Sri Lanka Crisis: ಯುದ್ಧ ವಿಮಾನ ಹತ್ತಿ ಮಾಲ್ಡೀವ್ಸ್​ಗೆ ಪರಾರಿಯಾದ ಶ್ರೀಲಂಕಾ ಅಧ್ಯಕ್ಷ

ಗೊಟಾಬಯ ರಾಜಪಕ್ಸೆ (Gotabaya Rajapakse) ಅವರು ದೇಶಬಿಟ್ಟು ಪರಾರಿಯಾಗಿದ್ದಾರೆ. ಯುದ್ಧ ವಿಮಾನ ಹತ್ತಿದ್ದ ಅಧ್ಯಕ್ಷರು ಮಾಲ್ಡೀವ್ಸ್​ (Maldives) ಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಗೋಟಬಯ ರಾಜಪಕ್ಸೆ

ಗೋಟಬಯ ರಾಜಪಕ್ಸೆ

  • Share this:
ಶ್ರೀಲಂಕಾದಲ್ಲಿ (Sri Lanka) ಪ್ರತಿಭಟನೆಗಳು (Protest) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಗೊಟಾಬಯ ರಾಜಪಕ್ಸೆ (Gotabaya Rajapakse) ಅವರು ದೇಶಬಿಟ್ಟು ಪರಾರಿಯಾಗಿದ್ದಾರೆ. ಯುದ್ಧ ವಿಮಾನ ಹತ್ತಿದ್ದ ಅಧ್ಯಕ್ಷರು ಮಾಲ್ಡೀವ್ಸ್​ (Maldives) ಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಬುಧವಾರ ದೇಶದಿಂದ ಮಾಲ್ಡೀವ್ಸ್‌ಗೆ ಬಂದಿಳಿದರು. ಗೋಟಬಯ ರಾಜಪಕ್ಸೆ ಅವರು ತಮ್ಮ ಕುಟುಂಬ ದೇಶದಿಂದ ಸುರಕ್ಷಿತವಾಗಿ ನಿರ್ಗಮಿಸುವವರೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಈ ಹಿಂದೆ ಸುಳಿವು ನೀಡಿದ್ದರು. ಅವರ ಸಹೋದರ, ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಕೂಡ ಸೋಮವಾರ ದೇಶದಿಂದ ದುಬೈಗೆ ಪಲಾಯನ ಮಾಡಲು ಪ್ರಯತ್ನಿಸಿದರು. ಆದರೆ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆಯಲಾಗಿತ್ತು.

71 ವರ್ಷದ ಬಾಸಿಲ್ ಅವರು ದೇಶದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿಗೆ ವ್ಯಾಪಕವಾಗಿ ಹೊಣೆಗಾರರಾಗಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮಿಲಿಟರಿ ಜೆಟ್​ನಲ್ಲಿ ಎಸ್ಕೇಪ್

ಗೋಟಬಯ ರಾಜಪಕ್ಸೆ ಅವರು ತಡರಾತ್ರಿ ಮಿಲಿಟರಿ ಜೆಟ್ ಅನ್ನು ತೆಗೆದುಕೊಂಡು ಮಾಲ್ಡೀವ್ಸ್‌ನ ರಾಜಧಾನಿ ಮಾಲೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅಧ್ಯಕ್ಷರು ತಮ್ಮ ಐದು ಕುಟುಂಬ ಸದಸ್ಯರು ಮತ್ತು ಮೂವರು ಸಿಬ್ಬಂದಿಗಳೊಂದಿಗೆ ತಮ್ಮ ದೇಶವನ್ನು ಬಿಟ್ಟು ಪಲಾಯನ ಮಾಡಿದರು.

ರಾಜೀನಾಮೆ ಪ್ರೊಟೋಕಾಲ್ ಹೇಗಿದೆ?

ಬುಧವಾರ ರಾಜೀನಾಮೆ ಸಲ್ಲಿಸುವಂತೆ ಸಂಸತ್ತಿನ ಸ್ಪೀಕರ್ ಮತ್ತು ಪ್ರಧಾನಿಗೆ ಸಂದೇಶ ರವಾನಿಸಿದ್ದರು. ಪ್ರೋಟೋಕಾಲ್ ಪ್ರಕಾರ, ಅವರು ರಾಜೀನಾಮೆಯನ್ನು ಶ್ರೀಲಂಕಾದ ಮುಖ್ಯ ನ್ಯಾಯಾಧೀಶರಿಗೆ ಕಳುಹಿಸಬೇಕು. ನಂತರ ಪಿಎಂ ಮತ್ತು ಸಂಸತ್ತಿನ ಸ್ಪೀಕರ್‌ಗೆ ಪ್ರತಿಯನ್ನು ಕಳುಹಿಸಬೇಕು.

ಇದನ್ನೂ ಓದಿ: Fish Rain: ತೆಲಂಗಾಣದಲ್ಲಿ ಮೀನಿನ ಮಳೆ! ವಿಚಿತ್ರ ಹವಾಮಾನಕ್ಕೆ ಜನ ಶಾಕ್

ಜುಲೈ 9 ರಂದು, ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ ಶ್ರೀಲಂಕಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ರಾನಿಲ್ ವಿಕ್ರಮಸಿಂಘೆ ಘೋಷಿಸಿದರು. ಸುಮಾರು 26 ಮಂತ್ರಿಗಳು ಸರ್ಕಾರವನ್ನು ತೊರೆಯುವುದರೊಂದಿಗೆ ಅವರ ಜೊತೆಗೆ ಇಡೀ ಕ್ಯಾಬಿನೆಟ್ ರಾಜೀನಾಮೆ ನೀಡಿತು.

ಶುಕ್ರವಾರದಿಂದ ಅಧ್ಯಕ್ಷರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಜುಲೈ 20 ರಂದು ಸಂಸತ್ತು ಅವರ ಬದಲಿಯನ್ನು ಆಯ್ಕೆ ಮಾಡುತ್ತದೆ.

ಶ್ರೀಲಂಕಾ ರಾಜಕೀಯ ಪ್ರಾಬಲ್ಯ

ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಸೇರಿದಂತೆ ರಾಜಪಕ್ಸೆ ಕುಟುಂಬವು ಶ್ರೀಲಂಕಾದ ರಾಜಕೀಯದಲ್ಲಿ ವರ್ಷಗಳ ಕಾಲ ಪ್ರಾಬಲ್ಯ ಹೊಂದಿದೆ. ಹೆಚ್ಚಿನ ಶ್ರೀಲಂಕಾದವರು ತಮ್ಮ ಪ್ರಸ್ತುತ ಸಮಸ್ಯೆಗಳಿಗೆ ಅವರನ್ನು ದೂಷಿಸುತ್ತಾರೆ.

ಇದನ್ನೂ ಓದಿ: Draupadi Murmu: ಶಿವಸೇನೆ-ಬಿಜೆಪಿ ‘ಮಹಾ‘ ಮುನಿಸಿನ ನಡುವೆ ದ್ರೌಪದಿ ಮುರ್ಮುಗೆ ಬೆಂಬಲ! ಈ ಬಗ್ಗೆ ಉದ್ಧವ್ ಠಾಕ್ರೆ ಹೇಳಿದ್ದೇನು?

ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಕಾಂಪೌಂಡ್‌ಗೆ ನುಗ್ಗುವ ಕೆಲವೇ ಕ್ಷಣಗಳ ಮೊದಲು, ಜುಲೈ 9 ರಂದು ಗೊಟಬಯ ರಾಜಪಕ್ಸೆ ಕೊಲಂಬೊದಲ್ಲಿನ ತನ್ನ ಅಧಿಕೃತ ನಿವಾಸದಿಂದ ಪಲಾಯನ ಮಾಡಿದರು.

ಮುಂದೇನು?

ಜುಲೈ 13 ರಂದು ಗೋಟಬಯ ರಾಜಪಕ್ಸೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ. ಜುಲೈ 16 ರಂದು ಸಂಸತ್ತು ಪುನರಾರಂಭವಾಗುವ ಸಾಧ್ಯತೆಯಿದೆ. ಜುಲೈ 20 ರಂದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಹೊಸ ಚುನಾವಣೆಗಳು ನಡೆಯಲಿದ್ದು, ಜುಲೈ 19 ರಂದು ನಾಮನಿರ್ದೇಶನಗಳು ನಡೆಯಲಿವೆ.

ಅಧ್ಯಕ್ಷ ಮತ್ತು ಪ್ರಧಾನಿ ಅನುಪಸ್ಥಿತಿಯಲ್ಲಿ, ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರು ದೇಶದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
Published by:Divya D
First published: