ಕೊರೊನಾ ಲಾಕ್ಡೌನ್ (Corona Lockdown) ಕೇಳಿದ್ದೇವೆ. ಸ್ವತಃ ಅನುಭವಿಸಿಯೂ ಇದ್ದೇವೆ. ಆದರೆ ಕೊರೊನಾ ಒಂದು ಹಂತಕ್ಕೆ ಕಡಿಮೆಯಾದ ನಂತರವೂ ದುರದೃಷ್ಟವಷಾತ್ ಒಂದು ಇಡೀ ದೇಶದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಭೀಕರ ಆರ್ಥಿಕ ದುಸ್ಥಿತಿ ಉಂಟಾಗಿರುವ ನಮ್ಮ ನೆರೆಯ ದ್ವೀಪ ದೇಶ ಶ್ರೀಲಂಕಾದಲ್ಲಿ (Sri Lanka) ಬರೋಬ್ಬರಿ 36 ಗಂಟೆಗಳ ಲಾಕ್ಡೌನ್ ಘೋಷಣೆ (Sri Lanka 36 Hours Lockdown) ಮಾಡಲಾಗಿದೆ. ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ (Sri Lanka president President Gotabaya Rajapaksa) ಘೋಷಿಸಿರುವ ತುರ್ತು ಪರಿಸ್ಥಿತಿಯು (Emergency) ವಾರೆಂಟ್ ಇಲ್ಲದೆ ಜನರನ್ನು ಬಂಧಿಸಲು ಮಿಲಿಟರಿಗೆ ಅವಕಾಶ ನೀಡುತ್ತದೆ.
ಪ್ರತಿಭಟನೆ ಹತ್ತಿಕ್ಕಲು ಲಾಕ್ಡೌನ್ ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಗುರುವಾರ ತಡರಾತ್ರಿ ಆರಂಭವಾದ ಹಿಂಸಾತ್ಮಕ ಘರ್ಷಣೆಯ ನಂತರ ಘೋಷಿಸಲಾದ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳುವಂತೆ ನೂರಾರು ವಕೀಲರು ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರನ್ನು ಒತ್ತಾಯಿಸಿದ್ದರು.
ಈ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಪರಿಸ್ಥಿತಿಯನ್ನು ತನ್ನ ಕೈಯಲ್ಲಿಟ್ಟುಕೊಳ್ಳಲು ಶ್ರೀಲಂಕಾ ಸರ್ಕಾರ ಶನಿವಾರ, ಏಪ್ರಿಲ್ 2 ರಂದು ಒಟ್ಟು 36 ಗಂಟೆಗಳ ಲಾಕ್ಡೌನ್ ಘೋಷಿಸಿದೆ,
ಭುಗಿಲೆದ್ದಿದೆ ಪ್ರತಿಭಟನೆ ಶ್ರೀಲಂಕಾದ ಹಲವು ಪಟ್ಟಣಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಪುಟ್ಟ ದ್ವೀಪ ರಾಷ್ಟ್ರವು ಬೃಹತ್ ವಿದೇಶಿ ಕರೆನ್ಸಿ ಸಾಲವನ್ನು ಎದುರಿಸುತ್ತಿದೆ. ಶ್ರೀಲಂಕಾ ಬಳಿ ಇಂಧನ ಮತ್ತು ಇತರ ಅಗತ್ಯ ಸರಕುಗಳಿಗೆ ಇತರ ದೇಶಗಳಿಗೆ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ದುಸ್ಥಿತಿಯಿಂದ ಪ್ರತಿದಿನ13 ಗಂಟೆಗಳ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಜನಸಾಮಾನ್ಯರು ಆಹಾರ ಮತ್ತು ಡೀಸೆಲ್ ಕೊರತೆಯಿಂದ ಬಸವಳಿಯುತ್ತಿದ್ದಾರೆ.
ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರು ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಅಲ್ಲದೇ, 'ಸಾರ್ವಜನಿಕ ಸುವ್ಯವಸ್ಥೆಯನ್ನು ರಕ್ಷಿಸಲು ಮತ್ತು ಅಗತ್ಯ ಸರಬರಾಜು ಮತ್ತು ಸೇವೆಗಳನ್ನು ನಿರ್ವಹಿಸಲು' ಶನಿವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆಯವರೆಗೆ ರಾಷ್ಟ್ರವ್ಯಾಪಿ ಲಾಕ್ಡೌನ್ ವಿಧಿಸಲಾಗಿದೆ ಎಂದು ಘೋಷಿಸಿದ್ದಾರೆ.
"ಅಧ್ಯಕ್ಷರಿಗೆ ನೀಡಲಾದ ಅಧಿಕಾರದ ಅಡಿಯಲ್ಲಿ, ಶನಿವಾರ ಸಂಜೆ 6 ರಿಂದ (1230 GMT) ಸೋಮವಾರ ಬೆಳಿಗ್ಗೆ 6 (0030 GMT) ವರೆಗೆ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದೆ" ಎಂದು ಸರ್ಕಾರದ ಮಾಹಿತಿ ಇಲಾಖೆಯ ಹೇಳಿಕೆಯಲ್ಲಿ ತಿಳಿಸಿದೆ.‘
ಉದ್ದುದ್ದ ಸಾಲುಗಳು
ಶ್ರೀಲಂಕಾದ ಸದ್ಯದ ಆರ್ಥಿಕ ಬಿಕ್ಕಟ್ಟು ಆಮದು ಮಾಡಿಕೊಳ್ಳುವ ಹಾಲಿನ ಪುಡಿಯಲ್ಲಿ ಕೊರತೆಯನ್ನು ಉಂಟುಮಾಡಿದೆ. ಹಾಲಿನ ಪುಡಿ, ಡೀಸೆಲ್ ಮುಂತಾದ ಅಗತ್ಯ ಸಾಮಾಗ್ರಿ ಖರೀದಿಗೆ ಅಂಗಡಿಗಳ ಮುಂದೆ ಉದ್ದನೆಯ ಸರತಿ ಸಾಲು ನಿಲ್ಲುವ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿದೆ.
ಬರೋಬ್ಬರಿ 71% ಏರಿಕೆ!
ಆಹಾರದ ಜೊತೆಗೆ ಇತರ ಅಗತ್ಯ ವಸ್ತುಗಳ ಬೆಲೆಯೂ ತೀವ್ರ ಹೆಚ್ಚಳವಾಗಿದೆ. ಆಮದು ಮಾಡಿಕೊಳ್ಳಲು ಹಣವಿಲ್ಲದೇ ಇಂಧನ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಮಾರ್ಚ್ ಮತ್ತು ಡಿಸೆಂಬರ್ ನಡುವೆ ಪೆಟ್ರೋಲ್ ಬೆಲೆ 177 ಶ್ರೀಲಂಕನ್ ರೂಪಾಯಿಗಳಿಂದ 303 ಶ್ರೀಲಂಕನ್ ರೂಪಾಯಿಗಳಿಗೆ ಏರಿಕೆಯಾಗಿದೆ! ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 45 ಭಾರತೀಯ ರೂಪಾಯಿಗಳಿಂದ 77 ರೂಪಾಯಿಗಳಿಗೆ ಏರಿಕೆಯಾಗಿದೆ. ಅಂದರೆ ಬರೋಬ್ಬರಿ 71% ಏರಿಕೆ!
ಮನೆಲಿ ಒಲೆ ಉರಿಯೋದೇ ಕಷ್ಟ!
ಅಡುಗೆ ಅನಿಲವೂ ಕೊರತೆಯಾಗಿರುವುದರಿಂದ ಕೆಲವರು ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ. "ಅಡುಗೆ ಅನಿಲ ಸಿಗುತ್ತಲೇ ಇಲ್ಲ. ಆದ್ದರಿಂದ ಜನರು ಸೀಮೆಎಣ್ಣೆ ಮತ್ತು ಉರುವಲುಗಳಿಂದ ಅಡುಗೆ ಮಾಡುತ್ತಿದ್ದಾರೆ" ಎಂದು ಶ್ರೀಲಂಕಾದ ಬರಹಗಾರ ಇಂದ್ರಜಿತ್ ಸಮರಾಜೀವ Scroll.in ಗೆ ತಿಳಿಸಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ