Sri Lanka PM Ranil Wickremesinghe Resigns: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ರಾಜೀನಾಮೆ; ಕಾರಣ ಏನು?

ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆಗಳು ನಡೆದ ನಂತರ  ಸರ್ವಾಂಗೀಣ ಸರ್ಕಾರಕ್ಕೆ ದಾರಿ ಮಾಡಿಕೊಡಲು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವಿಕ್ರಮಸಿಂಘೆ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ರನಿಲ್ ವಿಕ್ರಮ ಸಿಂಘೆ

ರನಿಲ್ ವಿಕ್ರಮ ಸಿಂಘೆ

 • Share this:
  ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಶನಿವಾರ, ಜುಲೈ 9 ರಂದು ತಮ್ಮ ರಾಜೀನಾಮೆಯನ್ನು (Sri Lanka PM Ranil Wickremesinghe Resigns) ಘೋಷಿಸಿದ್ದಾರೆ. ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆಗಳು ನಡೆದ ನಂತರ  ಸರ್ವಾಂಗೀಣ ಸರ್ಕಾರಕ್ಕೆ ದಾರಿ ಮಾಡಿಕೊಡಲು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವಿಕ್ರಮಸಿಂಘೆ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾದ ಅಧ್ಯಕ್ಷ ಗೋಟಾಬಯ ರಾಜಪಕ್ಸೆ (President Gotabaya Rajapaksa) ಶನಿವಾರ ಕೊಲಂಬೊದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಅವರ ಮನೆಯ ಸುತ್ತಲೂ ಪ್ರತಿಭಟನಾಕಾರರು (Sri Lanka Protesters) ಜಮಾಯಿಸಿದ್ದರು. ಹೀಗಾಗಿ ಶ್ರೀಲಂಕಾದ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರನ್ನು ಸುರಕ್ಷತಾ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಶ್ರೀಲಂಕಾದ ಖಾಸಗಿ ವಾಹಿನಿಯೊಂದು ಗೋಟಾಬಯ ರಾಜಪಕ್ಸೆ ನಿವಾಸಕ್ಕೆ ಪ್ರತಿಭಟನಾಕಾರರು ಪ್ರವೇಶಿಸುತ್ತಿರುವ ದೃಶ್ಯಾವಳಿಗಳನ್ನು ಬಿತ್ತರಿಸಿದೆ.

  ಪ್ರತಿಭಟನೆಗೆ ಒಂದು ದಿನ ಮೊದಲು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ತನ್ನ ನಿವಾಸದಿಂದ ಪಲಾಯನ ಮಾಡಿದ್ದು, ಈಗ ದೇಶವನ್ನೇ ತೊರೆದಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.  ದೇಶದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಪರಿಸ್ಥಿತಿಯನ್ನು ಚರ್ಚಿಸಲು ತುರ್ತು ಸಭೆಯನ್ನು ಕರೆದಿದ್ದಾರೆ. ಸಂಸತ್ತಿನ ತುರ್ತು ಸಭೆಯನ್ನು ಕರೆಯುವಂತೆ ಅವರು ಸ್ಪೀಕರ್‌ಗೆ ಸೂಚಿಸಿದ್ದಾರೆ ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.

  ಇದನ್ನೂ ಓದಿ: Sri Lanka Crisis: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನಿಂದ ಭಾರತಕ್ಕೂ ಕಷ್ಟ! ಇದಕ್ಕೆ ಈ 5 ಕಾರಣಗಳೇ ಸಾಕ್ಷಿ

  ರಾಜಪಕ್ಸ ಕುಟುಂಬದ ವಿರುದ್ಧ ಆಕ್ರೋಶ
  ರಾಜಪಕ್ಸ ಕುಟುಂಬದ ಹಿರಿಯಣ್ಣ, ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಧಾರ್ಮಿಕ ಸ್ಥಳ ಅನುರಾಧಪುರಕ್ಕೆ ತೆರಳಿದ್ದಾಗ ಅಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸಬೇಕಾಯಿತು. ಇಂಧನ, ಅಡುಗೆ ಅನಿಲಕ್ಕಾಗಿ ಜನ ಆಗ್ರಹಿಸಿದರು. ವಿದ್ಯುತ್ ಕಡಿತವನ್ನು ನಿಲ್ಲಿಸುವಂತೆ ಒತ್ತಾಯಿಸಿ ಘೇರಾವ್‌ ಹಾಕಿದರು.ಇಡೀ ರಾಜಪಕ್ಸ ಕುಟುಂಬ ರಾಜಕೀಯ ತ್ಯಜಿಸಬೇಕು ಮತ್ತು ದೇಶದಿಂದ ಲೂಟಿ ಮಾಡಿರುವ ಆಸ್ತಿಯನ್ನು ಹಿಂದಿರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬೌದ್ಧ ಬಿಕ್ಕುಗಳು ಕೂಡ ಮಧ್ಯಂತರ ಸರ್ಕಾರ ರಚನೆಗೆ ಹಾದಿ ಮಾಡಿಕೊಡಬೇಕೆಂದು ರಾಜಪಕ್ಸ ಸೋದರರಿಗೆ ಆಗ್ರಹಿಸಿದ್ದು, ಅದಕ್ಕಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು.

  ಇದನ್ನೂ ಓದಿ: Fuel Crisis: ಇಂಧನ ತುಂಬಿಸಲು 5 ದಿನದಿಂದ ಬಂಕ್ ಮುಂದೆ ಕ್ಯೂ ನಿಂತಿದ್ದ ಟ್ರಕ್ ಡ್ರೈವರ್ ಸಾವು

  ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಲೇ ಇದೆ. ವಿದೇಶದಿಂದ ಪಡೆದಿದ್ದ ಸಾಲದ ಮರುಪಾವತಿಯನ್ನು ನಿಲ್ಲಿಸುತ್ತಿರುವುದಾಗಿ ಲಂಕಾ ಘೋಷಿಸಿದೆ. ಕಠಿಣ ಡೀಫಾಲ್ಟ್ ತಪ್ಪಿಸಲು ಶ್ರೀಲಂಕಾ ವಿದೇಶಿ ಸಾಲ ಪಾವತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ ಎಂದು ಕೇಂದ್ರ ಬ್ಯಾಂಕ್ ಗವರ್ನರ್ ಹೇಳಿದ್ದಾರೆ. ಇಂಧನದಂತಹ ಅಗತ್ಯ ವಸ್ತುಗಳ ಆಮದುಗಳಿಗೆ ಸೀಮಿತ ವಿದೇಶಿ ಮೀಸಲು ಅಗತ್ಯವಿದೆ. “ಸಾಲ ಪಾವತಿ ಮಾಡುವುದು ಅಸಾಧ್ಯ ಎಂಬ ಹಂತಕ್ಕೆ ಬಂದಿದೆ.

  ಅತಿ ಕೆಟ್ಟ ಪರಿಸ್ಥಿತಿಯಲ್ಲಿ ದ್ವೀಪರಾಷ್ಟ್ರ
  ಶ್ರೀಲಂಕಾ 1948 ರಲ್ಲಿ ಸ್ವಾತಂತ್ರ್ಯ ಪಡೆದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೀರ್ಘಾವಧಿಯ ವಿದ್ಯುತ್ ಕಡಿತ ಮತ್ತು ಇಂಧನ, ಆಹಾರ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳ ಕೊರತೆಗಾಗಿ ಜನರು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರು ತಮ್ಮ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ, ವಿದೇಶಿ ವಿನಿಮಯ ಬಿಕ್ಕಟ್ಟು ಅವರು ಕಾರಣರಲ್ಲ ಎಂದಿದ್ದಾರೆ. ಆರ್ಥಿಕ ಕುಸಿತವು ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಆದಾಯ ಮತ್ತು ಆಂತರಿಕ ಹಣ ರವಾನೆ ಕ್ಷೀಣಿಸುವುದರಿಂದ ಆಗಿದೆ ಎಂದು ಹೇಳಿದ್ದಾರೆ.
  Published by:guruganesh bhat
  First published: