ನವದೆಹಲಿ: ವಿಮಾನವನ್ನು(Flight) ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ, ಹಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಕಾಲಕಾಲಕ್ಕೆ ನಿಯಂತ್ರಣ ಕೇಂದ್ರದೊಂದಿಗೆ ಸಂವಹನ ನಡೆಸಿ, ಹವಾಮಾನ ಪರಿಸ್ಥಿತಿಗಳನ್ನು ಗಮನಿಸುತ್ತಿರಬೇಕು. ಇಷ್ಟೆಲ್ಲಾ ಅಲರ್ಟ್ ಆಗಿರಬೇಕಾದ ಪೈಲಟ್‌ಗಳು (Pilots) ವಿಮಾನ ಚಾಲನೆ ಮಾಡುವಾಗ ಕಾಕ್ ಪಿಟ್ನಲ್ಲಿ(Fight Cockpit) ಕುಳಿತು ಕರ್ಜಿಕಾಯಿ ತಿಂದಿರುವ ಘಟನೆ ಸ್ಪೈಸ್‌ಜೆಟ್ (SpiceJet) ಏರ್‌ಲೈನ್ಸ್‌ನಲ್ಲಿ ನಡೆದಿದೆ. ಹೋಳಿ (Holi) ಹಬ್ಬದಂದು ದೆಹಲಿಯಿಂದ (Delhi) ಗುವಾಹಟಿಗೆ ಬರುತ್ತಿದ್ದ ವಿಮಾನದಲ್ಲಿ ಪೈಲಟ್‌ಗಳು ಕಾಫಿ ಮತ್ತು ತಿಂಡಿ ಸೇವಿಸಿದ್ದಾರೆ. ಅಷ್ಟಕ್ಕೆ ನಿಲ್ಲಿಸದ ಅವರು, ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಾಕಿದ್ದಾರೆ. ಇದೀಗ ಫೋಟೋ ವೈರಲ್ ಅಗಿದ್ದು, ಅಧಿಕಾರಿಗಳು ಇಬ್ಬರೂ ಪೈಲಟ್‌ಗಳನ್ನು ತಕ್ಷಣವೇ ವಜಾಗೊಳಿಸಿದ್ದಾರೆ.
ಕಾಕ್‌ಪಿಟ್ ತುಂಬಾ ಸೂಕ್ಷ್ಮ ಸ್ಥಳ
ವಿಮಾನದ ಕಾಕ್‌ಪಿಟ್ ತುಂಬಾ ಸೂಕ್ಷ್ಮ ಮತ್ತು ನಿರ್ಣಾಯಕ ಸ್ಥಳವಾಗಿದೆ. ಆದ್ದರಿಂದ ಅಲ್ಲಿಗೆ ಪ್ರಯಾಣಿಕರಿಗೆ ಪ್ರವೇಶವಿಲ್ಲ. ಮತ್ತು ಅಲ್ಲಿ ಯಾವುದೇ ದ್ರವ ಸೇರಿದಂತೆ ಆಹಾರ ಪದಾರ್ಥಗಳನ್ನು ಇಡುವಂತಿಲ್ಲ. ಇದು ಸುರಕ್ಷತಾ ನಿಯಮವಾಗಿದ್ದು, ವಿಮಾನದ ಪೈಲಟ್ ಸೇರಿದಂತೆ ಎಲ್ಲರಿಗೂ ಈ ಸೂಕ್ಷ್ಮತೆಯ ಬಗ್ಗೆ ಅರಿವಿದೆ. ಆದರೆ, ಅಂತಹ ಕಾಕ್‌ಪಿಟ್‌ನಲ್ಲಿ ಇಬ್ಬರು ಪೈಲಟ್‌ಗಳು ಸಮೋಸಾ ತಿಂದು, ಮದ್ಯಪಾನ ಮಾಡಿ ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡುವ ಮೂಲಕ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ.2
ಇದನ್ನೂ ಓದಿ: Viral News: 1300 ರೂಪಾಯಿಗೆ ಮಾರಾಟಕ್ಕಿದೆ ಬುರ್ಜ್ ಖಲೀಫಾ!
ಪೈಲಟ್‌ಗಳು ಅಮಾನತು
ದೆಹಲಿಯಿಂದ ಗುವಾಹಟಿಗೆ ಹೊರಟಿದ್ದ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತುಕೊಂಡು ಕರ್ಜಿಕಾಯಿ ತಿನ್ನುವುದು ಮೇಲಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ಸ್ಪೈಸ್ ಜೆಟ್ ಪೈಲಟ್‌ಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
" ಇಬ್ಬರು ಪೈಲಟ್‌ಗಳನ್ನು ಸದ್ಯದ ಮಟ್ಟಿಗೆ ಕರ್ತವ್ಯದಿಂದ ತಡೆ ಹಿಡಿಯಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಕಾಕ್‌ಪಿಟ್ ಒಳಗೆ ಕುಳಿತು ಆಹಾರ ಸೇವಿಸುವುದಕ್ಕೆ ಸಂಬಂಧಿಸಿದಂತೆ ಶಿಸ್ತುಬದ್ಧವಾದ ನಿಯಮವಿದೆ. ಎಲ್ಲಾ ವಿಮಾನದ ಸಿಬ್ಬಂದಿ ಇದನ್ನು ಅನುಸರಿಸುತ್ತಾರೆ. ಈ ಬಗ್ಗೆ ಬಗ್ಗೆ ತನಿಖೆ ಪೂರ್ಣಗೊಂಡ ನಂತರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು " ಎಂದು ಸ್ಪೈಸ್ ಏರ್‌ಜೆಟ್ ಸಂಸ್ಥೆಯ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರ ಜೀವದ ಜೊತೆ ಆಟ
ಕನ್ಸೋಲ್ ಮೇಲೆ ಕಾಫಿ ಗ್ಲಾಸ್ ಇಟ್ಟಿದ್ದಾರೆ, ಅದರ ಮೇಲೆ ಒಂದೇ ಒಂದು ಹನಿ ಬಿದ್ದರೂ ವಿಮಾನಕ್ಕೆ ಭಾರಿ ಹಾನಿಯಾಗುವ ಅಪಾಯವಿದೆ. ವಿಮಾನ ಸುಮಾರು 37 ಸಾವಿರ ಅಡಿ ಎತ್ತರದಲ್ಲಿದ್ದಾಗ ಇಂತಹ ಸಾಹಸಗಳನ್ನು ಮಾಡಬಾರದು. ಹಬ್ಬ ಆಚರಿಸುವ ರೀತಿ ಇದಲ್ಲ. ಈ ನಿರ್ಲಕ್ಷ್ಯದಿಂದ ಪ್ರಯಾಣಿಕರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ಸ್ಪೈಸ್ ಜೆಟ್ ಪ್ರತಿನಿಧಿಗಳು ಪೈಲಟ್‌ಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಮಾನದಲ್ಲಿ ಸಿಗರೇಟ್ ಸೇದಿದ ಪ್ರಯಾಣಿಕ
ಇತ್ತೀಚೆಗಷ್ಟೇ ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಆ ಬಳಿಕ ಕಂಪನಿಗೆ ಎಚ್ಚರಿಕೆ ನೀಡಲಾಗಿತ್ತು. ಈ ಚರ್ಚೆ ನಡೆಯುತ್ತಿರುವಾಗಲೇ ಲಂಡನ್ ನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ 37 ವರ್ಷದ ವ್ಯಕ್ತಿಯೊಬ್ಬರು ಬಾತ್ ರೂಂನಲ್ಲಿ ಸಿಗರೇಟ್ ಸೇದುತ್ತಿರುವುದು ಸಂಚಲನ ಮೂಡಿಸಿತ್ತು. ರಮಾಕಾಂತ್ ಎಂಬ ವ್ಯಕ್ತಿ ಸಿಗರೇಟ್ ಸೇದಿದ್ದಲ್ಲದೆ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಕಂಪನಿಯ ದೂರಿನ ಮೇರೆಗೆ ಮುಂಬೈ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ