MAshok KumarMAshok Kumar
|
news18-kannada Updated:August 7, 2020, 8:17 PM IST
ಮಹಿಂದಾ ರಾಜಪಕ್ಸೆ.
ಕೊಲೊಂಬೊ (ಆಗಸ್ಟ್ 07); ಮಹಿಂದಾ ರಾಜಪಕ್ಸೆ ನೇತೃತ್ವದ ಶ್ರೀಲಂಕಾ ಪೊದುಜನ ಪಾರ್ಟಿ (ಎಸ್ಎಲ್ಪಿಪಿ) ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಸಂಸತ್ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹಮತ ಗಳಿಸಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರವನ್ನು ಉಳಿಸಿಕೊಂಡಿದೆ.
ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರಾಜಪಕ್ಸೆ ಮತ್ತು ಅವರ ಸಹೋದರ ಗೋತಬಾಯ ಸಾಂವಿಧಾನಿಕ ಬದಲಾವಣೆಯನ್ನು ಕೈಗೊಳ್ಳಲು ಮೂರನೇ ಎರಡರಷ್ಟು ಬಹುಮತದೊಂದಿಗೆ ಈ ಸಂಸತ್ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕಿತ್ತು.
ಕೊನೆಗೂ ನಿರೀಕ್ಷೆಯಂತೆ ಮಹಿಂದಾ ರಾಜಪಕ್ಸೆ ನೇತೃತ್ವದ ಶ್ರೀಲಂಕಾ ಪೊದುಜನ ಪಾರ್ಟಿ 225 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 146 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೂರನೇ ಎರಡರಷ್ಟು ಬಹುಮತದ ಗುರಿಯನ್ನು ತಲುಪಿದೆ. ಅಲ್ಲದೆ, ಉಳಿದ ಐದು ಪಕ್ಷಗಳೂ ರಾಜಪಕ್ಸೆ ಅವರನ್ನು ಬೆಂಬಲಿಸುವುದು ಖಚಿತವಾಗಿದೆ ಎನ್ನಲಾಗುತ್ತಿದೆ.
ಕೊರೋನಾ ವೈರಸ್ ಕಾರಣದಿಂದಾಗಿ ಶ್ರೀಲಂಕಾ ಚುನಾವಣೆಯನ್ನು ಎರಡು ಭಾರಿ ಮುಂದೂಡಲಾಗಿತ್ತು. ಆದರೆ, ಕಳೆದ ವಾರ ಯಶಸ್ವಿಯಾಗಿ ಚುನಾವಣೆಯನ್ನು ನಡೆಸಲಾಗಿದ್ದು, ಇಂದು ಫಲಿತಾಂಶ ಹೊರಬಿದ್ದಿದೆ. ಈ ಫಲಿತಾಂಶದಲ್ಲಿ ಮಹಿಂದಾ ರಾಜಪಕ್ಸೆ ಪಕ್ಷವು 6.8 ಮಿಲಿಯನ್ ಮತಗಳನ್ನು ಪಡೆಯುವಲ್ಲಿ ಸಫಲವಾಗಿದೆ.
ಶ್ರೀಲಂಕಾದಲ್ಲಿ 16.2 ಮಿಲಿಯನ್ ಮತದಾರರು ಇದ್ದು, ಶೇ.70 ರಷ್ಟು ಮತದಾರರು ಮಾತ್ರ ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಈ ಪೈಕಿ ಪ್ರತಿಪಕ್ಷ ನಾಯಕ ಸಾಜಿದ್ ಪ್ರೇಮದಾಸ ನೇತೃತ್ವದ ಯುನೈಟೆಡ್ ಪೀಪಲ್ಸ್ ಪವರ್ ಪಕ್ಷಕ್ಕೆ ಏವಲ 2.7 ಮಿಲಿಯನ್ ಮತಗಳು ಮಾತ್ರ ಲಭ್ಯವಾಗಿವೆ.
ಇದನ್ನೂ ಓದಿ : ಆಸ್ಪತ್ರೆಗೆ ದಾಖಲಾದ ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್; ಹೊಟ್ಟೆ ಸಂಬಂಧಿ ಖಾಯಿಲೆಗೆ ಚಿಕಿತ್ಸೆ
ರಾಜಪಕ್ಸೆಗೆ ಮೋದಿ ಅಭಿನಂದನೆಶ್ರೀಲಂಕಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮಹಿಂದಾ ರಾಜಪಕ್ಸೆ ಅವರಿಗೆ ಕರೆ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ದೂರವಾಣಿ ಸಂಭಾಷಣೆಯ ವೇಳೆ “ಈ ಚುನಾವಣಾ ಫಲಿತಾಂಶ ಉಬಯ ದೇಶಗಳ ನಡುವಿನ ಪ್ರಜಾಪ್ರಭುತ್ವ ಮೌಲ್ಯಗಳ ಬಲವಾದ ಹಂಚಿಕೆಯ ಪ್ರತಿಬಿಂಬವಾಗಿದೆ” ಎಂದು ಮೋದಿ ಮೆಚ್ಚುಗೆ ಸೂಚಿಸಿದ್ದಾರೆ ಎನ್ನಲಾಗಿದೆ.
Published by:
MAshok Kumar
First published:
August 7, 2020, 8:17 PM IST