ಶ್ರೀಲಂಕಾದಲ್ಲಿ ಶೀಘ್ರವೇ ಗೋ ಹತ್ಯೆ ನಿಷೇಧ?; ಪ್ರಧಾನಿ ಮಹಿಂದಾ ರಾಜಪಕ್ಸೆ ಚಿಂತನೆ

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಈ ವಿಚಾರವನ್ನು SLPP ಸಂಸದೀಯ ಗುಂಪಿನ ಜೊತೆ ಚರ್ಚೆ ಮಾಡಿದ್ದಾರೆ. ಈ ವೇಳೆ ಸಂಸದೀಯ ಸದಸ್ಯರು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊಲಂಬೋ (ಸೆಪ್ಟೆಂಬರ್ 9): ನೆರೆಯ ದೇಶ ಶ್ರೀಲಂಕಾದಲ್ಲಿ ಕಳೆದ ತಿಂಗಳು ‘ಶ್ರೀಲಂಕಾ ಪೊದುಜನ ಪೆರಮುನಾ ’ (SLPP) ಪಕ್ಷ ಜಯಭೇರಿ ಬಾರಿಸಿತ್ತು. ಈಗ ದ್ವೀಪ ರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಮಾಡುವ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸಿದೆ. ಆದರೆ, ಗೋಮಾಂಸ ರಫ್ತು ಮಾಡುವ ಪ್ರಕ್ರಿಯೆಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಈ ವಿಚಾರವನ್ನು SLPP ಸಂಸದೀಯ ಸದಸ್ಯರ ಜೊತೆ ಚರ್ಚೆ ಮಾಡಿದ್ದಾರೆ. ಈ ವೇಳೆ ಅವರು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಸಮ್ಮತಿಸಿದ್ದಾರೆ ಎನ್ನಲಾಗಿದೆ.

  ಕ್ಯಾಬಿನೆಟ್​ ವಕ್ತಾರ ಹಾಗೂ ಮಾಧ್ಯಮ ಸಚಿವ ಕೆಹೆಲಿಯಾ ರಾಂಬುಕ್ವೆಲ್ಲಾ ಸ್ಥಳೀಯ ಮಾಧ್ಯಮದ ಜೊತೆ ಈ ವಿಚಾರವಾಗಿ ಮಾತನಾಡಿದ್ದಾರೆ. ಮಹಿಂದಾ ರಾಜಪಕ್ಸೆ ಅವರು ಗೋ ಹತ್ಯೆ ನಿಷೇಧ ಮಾಡುವ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ನಿಯಮ ದೇಶದಲ್ಲಿ ಜಾರಿಗೆ ಬರುವ ನಂಬಿಕೆ ಇದೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ.

  ಧಾರ್ಮಿಕ ನಂಬಿಕೆಗೆ ದಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಗೋ ಹತ್ಯೆ ನಿಷೇಧ ಮಾಡಬೇಕು ಎಂಬುದು ರಾಜಪಕ್ಸ ಬೆಂಬಲಿಸುವ ಬೌದ್ಧ ಸನ್ಯಾಸಿಗಳ ಬೇಡಿಕೆ.

  ಶ್ರೀಲಂಕಾದ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅತ್ಯಂತ ಅನುಭವಿ ಹಾಗೂ ಕುಶಾಗ್ರಮತಿ ರಾಜಕಾರಣಿ. ಬಹಳ ಗಟ್ಟಿ ನಿರ್ಧಾರಗಳಿಗೆ ಹೆಸರಾದವರು. ಲಂಕಾದ ಅಧ್ಯಕ್ಷರಾಗಿ 10 ವರ್ಷ ಕಾಲ ಆ ದೇಶವನ್ನು ಸಮರ್ಥವಾಗಿ ಮುನ್ನಡೆಸಿದವರು. ಲಂಕಾವನ್ನು ಕಿತ್ತುತಿನ್ನುತ್ತಿದ್ದ ಎಲ್​ಟಿಟಿಇ ನೇತೃತ್ವದ ಪ್ರತ್ಯೇಕ ತಮಿಳು ರಾಷ್ಟ್ರದ ಹೋರಾಟವನ್ನ ಹತ್ತಿಕ್ಕಿದ್ದು ಇವರು ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಅನ್ನೋದು ವಿಶೇಷ.

  (ವರದಿ: ಡಿಪಿ ಸತೀಶ್​)
  Published by:Rajesh Duggumane
  First published: