news18-kannada Updated:December 11, 2020, 5:42 PM IST
ಪ್ರಾತಿನಿಧಿಕ ಚಿತ್ರ.
ಪ್ರತಿದಿನ ನೀವು ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಸಮಯವನ್ನು ಕಳೆಯುತ್ತೀರಿ? ಫೇಸ್ಬುಕ್, ಇನ್ಸ್ಟಾಗ್ರಾಮ್, ಸ್ನ್ಯಾಪ್ಚಾಟ್ ಅಥವಾ ಟ್ವಿಟರ್ನಂತಹ ಸೈಟ್ಗಳ ದೈನಂದಿನ ಬಳಕೆಯು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಿವೆ ಕೆಲವು ವೈಜ್ಞಾನಿಕ ಸಂಶೋಧನೆಗಳು. ವಾಸ್ತವವಾಗಿ, ಯುಎಸ್ ಸಂಶೋಧನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಸಮಯ ಮತ್ತು ಖಿನ್ನತೆಯ ಅಪಾಯದ ನಡುವಿನ ಸಂಬಂಧವನ್ನು ಸೂಚಿಸುತ್ತಾ ಎಚ್ಚರಿಕೆ ನೀಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯವನ್ನು ಕಳೆಯುವ ವಿಶೇಷವಾಗಿ ಕಿರಿಯ ವಯಸ್ಸಿನ ಬಳಕೆದಾರರಲ್ಲಿನ ಖಿನ್ನತೆಯ ಕುರಿತು ವಿಜ್ಞಾನಿಗಳು ತನಿಖೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆದಾಗ್ಯೂ, ಹಿಂದಿನ ಅಧ್ಯಯನಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಖಿನ್ನತೆಯೇ ಕಾರಣವೋ ಅಥವಾ ಸಾಮಾಜಿಕ ಮಾಧ್ಯಮವು ಖಿನ್ನತೆಯ ಲಕ್ಷಣಗಳಿಗೆ ಕಾರಣವೋ? ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ.
ಸಾಮಾಜಿಕ ಜಾಲತಾಣಗಳ ಪ್ರಾಬಲ್ಯ ಅಧಿಕವಾದಂದಿನಿಮದ ಖನ್ನತೆ ಮತ್ತು ಸಾಮಾಜಿಕ ಜಾಲತಾಣಗಳ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ, ಈ ಎರಡರಲ್ಲಿ ಯಾವುದು ಮೊದಲು ಬಂದಿದ್ದು, ಖಿನ್ನತೆಯಿಂದಾಗಿಯೇ ಜನ ಸಾಮಾಜಿಕ ಜಾಲತಾಣಕ್ಕೆ ದಾಸರಾಗುತ್ತಿದ್ದಾರಾ? ಅಥವಾ ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರಾ? ಎಂಬ ಪ್ರಶ್ನೆಗೆ ಈ ವರೆಗೆ ಉತ್ತರ ದೊರಕಿರಲಿಲ್ಲ. ಈಗಿನ ಹೊಸ ಅಧ್ಯಯನ ಈ ಪ್ರಶ್ನೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಸಫಲವಾಗಿದೆ.
ಏಕೆಂದರೆ ಹೆಚ್ಚಿನ ಆರಂಭಿಕ ಸಾಮಾಜಿಕ ಮಾಧ್ಯಮ ಬಳಕೆಯೇ ಖಿನ್ನತೆಗೆ ಕಾರಣವಾಗಿದೆ. ನಂತರ ಈ ಪ್ರಮಾಣ ಏರಿಕೆಯಾಗುತ್ತಲೇ ಇದೆ ಎಂದು ಎಂದು ಅರ್ಕಾನ್ಸಾಸ್ ವಿಶ್ವವಿದ್ಯಾಲಯದ ಡಾ. ಬ್ರಿಯಾನ್ ಪ್ರಿಮಾಕ್ ವಿವರಿಸುತ್ತಾರೆ.
ಅಮೇರಿಕನ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್ನಲ್ಲಿ ಪ್ರಕಟವಾದ ಈ ಅಧ್ಯಯನವು 18 ರಿಂದ 30 ವರ್ಷದೊಳಗಿನ 1,000 ಕ್ಕೂ ಹೆಚ್ಚು ಯುಎಸ್ ವಯಸ್ಕರನ್ನು ಮಾದರಿಯನ್ನು ಆಯ್ಕೆ ಮಾಡಿದ್ದು, ಅವರ ಖಿನ್ನತೆಯನ್ನು ನಿರ್ದಿಷ್ಟ ಪ್ರಶ್ನಾವಳಿಯನ್ನು ಬಳಸಿ ಅಳೆದಿದೆ. ಭಾಗವಹಿಸುವವರು ಫೇಸ್ಬುಕ್, ಟ್ವಿಟರ್, ರೆಡ್ಡಿಟ್, ಇನ್ಸ್ಟಾಗ್ರಾಮ್ ಮತ್ತು ಸ್ನ್ಯಾಪ್ಚಾಟ್ನಂತಹ ಪ್ಲಾಟ್ಫಾರ್ಮ್ಗಳಲ್ಲಿ ಸಾಮಾಜಿಕ ಮಾಧ್ಯಮವನ್ನು ಎಷ್ಟು ಸಮಯದವರೆಗೆ ಬಳಸಿದ್ದಾರೆ ಎಂಬ ಬಗ್ಗೆಯೂ ಪ್ರಶ್ನೆ ಕೇಳಲಾಗಿ ಅಧ್ಯಯನ ನಡೆಸಲಾಗಿದೆ.
ಇದನ್ನೂ ಓದಿ : Farmers Protest:16ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ನಾಳೆ ದೇಶದ ಎಲ್ಲಾ ಟೋಲ್ ಪ್ಲಾಜಾ ಬಂದ್
ದಿನಕ್ಕೆ ಎರಡು ಗಂಟೆಗಳಿಗಿಂತ ಹೆಚ್ಚು ಬಳಕೆ ಅಪಾಯಕಾರಿ:
ಸೋಶಿಯಲ್ ಮೀಡಿಯಾವನ್ನು ಬಳಸಿಕೊಂಡು ದಿನಕ್ಕೆ ಐದು ಗಂಟೆಗಳಿಗಿಂತ ಹೆಚ್ಚು ಸಮಯ ಕಳೆಯುವ ಯುವಕರು ಆರು ತಿಂಗಳಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆ 2.8 ಪಟ್ಟು ಹೆಚ್ಚಾಗಿದೆ ಎಂದು ವಿಜ್ಞಾನಿಗಳು ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದಾರೆ. ಸಾಮಾಜಿಕ ನೆಟ್ವರ್ಕ್ಗಳನ್ನು ದಿನಕ್ಕೆ ಎರಡು ಗಂಟೆಗಳಿಗಿಂತ ಕಡಿಮೆ ಕಾಲ ಬಳಸಿದವರಿಗಿಂತ ಇವರಲ್ಲಿ ಖಿನ್ನತೆ ಹೆಚ್ಚಾಗಿ ಕಂಡುಬಂದಿದೆ.
ಈ ಸಂಶೋಧನೆಯಿಂದ ಮತ್ತೂ ಹಲವು ವಿಚಾರಗಳು ಬಯಲಾಗಿದೆ. ಮೊದಲನೆಯದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ವ್ಯಕ್ತಿಗತ ಸಂಬಂಧಗಳನ್ನು ರೂಪಿಸಲು, ವೈಯಕ್ತಿಕ ಅಥವಾ ವೃತ್ತಿಪರ ಗುರಿಗಳನ್ನು ಸಾಧಿಸಲು ಅಥವಾ ವೈಯಕ್ತಿಕ ಪ್ರತಿಬಿಂಬದ ಅಮೂಲ್ಯವಾದ ಕ್ಷಣಗಳು ಅನವಶ್ಯಕವಾಗಿ ವ್ಯರ್ಥವಾಗುತ್ತಿದೆ. ಇದಿರಿಂದ ವ್ಯಕ್ತಿಯ ಸ್ವಾಭಿಮಾನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಅಂಶವನ್ನು ಸಂಶೋಧನೆ ತಿಳಿಸಿದೆ.
Published by:
MAshok Kumar
First published:
December 11, 2020, 5:42 PM IST