ಪ್ರಚೋದನಾಕಾರಿ ಪೋಸ್ಟ್​ನಿಂದ ಶ್ರೀಲಂಕಾ ಪ್ರಕ್ಷುಬ್ಧ; ಶಾಂತಿ ಸ್ಥಾಪನೆಗಾಗಿ ಸಾಮಾಜಿಕ ಜಾಲತಾಣಗಳ ನಿಷೇಧ

ಈಸ್ಟರ್ನ್​ ಸಂಡೆ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಅಲ್ಲಿಲ್ಲಿ ಮುಸ್ಲಿಮರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಈಶಾನ್ಯ ಭಾಗದಲ್ಲಿರುವ ಚಿಲಾವ್ ಎಂಬ ಪ್ರದೇಶದ ನಿವಾಸಿ ಮುಸ್ಲಿಂ ವ್ಯಕ್ತಿಯೊಬ್ಬ ಇದನ್ನು ಖಂಡಿಸಿ ಪೋಸ್ಟ್ ಹಾಕಿದ್ದ, ಅಲ್ಲದೆ, ಕ್ರಿಶ್ಚಿಯನ್ ಸಮುದಾಯವನ್ನು ಉಲ್ಲೇಖಿಸಿ “ತುಂಬಾ ನಗಬೇಡಿ ಮುಂದೊಂದು ದಿನ ನೀವು ಅಳಬೇಕಾದ ಪರಿಸ್ಥಿತಿ ಎದುರಾಗುತ್ತದೆ” ಎಂದು ತನ್ನ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದ.

MAshok Kumar | news18
Updated:May 13, 2019, 1:14 PM IST
ಪ್ರಚೋದನಾಕಾರಿ ಪೋಸ್ಟ್​ನಿಂದ ಶ್ರೀಲಂಕಾ ಪ್ರಕ್ಷುಬ್ಧ; ಶಾಂತಿ ಸ್ಥಾಪನೆಗಾಗಿ ಸಾಮಾಜಿಕ ಜಾಲತಾಣಗಳ ನಿಷೇಧ
ಕ್ರಿಶ್ಚಿಯನ್ ಗುಂಪಿನ ದಾಳಿಯಿಂದ ದ್ವಂಸಗೊಂಡಿರುವ ಮುಸ್ಲಿಂ ವ್ಯಕ್ತಿಯ ಅಂಗಡಿ.
  • News18
  • Last Updated: May 13, 2019, 1:14 PM IST
  • Share this:
ಕೊಲಂಬೊ (ಮೇ.13): ಶ್ರೀಲಂಕಾದಲ್ಲಿ ಚರ್ಚ್ ಮೇಲೆ ಆತ್ಮಹತ್ಯಾ ದಾಳಿ ನಡೆದ ನಂತರ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಪರ ಹಾಗೂ ವಿರೋಧಿ ಪೋಸ್ಟ್​ಗಳು ವೈರಲ್ ಆಗುತ್ತಿರುವ ಹಿನ್ನೆಲೆ ಮುಸ್ಲಿಮರ ಮೇಲೆ ಅಲ್ಲಲ್ಲಿ ನಿರಂತರ ದಾಳಿಗಳು ನಡೆಯುತ್ತಿದೆ. ಪರಿಣಾಮ ಶ್ರೀಲಂಕಾ ದ್ವೀಪ ರಾಷ್ಟ್ರದಲ್ಲಿ ಶಾಂತಿ ಸ್ಥಾಪನೆಗಾಗಿ ಅಲ್ಲಿನ ಸರ್ಕಾರ  ಸೋಮವಾರದಿಂದ ಫೇಸ್​ಬುಕ್ ಹಾಗೂ ವಾಟ್ಸಾಪ್ ಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ.

ಏಪ್ರಿಲ್​.21 ರಂದು ಭಾನುವಾರ ಶ್ರೀಲಂಕಾದ ಚರ್ಚ್​ ಒಂದರಲ್ಲಿ ಈಸ್ಟರ್​ ಭಾನುವಾರದ ಪ್ರಯುಕ್ತ ಕ್ರಿಶ್ಚಿಯನ್ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ವೇಳೆ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ ಪರಿಣಾಮ 260ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ನಂತರ ಈ ಆಕ್ರಮಣದ ಹೊಣೆಯನ್ನು ಇಸ್ಲಾಂ ಸ್ಟೇಟ್ ಮುಸ್ಲಿಂ ಉಗ್ರ ಸಂಘಟನೆ ವಹಿಸಿಕೊಂಡಿತ್ತು. ಅಲ್ಲದೆ ನ್ಯೂಜಿಲೆಂಡ್​ನಲ್ಲಿ ಚರ್ಚ್​ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ ಈ ದಾಳಿ ಸಂಘಟಿಸಲಾಗಿದೆ ಎಂದು ತಿಳಿಸಿತ್ತು.

ಇದನ್ನೂ ಓದಿ : ಶ್ರೀಲಂಕಾ ಚರ್ಚ್ ದಾಳಿ ನಡೆಸಿದ ಆತ್ಮಹತ್ಯಾ ಬಾಂಬರ್​ಗಳಿಗೆ ಭಾರತದಲ್ಲಿ ಟ್ರೈನಿಂಗ್?; ಲಂಕಾ ಸೇನೆ ಆರೋಪ

ಈ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಅಲ್ಲಿಲ್ಲಿ ಮುಸ್ಲಿಮರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಈಶಾನ್ಯ ಭಾಗದಲ್ಲಿರುವ ಚಿಲಾವ್ ಎಂಬ ಪ್ರದೇಶದ ನಿವಾಸಿ ಮುಸ್ಲಿಂ ವ್ಯಕ್ತಿಯೊಬ್ಬ ಇದನ್ನು ಖಂಡಿಸಿ ಪೋಸ್ಟ್ ಹಾಕಿದ್ದ, ಅಲ್ಲದೆ, ಕ್ರಿಶ್ಚಿಯನ್ ಸಮುದಾಯವನ್ನು ಉಲ್ಲೇಖಿಸಿ “ತುಂಬಾ ನಗಬೇಡಿ ಮುಂದೊಂದು ದಿನ ನೀವು ಅಳಬೇಕಾದ ಪರಿಸ್ಥಿತಿ ಎದುರಾಗುತ್ತದೆ” ಎಂದು ತನ್ನ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದ.

ಆತನ ಪೋಸ್ಟ್​ಗೆ ಕೆರಳಿದ ಕ್ರಿಶ್ಚಿಯನ್​ ಸಮುದಾಯದ ಕೆಲ ಯುವಕರ ಗುಂಪು ಚಿಲಾವ್ ನಲ್ಲಿರುವ ಆತನ ಅಂಗಡಿಗೆ ನುಗ್ಗಿ ಇಡೀ ಅಂಗಡಿಯನ್ನು ದ್ವಂಸ ಮಾಡಿದ್ದಾರೆ.  ಅಂಗಡಿ ಮಾಲೀಕನನ್ನೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಲ್ಲದೆ ಅಂಗಡಿ ಪಕ್ಕದಲ್ಲೇ ಇದ್ದ ಮಸೀದಿಯನ್ನೂ ದ್ವಂಸ ಮಾಡಿದ್ದಾರೆ. ಗಲಭೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ಧಾರೆ. ಅಲ್ಲದೆ ಕರ್ಫ್ಯೂವನ್ನು ವಿಧಿಸಿದ್ದಾರೆ.

ಇದನ್ನೂ ಓದಿ : ಶ್ರೀಲಂಕಾ ಬಾಂಬ್ ದಾಳಿಯ ಸಂಚುಕೋರನ ಕುಟುಂಬ ಎನ್​ಕೌಂಟರ್​ನಲ್ಲಿ ನಾಶ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ ಪೊಲೀಸ್ ಇಲಾಖೆ, “ಮುಸ್ಲಿಂ ಅಂಗಡಿ ಮೇಲೆ ದಾಳಿ ನಡೆಸಿದವರು ಪಕ್ಕದಲ್ಲಿರುವ ಮಸೀದಿಯನ್ನು ದ್ವಂಸಗೊಳಿಸಿದ್ದರು. ಪರಿಸ್ಥಿತಿ ಕೈಮೀರಿ ಹೋಗಿತ್ತು. ಹೀಗಾಗಿ ಜನ ಸಮೂಹವನ್ನು ಚದುರಿಸುವ ಸಲುವಾಗಿ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಅಲ್ಲದೆ ಭಾನುವಾರ ಮಧ್ಯಾಹ್ನದಿಂದ ಚಿಲಾವ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ.  ಸೋಮವಾರದೊಳಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ. ಆದರೆ ಇದೇ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಹೇಳಿಕೆಗಳನ್ನು ತಡೆಯಲು  ಫೇಸ್​ಬುಕ್​ ಹಾಗೂ ವಾಟ್ಸಾಪ್​ಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.ಶ್ರೀಲಂಕಾದಲ್ಲಿ ಬೌದ್ಧರು ಬಹುಸಂಖ್ಯಾತರಾಗಿದ್ದು 21 ಮಿಲಿಯನ್​ ಜನ ವಾಸಿಸುತ್ತಿದ್ದಾರೆ. ಆದರೆ  ಅಲ್ಪ ಸಂಖ್ಯಾತರಾಗಿರುವ ಮುಸ್ಲಿಮರ ಜನಸಂಖ್ಯೆ ಶೇ.10 ರಷ್ಟಾದರೆ, ಕ್ರಿಶ್ಚಿಯನ್ನರ ಜನಸಂಖ್ಯೆ ಶೇ.7.6.

ಈಸ್ಟರ್​ ಭಾನುವಾರದ ಸ್ಫೋಟದ ನಂತರ ಇಡೀ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಅನುಮಾನಿತ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಪೊಲೀಸ್ ಹಾಗೂ ಸೈನ್ಯಕ್ಕೆ ಅಲ್ಲಿನ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ.

First published:May 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading