪಾವತಿಗಳನ್ನು ಮಾಡಲು ಸಾಧ್ಯವಾಗಿಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪುಟ್ಟ ದ್ವೀಪ ರಾಷ್ಟ್ರವಾದ ಶ್ರೀಲಂಕಾದ (Sri Lanka) ಪರಿಸ್ಥಿತಿ ಇದೀಗ ತೀವ್ರವಾಗಿ ಹದಗೆಟ್ಟಿದೆ. ಕಳೆದ ಕೆಲ ತಿಂಗಳುಗಳಿಂದ ಶ್ರೀಲಂಕಾ ಆರ್ಥಿಕವಾಗಿ (Economic) ಅಪಾರ ಸಮಸ್ಯೆಯನ್ನು (Sri Lanka Economic Crisis) ಎದುರಿಸುತ್ತಿದ್ದು ಯಾವುದೇ ವಿದೇಶಿ ವಿನಿಮಯ (Foreign Exchange) ಇಲ್ಲದೆ ದಿನದಿಂದ ದಿನಕ್ಕೆ ದೇಶವು ದೀವಾಳಿತನಕ್ಕೆ ನೂಕಲ್ಪಡುತ್ತಿದೆ. ಈ ನಡುವೆ ಶ್ರೀಲಂಕಾವು ಅದರ ಎರಡು ಸಾರ್ವಭೌಮ ಬಾಂಡುಗಳ (Bond) ಮೇಲೆ ಕೂಪನ್‌ಗಳ (Coupon) ಹಣ ಪಾವತಿಸಬೇಕಾಗಿತ್ತು. ಈಗ ಅದನ್ನು ಸಹ ಮಾಡಲಾಗದ ಸ್ಥಿತಿಯನ್ನು ದೇಶ ತಲುಪಿದೆ. ಕೂಪನ್ ಪಾವತಿಸದ ಕಾರಣ ರೇಟಿಂಗ್ ಏಜೆನ್ಸಿಗಳಿಂದ (Rating Sgency) ದೇಶವನ್ನು ಡೀಫಾಲ್ಟರ್ ಪಟ್ಟಿಯಲ್ಲಿ ಸೇರಿಸಲಾಗುವುದೆಂದು ನಿರೀಕ್ಷಿಸಲಾಗಿದೆ.

ಈ ಮಧ್ಯೆ ದೇಶದ ಇಂಧನ ಸಚಿವರು ದೇಶವು ಇಂಧನಕ್ಕಾಗಿ ಪಾವತಿಸಲು ಸಹ ಹಣವಿಲ್ಲ ಎಂದು ಹೇಳಿದ್ದಾರೆ. 1948 ರಲ್ಲಿ ಸ್ವಾತಂತ್ರ್ಯದ ನಂತರ ಶ್ರೀಲಂಕಾ ದೇಶದ ಇತಿಹಾಸದಲ್ಲಿ ಇದೊಂದು ಹಿಂದೆಂದೂ ಕಂಡುಬರದ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ಸಂಕಷ್ಟವಾಗಿದ್ದು ವಿದೇಶಿ ವಿನಿಮಯದ ಅತಿ ಗಂಭೀರ ಕೊರತೆಯೇ ಇದಕ್ಕೆ ಕಾರಣವಾಗಿದ್ದು ಈ ಕೊರತೆಯಿಂದಾಗಿಯೇ ದೇಶವು ಏಪ್ರಿಲ್ 18 ರಂದು ಸಾರ್ವಭೌಮ ಬಾಂಡ್‌ಗಳ ಮೇಲಿನ ಎರಡು ಕೂಪನ್​ಗಳ ಹಣ ಪಾವತಿಗಳನ್ನು ಮಾಡಲು ಸಾಧ್ಯವಾಗಿಲ್ಲ.

ಕೂಪನ್ ಹಣ ಪಾವತಿ
ಇನ್ನು, ಕೂಪನ್ ಹಣ ಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಇದು ಈಗ ತನ್ನಿಂದ ಸಾಧ್ಯವಾಗದು ಎಂದು ಈಗಾಗಲೇ ಹೇಳಿದೆ ಹಾಗೂ ಈ ಪಾವತಿಗೆ ಸಂಬಂಧಿಸಿದಂತೆ ದೇಶಕ್ಕೆ ನೀಡಲಾಗಿದ್ದ ಹೆಚ್ಚುವರಿ 30 ದಿನಗಳ ಗ್ರೇಸ್ ಅವಧಿಯು ಕೊನೆಗೊಂಡಿದೆ. ಏತನ್ಮಧ್ಯೆ, 2023 ಮತ್ತು 2028 ರಲ್ಲಿ ಮ್ಯಾಚ್ಯೂರ್ ಆಗುವ ಬಾಂಡ್‌ಗಳ ಮೇಲಿನ ರೇಟಿಂಗ್‌ಗಳನ್ನು ಈಗಾಗಲೇ 'ಡೀಫಾಲ್ಟ್' ಗುಂಪಿನಲ್ಲಿ ಸೇರಿಸಲಾಗಿದ್ದು ಈ ಹೆಚ್ಚುವರಿ ಗ್ರೇಸ್ ಅವಧಿ ಮುಗಿದ ನಂತರ ಇನ್ನೂ ಕೂಪನ್ ಹಣ ಪಾವತಿ ಮಾಡದಿರುವ ಬಗ್ಗೆ ದೃಢೀಕರಣ ಪಡೆದ ತರುವಾಯ ದೇಶದ ಒಟ್ಟಾರೆ ರೇಟಿಂಗ್ ಅನ್ನು 'D' ಯಲ್ಲಿ ಸೇರಿಸಬಹುದೆಂದು S&P ಹೇಳಿದೆ.

ಪೆಟ್ರೋಲ್ ಸಾಗಣೆಗೆ ಪಾವತಿಸಲು ಡಾಲರ್ ಇಲ್ಲ
ಶ್ರೀಲಂಕಾದಲ್ಲಿ ಪ್ರಸ್ತುತ ಪೆಟ್ರೋಲ್ ಸಾಗಣೆಗೆ ಪಾವತಿಸಲು ಯಾವುದೇ ಡಾಲರ್ ಇಲ್ಲ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಸೆಕೆರಾ ಸಂಸತ್ತಿಗೆ ತಿಳಿಸಿದ್ದಾರೆ ಹಾಗೂ ಇದೇ ಸಂದರ್ಭದಲ್ಲಿ ಅವರು ಮುಂದಿನ ಎರಡು ದಿನಗಳವರೆಗೆ ಸರತಿ ಸಾಲಿನಲ್ಲಿ ನಿಲ್ಲುವುದನ್ನು ನಿಲ್ಲಿಸುವಂತೆ ಜನರಿಗೆ ಮನವಿ ಸಹ ಮಾಡಿದರು.

ಇದನ್ನೂ ಓದಿ: Explained: ಅಮೆರಿಕದಲ್ಲಿ ಮಕ್ಕಳ ಪೌಷ್ಠಿಕ ಆಹಾರದ ಕೊರತೆ! ಬೇಬಿ ಫಾರ್ಮುಲಾ ತಯಾರಿಕೆಗೆ 'ದೊಡ್ಡಣ್ಣ' ಏನು ಮಾಡ್ತಾನೆ?

ಮಾರ್ಚ್ 28 ರಿಂದ ಕೊಲಂಬೊ ಬಂದರಿನಲ್ಲಿ ಪೆಟ್ರೋಲ್ ಸಾಗಣೆಯಾಗಿದೆ ಆದರೆ ಸರ್ಕಾರವು ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು."ಕ್ರೆಡಿಟ್ ಪತ್ರಗಳನ್ನು ತೆರೆಯಲು ಸಾಕಷ್ಟು ಡಾಲರ್‌ಗಳು ಲಭ್ಯವಿಲ್ಲ" ಎಂದು ಅವರು ಹೇಳಿದರು. "ನಾವು ಹಣವನ್ನು ಪಡೆಯಲು/ಹುಡುಕಲು ಕೆಲಸ ಮಾಡುತ್ತಿದ್ದೇವೆ ಆದರೆ ವಾರಾಂತ್ಯದವರೆಗೆ ಪೆಟ್ರೋಲ್ ಲಭ್ಯವಿರುವುದಿಲ್ಲ. ಆಂಬ್ಯುಲೆನ್ಸ್‌ನಂತಹ ಅಗತ್ಯ ಸೇವೆಗಳಿಗೆ ಪೆಟ್ರೋಲ್‌ನ ಸಣ್ಣ ಮೀಸಲು ಸ್ಟಾಕ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ" ಎಂದಷ್ಟೆ ಅವರು ಹೇಳಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿದ್ದು ಹೀಗೆ
ಈ ನಡುವೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು "ದೇಶವು ವಿಶ್ವಬ್ಯಾಂಕ್‌ನಿಂದ 160 ಮಿಲಿಯನ್ ಡಾಲರ್ ಬ್ರಿಡ್ಜ್ ಫೈನಾನ್ಸಿಂಗ್ ಅನ್ನು ಪಡೆದುಕೊಂಡಿದೆ, ಆದರೆ ಹಣವನ್ನು ಇಂಧನ ಪಾವತಿಗೆ ಬಳಸಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಅಂಕಿಅಂಶಗಳನ್ನು ನೋಡಿದರೆ ಗಾಬರಿಯಾಗುವಂತಿವೆ, ಆದರೆ ವಾಸ್ತವವೆಂದರೆ ನಮ್ಮ ಬಳಿ 1 ಮಿಲಿಯನ್ ಡಾಲರ್ ಕೂಡ ಇಲ್ಲ" ಎಂದು ನುಡಿದಿದ್ದಾರೆ.

ಸಾಂಕ್ರಾಮಿಕ ಬಿಕ್ಕಟ್ಟು, ಏರುತ್ತಿರುವ ತೈಲ ಬೆಲೆಗಳು ಮತ್ತು ಜನಪ್ರಿಯವಾದ ತೆರಿಗೆ ಕಡಿತಗಳಿಂದಾಗಿ ತೀವ್ರವಾಗಿ ಹಾನಿಗೊಳಗಾದ ಶ್ರೀಲಂಕಾದ ಭೀಕರ ಆರ್ಥಿಕ ಪರಿಸ್ಥಿತಿಯು ಹಣದುಬ್ಬರ ಮತ್ತು ಅಗತ್ಯ ಸರಬರಾಜುಗಳ ಕೊರತೆಗೆ ಕಾರಣವಾಯಿತು. ಈ ಸಂಕಷ್ಟ ಸಾಮಾನ್ಯ ಜನಜೀವನದ ಮೇಲೆ ಊಹಿಸಲಾಗದ ಪ್ರಮಾಣದಷ್ಟು ಪ್ರಭಾವ ಬೀರಿದ್ದು ಜನರು ಆಕ್ರೋಶದಲ್ಲಿದ್ದಾರೆ. ದೇಶದಲ್ಲೆಲ್ಲ ಪ್ರತಿಭಟನೆಗಳು ಜೋರಾಗಿದ್ದು ಸಾವಿರಾರು ಜನರು ಬೀದಿಗಿಳಿದಿದ್ದಾರೆ.

ಇದನ್ನೂ ಓದಿ:  South Asia: ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ನೇಪಾಳ ವಿಮಾನ ನಾಪತ್ತೆ

ಪರ ಮತ್ತು ವಿರೋಧಿ ಬಣಗಳು ಹಾಗೂ ಪೊಲೀಸರ ನಡುವಿನ ಹಿಂಸಾಚಾರದಲ್ಲಿ ಕಳೆದ ವಾರ ಒಂಬತ್ತು ಮಂದಿ ಸಾವನ್ನಪ್ಪಿದ್ದರು ಮತ್ತು 300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಮಧ್ಯೆ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Published by:Ashwini Prabhu
First published: