ಶ್ರೀಲಂಕಾದಲ್ಲಿ ಒಂದೇ ಒಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್ ಸಂಗ್ರಹವಿದೆ (Sri Lanka Petrol Storage) ಎಂದು ಸ್ವತಃ ಶ್ರೀಲಂಕಾದ ನೂತನ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಘೋಷಿಸಿದ್ದಾರೆ. ಭಾರತವು ಒದಗಿಸುತ್ತಿರುವ ತೈಲ ಸರಬರಾಜನ್ನು ಬಳಸಿ ಸ್ವಲ್ಪ ಮಟ್ಟಿಗೆ ದಿನದೂಡಬಹುದು. ಇದಕ್ಕಿಂತ ಮಹತ್ವವಾಗಿ 14 ರೀತಿಯ ಔಷಧಗಳ ಕೊರತೆಯನ್ನು (Sri Lanka Crisis) ಅನುಭವಿಸುತ್ತಿದೆ ಎಂದು ರನಿಲ್ ವಿಕ್ರಮಸಿಂಘೆ (Sri Lanka PM Ranil Wickremesinghe) ಆತಂಕಕಾರಿ ಮಾಹಿತಿ ತೆರೆದಿಟ್ಟಿದ್ದಾರೆ. ಒಂದಾನುವೇಳೆ ಔಷಧಗಳ (Medicine Crisis) ದಾಸ್ತಾನು ಸಂಪೂರ್ಣ ಖಾಲಿಯಾದರೆ ಶ್ರೀಲಂಕಾದಲ್ಲಿನ ಹಾಹಾಕಾರ ಇನ್ನಷ್ಟು ಹೆಚ್ಚಲಿದೆ. ಅಲ್ಲದೇ ದಿನದಲ್ಲಿ 15 ಗಂಟೆಗಳ ಕಾಲ ವಿದ್ಯುತ್ ಕಡಿತ ಸರ್ವೇ ಸಾಮಾನ್ಯವಾದ ಸ್ಥಿತಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಔಷಧಿ, ವೈದ್ಯಕೀಯ ಉಪಕರಣಗಳು ಮತ್ತು ರೋಗಿಗಳಿಗೆ ಆಹಾರ ಪೂರೈಕೆದಾರರಿಗೆ ನಾಲ್ಕು ತಿಂಗಳಿಂದ ಪಾವತಿಗಳನ್ನು ಮಾಡಲಾಗಿಲ್ಲ ಎಂದು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.
4. Fuel Stocks:
• Problem: In order ease the queues, we need approx. USD 75 million. We only have petrol stocks for a single day. #SriLankaEconomicCrisis
— Ranil Wickremesinghe (@RW_UNP) May 16, 2022
1. The next couple of months will be the most difficult ones of our lives. I have no desire to hide the truth and to lie to the public. Although these facts are unpleasant and terrifying, this is the true situation. #SriLankaEconomicCrisis
— Ranil Wickremesinghe (@RW_UNP) May 16, 2022
ಹೆದರಬೇಡಿ, ಸವಾಲು ಎದುರಿಸಿ
ಮುಂದಿನ ಒಂದೆರಡು ತಿಂಗಳುಗಳ ಕಾಲ ಸವಾಲುಗಳನ್ನು ಎದುರಿಸಲು ನಾವು ಕೆಲವು ತ್ಯಾಗಗಳನ್ನು ಮಾಡಲು ನಮ್ಮನ್ನು ಸಿದ್ಧಪಡಿಸಬೇಕು ಎಂದು ಅವರು ಶ್ರೀಲಂಕಾದ ಪ್ರಜೆಗಳನ್ನು ಎಚ್ಚರಿಸಿದರು. ವಿಕ್ರಮಸಿಂಘೆ ಅವರು ಶ್ರೀಲಂಕಾವು ಅಗತ್ಯ ಆಮದುಗಳನ್ನು ಪಾವತಿಸಲು ಮುಂದಿನ ಕೆಲವು ದಿನಗಳಲ್ಲಿ $75m (£61m) ವಿದೇಶಿ ವಿನಿಮಯವನ್ನು ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಶ್ರೀಲಂಕಾದ ವಿದ್ಯುತ್ ಸಚಿವರಾದ ಕಾಂಚನಾ ವಿಜೆಶೇಖರ ಅವರು ವಾರಗಟ್ಟಲೆ ಸರ್ಕಾರದ ವಿರೋಧಿ ಪ್ರತಿಭಟನೆಗಳನ್ನು ಹೆಚ್ಚಿಸಿರುವ ಇಂಧನ ಪಡೆಯಲು ನಿಂತ ಉದ್ದನೆ ಸರತಿ ಸಾಲಿನಲ್ಲಿ ಸೇರಬೇಡಿ ಎಂದು ನಾಗರಿಕರ ಬಳಿ ವಿನಂತಿಪೂರ್ವಕ ಆಗ್ರಹ ಮಾಡಿದ್ದರು.
ಶ್ರೀಲಂಕಾದಲ್ಲಿ ಉನ್ನತ ಮಟ್ಟದ ಹಣದುಬ್ಬರ
ಉನ್ನತ ಮಟ್ಟದ ಹಣದುಬ್ಬರದೊಂದಿಗೆ, ಶ್ರೀಲಂಕಾದಲ್ಲಿ ಸಂಪೂರ್ಣ ಸಾರ್ವಜನಿಕ ವ್ಯವಸ್ಥೆಯು ಸ್ಥಗಿತಗೊಂಡಿದೆ. ಕೊಲಂಬೊದಲ್ಲಿ ಪ್ರತಿದಿನ 14-16 ಗಂಟೆಗಳ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬಂದರುಗಳಿಂದ ದೇಶದ ಇತರ ಪ್ರದೇಶಗಳಿಗೆ ಲಭ್ಯವಿರುವ ಸರಬರಾಜುಗಳನ್ನು ಸಾಗಿಸಲು ವಾಹನಗಳಿಗೆ ಇಂಧನವಿಲ್ಲ ಮತ್ತು ಇಡೀ ದೇಶವು ಸ್ಥಗಿತಗೊಳ್ಳುವ ಅಂಚಿನಲ್ಲಿದೆ
ಹಣಕಾಸಿನ ಸ್ಥಗಿತ
ಶ್ರೀಲಂಕಾದ ಹಣಕಾಸಿನ ಸ್ಥಗಿತವು 2010ರಿಂದಲೇ ಆರಂಭವಾಗಿದೆ. 2019 ರ ಹೊತ್ತಿಗೆ, GDP ಯ 88% ಆಗಿತ್ತು, 2021ರ ವೇಳೆಗೆ ಇದು GDP ಯ 101% ಆಗಿತ್ತು ಮತ್ತು ಮಾರ್ಚ್ 2022ರ ವೇಳೆಗೆ, ಹೇಗೆ ಪಾವತಿಸಲಾಗುವುದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಅದರ GDP 135% ಅನ್ನು ದಾಟಿದೆ.
ಇದನ್ನೂ ಓದಿ:Sri Lanka Crisis: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನಿಂದ ಭಾರತಕ್ಕೂ ಕಷ್ಟ! ಇದಕ್ಕೆ ಈ 5 ಕಾರಣಗಳೇ ಸಾಕ್ಷಿ
ರಾಯಿಟರ್ಸ್‌ನ ಅಂದಾಜಿನ ಪ್ರಕಾರ, ಫೆಬ್ರವರಿ ವೇಳೆಗೆ ಶ್ರೀಲಂಕಾ ತನ್ನ ವಿದೇಶಿ ಮೀಸಲುಗಳಲ್ಲಿ ಕೇವಲ 2.4 ಬಿಲಿಯನ್ USD ಅನ್ನು ಹೊಂದಿದೆ ಆದರೆ ವಾಸ್ತವವೆಂದರೆ ಇದರಲ್ಲಿ 1 ಬಿಲಿಯನ್ USD ಗಿಂತ ಕಡಿಮೆ ಅದರ ಸಾಲದಾತರಿಗೆ ಪಾವತಿಗೆ ಲಭ್ಯವಿದೆ. ಈ ವರ್ಷ ದೇಶವು 7 ಬಿಲಿಯನ್ USD ಅನ್ನು ಪಾವತಿಸುವ ನಿರೀಕ್ಷೆಯಿರುವುದರಿಂದ ಇದು ಗಂಭೀರವಾಗಿದೆ, ಇದರಲ್ಲಿ 4 ಬಿಲಿಯನ್ USD IMF ಸಾಲ ಮತ್ತು ಇತರ ಅಂತರರಾಷ್ಟ್ರೀಯ ಬಾಧ್ಯತೆಗಳ ಮರುಪಾವತಿ ಸೇರಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ