ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 359 ಅಲ್ಲ 253

ಬಾಂಬ್​ ದಾಳಿಯಲ್ಲಿ 253 ಜನರು ಮೃತಪಟ್ಟಿದ್ದಾರೆ. 359 ಜನರು ಸತ್ತಿದ್ದಾರೆ ಎನ್ನುವ ವರದಿ ಸುಳ್ಳು ಎಂದು ಸಚಿವಾಲಯ ತಿಳಿಸಿದೆ.

Rajesh Duggumane | news18
Updated:April 26, 2019, 12:23 PM IST
ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 359 ಅಲ್ಲ 253
ಶ್ರೀಲಂಕಾ ದಾಳಿಯಲ್ಲಿ ಮೃತಪಟ್ಟವರ ಸಮಾಧಿ ಬಳಿ ಅವರ ಕುಟುಂಬದವರು
  • News18
  • Last Updated: April 26, 2019, 12:23 PM IST
  • Share this:
ಕೊಲಂಬೋ (ಏ.26): ಶ್ರೀಲಂಕಾ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 359 ಎಂದು ಹೇಳಲಾಗಿತ್ತು. ಈ ಬಗ್ಗೆ ಅಧಿಕಾರಿಗಳು ಖಚಿತ ಮಾಹಿತಿ ನೀಡಿದ್ದು, 253 ಜನರು ಮೃತಪಟ್ಟಿದ್ದಾರೆ ಎಂದಿದ್ದಾರೆ.

“ನ್ಯಾಷನಲ್​ ತೊವ್​ಹೀದ್​ ಜಮಾತ್​ (ಎನ್​ಟಿಜೆ) ಸಂಘಟನೆಯ 9 ಉಗ್ರರು ಆತ್ಮಾಹುತಿ ದಾಳಿ ನಡೆಸಿ 359 ಜನರನ್ನು ಹತ್ಯೆ ಮಾಡಿದ್ದರು. 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು,” ಎಂದು ಇತ್ತೀಚೆಗೆ ವರದಿಯಾಗಿತ್ತು. ಆದರೆ, ಆರೋಗ್ಯ ಸಚಿವಾಲಯ ಈ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಬಾಂಬ್​ ದಾಳಿಯಲ್ಲಿ 253 ಜನರು ಮೃತಪಟ್ಟಿದ್ದಾರೆ. 359 ಜನರು ಸತ್ತಿದ್ದಾರೆ ಎನ್ನುವ ವರದಿ ಸುಳ್ಳು ಎಂದು ಸಚಿವಾಲಯ ತಿಳಿಸಿದೆ.

“ಇಷ್ಟು ಪ್ರಮಾಣದಲ್ಲಿ ಜನರು ಮೃತಪಟ್ಟಾಗ ಹೆಣಗಳನ್ನು ಲೆಕ್ಕ ಹಾಕುವುದು ಸಾಮಾನ್ಯ ವಿಚಾರವಲ್ಲ. ಲೆಕ್ಕಾಚಾರ ತಪ್ಪಿದ್ದರಿಂದ ಸಂಖ್ಯೆಯಲ್ಲಿ ವ್ಯತ್ಯಯವಾಗಿದೆ,” ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮೃತಪಟ್ಟ ರಾಜ್ಯದ 10 ಮಂದಿಯ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ

ಭಾನುವಾರ ಈಸ್ಟರ್​ ಪ್ರಾರ್ಥನೆ ವೇಳೆ  ಕೊಲಂಬೋದ ಚರ್ಚ್​ ಹಾಗೂ ಸ್ಟಾರ್​ ಹೋಟೆಲ್​ಗಳಲ್ಲಿ ಬಾಂಬ್​​ ಸರಣಿ ಸ್ಫೋಟ ಸಂಭವಿಸಿತ್ತು. ಒಟ್ಟು ಎಂಟು ಕಡೆಗಳಲ್ಲಿ ಬಾಂಬ್​ ಸ್ಫೋಟವಾಗಿತ್ತು. ಈ ವೇಳೆ 450ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಭಾನುವಾರ ಬೆಳಗ್ಗೆ 8:45ರ ಸುಮಾರಿಗೆ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ 6 ಬಾಂಬುಗಳು ಸ್ಪೋಟಗೊಂಡವು. ಕೆಲ ಹೊತ್ತಿನ ಬಳಿಕ ಮತ್ತೆರಡು ಬಾಂಬ್ ಸ್ಫೋಟಗೊಂಡವೆನ್ನಲಾಗಿದೆ. ದೇಶಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿತ್ತು. ಐಸಿಸ್​ ದಾಳಿಯ ಹೊಣೆ ಹೊತ್ತಿದೆ.

ಕರ್ನಾಟಕದ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ರಂಗಪ್ಪ, ರಮೇಶ್​, ನಾರಾಯಣ ಚಂದ್ರಶೇಖರ್, ಶೆಟ್ಟಿಪಾಳ್ಯ ರಾಮಕೃಷ್ಣಪ್ಪ ನಾಗರಾಜ್, ಹನುಮಯ್ಯ ಶಿವಕುಮಾರ್, ರೆಮುರೈ ತುಳಸಿರಾಮ್, ಮಾರೇಗೌಡ, ಪುಟ್ಟರಾಜು ಕೊಲಂಬೋ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ಬಾಂಬ್​ ಸ್ಫೋಟ: ಕೂದಲೆಳೆ ಅಂತರದಲ್ಲಿ ಪಾರಾದ ಸಿನಿಮಾ ನಿರ್ಮಾಪಕ ಸಿಆರ್​ ಮನೋಹರ್​
First published: April 26, 2019, 10:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading