ಗುವಾಹಟಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನವು ನಿಗದಿತ ಅವಧಿಗಿಂತ ಮುಂಚೆಯೇ ರನ್ವೇನಲ್ಲಿ ಲ್ಯಾಂಡ್ ಆದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಘಟನೆಯಿಂದ ಯಾರೊಬ್ಬರಿಗೆ ತೊಂದರೆಯಾಗಿಲ್ಲ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು-ಗುವಾಹಟಿ ವಿಮಾನ ಎಸ್ಜಿ960 ಲ್ಯಾಂಡಿಂಗ್ ಆಗುವಾಗ ರನ್ವೇನಲ್ಲಿ ಗುರಿತಪ್ಪಿಸಿದ ಸ್ಪೈಸ್ಜೆಟ್ನ ಇಬ್ಬರು ಪೈಲಟ್ಗಳನ್ನು ನಾಗರಿಕ ವಿಮಾನಯಾನದ ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟರೆಟ್ ಜನರಲ್ ತನಿಖೆಗೆ ಒಳಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪೈಲಟ್ಗಳನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ರನ್ವೇಯಲ್ಲಿ ಗೊತ್ತುಪಡಿಸಿದ ಸ್ಥಳಕ್ಕೆ ಮುಂಚಿತವಾಗಿ ವಿಮಾನ ಇಳಿದಿದೆ. ಘಟನೆಯಿಂದ ಪ್ರಯಾಣಿಕರಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ತೆರದಾಳ ಪ್ರಕರಣದ ಬಗ್ಗೆ ಸರ್ಕಾರ, ಬಿಜೆಪಿ ಮಹಿಳಾ ಸಂಘಟನೆಗಳ ಮೌನ ಯಾಕೆ; ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ