HOME » NEWS » National-international » SRI LANKA SCRAPS DEAL WITH INDIA AND JAPAN TO DEVELOP ECT AT COLOMBO PORT SNVS

ಭಾರತದೊಂದಿಗಿನ ಬಂದರು ಅಭಿವೃದ್ಧಿ ಒಪ್ಪಂದ ರದ್ದುಗೊಳಿಸಿ ಶಾಕ್ ಕೊಟ್ಟ ಶ್ರೀಲಂಕಾ

ಕೊಲಂಬೋ ಪೋರ್ಟ್​ನ ಈಸ್ಟ್ ಕಂಟೇನರ್ ಟರ್ಮಿನಲ್ ಅಭಿವೃದ್ಧಿಗಾಗಿ 2019ರಲ್ಲಿ ಭಾರತ ಮತ್ತು ಜಪಾನ್ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನ ಶ್ರೀಲಂಕಾ ರದ್ದು ಮಾಡಿದೆ. ವಿಪಕ್ಷಗಳು ಮತ್ತು ಟ್ರೇಡ್ ಯೂನಿಯನ್​ಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

news18
Updated:February 3, 2021, 10:58 AM IST
ಭಾರತದೊಂದಿಗಿನ ಬಂದರು ಅಭಿವೃದ್ಧಿ ಒಪ್ಪಂದ ರದ್ದುಗೊಳಿಸಿ ಶಾಕ್ ಕೊಟ್ಟ ಶ್ರೀಲಂಕಾ
ಮಹಿಂದಾ ರಾಜಪಕ್ಸ
  • News18
  • Last Updated: February 3, 2021, 10:58 AM IST
  • Share this:
ಕೊಲಂಬೋ: ಭಾರತ ಮತ್ತು ಜಪಾನ್ ಜೊತೆ ಸೇರಿ ಕೊಲಂಬೋ ಪೋರ್ಟ್​ನ ಈಸ್ಟ್ ಕಂಟೇನರ್ ಟರ್ಮಿನಲ್ (ಇಸಿಟಿ) ಅಭಿವೃದ್ಧಿಪಡಿಸುವ ಒಪ್ಪಂದವನ್ನು ಶ್ರೀಲಂಕಾ ರದ್ದುಗೊಳಿಸಿದೆ. ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಅವರ ಕಚೇರಿಯಿಂದ ನಿನ್ನೆ ಈ ಮಾಹಿತಿ ಬಂದಿದೆ. ವಿಪಕ್ಷಗಳು ಹಾಗೂ ಟ್ರೇಡ್ ಯೂನಿಯನ್​ಗಳು ಹಲವು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಶ್ರೀಲಂಕಾ ಬಗ್ಗಿದೆ. ಭಾರತಕ್ಕೆ ಈ ಟರ್ಮಿನಲ್ ಬಹಳ ಮುಖ್ಯವಾಗಿತ್ತು. ಈಸ್ಟ್ ಕಂಟೇನರ್ ಬದಲು ವೆಸ್ಟ್ ಕಂಟೇನರ್ ಟರ್ಮಿನಲ್ ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಶ್ರೀಲಂಕಾ ಮುಂದಾಗಿದೆ.

ಈಸ್ಟ್ ಕಂಟೇನರ್ ಟರ್ಮಿನಲ್ ಅಭಿವೃದ್ಧಿ ಒಪ್ಪಂದಕ್ಕೆ ಶ್ರೀಲಂಕಾದಲ್ಲಿ ವಿರೋಧ ವ್ಯಕ್ತವಾಗಲು ಕಾರಣವಿದೆ. ಈ ಒಪ್ಪಂದದ ಪ್ರಕಾರ ಅಭಿವೃದ್ಧಿಪಡಿಸಿದ ಟರ್ಮಿನಲ್​ನ ಶೇ. 49 ಪಾಲು, ಅಂದರೆ ಮಾಲಿಕತ್ವವು ಭಾರತ ಮತ್ತು ಜಪಾನ್​ಗೆ ಹೋಗುತ್ತದೆ. ಶೇ. 51ರಷ್ಟು ಪಾಲು ಶ್ರೀಲಂಕಾಗೆ ಉಳಿಯುತ್ತದೆ. ಶ್ರೀಲಂಕಾಗೆ ಬಹುಪಾಲು ಸಿಗುತ್ತದಾದರೂ ಇದು ಭಾರತ ಮತ್ತು ಜಪಾನ್​ಗೆ ಟರ್ಮಿನಲ್ ಅನ್ನು ಮಾರಾಟ ಮಾಡುವ ಚಿತಾವಣೆ ಎಂಬುದು ಟ್ರೇಡ್ ಯೂನಿಯನ್​ಗಳ ಆಕ್ಷೇಪ.

ಇದನ್ನೂ ಓದಿ: ನಮಗೆ ತೊಂದರೆ ನೀಡುವುದನ್ನು ನಿಲ್ಲಿಸುವವರೆಗೆ ಮಾತುಕತೆ ಇಲ್ಲ: ದೆಹಲಿ ಪ್ರತಿಭಟನಾನಿರತ ರೈತರ ಸ್ಪಷ್ಟನೆ

ಭಾರತದ ಅದಾನಿ ಕಂಪನಿ ಈ ಪೋರ್ಟ್ ಅಭಿವೃದ್ಧಿಗೆ ಗುತ್ತಿಗೆ ಪಡೆಯಬೇಕಿತ್ತು. ಇದಕ್ಕೆ ಲಂಕಾದಲ್ಲಿ ಪ್ರಬಲ ವಿರೋಧ ವ್ಯಕ್ತವಾಗಿದೆ. ಈಸ್ಟ್ ಕಂಟೇನರ್ ಟರ್ಮಿನಲ್​ನ ಸಂಪೂರ್ಣ ಮಾಲಿಕತ್ವವು ಶ್ರೀಲಂಕಾದ ಬಂದರು ಅಭಿವೃದ್ಧಿ ಸಂಸ್ಥೆಗೆ ಮಾತ್ರ ಇರಬೇಕು ಎಂದು ಒತ್ತಾಯಿಸಿ ರಾಜಕೀಯ ಪಕ್ಷಗಳು ಹಾಗೂ ಟ್ರೇಡ್ ಯೂನಿಯನ್​ಗಳು ನಿರಂತರ ಪ್ರತಿಭಟನೆ ನಡೆಸಿದವು. ಪ್ರತಿಭಟಿಸಿದ ಟ್ರೇಡ್ ಯೂನಿಯನ್​ಗಳಲ್ಲಿ ಬಹುತೇಕವು ಆಡಳಿತಾರೂಢ ಪಕ್ಷಗಳಿಗೆ ಸೇರಿದವೇ ಆಗಿರುವುದು ಅಚ್ಚರಿಯ ವಿಷಯ. ಆಡಳಿತ ಪಕ್ಷದ ಹಲವು ಮುಖಂಡರೇ ಈ ಒಪ್ಪಂದವನ್ನ ವಿರೋಧಿಸುತ್ತಿದ್ಧಾರೆ.

ಈ ಒತ್ತಾಯಕ್ಕೆ ಕಟ್ಟುಬಿದ್ದು ರಾಜಪಕ್ಸ ಸರ್ಕಾರ ಈಸ್ಟ್ ಕಂಟೇನರ್ ಟರ್ಮಿನಲ್ ಅಭಿವೃದ್ಧಿಪಡಿಸುವ ಒಪ್ಪಂದವನ್ನ ಕೈಬಿಟ್ಟಿದ್ಧಾರೆ. ಇದೀಗ ಭಾರತ ಮತ್ತು ಜಪಾನ್ ದೇಶಗಳ ಹಣಕಾಸು ನೆರವಿನೊಂದಿಗೆ ತಾನೆಯೇ ವೆಸ್ಟ್ ಕಂಟೇನರ್ ಟರ್ಮಿನಲ್ ಅಭಿವೃದ್ಧಿಪಡಿಸುವುದಾಗಿ ಹೇಳಿದೆ. ಈ ಬಗ್ಗೆ ಭಾರತದ ಕಡೆಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. 2019ರಲ್ಲಿ ಇಸಿಟಿ ಅಭಿವೃದ್ಧಿಗೆ ಒಪ್ಪಂದ ಆಗಿತ್ತು. ಈ ಒಪ್ಪಂದ ಆದಷ್ಟು ಬೇಗ ಜಾರಿಯಾಗುವ ವಿಶ್ವಾಸ ಇದೆ ಎಂದಷ್ಟೇ ಕೊಲಂಬೋದಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿದೆ.

ಇದನ್ನೂ ಓದಿ: ಜಾರ್ಖಂಡ್​ನಲ್ಲಿ ಕುಡಿದು ತಾಯಿಯನ್ನೇ ಕೊಂದ ಪಾಪಿ: ಚಿತೆ ಮೇಲೆ ಚಿಕನ್ ರೋಸ್ಟ್ ಮಾಡಿ ತಿಂದ ಮಗ!

ಶ್ರೀಲಂಕಾದಲ್ಲಿ ಚೀನಾದ ಹಿಡಿತ ನಿರಂತರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಇಸಿಟಿ ಒಪ್ಪಂದ ಬಹಳ ಮುಖ್ಯವಾಗಿತ್ತು. ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಅಂಡ್ ರೋಡ್ ಯೋಜನೆಗೆ ಶ್ರೀಲಂಕಾ ಬಹಳ ಮುಖ್ಯವಾದ ಆಯಕಟ್ಟಿನ ಜಾಗವೂ ಹೌದು. ಹೀಗಾಗಿ, ಶ್ರೀಲಂಕಾದಲ್ಲಿ ಬಂದರು, ವಿಮಾನ ನಿಲ್ದಾಣ, ಬಂದರು-ನಗರಿ, ಹೆದ್ದಾರಿ, ವಿದ್ಯುತ್ ಸ್ಥಾವರ ಇತ್ಯಾದಿ ಅನೇಕ ಯೋಜನೆಗಳಿಗೆ ಲಕ್ಷಾಂತರ ಕೋಟಿ ಹಣವನ್ನು ಚೀನಾ ಸುರಿದಿದೆ. ಈ ಯೋಜನೆಗಳಿಂದ ಸರಿಯಾದ ಹಣಕಾಸು ಪ್ರತಿಫಲ ಇಲ್ಲದಿರುವುದರಿಂದ ಲಂಕಾ ಸಂಕಷ್ಟಕ್ಕೆ ಸಿಲುಕಿದೆ. ಚೀನಾದ ಕೊಟ್ಟ ಸಾಲದ ಸುಳಿಗೆ ಲಂಕಾ ಸಿಕ್ಕು ವಿಲವಿಲ ಒದ್ದಾಡುತ್ತಿದೆ. ಸಾಲ ತೀರಿಸುವ ಸಲುವಾಗಿ ಪೋರ್ಟ್​ವೊಂದನ್ನ ಚೀನೀ ಕಂಪನಿಗೆ 99 ವರ್ಷ ಲೀಸ್​ಗೆ ಕೊಟ್ಟಿದೆ ಶ್ರೀಲಂಕಾ.ಇವೆಲ್ಲದರ ಮಧ್ಯೆ ಇದೀಗ ಭಾರತದೊಂದಿಗಿನ ಒಪ್ಪಂದವನ್ನ ಶ್ರೀಲಂಕಾ ರದ್ದು ಮಾಡಿರುವುದು ಕುತೂಹಲದ ವಿಷಯವಾಗಿದೆ. ಇದು ಚೀನಾದ ಒತ್ತಡದಿಂದ ತೆಗೆದುಕೊಂಡ ನಿರ್ಧಾರವಾ ಎಂಬ ಅನುಮಾನ ಬರದೇ ಇರದು.
Published by: Vijayasarthy SN
First published: February 3, 2021, 10:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories