ಎಚ್-1ಬಿ ವೀಸಾ (H-1B Visa) ಹೊಂದಿರುವ ಆಧಾರದ ಮೇಲೆ ಯುಎಸ್ನಲ್ಲಿ ನೆಲೆಸಿರುವ ವಿದೇಶಿಯರು ಕೆಲಸ ಕಳೆದುಕೊಂಡ 60 ದಿನದ ಒಳಗೆ ದೇಶವನ್ನು ಬಿಡಬೇಕು ಎನ್ನುವ ಸಂಗತಿ ಅಲ್ಲಿ ನೆಲೆಸಿರುವ ಭಾರತೀಯರಿಗೆ ಆಘಾತ ಉಂಟು ಮಾಡಿತ್ತು. ಆದರೆ ಈಗ ವಿದೇಶಿ ಉದ್ಯೋಗಿಗಳಿಗೆ ಸಮಾಧಾನ ನೀಡುವ ತೀರ್ಪು ನ್ಯಾಯಾಲಯದಿಂದ ಹೊರಬಿದ್ದಿದೆ. ಎಚ್-1ಬಿ ವೀಸಾ ಹೊಂದಿರುವ ಸಂಗಾತಿಗೂ ವಿದೇಶದಲ್ಲಿ ನೆಲೆಯಿದೆ ಹೌದು! ದಂಪತಿಯಲ್ಲಿ (Couple) ಇಬ್ಬರಲ್ಲಿ ಒಬ್ಬರ ಬಳಿ ಎಚ್-1ಬಿ ವೀಸಾ ಇದ್ದರೂ ಸಾಕು ಅವರ ಸಂಗಾತಿಗಳು ಅಮೆರಿಕಾದಲ್ಲೇ ನೆಲೆಸಿ ಕೆಲಸ ಮಾಡಬಹುದು ಎನ್ನುವ ಮಹತ್ವದ ತೀರ್ಪನ್ನು ನ್ಯಾಯಾಲಯ ನೀಡಿದೆ. ಆ ಮೂಲಕ ಅತಂತ್ರ ಸ್ಥಿತಿಯಲ್ಲಿದ್ದ ಭಾರತೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸಾಕಷ್ಟು ವರ್ಷಗಳಿಂದ ಯುಎಸ್ನಲ್ಲೇ (US) ವಾಸ ಮಾಡುತ್ತಿದ್ದ ಉದ್ಯೋಗಿಗಳು ನಿರುದ್ಯೋಗದಿಂದ ದೇಶ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ವಿದೇಶದಲ್ಲೇ ಮಕ್ಕಳ ಶಾಲೆ, ಸಾಲಗಳು, ಹೂಡಿಕೆಗಳು, ಹೊಂದಿಕೊಂಡಿದ್ದ ಜೀವನ ಶೈಲಿಯ ದಿಢೀರ್ ಬದಲಾವಣೆ ಭಾರತೀಯರಲ್ಲಿ ಆತಂಕ ಮೂಡಿಸಿತ್ತು. ಆದರೆ ಈಗ ಅಮೆರಿಕಾ ನ್ಯಾಯಾಲಯದ ತೀರ್ಪು ಎಲ್ಲರ ಮೊಗದಲ್ಲಿ ಮಂದಹಾಸ ತಂದಿದೆ.
ಸೇವ್ ಜಾಬ್ಸ್ ಯುಎಸ್ಎ ವಿರುದ್ಧ ತೀರ್ಪು
ಅಮೆರಿಕಾವು ಪ್ರತಿಭಾವಂತರನ್ನು ಎಚ್-1ಬಿ ವೀಸಾ ಅಂದರೆ ವಲಸೆ ರಹಿತ ವೀಸಾ ನೀಡಿ ಭಾರತ ಮತ್ತು ಚೀನಾದಿಂದ ತಾಂತ್ರಿಕ ಪರಿಣತಿಯುಳ್ಳ ವ್ಯಕ್ತಿಗಳಿಗೆ ಉದ್ಯೋಗವನ್ನು ನೀಡುತ್ತದೆ. ಆದರೆ ಇದಕ್ಕೆ ಮೊದಲಿನಿಂದಲೂ ಅಲ್ಲಿಯೇ ಸಾಕಷ್ಟು ವಿರೋಧಗಳಿದ್ದರೂ, ಸಾಕಷ್ಟು ಬದಲಾವಣೆಗಳನ್ನು ತರಲಾಗಿತ್ತು. ಆ ಮೂಲಕ ಪ್ರತಿಭಾವಂತರನ್ನು ಪ್ರೋತ್ಸಾಹಿಸಿತ್ತು. ಇನ್ನೂ ಇತ್ತೀಚೆಗೆ ಆರ್ಥಿಕ ಹಿಂಜರಿತದ ಪರಿಣಾಮ 2 ಲಕ್ಷದಷ್ಟು ಜನರು ಉದ್ಯೋಗದಿಂದ ವಂಚಿತರಾಗಿದ್ದರು. ಆದರೆ ಅವರಿಗೆ ಈ ತೀರ್ಪು ನೆರವಿಗೆ ಬಂದಿದೆ.
ಯುಎಸ್ ಜಿಲ್ಲಾ ನ್ಯಾಯಾಧೀಶರಾದ ತಾನ್ಯಾ ಚುಟ್ಕಾನ್ ಅವರು ಸೇವ್ಜಾಬ್ ಯುಎಸ್ಎ ಯ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಜೊತೆಗೆ ಎಚ್-1ಬಿ ವೀಸಾ ಹೊಂದಿರುವ ಸಂಗಾತಿ ಕೂಡ ಅಮೆರಿಕಾದಲ್ಲಿ ಕೆಲಸ ಮಾಡಲು ಅನುಮತಿ ನೀಡಿದೆ.
ಒಬಾಮಾ ಅವರ ಅವರ ನೇತೃತ್ವದಲ್ಲಿ ಕೈಗೊಂಡಿದ್ದ ಕೆಲಸ ಮಾಡುವ ಸಂಗಾತಿಗಳ ಕೆಲಸದ ಹಕ್ಕನ್ನು ರದ್ದು ಮಾಡಬೇಕು ಎನ್ನುವ ಹುನ್ನಾರವನ್ನು ಸೇವ್ ಜಾಬ್ಸ್ ನಡೆಸಿತ್ತು. ಇದೇ ಕಾರಣಕ್ಕಾಗಿ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಅದರ ವಿರುದ್ಧ ಹೊರಬಿದ್ದ ತೀರ್ಪಿನಿಂದ ಲಕ್ಷದಷ್ಟು ಭಾರತೀಯರ ಮೊಗದಲ್ಲಿ ನಗು ಅರಳಿಸಿದೆ.
ಸೇವ್ಜಾಬ್ಸ್ನ ಅರ್ಜಿಯನ್ನು ಅಮೆಜಾನ್, ಆಪಲ್, ಗೂಗಲ್ ಮತ್ತು ಮೈಕ್ರೊಸಾಫ್ಟ್ ಕಂಪನಿಗಳು ವಿರೋಧಿಸಿವೆ.
ಎಚ್-ಬಿ4 ವೀಸಾ ಹೊಂದಿರುವ ವಿದೇಶದಿಂದ ಬಂದು ಇಲ್ಲಿ ನೆಲೆಸಿರುವವರ ಸಂಗಾತಿ ಅಮೆರಿಕಾದಲ್ಲಿ ಕೆಲಸ ಮಾಡಲು ಕಾಂಗ್ರೆಸ್ ಹೋಂಲ್ಯಾಂಡ್ ಸೆಕ್ಯೂರಿಟಿ ಇಲಾಖೆಗೆ ಅಧಿಕಾರವನ್ನು ನೀಡಿಲ್ಲ ಎನ್ನುವುದು ಸೇವ್ಜಾಬ್ಸ್ ಯುಎಸ್ಎ ಯ ವಾದವಾಗಿದೆ. ಆದರೆ ನ್ಯಾಯಾಲಯವು ಇದಕ್ಕೆ ಸೊಪ್ಪು ಹಾಕದೇ ಎಚ್-4 ಅಂದರೆ ಸಂಗಾತಿ ಮತ್ತು ಮಕ್ಕಳ ವೀಸಾ ಇದಾಗಿದೆ. ಇವರು ಯುಎಸ್ನಲ್ಲಿ ನೆಲೆ ನಿಲ್ಲಬಹುದು. ಎಚ್-4( H- 1B ವೀಸಾ ಹೊಂದಿರುವ ಸಂಗಾತಿಗಳು)ಯುನೈಟೈಡ್ ಸ್ಟೇಟ್ಸ್ನಲ್ಲಿ ತಮ್ಮ ವಾಸ್ತವ್ಯದ ಷರತ್ತಿನಂತೆ ಕೆಲಸ ಮಾಡಲು ಅನುಮತಿಸುವ ಅಧಿಕಾರವನ್ನು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಯು ಎಸ್ ಸರ್ಕಾರಕ್ಕೆ ನೀಡಿದೆ.
ಈ ಅಧಿಕಾರದ ಬಗ್ಗೆ ಕಾನೂನಿಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ. ಶಾಸಕಾಂಗ ಕ್ರಿಯೆಗಳ ಮೂಲಕವು ಇದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ. ಆದ್ದರಿಂದ ಎಚ್-4 ಸಂಗಾತಿಗಳಿಗೆ ಉದ್ಯೋಗವನ್ನು ಅಧಿಕೃತಗೊಳಿಸುವ ಸರ್ಕಾರದ ನಿರ್ಧಾರವು ಅದರ ಕಾನೂನು ಅಧಿಕಾರದಲ್ಲಿದೆ.
ಕುಟುಂಬಗಳ ಸ್ಥಿರತೆ
ಹೋಮ್ಲ್ಯಾಂಡ್ ವಿಭಾಗದ ಸೆಕ್ಯೂರಿಟಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಅವರನ್ನು ಅವಲಂಬಿಸಿರುವವರಿಗೆ , ಸಂಗಾತಿಗಳಿಗೆ ಅದ್ಯೋಗವನ್ನು ಅಧಿಕೃತಗೊಳಿಸಿದ್ದಾರೆ ಎಂದು ನ್ಯಾಯಾಧೀಶರಾದ ಚಟ್ಕನ್ ತೀರ್ಪಿನಲ್ಲಿ ಬರೆದಿದ್ದಾರೆ.
ಈ ತೀರ್ಪಿನಿಂದ ಕುಟುಂಬದಿಂದ ದೂರದ ಊರಿನಲ್ಲಿ ಉಳಿಯಬೇಕಿದ್ದವರು, ಉದ್ಯೋಗವನ್ನೇ ನಂಬಿಕೊಂಡಿದ್ದವರಿಗೆ ನೆಮ್ಮದಿಯ ನಿಟ್ಟುಸಿರು ತಂದಿದೆ. ಈ ತೀರ್ಪು ಕೇವಲ ಆರ್ಥಿಕ ವಿಷಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಒಟ್ಟು ಕುಟುಂಬದ ಉಳಿಯುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಇನ್ನೂ ಸೇವ್ಜಾಬ್ಸ್ ಯುಎಸ್ಎ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಆಲೋಚನೆಯಲ್ಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ