ಸ್ಪೈಸ್​ ಜೆಟ್​ ಭರ್ಜರಿ ಆಫರ್​: ಪ್ರತಿ ಕಿ.ಮೀ 1.7 ರೂ. ಪಾವತಿಸಿ ವಿಮಾನದಲ್ಲಿ ಪ್ರಯಾಣಿಸಿ

ಗ್ರಾಹಕರು ಪ್ರೊಮೊ ಕೋಡ್​ ರಿಯಾಯಿತಿಗಳನ್ನು ಬಳಸಿಕೊಳ್ಳಬಹುದಾಗಿದೆ. ಈ ಆಫರ್​ನಲ್ಲಿ ಪ್ರಯಾಣಿಕರು ಆಹಾರ ಮತ್ತು ಸ್ಪೈಸ್​ಮ್ಯಾಕ್ಸ್​ ಆಸನದ ಮೇಲೆ 25% ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

zahir | news18
Updated:February 5, 2019, 3:06 PM IST
ಸ್ಪೈಸ್​ ಜೆಟ್​ ಭರ್ಜರಿ ಆಫರ್​: ಪ್ರತಿ ಕಿ.ಮೀ 1.7 ರೂ. ಪಾವತಿಸಿ ವಿಮಾನದಲ್ಲಿ ಪ್ರಯಾಣಿಸಿ
@DeshGujarat
zahir | news18
Updated: February 5, 2019, 3:06 PM IST
ವಿಮಾನ ಪ್ರಯಾಣಿಕರಿಗೆ ಸ್ಪೈಸ್​ ಜೆಟ್​ ಅತ್ಯುತ್ತಮ ಆಫರ್​ವೊಂದನ್ನು ಮುಂದಿಟ್ಟಿದೆ. ಈ ಆಫರ್​ನಲ್ಲಿ ನೀವು ಪ್ರಯಾಣಿಸಲು ಪ್ರತಿ ಕಿ.ಮೀಗೆ ಕೇವಲ 1.75 ರೂ.ಗಳನ್ನು ಮಾತ್ರ ಪಾವತಿಸಿದರೆ ಸಾಕು. ಇದರ ಮೇಲೆ ಯಾವುದೇ ಹೆಚ್ಚುವರಿ ತೆರಿಗೆಗಳನ್ನು ವಿಧಿಸಲಾಗುವುದಿಲ್ಲ ಎಂದು ಸ್ಪೈಸ್​ ಜೆಟ್​ ತಿಳಿಸಿದೆ. ಈ ಕೊಡುಗೆಯಲ್ಲಿ ಅಂತರರಾಷ್ಟ್ರೀಯ ವಿಮಾನ ಟಿಕೆಟ್​ ದರ ಪ್ರತಿ ಕಿ.ಮೀ ಗೆ 2.5 ರೂನಿಂದ ಆರಂಭವಾಗಲಿದೆ. ಅಂದರೆ ದೇಶಿಯ ದರಗಳು 899 ರೂ.ನಿಂದ ಆರಂಭವಾದರೆ ಅಂತರಾಷ್ಟ್ರೀಯ ವಿಮಾನ ದರ 3699 ರೂಪಾಯಿಂದ ಪ್ರಾರಂಭವಾಗುತ್ತದೆ.

SBI ಕ್ರೆಡಿಟ್ ಕಾರ್ಡ್​ ಮೇಲೂ ಆಫರ್​:
ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್​ ಬಳಸಿ ವಿಮಾನ ಟಿಕೆಟ್​ಗಳನ್ನು ಬುಕ್​ ಮಾಡಿದರೆ ಗ್ರಾಹಕರಿಗೆ 10% ಡಿಸ್ಕೌಂಟ್ ಸಿಗಲಿದೆ. ಈ ವಿಶೇಷ ಕೊಡುಗೆಯನ್ನು ಸ್ಪೈಸ್ ಜೆಟ್​ ಅಧಿಕೃತ ವೆಬ್​ಸೈಟ್​ www.spicejet.com ಮಾತ್ರ ಲಭ್ಯವಿದೆ.

25% ಪ್ರೊಮೊ ಕೋಡ್ ಆಫ್:

ಗ್ರಾಹಕರು ಪ್ರೊಮೊ ಕೋಡ್​ ರಿಯಾಯಿತಿಗಳನ್ನು ಬಳಸಿಕೊಳ್ಳಬಹುದಾಗಿದೆ. ಈ ಆಫರ್​ನಲ್ಲಿ ಪ್ರಯಾಣಿಕರು ಆಹಾರ ಮತ್ತು ಸ್ಪೈಸ್​ಮ್ಯಾಕ್ಸ್​ ಆಸನದ ಮೇಲೆ 25% ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಸ್ಪೈಸ್​ ಜೆಟ್​ ಮೊಬೈಲ್​ ಆ್ಯಪ್​ ಮೂಲಕ ಟಿಕೆಟ್​ ಬುಕ್ಕಿಂಗ್ ಮಾಡಿದರೆ 5% ಹೆಚ್ಚುವರಿ ರಿಯಾಯಿತಿ ಸಿಗಲಿದೆ.

ಆಫರ್ ಅವಧಿ:
ಫೆಬ್ರವರಿ 5 ರಿಂದ 9 ವರೆಗೆ ಬುಕ್ಕಿಂಗ್ ಲಭ್ಯವಿದ್ದು, ಸೆಪ್ಟೆಂಬರ್​ 25, 2019 ರ ಒಳಗಿನ ಟಿಕೆಟ್​ಗಳನ್ನು ಇಲ್ಲಿ ಬುಕ್ ಮಾಡಿಕೊಳ್ಳಬಹುದು.
Loading...

ಇದನ್ನೂ ಓದಿ: VIDEO: ಸುಮಲತಾ ಮಂಡ್ಯದ ಗೌಡ್ತಿ ಅಲ್ಲ: ಹಾಗಿದ್ರೆ ಸಿಎಂ ಕುಮಾರಸ್ವಾಮಿ ಅವರ ಪತ್ನಿ? ಅಂಬಿ ಅಭಿಮಾನಿಗಳ ಪಶ್ನೆ

ಷರತ್ತುಗಳು ಅನ್ವಯ:
-ವಿಶೇಷ ಕೊಡುಗೆಗಳು ಕೇವಲ ಏಕಮುಖ ಪ್ರಯಾಣಕ್ಕೆ ಮಾತ್ರ ಅನ್ವಯವಾಗಲಿದೆ.
-ಈ ಆಫರ್ ಆಯ್ದ ಮತ್ತು ತಡೆರಹಿತ ವಿಮಾನಗಳಿಗೆ ಮಾತ್ರ.
-ಈ ಆಫರ್​ನಲ್ಲಿ ಯಾವುದೇ ರೀತಿಯ ಗ್ರೂಪ್ ಬುಕ್ಕಿಂಗ್ ಇರುವುದಿಲ್ಲ.
-ಟಿಕೆಟ್ ಅನ್ನು ರದ್ದು ಮಾಡಿದರೆ, ನಿಮ್ಮ ಟಿಕೆಟ್​ನ ಸಾಮಾನ್ಯ ಶುಲ್ಕವನ್ನು ಮರುಪಾವತಿಸಲಾಗುತ್ತದೆ.
-ಸೀಮಿತಾವಧಿಯ ಆಫರ್​ ಆಗಿದ್ದು, ಮೊದಲು ಬುಕ್ಕಿಂಗ್ ಮಾಡುವವರಿಗೆ ಆದ್ಯತೆ ನೀಡಲಾಗುತ್ತದೆ.
-ಈ ಆಫರ್​ನಲ್ಲಿ ಟಿಕೆಟ್​ ಖರೀದಿಸಿದರೆ ಅದೇ ವಿಮಾನದಲ್ಲಿ ಪ್ರಯಾಣಿಸಬೇಕಾಗುತ್ತದೆ. ಬಳಿಕ ಸಮಯದ ಬದಲಾವಣೆಗೆ ಅವಕಾಶವಿರುವುದಿಲ್ಲ.

ಇದನ್ನೂ ಓದಿ: ನ್ಯೂಜಿಲ್ಯಾಂಡ್​ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗ

First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...