ಭಾರತದ ಮೊದಲ ಜೈವಿಕ ಇಂಧನ ವಿಮಾನ ಯಶಸ್ವಿ ಹಾರಾಟ: ಐತಿಹಾಸಿಕ ಘಳಿಗೆಗೆ ಸಾಕ್ಷಿಯಾದ ಸಚಿವರು


Updated:August 28, 2018, 9:22 AM IST
ಭಾರತದ ಮೊದಲ ಜೈವಿಕ ಇಂಧನ ವಿಮಾನ ಯಶಸ್ವಿ ಹಾರಾಟ: ಐತಿಹಾಸಿಕ ಘಳಿಗೆಗೆ ಸಾಕ್ಷಿಯಾದ ಸಚಿವರು

Updated: August 28, 2018, 9:22 AM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.28): ದೇಶದಲ್ಲಿ ಮೊದಲ ಬಾರಿಗೆ ಜೈವಿಕ ಇಂಧನ ಚಾಲಿತ ವಿಮಾನ ಸೋಮವಾರ ಯಶಸ್ವಿ ಹಾರಟ ನಡೆಸಿದೆ. ಡೆಹ್ರಾಡೂನ್‌ನಿಂದ ಹೊರಟ ಸ್ಪೈಸ್‌ ಜೆಟ್‌ ಯಶಸ್ವಿಯಾಗಿ ಹತ್ತು ನಿಮಿಷ ಹಾರಾಟ ಪರೀಕ್ಷೆ ನಡೆಸಿ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದೆ. ವಿಮಾನದಲ್ಲಿ ಶೇ. 75 ಜೆಟ್‌ ಇಂಧನ ಹಾಗೂ ಶೇ. 25 ಜೈವಿಕ ಇಂಧನ ಬಳಸಲಾಗಿದೆ ಎನ್ನಲಾಗಿದೆ.

ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಡೆಹ್ರಾಡೂನ್‌ನಲ್ಲಿ ವಿಮಾನ ಹಾರಾಟಕ್ಕೆ ಗ್ರೀನ್​ ಸಿಗ್ನಲ್​​ ತೋರಿಸಿದ್ದಾರೆ. ನಿತಿನ್‌ ಗಡ್ಕರಿ ನೇತೃತ್ವದ ಕೇಂದ್ರ ಸಚಿವರ ತಂಡವೂ ದೆಹಲಿಯಲ್ಲಿ ಯಶಸ್ವಿಯಾಗಿ ವಿಮಾನವನ್ನು ಬರಮಾಡಿಕೊಂಡರು ಎನ್ನುತ್ತಿವೆ ಅಧಿಕೃತ ಮೂಲಗಳು.

ಸ್ಪೈಸ್‌ಜೆಟ್ ಬಾಂಬಾರ್ಡರ್ ಕ್ಯೂ-400 ವಿಮಾನವು 78 ಸೀಟುಗಳನ್ನು ಒಳಗೊಂಡಿದೆ. ಮುಂದುವರಿದ ಕೆಲವು ದೇಶಗಳಲ್ಲಿ ಈಗಾಗಲೇ ಜೈವಿಕ ಇಂಧನ ಚಾಲಿತ ವಾಣಿಜ್ಯ ವಿಮಾನಗಳ ಹಾರಾಟಗಳ ಯಶಸ್ವಿ ಪ್ರಯೋಗ ನಡೆಯುತ್ತಿದೆ. ಸದ್ಯ ಇಂತಹ ಪ್ರಯತ್ನವನ್ನು ಭಾರತವೂ ಮಾಡಿದೆ.

ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಂಡುಬಂದಿರಲಿಲ್ಲ. ಮೊದಲ ಯಾನದ ಯಶಸ್ಸಿನ ಸಂಭ್ರಮಾಚರಣೆಗೆ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು, ಸಚಿವ ನಿತಿನ್ ಗಡ್ಕರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷ್ ವರ್ಧನ್, ಇಂಧನ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಾಕ್ಷಿಯಾಗಿದ್ಧಾರೆ.

ಪ್ರಾಯೋಗಿಕ ಹಾರಾಟದಲ್ಲಿ ಶೇ 75ರಷ್ಟು ಸಾಂಪ್ರದಾಯಿಕ ಇಂಧನ ಬಳಸಲಾಗಿತ್ತು. ಅಲ್ಲದೇ ಶೇ 25ರಷ್ಟು ಜತ್ರೋಫಾ ಕಾಯಿಗಳಿಂದ ತಯಾರಿಸಿದ ಜೈವಿಕ ಇಂಧನ ಬೆರೆಸಲಾಗಿತ್ತು. ಸದ್ಯ ಬಳಕೆಯಲ್ಲಿರುವ ಇಂಧನದ ಮೇಲೆ ಅವಲಂಬನೆಯನ್ನು ಶೇ 50ರಷ್ಟು ಕಡಿಮೆ ಮಾಡಲಿದೆ. ಇದರಿಂದ ಪ್ರಯಾಣ ದರವು ತಗ್ಗಲಿದೆ ಎಂದು ಸ್ಪೈಸ್ಟ್ ಜೆಟ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಅವರು ಹೇಳಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ