Spiritual Tourism: ಕೋವಿಡ್ ಬಂದ್ಮೇಲೆ ಭಾರತದಲ್ಲಿ ದೇವರ ದರ್ಶನ ಮಾಡುವವರ ಸಂಖ್ಯೆ ಹೆಚ್ಚಳ! ಕಾರಣ ಏನು ಗೊತ್ತಾ?

ಜನತೆ ಕೋವಿಡ್ 19 ಭೀತಿಯಿಂದ ಕೊಂಚ ಸುಧಾರಿಸಿಕೊಳ್ಳುತ್ತಿದ್ದು ಎಲ್ಲೆಡೆ ಮುಕ್ತವಾಗಿ ಓಡಾಟ ಪ್ರಾರಂಭಿಸಿದ್ದಾರೆ. ಪ್ರವಾಸಿ ತಾಣಗಳು ಸಹ ಜನರಿಗಾಗಿ ತೆರೆದುಕೊಳ್ಳುತ್ತಿವೆ. ಸಾಂಕ್ರಾಮಿಕ ರೋಗದ ನಂತರ ಸದ್ಯ ಭಾರತದಲ್ಲಿಆಧ್ಯಾತ್ಮಿಕ ಪ್ರವಾಸೋದ್ಯಮವು ಉತ್ತೇಜನಗೊಳ್ಳುತ್ತಿದ್ದು, ದೇವರು, ದೇಗುಲ ಭೇಟಿಗೆ ಹೆಚ್ಚಿನ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದು ವರದಿಯೊಂದು ಹೇಳಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪ್ರಪಂಚದಾದ್ಯಂತ ಸಾಂಕ್ರಾಮಿಕ ರೋಗ ಕೋವಿಡ್ ಹರಡಿದಾಗಿನಿಂದ ಎರಡ್ಮೂರು ವರ್ಷ ಜನ ಮನೆಯಲ್ಲಿಯೇ ಹೆಚ್ಚು ಕಾಲಕಳೆಯುವಂತೆ ಆಗಿತ್ತು. ಲಾಕ್ ಡೌನ್, ಸಾಂಕ್ರಾಮಿಕ ಭೀತಿ, ಹಲವು ಪ್ರವಾಸಿ ತಾಣಗಳ (Tourist Places) ನಿಷೇಧ, ಮದುವೆ ಸಮಾರಂಭಗಳಿಗೆ ಅತಿಥಿಗಳ ನಿರ್ಬಂಧ ಹೀಗೆ ಜನರನ್ನು ಎಲ್ಲಿಯೂ ಹೋಗದಂತೆ ಕೈಕಾಲು ಕಟ್ಟಿ ಹಾಕಿತ್ತು. ಆದರೆ ಪ್ರಸ್ತುತ ಕೋವಿಡ್ ಲಕ್ಷಣಗಳ ಸಂಖ್ಯೆ ಇಳಿಕೆ ಕಂಡಿರುವುದರಿಂದ ಪ್ರವಾಸೋದ್ಯಮ ಸೇರಿ ಹಲವಾರು ಕ್ಷೇತ್ರಗಳು ಜನರಿಗೆ ತೆರೆದುಕೊಳ್ಳುತ್ತಿವೆ. ಜನತೆ ಕೋವಿಡ್ 19 (Covid-19) ಭೀತಿಯಿಂದ ಕೊಂಚ ಸುಧಾರಿಸಿಕೊಳ್ಳುತ್ತಿದ್ದು ಎಲ್ಲೆಡೆ ಮುಕ್ತವಾಗಿ ಓಡಾಟ ಪ್ರಾರಂಭಿಸಿದ್ದಾರೆ. ಪ್ರವಾಸಿ ತಾಣಗಳು ಸಹ ಜನರಿಗಾಗಿ ತೆರೆದುಕೊಳ್ಳುತ್ತಿವೆ. ಸಾಂಕ್ರಾಮಿಕ ರೋಗದ ನಂತರ ಸದ್ಯ ಭಾರತದಲ್ಲಿಆಧ್ಯಾತ್ಮಿಕ ಪ್ರವಾಸೋದ್ಯಮವು (Spiritual Tourism) ಉತ್ತೇಜನಗೊಳ್ಳುತ್ತಿದ್ದು, ದೇವರು, ದೇಗುಲ ಭೇಟಿಗೆ ಹೆಚ್ಚಿನ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದು ವರದಿಯೊಂದು ಹೇಳಿದೆ.

ಚೇತರಿಕೆ ಕಂಡ ಪ್ರವಾಸೋದ್ಯಮ, ಆಧ್ಯಾತ್ಮಿಕ ಪ್ರವಾಸಕ್ಕೆ ಆದ್ಯತೆ
ಪ್ರಪಂಚದ ಅನೇಕ ಭಾಗಗಳಲ್ಲಿ COVID-19 ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಪ್ರವಾಸೋದ್ಯಮವು ಚೇತರಿಕೆ ಕಾಣುತ್ತಿದೆ. ಎಲ್ಲೂ ಹೊರಗೆ ಹೋಗದೆ ಮನೆಯಲ್ಲಿಯೇ ಕಾಲಕಳೆದಿದ್ದ ಜನರಿಗೆ ವಿಶ್ರಾಂತಿ ಮತ್ತು ಹೊಸ ವಾತಾವರಣ ಕಂಡುಕೊಳ್ಳಲು ಪ್ರಯಾಣದಂತಹ ಮಾರ್ಗವನ್ನು ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ಹೀಗೆ ಸಾಂಕ್ರಾಮಿಕ ರೋಗದ ನಂತರ, ಆಧ್ಯಾತ್ಮಿಕ ಪ್ರವಾಸೋದ್ಯಮವೂ ದೇಶದಲ್ಲಿ ಹೆಚ್ಚುತ್ತಿದೆ ಎಂದು ಥಾಮಸ್ ಕುಕ್ ಮತ್ತು ಎಸ್‌ಒಟಿಸಿ ಟ್ರಾವೆಲ್ ವರದಿಯ ಹೇಳಿದೆ. ಈ ವರದಿಯ ಪ್ರಕಾರ ಭಾರತವು ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಶೇಕಡಾ 35 ರಷ್ಟು ಬೆಳವಣಿಗೆಯನ್ನು ಕಂಡಿದೆ ಎನ್ನಲಾಗಿದೆ.

ಹೆಚ್ಚು ಹೆಚ್ಚು ಧಾರ್ಮಿಕ ಪ್ರವಾಸ
ಕಾರಣಗಳನ್ನು ಸಹ ವರದಿಯು ಎತ್ತಿ ತೋರಿಸಿದೆ. ಇದರಲ್ಲಿ ಒಂದು ಪ್ರಮುಖ ಕಾರಣವೆಂದರೆ ಕೃತಜ್ಞತೆಯ ಭಾವನೆ, ಸಾಂಕ್ರಾಮಿಕ ರೋಗದ ಸಮಯದಲ್ಲಿ ಜನರು ಎಂದಿಗಿಂತಲೂ ಹೆಚ್ಚಾಗಿ ದೇವರ ಮೊರೆ ಹೋಗಿದ್ದರು, ಹಲವಾರು ಹರಕೆ, ಪೂಜೆಗಳನ್ನು ಕೈಗೊಳ್ಳುವುದಾಗಿ ದೇವರನ್ನು ಬೇಡಿಕೊಂಡಿದ್ದರು. ಹೀಗಾಗಿ ಎಲ್ಲವೂ ಒಳ್ಳೆಯದಾಗುತ್ತಿದ್ದಂತೆ ದೇವರಿಗೆ ಕೃತಜ್ಞತೆ ಸಲ್ಲಿಸಲು ಜನ ದೇಗುಲ, ಪುಣ್ಯ ಸ್ಥಳದಂತಹ ಕ್ಷೇತ್ರಗಳಿಗೆ ಹೆಚ್ಚು ಪ್ರಯಾಣ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: Jamia Masjid Controversy: ಶ್ರೀರಂಗಪಟ್ಟಣದಲ್ಲಿರೋದು ಮಂದಿರವೋ, ಮಸೀದಿಯೋ? ಐತಿಹಾಸಿಕ ಸ್ಥಳ ಈಗ ವಿವಾದಿತ ಪ್ರದೇಶವಾಗಿದ್ದೇಕೆ?

ಇದಷ್ಟೇ ಅಲ್ಲ, ವ್ಯಾಪಾರ ಅಥವಾ ಉದ್ಯೋಗಗಳನ್ನು ಪುನರುಜ್ಜೀವನಗೊಳಿಸಲು ದೇವರ ಆಶೀರ್ವಾದವನ್ನು ಪಡೆಯುವ ಸಂಬಂಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ, ಮದುವೆ ಮತ್ತು ಮಗುವಿನ ಜನನದಂತಹ ವಿಶೇಷ ಸಂದರ್ಭಗಳಲ್ಲಿ ಆಶೀರ್ವಾದ ಪಡೆಯುವುದು ಸಹ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಮತ್ತೊಂದು ಕಾರಣವಾಗಿದೆ ಎಂದು ವರದಿಯು ಹೇಳಿದೆ.

ಕೃತಜ್ಞತೆ ಮತ್ತು ಆಶೀರ್ವಾದ ಪಡೆಯಲು ಆಧ್ಯಾತ್ಮಿಕ ಪ್ರವಾಸ
ಥಾಮಸ್ ಕುಕ್ ಹೇಳುವ ಪ್ರಕಾರ, “ಸಾಂಕ್ರಾಮಿಕ ನಂತರ, ನಾವು ಕೃತಜ್ಞತೆ ಮತ್ತು ಆಶೀರ್ವಾದವನ್ನು ಪಡೆಯಲು ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ನಿರ್ಣಾಯಕ ಹೆಚ್ಚಳವನ್ನು ನೋಡುತ್ತಿದ್ದೇವೆ. ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಸರ್ಕಾರದ ಬಲವಾದ ಗಮನದೊಂದಿಗೆ, ಆಧ್ಯಾತ್ಮಿಕ ಸ್ಥಳಗಳು ಹಿರಿಯರು ಮತ್ತು ಕುಟುಂಬಗಳಿಂದ ಮಾತ್ರವಲ್ಲದೆ ಯುವಕರು ಮತ್ತು ಸ್ನೇಹಿತರ ಗುಂಪು ಸಹ ದೇವರ ದರ್ಶನಕ್ಕೆ ಬರುತ್ತಿದ್ದಾರೆ.

ನಮ್ಮ ದೇಶವು ಅನುಕೂಲಕರವಾದ ತೀರ್ಥಯಾತ್ರೆಗಳು ಮತ್ತು ಉತ್ತಮ ಸ್ಥಳಗಳು, ಸಂಸ್ಕೃತಿ, ಪಾಕಪದ್ಧತಿ ಮತ್ತು ಹೊರಾಂಗಣ ಸಾಹಸದಾದ್ಯಂತ ಅನನ್ಯ ಸ್ಥಳೀಯ ಅನುಭವಗಳನ್ನು ನೀಡಲು ವೈವಿಧ್ಯಗೊಳಿಸಲಾಗಿದೆ” ಎಂದಿದ್ದಾರೆ.

ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಶೇ. 35 ರಷ್ಟು ಬೆಳವಣಿಗೆ
ಸಂಗ್ರಹಿಸಲಾದ ದತ್ತಾಂಶಗಳ ಪ್ರಕಾರ ಜನಸಂಖ್ಯೆಯ ಸುಮಾರು 50 ಪ್ರತಿಶತದಲ್ಲಿ ಶೇ.35 ರಷ್ಟು ಹಿರಿಯರು ಇರುವ ಕುಟುಂಬಗಳನ್ನು ಒಳಗೊಂಡಿದೆ ಎಂದು ತಿಳಿದುಬರುತ್ತದೆ. ಅಧ್ಯಯನದ ಪ್ರಕಾರ, ಚಾರ್ ಧಾಮ್ ಯಾತ್ರೆ, ದೋ ಧಾಮ್ ಯಾತ್ರೆ, ನೇಪಾಳದ ಮುಕ್ತಿನಾಥ್, ಅಮರನಾಥ ಯಾತ್ರೆ, ವೈಷ್ಣೋ ದೇವಿ, ವಾರಣಾಸಿ, ಪ್ರಯಾಗ್‌ರಾಜ್ ಮತ್ತು ಅಯೋಧ್ಯೆ ಸೇರಿದಂತೆ ಪ್ರಮುಖ ಯಾತ್ರಾ ಸ್ಥಳಗಳು ಸೇರಿವೆ.

ಇದನ್ನೂ ಓದಿ: Explained: ಅಯೋಧ್ಯೆಯಷ್ಟೇ ಮಹತ್ವದ್ದೇಕೆ ಜ್ಞಾನವಾಪಿ ಭೂಮಿ? ಅಷ್ಟಕ್ಕೂ ವಿವಾದಕ್ಕೆ ಒಳಗಾಗಿದ್ದೇಕೆ ಮಸೀದಿ?

ವೃದ್ಧರನ್ನು ಹೊರತುಪಡಿಸಿ, 30 ವರ್ಷದಿಂದ 45 ವರ್ಷ ವಯಸ್ಸಿನ ದಂಪತಿಗಳು ಮತ್ತು ಸೋಲೋ ಟ್ರಿಪ್ ಪ್ರವಾಸಿಗರು, ಪ್ರಯಾಣ ಕಂಪನಿಗಳು ನೀಡುವ ಆಧ್ಯಾತ್ಮಿಕ ಪ್ಯಾಕೇಜ್‌ಗಳತ್ತ ಒಲವನ್ನು ತೋರಿಸಿದ್ದಾರೆ. ಅವರು ಯೋಗ, ಧ್ಯಾನ ಮತ್ತು ಇತರ ಕ್ಷೇಮ ಕಾರ್ಯಕ್ರಮಗಳನ್ನು ಒಳಗೊಂಡಿರುವ ಪ್ಯಾಕೇಜ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಯುವ ಜನತೆ ಮತ್ತು ಕಿರಿಯರು ಆಧ್ಯಾತ್ಮಿಕ ಪ್ರವಾಸಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ, ಇದು ಹೊರಾಂಗಣ-ಸಾಹಸ ಮತ್ತು ಅಧಿಕೃತ ಸ್ಥಳೀಯ ಸಂಸ್ಕೃತಿ ಮತ್ತು ಅಲ್ಲಿನ ಊಟ, ತಿಂಡಿ ಅನುಭವಗಳನ್ನು ಅನ್ವೇಷಿಸಲು ಅವರಿಗೆ ಸ್ಥಳಾವಕಾಶವನ್ನು ನೀಡುತ್ತದೆ.
Published by:Ashwini Prabhu
First published: