Pak Spy| ಮಹಿಳೆಯರನ್ನು ಮೆಚ್ಚಿಸಲು ಸೇನೆ ಸಮವಸ್ತ್ರ ಧರಿಸಿ ಬೆಂಗಳೂರಲ್ಲಿದ್ದ ಪಾಕ್‌ ಪರ ಗೂಢಚಾರಿ!

ಈತ ಪಾಕ್‌ನ ಜಾಲಕ್ಕೆ ಸಿಕ್ಕಿದ್ದಾದರೂ ಹೇಗೆ ಗೊತ್ತಾ..? ಅವನ ಆರಂಭಿಕ ಉದ್ದೇಶ ಕೇವಲ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರ ಗಮನ ಸೆಳೆಯುವುದು, ಅವರಿಗೆ ರಿಕ್ವೆಸ್ಟ್‌ ಕಳಿಸುತ್ತಾ, ಫ್ರೆಂಡ್‌ ಆದವರಿಗೆಲ್ಲಾ, ತಾನು ಭಾರತೀಯ ಸೇನೆಯಲ್ಲಿ ಆಫೀಸರ್ ಟ್ರೈನಿಯಾಗಿ ಆತ ಪೋಸ್ ನೀಡುತ್ತಿದ್ದ.

ಪಾಕಿಸ್ತಾನದ ಗೂಢಾಚಾರಿ.

ಪಾಕಿಸ್ತಾನದ ಗೂಢಾಚಾರಿ.

 • Share this:
  ಬೆಂಗಳೂರಿನಲ್ಲಿ ಇತ್ತೀಚೆಗೆ ಪಾಕ್‌ ಪರ ಗೂಢಚಾರಿ (Pak Spy) ಆರೋಪ ಹೊತ್ತಿರುವ ವ್ಯಕ್ತಿಯ ಬಂಧನವಾಗಿರುವುದು ನಿಮಗೆ ಗೊತ್ತಿರುವ ವಿಚಾರ. ಆತ ರಾಜಸ್ಥಾನಿ ಮೂಲದ ಬಟ್ಟೆ ವ್ಯಾಪಾರಿ. ಆದರೆ, ಆತನನ್ನು ಪಾಕ್‌ನ ಐಎಸ್‌ಐ (Isi) ಸಂಪರ್ಕಿಸಿದ್ದು ಹೇಗೆ.. ಬಟ್ಟೆ ವ್ಯಾಪಾರಿ ಬಳಿ ಸೇನೆಯ ಹಾಗೂ ದೇಶದ ವಿರುದ್ಧ ಸಂಚು ಮಾಡಲು ಪ್ರಮುಖವಾದ ಮಾಹಿತಿಗಳನ್ನು ಕಲೆ ಹಾಕಿದ್ದು ಹೇಗೆ ಗೊತ್ತಾ..? ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರನ್ನು ಮೆಚ್ಚಿಸಲು ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದ ರಾಜಸ್ಥಾನದ (Rajastan) ಒಬ್ಬ ವ್ಯಕ್ತಿ, ತನ್ನ ನಕಲಿ ಆನ್‌ಲೈನ್ ವ್ಯಕ್ತಿತ್ವದ ಮೂಲಕ ವಿದೇಶಿ ಬೇಹುಗಾರಿಕಾ ಏಜೆನ್ಸಿ ಐಎಸ್‌ಐನ ಗಮನ ಸೆಳೆದಿದ್ದಾನೆ. ರಾಜಸ್ಥಾನಿ ಮೂಲದ ಜಿತೇಂದ್ರ ಸಿಂಗ್‌ನನ್ನು ಶುಕ್ರವಾರ ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ಮತ್ತು ಮಿಲಿಟರಿ ಇಂಟೆಲಿಜೆನ್ಸ್ (ಎಂಐ) ಜಂಟಿ ದಾಳಿ ನಡೆಸಿ ಬಂಧಿಸಲಾಯಿತು. ಜಿತೇಂದ್ರ, ಬಾರ್ಮರ್‌ನ ಬಟ್ಟೆ ವ್ಯಾಪಾರಿಯಾಗಿದ್ದನು ಮತ್ತು ಮಹಿಳೆಯರ ಗಮನಕ್ಕಾಗಿ ಹತಾಶರಾಗಿದ್ದನು. ನಂತರ, 2016ರಲ್ಲಿ 24 ವರ್ಷ ವಯಸ್ಸಿನವನಾಗಿದ್ದಾಗ ರಾಜಸ್ಥಾನದ ಸೆಕೆಂಡ್ ಹ್ಯಾಂಡ್ ವೆಟರನ್ಸ್ ಸ್ಟೋರ್‌ನಿಂದ ಸೇನಾ ಧಿರಿಸು ಖರೀದಿಸಿಸಾಮಾಜಿಕ ಮಾಧ್ಯಮದಲ್ಲಿ ಸೇನೆಯ ಅಧಿಕಾರಿಯಂತೆ ನಟಿಸಲು ಪ್ರಾರಂಭಿಸಿದನು.

  ಈತ ಪಾಕ್‌ನ ಜಾಲಕ್ಕೆ ಸಿಕ್ಕಿದ್ದಾದರೂ ಹೇಗೆ ಗೊತ್ತಾ..? ಅವನ ಆರಂಭಿಕ ಉದ್ದೇಶ ಕೇವಲ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರ ಗಮನ ಸೆಳೆಯುವುದು, ಅವರಿಗೆ ರಿಕ್ವೆಸ್ಟ್‌ ಕಳಿಸುತ್ತಾ, ಫ್ರೆಂಡ್‌ ಆದವರಿಗೆಲ್ಲಾ, ತಾನು ಭಾರತೀಯ ಸೇನೆಯಲ್ಲಿ ಆಫೀಸರ್ ಟ್ರೈನಿಯಾಗಿ ಆತ ಪೋಸ್ ನೀಡುತ್ತಿದ್ದ. ಸಮವಸ್ತ್ರದ ಮೇಲೆ ವಿವಿಧ ಸೇನಾ ಪದಕಗಳನ್ನು ಎಲ್ಲಿ ಹಾಕಬೇಕು ಎಂದು ಅವನಿಗೆ ನಿಖರವಾಗಿ ತಿಳಿದಿತ್ತು ಎಂದು ಮಿಲಿಟರಿ ಇಂಟೆಲಿಜೆನ್ಸ್ ಮೂಲಗಳು ತಿಳಿಸಿವೆ.

  ನಂತರ ಜಿತೇಂದ್ರ ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಮನ ಸೆಳೆದನು. ಮತ್ತು ಅವನ ಕನಸಿನಲ್ಲಿ ಎಂದಿಗೂ ಊಹಿಸದ ಜೀವನಕ್ಕಾಗಿ ಸಜ್ಜಾದ. ಜಿತೇಂದ್ರನನ್ನು ಮಾರ್ಚ್ 2016ರಲ್ಲಿ ಫೇಸ್‌ಬುಕ್‌ನಲ್ಲಿ 'ಪೂಜಾ ಜೀ' ಎಂಬ ಮಹಿಳೆ ಸಂಪರ್ಕಿಸಿ, ತಾನು ಹಿಮಾಚಲ ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ಆದರೆ, ಮಿಲಿಟರಿಯವರು ಆಕೆ ಪಾಕಿಸ್ತಾನದವಳು ಎಂಬುದನ್ನು ಪತ್ತೆ ಹಚ್ಚಿದ್ದು, ಐಪಿ ವಿಳಾಸ ಪಾಕಿಸ್ತಾನದ ಕರಾಚಿಯಲ್ಲಿ ಕಂಡುಬಂದಿದೆ ಎಂದು ಪತ್ತೆ ಮಾಡಿದ್ದಾರೆ.

  ಆ ಹೊತ್ತಿಗೆ, ಜಿತೇಂದ್ರ ಶರ್ಟ್‌ಗಳ ವಿತರಕರಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ಆತ ಒಬ್ಬ ಸೇನಾಧಿಕಾರಿ ಎಂದು ಐಎಸ್‌ಐ ಪ್ರಾಮಾಣಿಕವಾಗಿ ನಂಬಿತ್ತು ಎಂದು ತಿಳಿದುಬಂದಿದೆ. ಜಿತೇಂದ್ರ ಮೇ 2021ರಲ್ಲಿ ತೆಗೆದ ಸೆಲ್ಫಿಯಲ್ಲಿ ಸೇನಾ ಕ್ಯಾಪ್ಟನ್‌ನ ಧಿರಿಸು ಧರಿಸಿ ಗಮನ ಸೆಳೆದಿದ್ದಾನೆ.

  ಇನ್ನೊಂದೆಡೆ, ಗುಪ್ತಚರರನ್ನು ವಾಪಸ್ ಕಳುಹಿಸಲು 'ಪೂಜಾ' ಎಂಬ ಪಾಕಿಸ್ತಾನದ ಮಹಿಳೆ ಜಿತೆಂದ್ರನಿಗೆ ಹಣ ನೀಡಿದ್ದಳು ಎಂದು ಸೇನಾ ಮೂಲಗಳು ತಿಳಿಸಿವೆ. ಐಎಸ್‌ಐ ಸೇನಾಧಿಕಾರಿಯನ್ನು ಯಶಸ್ವಿಯಾಗಿ "ಹನಿಟ್ರ್ಯಾಪ್‌'' ಮಾಡಿದ್ದೇವೆ ಎಂದೇ ನಂಬಿದ್ದರು.

  ಬಾರ್ಮರ್‌ನಲ್ಲಿ ಜಿತೇಂದ್ರ ಭಾರತೀಯ ಸೇನೆಯ ಟ್ಯಾಂಕ್ ಚಲನವಲನಗಳನ್ನು ಪತ್ತೆಹಚ್ಚಿದ್ದು, ಪೋಖ್ರಾನ್‌ನಲ್ಲಿ ಗಾರ್ಡ್ ಪೋಸ್ಟ್‌ಗಳಲ್ಲಿ ಬದಲಾವಣೆಗಳನ್ನು ಪಟ್ಟಿ ಮಾಡಿದ್ದ ಮತ್ತು ಲೊಂಗೇವಾಲಾದಲ್ಲಿನ ಗಡಿ ನೆಲೆಗಳ ಫೋಟೋಗಳನ್ನು ತೆಗೆದುಕೊಂಡಿದ್ದಾನೆ ಎಂದು ಅಧಿಕಾರಿಗಳು ಪುರಾವೆಗಳ ಸಮೇತ ಪತ್ತೆಹಚ್ಚಿದ್ದಾರೆ. ಅವನು ದೆಹಲಿ ಸೇರಿದಂತೆ ದೇಶದಾದ್ಯಂತ ಇತರ ಸೂಕ್ಷ್ಮ ಸ್ಥಳಗಳ ಚಿತ್ರಗಳನ್ನೂ ತೆಗೆದಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ದೇಶದ ವಿವಿಧ ನಗರಗಳಿಗೆ ಆತ ನಿಯಮಿತವಾಗಿ ತೆರಳುತ್ತಿದ್ದ ಎಂದೂ ದಾಖಲೆಗಳು ತೋರಿಸುತ್ತವೆ.

  ಜುಲೈ 2021ರಲ್ಲಿ ಐಎಸ್‌ಐ ಸ್ಥಾಪಿಸಿದ ಪತ್ತೇದಾರಿ ಜಾಲಗಳು ದೇಶಾದ್ಯಂತ ಹಲವು ಸ್ಥಳಗಳಲ್ಲಿ ಪತ್ತೆಯಾದಾಗ ಜಿತೇಂದ್ರ ಮೊದಲು ಮಿಲಿಟರಿ ಇಂಟೆಲಿಜೆನ್ಸ್ನ ಕಣ್ಗಾವಲಿಗೆ ಬಂದಿದ್ದಾನೆ. "ಲೂಧಿಯಾನದಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದ ಒಬ್ಬ ಆಪರೇಟಿವ್ 'ನೇಹಾ' ಎಂಬ ವ್ಯಕ್ತಿಗೆ ವಾಟ್ಸ್‌ಆ್ಯಪ್‌ ಮೂಲಕ ಸೂಕ್ಷ್ಮ ಸಂದೇಶಗಳನ್ನು ಕಳುಹಿಸುತ್ತಿದ್ದಾಗ ನಾವು ನೆಟ್ವರ್ಕ್‌ಗೆ ಜಿತೇಂದ್ರನ ಲಿಂಕ್ ಬಗ್ಗೆ ಹೆಚ್ಚಿನ ಪುರಾವೆಗಳನ್ನು ಕಂಡುಕೊಂಡೆವು. ಇದು 'ಪೂಜಾ' ಎಂಬ ಮಹಿಳೆ ಬಳಸಿದ ಅದೇ ಫೋನ್ ನಂಬರ್" ಎಂದು ಸೇನೆಯ ಮೂಲಗಳು ತಿಳಿಸಿವೆ.

  ಇದನ್ನೂ ಓದಿ: Asaduddin Owaisi| ಅಸಾದುದ್ದೀನ್ ಓವೈಸಿ ದೆಹಲಿ ಮನೆ ಮೇಲೆ ದಾಳಿ; ಐದು ಜನ ಹಿಂದೂಸೇನಾ ಕಾರ್ಯಕರ್ತರ ಬಂಧನ!

  ಜಿತೇಂದ್ರ ವಿರುದ್ಧ ಅಫಿಶಿಯಲ್‌ ಸೀಕ್ರೆಟ್ಸ್‌ ಆ್ಯಕ್ಟ್‌ನಡಿ ಬಂಧಿಸಲು ತಮ್ಮ ಬಳಿ ಪುರಾವೆಗಳಿವೆ ಎಂದು ಹೇಳಿದರು. "ದುರುಪಯೋಗವಾಗುತ್ತಿರುವ ಸೇನಾ ಸಮವಸ್ತ್ರ ಹೊಂದಿದ್ದಕ್ಕಾಗಿ ಆತನ ಮೇಲೆ ಆರೋಪ ಹೊರಿಸಲಾಗಿದೆ.
  ಭಾರತೀಯ ದಂಡ ಸಂಹಿತೆಯಲ್ಲಿ ಸೆಕ್ಷನ್ 120 ಬಿ ಅಡಿಯಲ್ಲಿ ಅಪರಾಧಗಳನ್ನು ಮಾಡಿದ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ'' ಎಂದು ಪಾಟೀಲ್ ಹೇಳಿದರು.
  Published by:MAshok Kumar
  First published: