Sri Lanka Economic Crisis: ಈ ದೇಶದಲ್ಲಿ ಗಾಡಿ ಓಡ್ಸೋಕೆ ಡೀಸೆಲ್ ಇಲ್ಲ! ನೆರವಿಗೆ ಮೊರೆ..

ಕಳೆದ ಎರಡು ವರ್ಷಗಳಲ್ಲಿ, ವಿದೇಶಿ ವಿನಿಮಯ ಸಂಗ್ರಹವು ಶೇಕಡಾ 70 ರಷ್ಟು ಕುಸಿದಿದೆ. ಫೆಬ್ರವರಿ ವೇಳೆಗೆ 2.31 ಬಿಲಿಯನ್ ಡಾಲರ್‌ಗೆ ಇಳಿದಿದೆ. ಈ ಕಾರಣದಿಂದಾಗಿ ಆಹಾರ ಮತ್ತು ಇಂಧನ ಸೇರಿದಂತೆ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಶ್ರೀಲಂಕಾ ಪರದಾಡುತ್ತಿದೆ.

ಡೀಸೆಲ್​ಗೆ ಸರತಿ ಸಾಲು

ಡೀಸೆಲ್​ಗೆ ಸರತಿ ಸಾಲು

  • Share this:
ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ (Sri Lanka) ಡೀಸೆಲ್ ಖಾಲಿಯಾಗಿದೆ. ಗುರುವಾರ ಆ ರಾಷ್ಟ್ರದಾದ್ಯಂತ ಡೀಸೆಲ್ (Diesel) ಮಾರಾಟ  ಸ್ಥಗಿತಗೊಂಡಿತು. ಇದರಿಂದ ಸಾರಿಗೆ ವ್ಯವಸ್ಥೆ ಅಸ್ಥವ್ಯಸ್ಥವಾಯಿತು, ಮಾತ್ರವಲ್ಲ ಆ ದೇಶದ 22 ಮಿಲಿಯನ್ ಪ್ರಜೆಗಳು, ದಾಖಲೆಯ ಅವಧಿಯ ಸುದೀರ್ಘ ವಿದ್ಯುತ್ ಕಡಿತದ ಪರಿಸ್ಥಿತಿಯನ್ನು ಎದುರಿಸಿದರು. ದಕ್ಷಿಣ ಏಷ್ಯಾದ ಈ ಪುಟ್ಟ ರಾಷ್ಟ್ರ ಸ್ವಾತಂತ್ರ್ಯ ಪಡೆದ ನಂತರ ಈಗ ಅತ್ಯಂತ ಕೆಟ್ಟ ಆರ್ಥಿಕ ಸಮಸ್ಯೆಯಿಂದ (Sri Lanka Economic Crisis) ಬಳಲುತ್ತಿದೆ. ವಿದೇಶಿ ಕರೆನ್ಸಿಯ (Foriegn Currency) ಕೊರತೆಯಿಂದ ಯಾವ ಮಟ್ಟಿಗೆ ಬಳಲುತ್ತಿದೆ ಎಂದರೆ, ಅತ್ಯಂತ ಆವಶ್ಯಕ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಕೂಡ ಅದರ ಬಳಿ ಹಣವಿಲ್ಲ.

ಇತರ ದೇಶಗಳಂತೆ, ಶ್ರೀಲಂಕಾದಲ್ಲೂ , ಡೀಸೆಲ್ – ಅಲ್ಲಿನ ಬಸ್ಸುಗಳು ಮತ್ತು ವಾಣಿಜ್ಯ ವಾಹನಗಳಿಗೆ ಅತ್ಯಂತ ಪ್ರಮುಖ ಇಂಧನ. ಆದರೆ, ಅಧಿಕಾರಿಗಳು ಮತ್ತು ಮಾಧ್ಯಮ ವರದಿಗಳು ಹೇಳುವ ಪ್ರಕಾರ, ಈ ದ್ವೀಪ ರಾಷ್ಟ್ರದ ಉದ್ದಕ್ಕೂ ಫ್ಯೂಯಲ್‌ ಸ್ಟೇಷನ್‍ಗಳಲ್ಲಿ ಡೀಸೆಲ್ ಲಭ್ಯವಿಲ್ಲ.

ಸರತಿ ಸಾಲಿನಲ್ಲಿ ನಿಲ್ಲಿ..
ಸದ್ಯಕ್ಕೇನೋ ಪೆಟ್ರೋಲ್ ಖರೀದಿಗೆ ಲಭ್ಯವಿದೆ, ಆದರೆ ಅದರ ಪೂರೈಕೆ ಕೂಡ ಕಡಿಮೆ ಇದೆ. ಈ ಕಾರಣದಿಂದಾಗಿ, ವಾಹನ ಮಾಲೀಕರು ತಮ್ಮ ವಾಹನಗಳನ್ನು ಉದ್ದನೆಯ ಸರತಿ ಸಾಲಿನಲ್ಲಿ ಇರಬೇಕಾದ ಅನಿವಾರ್ಯತೆ ಎದುರಾಗಿದೆ.

“ನಾವು ಗ್ಯಾರೇಜಿನಲ್ಲಿ ರಿಪೇರಿಗೆ ಬಂದಿರುವ ಬಸ್‍ಗಳಿಂದ ಡೀಸೆಲ್ ಅನ್ನು ತೆಗೆಯುತ್ತಿದ್ದೇವೆ ಮತ್ತು ಆ ಡೀಸೆಲನ್ನು ಬಳಕೆಯ ಸ್ಥಿತಿಯಲ್ಲಿರುವ ವಾಹನಗಳಿಗೆ ಉಪಯೋಗಿಸುತ್ತಿದ್ದೇವೆ” ಎಂದು ಶ್ರೀಲಂಕಾದ ಸಾರಿಗೆ ಮಂತ್ರಿ ದಿಲಮ್ ಅಮುನುಗಮ ಅವರು ಹೇಳಿದ್ದಾರೆ.

ವಿದೇಶಿ ವಿನಿಮಯ ಸಂಗ್ರಹ ಕುಸಿತ
22 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಶ್ರೀಲಂಕಾ ದೇಶವು 1948 ರಲ್ಲಿ ಸ್ವಾತಂತ್ರ್ಯ ಪಡೆಯಿತು, ಆಗಿನಿಂದ ಇದೇ ಮೊದಲ ಬಾರಿಗೆ ಆಮದುಗಳಿಗೆ ಪಾವತಿ ಮಾಡಲು ವಿದೇಶಿ ಕರೆನ್ಸಿಯ ತೀವ್ರವಾದ ಕೊರತೆಯ ಕಾರಣದಿಂದ, ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಆಮದು ಮಾಡಿಕೊಳ್ಳಲು ಆಗ್ತಿಲ್ಲ..
ಕಳೆದ ಎರಡು ವರ್ಷಗಳಲ್ಲಿ, ವಿದೇಶಿ ವಿನಿಮಯ ಸಂಗ್ರಹವು ಶೇಕಡಾ 70 ರಷ್ಟು ಕುಸಿದಿದೆ. ಫೆಬ್ರವರಿ ವೇಳೆಗೆ 2.31 ಬಿಲಿಯನ್ ಡಾಲರ್‌ಗೆ ಇಳಿದಿದೆ. ಈ ಕಾರಣದಿಂದಾಗಿ ಆಹಾರ ಮತ್ತು ಇಂಧನ ಸೇರಿದಂತೆ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಶ್ರೀಲಂಕಾ ಪರದಾಡುತ್ತಿದೆ.

ಸಾಗಣೆಗಾಗಿ ಕಾಯುತ್ತಿರುವ 37,000 ಟನ್ ಡೀಸೆಲ್‍ಗೆ ಸರಕಾರ 52 ಮಿಲಿಯನ್ ಡಾಲರ್‌ಗಳನ್ನು ಪಾವತಿಸಲು ಅಸಮರ್ಥವಾಗಿರುವುದರ ಭಾಗಶಃ ಪರಿಣಾಮವೇ ವಿದ್ಯುತ್ ಕಡಿತ ಎಂದು ಶ್ರೀಲಂಕಾದ ಲೋಕೋಪಯೋಗಿ ಆಯೋಗದ ಅಧ್ಯಕ್ಷರಾದ ಜನಕ ರತ್ನಾಯಕೆ ಹೇಳಿದ್ದಾರೆ.

ಇದನ್ನೂ ಓದಿ: Shocking News: ಕಳೆದ 7 ವರ್ಷಗಳಿಂದ ದೇಶಕ್ಕೆ ಪ್ರತಿದಿನ 100 ಕೋಟಿ ಲಾಸ್!

“ನಮ್ಮ ಬಳಿ ಪಾವತಿ ಮಾಡಲು ಯಾವುದೇ ವಿದೇಶಿ ವಿನಿಮಯ ಇಲ್ಲ” ಎಂದಿರುವ ರತ್ನಾಯಕೆ, “ಅದು ವಾಸ್ತವ” ಎಂದು ಹೇಳಿದ್ದಾರೆ. ಈಗ ಇರುವ ಶುಷ್ಕ ಋತುವಿನಲ್ಲಿ, ಜಲವಿದ್ಯುತ್ ಸೌಲಭ್ಯಗಳಲ್ಲಿ ಕಡಿಮೆ ನೀರಿನ ಮಟ್ಟದ ಕಾರಣದಿಂದಾಗಿ ವಿದ್ಯುತ್ ಉತ್ಪಾದನೆಗೆ ಹೊಡೆತ ಬಿದ್ದಿದೆ ಎಂದು ಶ್ರೀಲಂಕಾದ ವಿದ್ಯುತ್ ಸಚಿವಾಲಯ ಹೇಳಿದೆ.

ನೀರಿನ ಬಳಕೆಗೂ ತಡೆ
ಜಲವಿದ್ಯುತ್ ಜಲಾಶಯಗಳಲ್ಲಿ ಸದ್ಯಕ್ಕಿರುವ ಸ್ವಲ್ಪ ಪ್ರಮಾಣದ ನೀರನ್ನು ಹೊಸ ಬೆಳೆಯ ಕಾರಣಕ್ಕಾಗಿ ಮತ್ತು ಗೃಹ ಬಳಕೆಗಾಗಿ ತಡೆಹಿಡಿಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಬಿಕ್ಕಟ್ಟಿನಿಂದ ಹೊರಗೆ ಬರಲು ದಾರಿಯನ್ನು ಹುಡುಕಲು, ಶ್ರೀಲಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಷ ಅವರು ಐಎಂಎಫ್ ಜೊತೆ ಮಾತನಾಡಲು, ಏಪ್ರಿಲ್‍ನಲ್ಲಿ ವಾಷಿಂಗ್ಟನ್‍ಗೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: Alert: ನಿಮ್ಮ ಬೈಕ್, ಕಾರ್ ರೋಡಿಗಿಳಿಸೋ ಮುನ್ನ ಎಚ್ಚರ! ಭಾರೀ ದಂಡ ತುಂಬಬೇಕಾದೀತು ಜೋಕೆ!

ಶುಕ್ರವಾರ ಪ್ರಕಟವಾದ ಐಎಂಎಫ್ ಮೌಲ್ಯಮಾಪನದಲ್ಲಿ ತಿಳಿಸಿರುವ ಪ್ರಕಾರ, ಸಂಯೋಜಿತ ಪಾವತಿಗಳ ಸಮತೋಲನ ಮತ್ತು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಅದು ಸಾಲವನ್ನು ಸಮರ್ಥನೀಯವಾಗಿಸಲು ಒಂದು “ಸಮಗ್ರ ಕಾರ್ಯತಂತ್ರ”ದ ಅಗತ್ಯವಿದೆ. ಒಂದು ವೇಳೆ ಶ್ರೀಲಂಕಾವು ಐಎಂಎಫ್ ಕಾರ್ಯಕ್ರಮವನ್ನು ಪಡೆದುಕೊಂಡರೆ, ಅದು ಜಾಗತಿಕ ಸಾಲದಾತನಿಂದ ಪಡೆದ ಅದರ 17 ನೇ ಹಣಕಾಸು ರಕ್ಷಣಾ ಪ್ಯಾಕೇಜ್ ಆಗಿರುತ್ತದೆ.
Published by:guruganesh bhat
First published: