Sri Lanka: ಚೀನಾದಿಂದಾಗಿ ಆರ್ಥಿಕ ಅಧಃಪತನ, ಶ್ರೀಲಂಕಾ ಆರ್ಥಿಕತೆ ಈ ಸ್ಥಿತಿಗೆ ತಲುಪಲು ಮತ್ತೇನೇನು ಕಾರಣ?

ಶ್ರೀಲಂಕಾದ ಆಧುನಿಕ ಚರಿತ್ರೆಯಲ್ಲಿಯೇ ಇಂಥದ್ದೊಂದು ಆರ್ಥಿಕ ಪರಿಸ್ಥಿತಿ ಸೃಷ್ಟಿಯಾಗಿರುವುದಕ್ಕೆ ಎಲ್ಲರೂ ಚೀನಾವನ್ನು ದೂರುತ್ತಿದ್ದಾರೆ. ಶ್ರೀಲಂಕಾದಲ್ಲಿ ಈಗಿರುವ ಆರ್ಥಿಕ ಸಂಕಷ್ಟದ ಸ್ಥಿತಿಗೆ ಚೀನಾವೇ ಕಾರಣ ಎಂದು ಡ್ರ್ಯಾಗನ್ ರಾಷ್ಟ್ರದತ್ತ ಬೊಟ್ಟು ಮಾಡುತ್ತಿವೆ ಅಂತಾರಾಷ್ಟ್ರೀಯ ಮಾಧ್ಯಮಗಳು. ಆದರೆ ವಾಸ್ತವದಲ್ಲಿ ಈ ಸ್ಥಿತಿಗೆ ಚೀನಾ ಮಾತ್ರ ಕಾರಣವಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಏ.02): ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿದ್ದು ರಾಷ್ಟ್ರದಲ್ಲಿ ಈಗಾಗಲೇ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಕೊಲಂಬೋದ ಕೋಟೆ ಪ್ರದೇಶಕ್ಕೆ ಪ್ರವೇಶಿಸಿದ ಕೂಡಲೇ 750 ಎಕರೆಗಳಷ್ಟು ವಿಸ್ತಾರವಾಗಿರುವ ಬೃಹತ್ ಮರಳು ಪ್ರದೇಶ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಅಂದು ಸಿಲೋನ್ ಎಂದು ಕರೆಯಲ್ಪಡುತ್ತಿದ್ದ ಈಗಿನ ಶ್ರೀಲಂಕಾದಲ್ಲಿ ವಸಾಹತು ಸ್ಥಾಪಿಸಿದ್ದ ಡಚ್ ಮತ್ತು ಬ್ರಿಟಿಷ್ ಇದನ್ನು ನಿರ್ಮಿಸಿದೆ. ಈಗ ಹೊಸ ವಸಾಹತುಶಾಹಿ ಶಕ್ತಿಯಂತೆ ವರ್ತಿಸುತ್ತಿರುವ ಡ್ರ್ಯಾಗನ್ ರಾಷ್ಟ್ರ ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಬಂದರು ನಗರವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಚೀನಾವು ಈ ಭೂಮಿಯನ್ನು ಪುನಃ ಪಡೆದುಕೊಂಡಿದ್ದು, ಇದನ್ನು ವಿಶ್ವ ದರ್ಜೆಯ ಮುಕ್ತ ವ್ಯಾಪಾರ ವಲಯವಾಗಿದೆ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿದೆ. ಒಂದು ವೇಳೆ ಈ ಫ್ರೀ ಟ್ರೇಂಡಿಂಗ್ ಝೋನ್ ಚೀನಾ ಯೋಚಿಸಿದಂತೆಯೇ ಅಭಿವೃದ್ಧಿಯಾದರೆ ಇದು ಸಿಂಗಾಪುರ್ ಮತ್ತು ದುಬೈಗೆ ಪ್ರತಿಸ್ಪರ್ಧಿಯಾಗಲಿದೆ ಎನ್ನುವುದು ಚೀನಾದ ಒಟ್ಟು ಲೆಕ್ಕಾಚಾರ.

ಶ್ರೀಲಂಕಾದ ಆಧುನಿಕ ಚರಿತ್ರೆಯಲ್ಲಿಯೇ ಇಂಥದ್ದೊಂದು ಆರ್ಥಿಕ ಪರಿಸ್ಥಿತಿ ಸೃಷ್ಟಿಯಾಗಿರುವುದಕ್ಕೆ ಎಲ್ಲರೂ ಚೀನಾವನ್ನು ದೂರುತ್ತಿದ್ದಾರೆ. ಶ್ರೀಲಂಕಾದಲ್ಲಿ ಈಗಿರುವ ಆರ್ಥಿಕ ಸಂಕಷ್ಟದ ಸ್ಥಿತಿಗೆ ಚೀನಾವೇ ಕಾರಣ ಎಂದು ಡ್ರ್ಯಾಗನ್ ರಾಷ್ಟ್ರದತ್ತ ಬೊಟ್ಟು ಮಾಡುತ್ತಿವೆ ಅಂತಾರಾಷ್ಟ್ರೀಯ ಮಾಧ್ಯಮಗಳು.

ಶ್ರೀಲಂಕಾದ ಈಗಿನ ಆರ್ಥಿಕ ಪರಿಸ್ಥಿತಿಗೆ ಕಾರಣವಾದ ಕಾರಣಗಳೇನು?

ಆದರೆ ನಿಜಕ್ಕೂ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿಗೆ ಕಾರಣವಾಗಿದ್ದು ಚೀನಾ ಮಾತ್ರವಲ್ಲ. ಶ್ರೀಲಂಕಾದ ಈ ರೀತಿಯ ಆರ್ಥಿಕ ಪರಿಸ್ಥಿತಿಗೆ ಕಾರಣವಾಗಿರುವ ಬಹಳಷ್ಟು ವಿಚಾರಗಳಿವೆ.

ಸಿಲೋನ್ ಫೆಬ್ರವರಿ 4, 1948 ರಂದು ಯುನೈಟೆಡ್ ಕಿಂಗ್‌ಡಮ್‌ನಿಂದ ಸ್ವತಂತ್ರವಾಯಿತು. ಹೊಸದಾಗಿ ಸ್ವತಂತ್ರವಾದ, ಸಣ್ಣ ರಾಷ್ಟ್ರವು 1972 ರಲ್ಲಿ ಗಣರಾಜ್ಯವಾಗುವವರೆಗೆ ಬ್ರಿಟಿಷ್ ಕಾಮನ್‌ವೆಲ್ತ್‌ನೊಳಗೆ ಡೊಮಿನಿಯನ್ ಆಗಿಯೇ ಉಳಿದುಕೊಂಡಿತ್ತು.

40 ಸಾವಿರಕ್ಕೂ ಹೆಚ್ಚು ಯುರೋಪಿಯನ್ ವ್ಯಾಪಾರಿಗಳು

ಬ್ರಿಟಿಷರು ಸಿಲೋನ್ ತೊರೆದಂತಹ ಸಂದರ್ಭದಲ್ಲಿ ಶ್ರೀಲಂಕಾದ ಬಹುತೇಕ ವ್ಯಾಪಾರ ಹಾಗೂ ವಾಣಿಜ್ಯ ವಿಚಾರಗಳನ್ನು ಬ್ರಿಟಿಷ್ ಹಾಗೂ ಇತರ ಯುರೋಪಿಯನ್ ಒಡೆತನವೇ ನಿರ್ವಹಿಸುತ್ತಿತ್ತು. ಅಮೆರಿಕನ್ನರು ಸೇರಿದಂತೆ 40 ಸಾವಿರಕ್ಕೂ ಹೆಚ್ಚು ಯುರೋಪಿಯನ್ನರು ದ್ವೀಪರಾಷ್ಟ್ರದಲ್ಲಿ ವ್ಯಾಪಾ ಮಾಡಿಕೊಂಡು ಮುಂದುವರಿದಿದ್ದಾರೆ. ಪೊಲೀಸ್, ಮಿಲಿಟರಿ ಕೂಡಾ ಕೆಲಸ ಮುಂದುವರಿಸಿದ್ದರು. ಶ್ರೀಲಂಕಾದ ರುಪಾಯಿ ಬಲಿಷ್ಠವಾಗಿದ್ದು ಇದು ಎಲ್ಲೆಡೆ ಸ್ವೀಕೃತವೂ ಆಗಿದೆ.

ಸಿನ್ಹಾಲ ನೀತಿಯ ನಂತರ ಮತ್ತು ಪ್ರಧಾನಿ ಸಿರಿಮಾವೊ ಬಂಡಾರನಾಯ್ಕೆ ಅವರ ತೀವ್ರ ಸಮಾಜವಾದದ ನಂತರದ ಬದಲಾವಣೆಯ ಭಾಗವಾಗಿ ಎಲ್ಲಾ ಖಾಸಗಿ ಉದ್ಯಮಗಳನ್ನು ಒಂದೊಂದಾಗಿ ಶ್ರೀಲಂಕಾದಿಂದ ಹೊರ ಹಾಕಲಾಯಿತು.

1970ರ ಜೆವಿಪಿ ಬಂಡಾಯ ಕೂಡಾ ಇದರಲ್ಲಿ ಸೇರಿಕೊಂಡಿತು. 1977ರಲ್ಲಿ ಜೆಆರ್ ಜಯವರ್ಧನೆ ನೇತೃತ್ವದ ಯುಎನ್​​ಪಿ ಸರ್ಕಾರ ಬಂಡಾರನಾಯ್ಕೆ ಅವರ ಸೋಷಿಯಲಿಸಂ ರಿವರ್ಸ್ ಮಾಡಿ ಮುಕ್ತ ಮಾರುಕಟ್ಟೆ ಆರ್ಥಿಕತೆಯನ್ನು ಅಳವಡಿಸಿತು.

ಸ್ವಾವಲಂಬಿ ಆರ್ಥಿಕತೆಯ ನಿರ್ಲಕ್ಷ್ಯ

ಆದರೆ 25 ವರ್ಷಗಳ ಕಾಲ ನಡೆದ ತಮಿಳು ಈಳಂ ಅಂತರ್ಯುದ್ಧವು ವಿದೇಶಿ ಹೂಡಿಕೆದಾರರನ್ನು ಹಿಮ್ಮೆಟ್ಟಿಸಿತು. ಬಂಡುಕೋರರ ವಿರುದ್ಧ ಹೋರಾಡುವಲ್ಲಿ ನಿರತರಾಗಿದ್ದ ಸರ್ಕಾರವು ಬಲವಾದ, ಸ್ವಾವಲಂಬಿ ಆರ್ಥಿಕತೆಯನ್ನು ನಿರ್ಮಿಸುವತ್ತ ಹೆಚ್ಚು ಗಮನಹರಿಸಲಿಲ್ಲ.

ಆಹಾರ ವಸ್ತುಗಳನ್ನೇ ಆಮದು ಮಾಡಿಕೊಳ್ಳುತ್ತೆ ಶ್ರೀಲಂಕಾ

ಶ್ರೀಲಂಕಾ ಚಹಾ, ದಾಲ್ಚಿನ್ನಿ, ಮಸಾಲೆಗಳು, ರಬ್ಬರ್, ತೆಂಗಿನಕಾಯಿ, ಸಮುದ್ರ ಉತ್ಪನ್ನಗಳು, ರತ್ನಗಳು ಮತ್ತು ಉಡುಪುಗಳನ್ನು ರಫ್ತು ಮಾಡುತ್ತದೆ. ಅದರ ಹೆಚ್ಚಿನ ಆಹಾರ ಪದಾರ್ಥಗಳನ್ನು ಒಳಗೊಂಡಂತೆ ಹೆಚ್ಚಿನ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ವಿದೇಶದಲ್ಲಿ ಕೆಲಸ ಮಾಡುವ ಶ್ರೀಲಂಕಾದವರು ವಾರ್ಷಿಕವಾಗಿ 3-4 ಬಿಲಿಯನ್ ಡಾಲರ್‌ಗಳನ್ನು ಮನೆಗೆ ಕಳುಹಿಸುತ್ತಾರೆ. ಪ್ರವಾಸೋದ್ಯಮವು ವರ್ಷಕ್ಕೆ 4-5 ಬಿಲಿಯನ್ ಡಾಲರ್‌ಗಳನ್ನು ಉತ್ಪಾದಿಸುವ 3 ಮಿಲಿಯನ್‌ಗಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

ಅಲ್ಪಾವಧಿಯ ಆರ್ಥಿಕ ಬೆಳವಣಿಗೆ

ದೇಶದಲ್ಲಿ ಉತ್ಪಾದನೆ ಮತ್ತು ಸೇವಾ ವಲಯವನ್ನು ನಿರ್ಮಿಸಲು ಶ್ರೀಲಂಕಾ ಸರ್ಕಾರಗಳು ಯಾವುದೇ ಗಂಭೀರ ಪ್ರಯತ್ನಗಳನ್ನು ಮಾಡಲಿಲ್ಲ. 2009 ರ ನಂತರ, ಶ್ರೀಲಂಕಾವು ಅಲ್ಪಾವಧಿಗೆ ದೊಡ್ಡ ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಯಿತು. ಇದು ಲಕ್ಷಾಂತರ ಜನರ ಭರವಸೆಯನ್ನು ಹೆಚ್ಚಿಸುವ ಮೂಲಕ ಬೃಹತ್ ವಿದೇಶಿ ಮತ್ತು ದೇಶೀಯ ಹೂಡಿಕೆಗಳನ್ನು ಆಕರ್ಷಿಸಿತು.

ಇದನ್ನೂ ಓದಿ: Narendra Modi: ಪ್ರಧಾನಿ ಮೋದಿ ಹತ್ಯೆಗೆ ಸಂಚು, ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಇ-ಮೇಲ್..!

ಚೀನಾದಿಂ ಪಡೆದ ಸಾಲವೂ ಹೊರೆ ಆಯ್ತು

ಆದರೆ, ಶತಕೋಟಿ ಡಾಲರ್ ಮೌಲ್ಯದ ಸಾರ್ವಭೌಮ ಬಾಂಡ್‌ಗಳ ವಿತರಣೆಯಲ್ಲಿ ಸರ್ಕಾರ ತೋರಿಸಿದ ಅಜಾಗರೂಕತೆ, ಸಾಲ ಮತ್ತು ವ್ಯರ್ಥ ಖರ್ಚು ಕಳೆದ 10 ವರ್ಷಗಳಲ್ಲಿ ಆರ್ಥಿಕತೆಯನ್ನು ಧ್ವಂಸಗೊಳಿಸಿದೆ. ಚೀನಾದಿಂದ ಪಡೆದ ದೊಡ್ಡ ಪ್ರಮಾಣದ ಸಾಲ ಕೂಡ ಪರಿಸ್ಥಿತಿಯನ್ನು ಹದಗೆಡಿಸಿದೆ. 2009 - 12 ರ ಅವಧಿಯಲ್ಲಿ, ಶ್ರೀಲಂಕಾ IMF ಸಹಾಯವನ್ನು ತೆಗೆದುಕೊಂಡಿತು, ಆದರೆ ಹಣಕಾಸಿನ ಪರಿಸ್ಥಿತಿಯನ್ನು ಶಿಸ್ತುಬದ್ಧಗೊಳಿಸಲು ಪುನಃ ವಿಫಲವಾಯಿತು.

2019 ರ ಈಸ್ಟರ್ ಬಾಂಬ್ ಸ್ಫೋಟಗಳ ನಂತರ ಎರಡು ವರ್ಷಗಳ ಕೊರೋನಾ ಲಾಕ್‌ಡೌನ್ ದ್ವೀಪ ರಾಷ್ಟ್ರದ ಆರ್ಥಿಕತೆಯನ್ನು ಇನ್ನಷ್ಟು ಹದಗೆಡಿಸಿತು. ಈಗ ಬ್ರೇಕಿಂಗ್ ಪಾಯಿಂಟ್ ತಲುಪಿದೆ. ಆಡಳಿತಾರೂಢ ರಾಜಪಕ್ಸೆ ಕುಟುಂಬವು ದೇಶವನ್ನು ಈಗ ದಿವಾಳಿತನ ಮತ್ತು ಹಸಿವಿನ ಕೂಪಕ್ಕೆ ತಳ್ಳುವ ಪರಿಸ್ಥಿತಿಗೆ ತಲುಪಿದೆ. ಶ್ರೀಲಂಕಾವನ್ನು ಉಳಿಸಲು ಅಂತರರಾಷ್ಟ್ರೀಯ ಸಮುದಾಯವು ಮುಂದಾದರೆ ಮಾತ್ರ ದ್ವೀಪ ರಾಷ್ಟ್ರ ಮತ್ತೆ ಚೇತರಿಸಲು ಸಾಧ್ಯ ಎನ್ನುತ್ತಿದ್ದಾರೆ ಅರ್ಥಶಾಸ್ತ್ರಜ್ಞರು.

ಇದನ್ನೂ ಓದಿ: ಭಾರತಕ್ಕೆ ಏನು ಬೇಕೋ ಅದನ್ನು ಪೂರೈಸಲು ನಾವು ಸಿದ್ಧರಿದ್ದೇವೆ; US ಎಚ್ಚರಿಕೆಯ ನಡುವೆ Russia ಘೋಷಣೆ

ಶ್ರೀಲಂಕಾದ ಮಾಜಿ ಕ್ರಿಕೆಟ್ ಸೆನ್ಸೇಷನ್ ಸನತ್ ಜಯಸೂರ್ಯ ಅವರು ಪರಿಸ್ಥಿತಿ ತುಂಬಾ ಕಠಿಣವಾಗಿದೆ. ಬ್ರೇಕಿಂಗ್ ಪಾಯಿಂಟ್ ತಲುಪಿದೆ ಎಂದು ಎಚ್ಚರಿಸಿದ್ದಾರೆ. ಭಾರತ ಈಗ ಅವರನ್ನು ಉಳಿಸಬಹುದು ಎಂದು ಅನೇಕ ಶ್ರೀಲಂಕಾದವರು ಆಶಿಸಿದ್ದಾರೆ. ಅಧ್ಯಕ್ಷ ಗೊಟಾಬಯ ರಾಜಪಕ್ಷೆ ಅವರ ಪದಚ್ಯುತಿಗೆ ಜನರಿಂದ ಒತ್ತಾಯ ವ್ಯಕ್ತವಾಗುತ್ತಿದ್ದು ಶ್ರೀಲಂಕಾ ಅನಿಶ್ಚಿತ ಭವಿಷ್ಯವನ್ನು ನೋಡುತ್ತಿದೆ.
Published by:Divya D
First published: