• Home
  • »
  • News
  • »
  • national-international
  • »
  • Sperm Donation Law: ಇನ್ಮುಂದೆ ಮದುವೆಯಾಗಿದ್ರೆ ಮಾತ್ರ ವೀರ್ಯ ದಾನ, ಸಲಿಂಗಿಗಳಿಂದ ಈ ಕ್ರಮಕ್ಕೆ ವಿರೋಧ

Sperm Donation Law: ಇನ್ಮುಂದೆ ಮದುವೆಯಾಗಿದ್ರೆ ಮಾತ್ರ ವೀರ್ಯ ದಾನ, ಸಲಿಂಗಿಗಳಿಂದ ಈ ಕ್ರಮಕ್ಕೆ ವಿರೋಧ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸದ್ಯ, ಜಪಾನಿನ ಸತೋಕೊ ನಗುಮಾರಾ ಎಂಬ ಮಹಿಳೆ ತನ್ನ ಇನ್ನೊಬ್ಬ ಸಂಗಾತಿ ಮಹಿಳೆಯೊಂದಿಗೆ ಜೀವಿಸುತ್ತಿದ್ದು ಮಗು ಒಂದನ್ನು ಹೊಂದಲು ಬಯಸಿದ್ದರು. ಅದರಂತೆ ಅವರು ದಾನ ಮಾಡಲಾದ ವೀರ್ಯದಿಂದ ಗರ್ಭಧರಿಸಿ ಮಗುವೊಂದನ್ನು ಪಡೆದಿದ್ದಾರೆ.

  • Share this:

ಜಗತ್ತಿನ ಹಲವು ಮುಂದುವರಿದ ರಾಷ್ಟ್ರಗಳಲ್ಲಿ ಏಕಾಂಗಿ ಮಹಿಳೆ (Alone Women) ಅಥವಾ ಲೆಸ್ಬಿಯನ್ (Lesbians) ಜೋಡಿಗಳಿಗೆ ಕೆಲವು ಹಕ್ಕುಗಳಿರುವುದನ್ನು ನೋಡಬಹುದು. ಉದಾಹರಣೆಗೆ ಒಬ್ಬ ಏಕಾಂಗಿ ಹೆಣ್ಣು ಬಯಸ್ಸಿದ್ದಲ್ಲಿ ವೀರ್ಯ ದಾನ ಪಡೆದು ಮಗು ಹೊಂದಬಹುದು, ಅದರಂತೆ ಲೆಸ್ಬಿಯನ್ ಜೊತೆ ಕೂಡ. ಆದರೆ, ಸದ್ಯ ಜಪಾನಿ(Japan) ನಲ್ಲಿ ಈ ವರ್ಷ ಬರಬೇಕೆಂದಿರುವ ಹೊಸ ಕಾನೂನೊಂದು ಕೆಲ ವರ್ಗದ ಮಹಿಳೆಯರಿಗೆ (Women's) ಅಭಿಶಾಪವಾಗಲಿದೆಯೇ ಎಂಬ ಧೋರಣೆ ಹೊಂದುವಂತಾಗಿದೆ. ಸದ್ಯ, ಜಪಾನಿನ ಸತೋಕೊ ನಗುಮಾರಾ ಎಂಬ ಮಹಿಳೆ ತನ್ನ ಇನ್ನೊಬ್ಬ ಸಂಗಾತಿ ಮಹಿಳೆಯೊಂದಿಗೆ ಜೀವಿಸುತ್ತಿದ್ದು ಮಗು ಒಂದನ್ನು ಹೊಂದಲು ಬಯಸಿದ್ದರು. ಅದರಂತೆ ಅವರು ದಾನ ಮಾಡಲಾದ ವೀರ್ಯದಿಂದ ಗರ್ಭಧರಿಸಿ ಮಗುವೊಂದನ್ನು ಪಡೆದಿದ್ದಾರೆ.


ಆದರೆ, ಒಂದು ವೇಳೆ ಹೊಸ ಕಾನೂನು ಜಪಾನಿನಲ್ಲಿ ಜಾರಿಯಾದರೆ ಅವರೆಲ್ಲ ಕನಸುಗಳು ನುಚ್ಚು ನೂರಾಗಲಿವೆ. ಏಕೆಂದರೆ ಅವರ ಈ ನಡೆಯನ್ನು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿಲ್ಲ ಎಂದು ಹೇಳಲಾಗುತ್ತಿದೆ. ಹಾಗೆ ನೋಡಿದರೆ, ಸದ್ಯ ಜಪಾನಿನಲ್ಲಿ ವೀರ್ಯ ದಾನ ಎಂಬ ಪ್ರಕ್ರಿಯೆ ಒಂದು ಬಗೆಯಲ್ಲಿ ಚಾಲನೆಯಲ್ಲಿದೆ. ಅಧಿಕೃತವಾಗಿ ಈ ರೀತಿಯ ದಾನ ವಿರೋಧಿಸುವ ಯಾವ ನಿಯಮಗಳು ಸದ್ಯ ಚಾಲ್ತಿಯಲ್ಲಿಲ್ಲದೆ ಇದ್ದರೂ ಇದನ್ನು ಸಮರ್ಥಿಸುವಂತಹ ಇತರೆ ಯಾವ ಕಾನೂನುಗಳೂ ಸಹ ಅಲ್ಲಿಲ್ಲ. ಹಾಗಾಗಿ ಇದು ಗ್ರೇ ಮಾರುಕಟ್ಟೆಯಲ್ಲಿರುವಂತಹ ಒಂದು ವ್ಯವಹಾರವಾಗಿ ಉಳಿದಿದೆ ಎಂದಷ್ಟೆ ಹೇಳಬಹುದು.


ಹೊಸ ಕಾನೂನು ಬಂದರೆ ಇವರಿಗೆ ಸಮಸ್ಯೆ!


ಆದರೆ, ಈ ಬಾರಿ ಅಲ್ಲಿನ ಆಡಳಿತದಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ತರಲು ಸಿದ್ಧತೆ ನಡೆಸಲಾಗುತ್ತಿದೆ. ಈ ಮೂಲಕ ವೀರ್ಯ ದಾನದಂತಹ ಪ್ರಕ್ರಿಯೆಯನ್ನು ನಿಯಂತ್ರಣ ಮತ್ತು ಕಾನೂನುಬದ್ಧಗೊಳಿಸುವುದು ಜಪಾನಿನ ಉದ್ದೇಶವಾಗಿದೆ. ಅಲ್ಲದೆ, ಈ ನಿಯಮದಡಿಯಲ್ಲಿ ಮಕ್ಕಳು ತಮ್ಮ ಜೈವಿಕ ಪಾಲಕರು ಯಾರು ಎಂಬುದನ್ನು ತಿಳಿಯುವ ಹಕ್ಕನ್ನೂ ಹೊಂದಿದ್ದಾರೆನ್ನುವ ಮೂಲಕ ಈ ಕುರಿತಾದ ವಿಶಿಷ್ಟ ಅರ್ಹತೆಯನ್ನೂ ಕಾನೂನಿನಲ್ಲಿ ಅಳವಡಿಸುವ ಉದ್ದೇಶ ಜಪಾನಿಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.


ಅಧಿಕೃತವಾಗಿ ಮದುವೆಯಾಗಿದ್ರೆ ಮಾತ್ರ ವೀರ್ಯ ದಾನ!


ಈ ಬಗ್ಗೆ ನಿಯಮದ ಕರಡು ಪ್ರತಿಯನ್ನು ನೋಡಿರುವ ಎ‍ಎಫ್‍ಪಿ ಮಾಧ್ಯಮವು ವರದಿ ಮಡಿರುವಂತೆ ವೀರ್ಯ ದಾನದಂತಹ ಪ್ರಕ್ರಿಯೆಯನ್ನು ಕೇವಲ ಅಧಿಕೃತವಾಗಿ ಮದುವೆಯಾದ ಜೋಡಿಗಳಿಗಷ್ಟೆ ಅನುಮತಿಸಲಾಗುವುದೆಂದಿದೆ, ಅದರಲ್ಲೂ ವಿಶೇಷವಾಗಿ ಪುರುಷ ಫಲವತ್ತತೆಯಿಂದ ಬಾಧಿತರಾದವರಿಗೆ ಎನ್ನಲಾಗಿದೆ. ಇನ್ನೊಂದೆಡೆ ಜಪಾನ್ ಸಮಾನ ಲಿಂಗಗಳ ಮದುವೆಯನ್ನು ಅಧಿಕೃತ ಎಂದು ಗುರುತಿಸಿಲ್ಲ. ಹಾಗಾಗಿ ಇದು ಲೆಸ್ಬಿಯನ್ ಜೋಡಿ ಹಾಗೂ ಏಕಾಂಗಿ ಮಹಿಳೆಯರನ್ನು ಅವಕಾಶವಂಚಿತರನ್ನಾಗಿ ಮಾಡುವ ಸರ್ವ ಸಾಧ್ಯತೆಗಳೂ ಇವೆ.


ಇದನ್ನೂ ಓದಿ: ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಕೇಂದ್ರವಾಗಿ ಉಳಿಯದ ಅಮೆರಿಕ!


ಮಗು ಹೊಂದುವ ಆಸೆಯಲ್ಲಿ ಲೆಸ್ಬಿಯನ್​​!


39ರ ಪ್ರಾಯದ ಸತೋಕೊ ತಮ್ಮ ದೇಹದಿಂದಲೇ ಮಗುವೊಂದನ್ನು ಜನ್ಮ ನೀಡಿ ಅದಕ್ಕೆ ತಾಯಿಯಾಗುವ ಹೆಬ್ಬಯಕೆಯನ್ನು ಎರಡು ದಶಕಗಳಿಂದ ಹೊಂದಿದ್ದರು. ಅವರ ಜೊತೆಗಾರ್ತಿಯಾಗಿರುವ ಇನ್ನೊಬ್ಬ ಸಂಗಾತಿ 42ರ ಪ್ರಾಯದ ಮಮಿಕೊ ಮೋದಾ ಸಹ ಈ ಬಗ್ಗೆ ಒಪ್ಪಿಗೆ ಹೊಂದಿದ್ದರು ಮತ್ತು ಈ ಜೊತೆ ಮೊದಲಿಗೆ ವಿದೇಶಗಳಿಂದ ವೀರ್ಯ ದಾನ ಪಡೆಯುವ ಕುರಿತು ಆಲೋಚಿಸುತ್ತಿದ್ದರು. ಆದರೆ, ಇವರಿಬ್ಬರ ಪುರುಷ ಗೆಳೆಯನೊಬ್ಬ ತನ್ನ ವೀರ್ಯದಾನದ ಇಚ್ಛೆಯನ್ನು ವ್ಯಕ್ತಪಡಿಸಿದ ನಂತರ ಈ ಲೆಸ್ಬಿಯನ್ ಜೊತೆ ಅದನ್ನೇ ಪಡೆಯಲು ನಿರ್ಧರಿಸಿ ಕೊನೆಗೆ ಗಂಡು ಮಗುವೊಂದರ ಪೋಷಕರಾಗಿದ್ದಾರೆ.


ಇಲ್ಲಿಯವರೆಗೆ ವೀರ್ಯ ದಾನದ ಮೂಲಕ ಗರ್ಭಧಾರಣೆಯಂತಹ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿರುವ ವೀರ್ಯದಾನ ಸಂಘ-ಸಂಸ್ಥೆಗಳು ಜಪಾನ್ ಸೊಸೈಟಿ ಆಫ್ ಆಬ್ಸ್ಟೆಟ್ರಿಕ್ಸ್ ಆಂಡ್ ಗೈನೆಕಾಲಾಜಿಯಿಂದ ಹೊರಡಿಸಲಾಗಿರುವ ಬೈಲಾಗಳನ್ನು ಅನುಸರಿಸುತ್ತಿವೆ. ಆದರೆ, ಹೊಸ ಕಾನೂನಿನಲ್ಲಿ ಇದೇ ಸಂಸ್ಥೆಯು ಪ್ರಮುಖವಾಗಿ ಪಾತ್ರವಹಿಸಿದ್ದು ಅದರಲ್ಲಿ ಈ ರೀತಿಯ ದಾನವು ಕೇವಲ ಅಧಿಕೃತ ಮದುವೆಯಾಗಿರುವ ಜೋಡಿಗಳಿಗೆ ಮಾತ್ರವೆ ಎನ್ನುತ್ತಿದೆ. ಆದಾಗ್ಯೂ ಈ ವಿಷಯದಲ್ಲಿ ಕೆಲವು ವೈದ್ಯರು ಲೆಸ್ಬಿಯನ್ ಹಾಗೂ ಏಕಾಂಗಿ ಮಹಿಳೆಯರ ಪರವಾಗಿ ಬ್ಯಾಟ್ ಬಿಸಿದ್ದರೂ ಸಹ ಅವರ ಸಂಖ್ಯೆ ಕಡಿಮೆಯೇ ಇದೆ ಎನ್ನಬಹುದು.


ಇದನ್ನೂ ಓದಿ: ಭಾರತದ ಮುಸಲ್ಮಾನರಿಗೆ ಸಿಕ್ಕಷ್ಟು ಸ್ವಾತಂತ್ರ್ಯ ಇಸ್ಲಾಮಿಕ್ ರಾಷ್ಟ್ರದಲ್ಲಿ ಊಹಿಸಲೂ ಸಾಧ್ಯವಿಲ್ಲ: IAS ಷಾ ಫೈಸಲ್


ಹಾಗಾಗಿ, ಮುಂದೆ ಈ ಕಾನೂನು ಜಾರಿಯಾಗಿದ್ದೆ ಆದಲ್ಲಿ ತಮ್ಮನ್ನು ಯಾವ ಆಸ್ಪತ್ರೆಗಳು ಸ್ವೀಕರಿಸುವುದಿಲ್ಲ ಎಂಬ ಆತಂಕ ಸತೋಕೊ ಹಾಗೂ ಮಮಿಕೊ ಅವರಿಗೆ ಎದುರಾಗಿದೆ ಅಂತಾನೇ ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಮೋದಾ ಅವರು ಮಾರ್ಗದರ್ಶಿಗಳ ವಿರುದ್ಧ ಹೋಗುವುದಕ್ಕೂ ಹಾಗೂ ಕಾನೂನುಬಾಹಿರ ಅಂಶಗಳನ್ನು ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂಬ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಾರೆ.

Published by:ವಾಸುದೇವ್ ಎಂ
First published: