Sri Lanka Declares Food Emergency: ಶ್ರೀಲಂಕಾದಲ್ಲಿ ಆಹಾರ ತುರ್ತು ಪರಿಸ್ಥಿತಿ; ನೆರೆಯ ರಾಷ್ಟ್ರದಲ್ಲಿ ಏನಾಗ್ತಿದೆ?

Sri Lanka Runs Out of Forex Reserves to Finance Imports: ವ್ಯಾಪಾರದ ಕೊರತೆಯಿಂದ ಶ್ರೀಲಂಕಾ ದೇಶದ ಆರ್ಥಿಕ ವ್ಯವಸ್ಥೆಯ ನೆನೆಗುದಿಗೆ ಬಿದ್ದಿದೆ. ಆದ್ದರಿಂದ, ರಾಷ್ಟ್ರವು ಕಳೆದ ವರ್ಷ ಉಳಿದ ವಿದೇಶೀ ವಿನಿಮಯ ಸಂಗ್ರಹದಲ್ಲಿ ಉಳಿಸಲು ಟೂತ್ ಬ್ರಷ್ ಹ್ಯಾಂಡಲ್‌ಗಳು, ವೆನೆಷಿಯನ್ ಬ್ಲೈಂಡ್‌ಗಳು, ಸ್ಟ್ರಾಬೆರಿಗಳು, ವಿನೆಗರ್, ಒರೆಸುವ ಬಟ್ಟೆಗಳು, ಸಕ್ಕರೆ ಮತ್ತು ಪ್ರಮುಖ ಸಾಂಬಾರು ಪದಾರ್ಥಗಳಾದ ಮಸಾಲೆ ಅರಿಶಿನ ಸೇರಿದಂತೆ ನೂರಾರು ವಿದೇಶಿ ಉತ್ಪನ್ನಗಳನ್ನು ನಿಷೇಧಿಸಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  sri lanka in danger: ಶ್ರೀಲಂಕಾ ದೇಶವು ಹಲವಾರು ವರ್ಷಗಳಿಂದ ವ್ಯಾಪಾರದ ಕೊರತೆಯನ್ನು ಎದುರಿಸುತ್ತಿದ್ದು ಹೀಗಾಗಿ ಹಣಕಾಸು ಸಂದಿಗ್ಧತೆಗೆ ಒಳಗಾಗಿದೆ. ವಿದೇಶಿ ವಿನಿಮಯವನ್ನು ಆಮದು ಮಾಡಿಕೊಳ್ಳುವುದಕ್ಕೆ ಖಾಸಗಿ ಬ್ಯಾಂಕ್‌ಗಳಿಗೆ ಆರ್ಥಿಕ ಅಡಚಣೆ ಎದುರಾಗಿರುವುದರಿಂದ ದೇಶವು ಪ್ರಸ್ತುತ ಆಹಾರ ಕೊರತೆಯ ಮೇಲೆ ತುರ್ತು ಪರಿಸ್ಥಿತಿ ಘೋಷಿಸಿದೆ. ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರು ಸಾರ್ವಜನಿಕ ಭದ್ರತಾ ಸುಗ್ರೀವಾಜ್ಞೆಯ ಅಡಿಯಲ್ಲಿ ಹೊರಡಿಸಿದ ತುರ್ತು ನಿಯಮಗಳ ಅನ್ವಯ ಸರಕಾರಿ ಅಧಿಕಾರಿಗಳು ವ್ಯಾಪಾರಿಗಳು ಹೊಂದಿರುವ ಆಹಾರ ದಾಸ್ತಾನುಗಳನ್ನು ವಶಪಡಿಸಿಕೊಳ್ಳಲು ಹಾಗೂ ಆಹಾರ ವಸ್ತುಗಳನ್ನು ಸಂಗ್ರಹಿಸುವ ಜನರನ್ನು ಬಂಧಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

  ಅಲ್ ಜಜೀರಾ ಪ್ರಕಾರ, ಭತ್ತ, ಅಕ್ಕಿ ಮತ್ತು ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳನ್ನು ಸರಕಾರದ ಆದೇಶಿತ ಬೆಲೆಗಳಿಗೆ ಅಥವಾ ಕಸ್ಟಮ್ಸ್‌ನಲ್ಲಿ ಆಮದು ವೆಚ್ಚಗಳ ಆಧಾರದ ಮೇಲೆ ಮಾರಾಟ ಮಾಡಲು ಮತ್ತು ದಾಸ್ತಾನುಗಳನ್ನು ಅಡಗಿಸುವುದನ್ನು ತಡೆಯಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಬಾಂಡ್ ಹರಾಜಿನಲ್ಲಿ ಉಂಟಾದ ವಿಫಲತೆಯಿಂದಾಗಿ ದೇಶದ ವಿದೇಶಿ ವಿನಿಮಯ ಮೀಸಲು ಇಳಿಮುಖವಾಗುತ್ತಿದ್ದು ಸರಕುಗಳ ಬೆಲೆ ಇದರ ಪರಿಣಾಮವಾಗಿ ಗಗನಕ್ಕೇರುತ್ತಿದೆ. ಇದಕ್ಕಾಗಿ ಆಹಾರ ವಿತರಣೆಯ ಮೇಲ್ವಿಚಾರಣೆ ನಡೆಸಲು ಅಧ್ಯಕ್ಷರು ಮೇಜರ್ ಜನರಲ್ ಅವರನ್ನು ನೇಮಿಸಿದ್ದಾರೆ ಎಂದು ವರದಿ ತಿಳಿಸಿದೆ.

  ಆರ್ಥಿಕತೆಯ ಕ್ಷೀಣಿಸುವಿಕೆ

  ಶ್ರೀಲಂಕಾ ಸರಕಾರವು ವಿದೇಶಿ ಮೀಸಲುಗಳ ಅಧಿಕಾರವನ್ನು 2019 ರ ನವೆಂಬರ್‌ನಲ್ಲಿ ತನ್ನ ಸುಪರ್ದಿಗೆ ತೆಗೆದುಕೊಂಡಾಗ ಇದು $ 7.5 ಬಿಲಿಯನ್‌ನಿಂದ ಜುಲೈ 2021 ರ ಕೊನೆಯಲ್ಲಿ $ 2.8 ಬಿಲಿಯನ್‌ಗೆ ಕುಸಿಯಿತು.

  ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ವ್ಯಾಪಾರದ ಕೊರತೆಯಿಂದ ಶ್ರೀಲಂಕಾ ದೇಶದ ಆರ್ಥಿಕ ವ್ಯವಸ್ಥೆಯ ನೆನೆಗುದಿಗೆ ಬಿದ್ದಿದೆ. ಆದ್ದರಿಂದ, ರಾಷ್ಟ್ರವು ಕಳೆದ ವರ್ಷ ಉಳಿದ ವಿದೇಶೀ ವಿನಿಮಯ ಸಂಗ್ರಹದಲ್ಲಿ ಉಳಿಸಲು ಟೂತ್ ಬ್ರಷ್ ಹ್ಯಾಂಡಲ್‌ಗಳು, ವೆನೆಷಿಯನ್ ಬ್ಲೈಂಡ್‌ಗಳು, ಸ್ಟ್ರಾಬೆರಿಗಳು, ವಿನೆಗರ್, ಒರೆಸುವ ಬಟ್ಟೆಗಳು, ಸಕ್ಕರೆ ಮತ್ತು ಪ್ರಮುಖ ಸಾಂಬಾರು ಪದಾರ್ಥಗಳಾದ ಮಸಾಲೆ ಅರಿಶಿನ ಸೇರಿದಂತೆ ನೂರಾರು ವಿದೇಶಿ ಉತ್ಪನ್ನಗಳನ್ನು ನಿಷೇಧಿಸಿದೆ. 1970 ರ ನಂತರ ರಾಷ್ಟ್ರವು ಅತ್ಯಂತ ಸಂಕಷ್ಟದಲ್ಲಿರುವ ಆಮದು ನಿಯಂತ್ರಣದಲ್ಲಿದೆ. ವಿದೇಶಿ ವಿನಿಮಯ ಗಳಿಕೆಯ ಏಕೈಕ ಮೂಲ ಪ್ರವಾಸೋದ್ಯಮವಾಗಿದೆ. ಆದರೆ ಕೊರೋನಾ ಸಾಂಕ್ರಾಮಿಕದಿಂದ ಈ ಕ್ಷೇತ್ರ ಕೂಡ ಇಳಿಮುಖವನ್ನು ಕಂಡಿದೆ.

  12 ತಿಂಗಳಲ್ಲಿ ತಲಾ 1.5 ಬಿಲಿಯನ್ ಡಾಲರ್ ಪಾವತಿ

  ಈ ವರ್ಷ, ಶ್ರೀಲಂಕಾ ಇನ್ನೂ ಎರಡು ವಿದೇಶಿ ಸಾಲ ಪಾವತಿಗಳನ್ನು ಹೊಂದಿದ್ದು, ಮುಂದಿನ 12 ತಿಂಗಳಲ್ಲಿ ತಲಾ 1.5 ಬಿಲಿಯನ್ ಡಾಲರ್ ಪಾವತಿಸಬೇಕಿದೆ. ಸ್ಥಳೀಯ ಸಾಲದೊಂದಿಗೆ 1.3 ಬಿಲಿಯನ್ ಅನ್ನು ದೇಶವು ಈಗಾಗಲೇ ಪಾವತಿಸಿದೆ ಎಂಬುದು ವರದಿಯಾಗಿದೆ. ಬ್ಲೂಮ್‌ಬರ್ಗ್ ವರದಿ ಮಾಡಿರುವ ಸುದ್ದಿಯ ಪ್ರಕಾರ ವಿದೇಶಿ ವಿನಿಮಯ ಮೀಸಲುಗಳಲ್ಲಿ 1 ಬಿಲಿಯನ್ ಡಾಲರ್ ಬಾಂಡ್‌ಗಳನ್ನು ಮರುಪಾವತಿಸಲು ಕೇಂದ್ರ ಬ್ಯಾಂಕ್ ಈಗಾಗಲೇ ಆದೇಶಿಸಿದೆ. ಬಾಂಡ್ ಹರಾಜಿಗಿಂತ ಮುಂಚಿತವಾಗಿ ಬಡ್ಡಿ ದರಗಳನ್ನು ಹೆಚ್ಚಿಸಲಾಗಿದೆ ಎಂದು ವರದಿ ತಿಳಿಸಿದ್ದು ಪ್ರಸ್ತುತ ವಿದೇಶಿ ವಿನಿಮಯದ ಕೊರತೆ ಮತ್ತು ರೂಪಾಯಿ ಕುಸಿತಕ್ಕೆ ಪ್ರಮುಖ ಕಾರಣವಾಗಿರುವ ಬಡ್ಡಿ ದರವನ್ನು ತೆಗೆದುಹಾಕುವಂತೆ ವಿಶ್ಲೇಷಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

  ಇದನ್ನೂ ಓದಿ: MLA travels in undergarments: ರೈಲು ಪ್ರಯಾಣದ ವೇಳೆ ಒಳಉಡುಪಿನಲ್ಲಿ ಓಡಾಡಿದ ಶಾಸಕ; ಚೀರಿದ ಪ್ರಯಾಣಿಕರು!

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  First published: