Sri Lanka Declares Emergency: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಕಚೇರಿ ಬಳಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾರಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಸ್ಥಳದಲ್ಲಿ ಭಾರೀ ಸೇನಾ ಉಪಸ್ಥಿತಿ ವರದಿಯಾಗಿದೆ.

ಪ್ರತಿಭಟನೆಯ ದೃಶ್ಯ

ಪ್ರತಿಭಟನೆಯ ದೃಶ್ಯ

 • Share this:
  ಕೊಲಂಬೋ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ದೇಶದಿಂದ ಪಲಾಯನಗೈದು ಮಾಲ್ಡೀವ್ಸ್‌ನ ಮಾಲೆಯಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದ್ದು ಈ ಬೆನ್ನಲ್ಲೇ ದ್ವೀಪರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.  ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಪಲಾಯನದ ಸುದ್ದಿ ಹೊರಬಿದ್ದ ಕೂಡಲೇ ರಾಜಧಾನಿ ಕೊಲಂಬೊದಲ್ಲಿ ಮತ್ತೆ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಕಚೇರಿ ಬಳಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾರಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಸ್ಥಳದಲ್ಲಿ ಭಾರೀ ಸೇನಾ ಉಪಸ್ಥಿತಿ ವರದಿಯಾಗಿದೆ.

  ಮಿಲಿಟರಿ ಜೆಟ್​ನಲ್ಲಿ ಎಸ್ಕೇಪ್
  ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರು ತಡರಾತ್ರಿ ಮಿಲಿಟರಿ ಜೆಟ್ ಅನ್ನು ತೆಗೆದುಕೊಂಡು ಮಾಲ್ಡೀವ್ಸ್‌ನ ರಾಜಧಾನಿ ಮಾಲೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಜೊತೆಗೆ ತಮ್ಮ ಐದು ಕುಟುಂಬ ಸದಸ್ಯರು ಮತ್ತು ಮೂವರು ಸಿಬ್ಬಂದಿಗಳೊಂದಿಗೆ ತಮ್ಮ ದೇಶವನ್ನು ಬಿಟ್ಟು ಪಲಾಯನ ಮಾಡಿದರು ಎಂದು ವರದಿಯಾಗಿದೆ.

  ಇದನ್ನೂ ಓದಿ: Pani Puri: ಪಾನಿಪುರಿ ತಿನ್ಬೇಡಿ ಎಚ್ಚರ! ಆರೋಗ್ಯ ಇಲಾಖೆಯಿಂದಲೇ ಸೂಚನೆ

  ಶ್ರೀಲಂಕಾದಲ್ಲಿ ಮುಂದೇನಾಗಲಿದೆ?
  ಜುಲೈ 13 ರಂದು ಅಂದರೆ ಇಂದು ಗೋಟಾಬಯ ರಾಜಪಕ್ಸೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ. ಜುಲೈ 16 ರಂದು ಸಂಸತ್ತು ಪುನರಾರಂಭವಾಗುವ ಸಾಧ್ಯತೆಯಿದೆ. ಜುಲೈ 20 ರಂದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಹೊಸ ಚುನಾವಣೆಗಳು ನಡೆಯಲಿದ್ದು, ಜುಲೈ 19 ರಂದು ನಾಮನಿರ್ದೇಶನಗಳು ನಡೆಯಲಿವೆ.

  ಇದನ್ನೂ ಓದಿ: National Emblem Expression: ರಾಷ್ಟ್ರೀಯ ಲಾಂಛನದ ಸೌಮ್ಯ ರೂಪ vs ಉಗ್ರ ರೂಪ; ಏನಿದು ವಿಪಕ್ಷಗಳ ಹೊಸ ಟೀಕೆ?

  ಹೆಚ್ಚುತ್ತಿರುವ ಪ್ರತಿಭಟನೆಗಳನ್ನು ನಿಯಂತ್ರಿಸಲು ಕೊಲಂಬೊ ಸೇರಿದಂತೆ ಪಶ್ಚಿಮ ಪ್ರಾಂತ್ಯದಾದ್ಯಂತ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದೆ ಎಂದು ರನಿಲ್ ವಿಕ್ರಮಸಿಂಘೆ ಅವರ ಕಚೇರಿ ತಿಳಿಸಿದೆ.
  Published by:guruganesh bhat
  First published: