HOME » NEWS » National-international » SRI LANKA BANS 2 TERROR GROUPS AFTER BLASTS THAT KILLED OVER 250

ಬಾಂಬ್​ ದಾಳಿ ಹಿನ್ನೆಲೆ; ಎರಡು ಉಗ್ರ ಸಂಘಟನೆಗಳ ಮೇಲೆ ನಿಷೇಧ ಹೇರಿದ ಶ್ರೀಲಂಕಾ

ಬಾಂಬ್​ ದಾಳಿ ನಡೆದ ತಕ್ಷಣ ಈ ಉಗ್ರ ಸಂಘಟನೆಯ ಮೇಲೆ ನಿಷೇಧ ಹೇರಲು ಸರ್ಕಾರ ಮುಂದಾಗಿತ್ತು. ಆದರೆ, ಸೂಕ್ತ ದಾಖಲೆಗಳು ಇಲ್ಲದ ಕಾರಣ ಸರ್ಕಾರಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿರಲಿಲ್ಲ.

Rajesh Duggumane | news18
Updated:April 28, 2019, 5:10 PM IST
ಬಾಂಬ್​ ದಾಳಿ ಹಿನ್ನೆಲೆ; ಎರಡು ಉಗ್ರ ಸಂಘಟನೆಗಳ ಮೇಲೆ ನಿಷೇಧ ಹೇರಿದ ಶ್ರೀಲಂಕಾ
ಕೊಲಂಬೋದ ಚರ್ಚ್​ನಲ್ಲಿ ದಾಳಿಯ ನಂತರದ ದೃಶ್ಯ
  • News18
  • Last Updated: April 28, 2019, 5:10 PM IST
  • Share this:
ಕೊಲಂಬೋ (ಏ.28): ಉಗ್ರರ ದಾಳಿಯಿಂದ ಎಚ್ಚೆತ್ತಿರುವ ಶ್ರೀಲಂಕಾ ಭಯೋತ್ಪಾದನೆ ನಿಗ್ರಹಕ್ಕೆ ಮುಂದಾಗಿದೆ. ಕಾರ್ಯಾಚರಣೆ ನಡೆಸಿ ಉಗ್ರರನ್ನು ಸದೆ ಬಡಿಯುವುದರ ಜೊತೆಗೆ ಎರಡು ಭಯೋತ್ಪಾದನಾ ಸಂಘಟನೆಗಳ ವಿರುದ್ಧ ನಿಷೇಧ ಹೇರಿದೆ.

ದಿ ನ್ಯಾಷನಲ್​ ತವ್​ಹೀದ್ ಜಮಾತ್​ (ಜಿಎನ್​ಟಿ) ಮತ್ತು ಜಮಾಥಿ ಮಿಲ್ಲಾಥು ಇಬ್ರಾಹಿಂ ಸಂಘಟನೆಗಳ ಮೇಲೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಆದೇಶ ಹೊರಡಿಸಿದ್ದಾರೆ.

ಬಾಂಬ್​ ದಾಳಿ ನಡೆದ ತಕ್ಷಣ ಈ ಉಗ್ರ ಸಂಘಟನೆಯ ಮೇಲೆ ನಿಷೇಧ ಹೇರಲು ಸರ್ಕಾರ ಮುಂದಾಗಿತ್ತು. ಆದರೆ, ಸೂಕ್ತ ದಾಖಲೆಗಳು ಇಲ್ಲದ ಕಾರಣ ಸರ್ಕಾರಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿರಲಿಲ್ಲ. ಈಗ ಬಂಧಿತ ಶಂಕಿತರು ನೀಡಿದ ಹೇಳಿಕೆ ಆಧಾರದ ಮೇಲೆ ಸರ್ಕಾರ ಈ ಕ್ರಮ ಕೈಗೊಂಡಿದೆ.

ಉಗ್ರರ ದಾಳಿ ನಂತರ ಸುಮಾರ 10 ಸಾವಿರ ಸೈನಿಕರನ್ನು ಶೋಧ ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಲಾಗಿದೆ. ಉಗ್ರರ ಅಡಗುತಾಣಗಳ ಮೇಲೆ ಶ್ರೀಲಂಕಾ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಆರು ಮಕ್ಕಳು ಸೇರಿದಂತೆ 15 ಜನರು ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು.

ಇದನ್ನೂ ಓದಿ: ಉಗ್ರರ ಅಡಗುತಾಣದ ಮೇಲೆ ದಾಳಿ ಮಾಡಿದ ಶ್ರೀಲಂಕಾ ಸೇನೆ; ಆರು ಮಕ್ಕಳು ಸೇರಿ 15 ಜನರ ಸಾವು

ಶುಕ್ರವಾರ ರಾತ್ರಿ ಸಮ್ಮನ್​ತುರೈನಲ್ಲಿ ಶಂಕಿತ ಉಗ್ರರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ 15 ಜನ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ವಕ್ತಾರ ರುವನ್​ ಗುಣಶೇಖರ ತಿಳಿಸಿದ್ದರು.

ಈಸ್ಟರ್​ ಪ್ರಾರ್ಥನೆ ವೇಳೆ  ಕೊಲಂಬೋದ ಚರ್ಚ್​ ಹಾಗೂ ಸ್ಟಾರ್​ ಹೋಟೆಲ್​ಗಳಲ್ಲಿ ಬಾಂಬ್​​ ಸರಣಿ ಸ್ಫೋಟ ಸಂಭವಿಸಿತ್ತು. ಒಟ್ಟು ಎಂಟು ಕಡೆಗಳಲ್ಲಿ ಬಾಂಬ್​ ಸ್ಫೋಟವಾಗಿತ್ತು. ಈ ವೇಳೆ 250 ಜನರು ಮೃತಪಟ್ಟು 450ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಭಾನುವಾರ ಬೆಳಗ್ಗೆ 8:45ರ ಸುಮಾರಿಗೆ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ 6 ಬಾಂಬುಗಳು ಸ್ಪೋಟಗೊಂಡವು. ಕೆಲ ಹೊತ್ತಿನ ಬಳಿಕ ಮತ್ತೆರಡು ಬಾಂಬ್ ಸ್ಫೋಟಗೊಂಡವೆನ್ನಲಾಗಿದೆ. ದೇಶಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿತ್ತು. ಐಸಿಸ್​ ದಾಳಿಯ ಹೊಣೆ ಹೊತ್ತಿದೆ.ಇದನ್ನೂ ಓದಿ: ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 359 ಅಲ್ಲ 253

ಕರ್ನಾಟಕದ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ರಂಗಪ್ಪ, ರಮೇಶ್​, ನಾರಾಯಣ ಚಂದ್ರಶೇಖರ್, ಶೆಟ್ಟಿಪಾಳ್ಯ ರಾಮಕೃಷ್ಣಪ್ಪ ನಾಗರಾಜ್, ಹನುಮಯ್ಯ ಶಿವಕುಮಾರ್, ರೆಮುರೈ ತುಳಸಿರಾಮ್, ಮಾರೇಗೌಡ, ಪುಟ್ಟರಾಜು ಕೊಲಂಬೋ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.

ನಿಮ್ಮ ನ್ಯೂಸ್​18 ಕನ್ನಡವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada

First published: April 28, 2019, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories