ವಿಶ್ವದ ಮೊದಲ ವಿಮಾನ ಚಾಲಕ ರಾವಣ!; ಹೀಗೆ ಘೋಷಣೆ ಮಾಡಿದ್ದು ಯಾರು ಗೊತ್ತಾ?

ಶ್ರೀಲಂಕಾದಲ್ಲಿ ನಡೆದ ಸಮ್ಮೇಳನ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಪಾಲ್ಗೊಂಡಿದ್ದರು. ಈ ವೇಳೆ ರಾವಣನ ವಿಚಾರದ ಕುರಿತು ಚರ್ಚೆ ಮಾಡಲಾಗಿದೆ.

Rajesh Duggumane | news18
Updated:August 1, 2019, 10:21 AM IST
ವಿಶ್ವದ ಮೊದಲ ವಿಮಾನ ಚಾಲಕ ರಾವಣ!; ಹೀಗೆ ಘೋಷಣೆ ಮಾಡಿದ್ದು ಯಾರು ಗೊತ್ತಾ?
ಸಾಂದರ್ಭಿಕ ಚಿತ್ರ
  • News18
  • Last Updated: August 1, 2019, 10:21 AM IST
  • Share this:
ಡಿಪಿ ಸತೀಶ್​

ಬೆಂಗಳೂರು (ಅ.1): ಶ್ರೀಲಂಕಾದಲ್ಲಿ ರಾವಣನನ್ನು ದೇವರು ಎಂದು ಪೂಜಿಸಲಾಗುತ್ತದೆ. ಅಚ್ಚರಿ ಎಂದರೆ ರಾವಣ ವಿಶ್ವದ ಮೊದಲ ವಿಮಾನ ಚಾಲಕ ಎಂದು ಅಲ್ಲಿನ ಸರ್ಕಾರ ಘೋಷಣೆ ಮಾಡಿದೆ. ಅಷ್ಟೇ ಅಲ್ಲ, ಈ ಬಗ್ಗೆ ಅಧ್ಯಯನ ನಡೆಸಲು ಅಲ್ಲಿಯವರು ಮುಂದಾಗಿದ್ದಾರೆ.

ಈ ಬಗ್ಗೆ ನ್ಯೂಸ್​18 ಕನ್ನಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿರುವ ಶ್ರೀಲಂಕಾ ನಾಗರಿಕ ವಿಮಾನಯಾನ ಸಂಸ್ಥೆ ಉಪಮುಖ್ಯಸ್ಥ ಶಶಿ ದಾನತುಂಗೆ, “ರಾವಣ ಪ್ರತಿಭಾನ್ವಿತ ವ್ಯಕ್ತಿ. ಆಗಸದಲ್ಲಿ ಹಾರಾಟ ನಡೆಸಿದ ಮೊದಲಿಗ ರಾವಣ. ಆತ ಒಂದು ರೀತಿಯಲ್ಲಿ ವಿಮಾನ ಚಾಲಕನಿದ್ದಂತೆ. ಇದು ಪುರಾಣವಲ್ಲ, ನಿಜಾಂಶ. ಈ ಬಗ್ಗೆ ವಿಸ್ತ್ರತ ಸಂಶೋಧನೆ ನಡೆಯಬೇಕಿದೆ. ಮುಂದಿನ ಐದು ವರ್ಷಗಳಲ್ಲಿ ನಾವು ಇದನ್ನು ಸಾಬೀತು ಮಾಡುತ್ತೇವೆ,” ಎಂದು ಹೇಳಿಕೊಂಡಿದ್ದಾರೆ.

ಶ್ರೀಲಂಕಾದ ಅತಿ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಕಟುನಾಯಕೆಯಲ್ಲಿ ಸಮ್ಮೇಳನ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಪಾಲ್ಗೊಂಡಿದ್ದರು.

“5 ಸಾವಿರ ವರ್ಷಗಳ ಹಿಂದೆ ರಾವಣ ಭಾರತಕ್ಕೆ ಹಾರಿ ಮರಳಿ ಶ್ರೀಲಂಕಾಕ್ಕೆ ಬಂದಿದ್ದ. ರಾವಣ ಸೀತೆಯನ್ನು ಅಪಹರಣ ಮಾಡಿದ್ದ ಎಂಬುದನ್ನು ಅನೇಕರು ತಳ್ಳಿ ಹಾಕುತ್ತಾರೆ. ಆತ ಸೀತೆ ಅಪಹರಣ ಮಾಡಿದ್ದ ಎಂಬುದು ಭಾರತೀಯರ ವಾದ​. ಆದರೆ ಆತ ಧೀಮಂತ ರಾಜ,” ಎಂದು ಸಮ್ಮೇಳನದಲ್ಲಿ ಇತ್ಯರ್ಥ ಮಾಡಲಾಯಿತು. ಇತ್ತೀಚೆಗೆ ಶ್ರೀಲಂಕಾ ರಾವಣ ಹೆಸರಿನ ರಾಕೆಟ್​ಅನ್ನು ಹಾರಿಸಿತ್ತು. ಇದು ಶ್ರೀಲಂಕಾದಿಂದ ಹಾರಿಸಿದ ಮೊದಲ ಸೆಟಲೈಟ್​.

First published: August 1, 2019, 10:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading