• Home
  • »
  • News
  • »
  • national-international
  • »
  • Speed Limit: ಎಕ್ಸ್​​ಪ್ರೆಸ್​ ವೇಗಳ ವೇಗದ ಮಿತಿ ಹೆಚ್ಚಿಸಲು ಚಿಂತನೆ, ಇನ್ಮುಂದೆ ಈ ಸ್ಫೀಡ್​ನಲ್ಲಿ ಗಾಡಿ ಓಡಿಸಬಹುದು!

Speed Limit: ಎಕ್ಸ್​​ಪ್ರೆಸ್​ ವೇಗಳ ವೇಗದ ಮಿತಿ ಹೆಚ್ಚಿಸಲು ಚಿಂತನೆ, ಇನ್ಮುಂದೆ ಈ ಸ್ಫೀಡ್​ನಲ್ಲಿ ಗಾಡಿ ಓಡಿಸಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ರಸ್ತೆ (Road) ಯಲ್ಲಿ ಸುಗಮ ಸಂಚಾರವನ್ನು ಒದಗಿಸಲು ನಗರ ಮತ್ತು ಅರೆ-ನಗರ ಭಾಗಗಳಲ್ಲಿ ವೇಗ ಮಿತಿ ನಿರ್ಬಂಧಗಳನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ಹೊರಡಿಸಿದೆ.

  • Share this:

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ (Road Transport and Highways) ಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಅವರು ಇತ್ತೀಚೆಗೆ ಭಾರತದಲ್ಲಿ ಹೆದ್ದಾರಿ (Highway) ಗಳು ಮತ್ತು ಎಕ್ಸ್‌ಪ್ರೆಸ್‌ವೇ (Expressway) ಗಳಲ್ಲಿ ವಾಹನಗಳ ವೇಗದ ಮಿತಿ (Speed Limit) ಯನ್ನು ಹೆಚ್ಚಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ರಸ್ತೆ ಸಾರಿಗೆ ಅಭಿವೃದ್ಧಿ ಮಂಡಳಿಯ ವಾರ್ಷಿಕ ಸಭೆಯಲ್ಲಿ ವಾಹನಗಳ ವೇಗದ ಮಿತಿಯನ್ನು ಹೆಚ್ಚಿಸುವ ಕುರಿತು ಈ ಅಭಿಪ್ರಾಯವನ್ನು ಹಂಚಿಕೊಳ್ಳಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ರಸ್ತೆ (Road) ಯಲ್ಲಿ ಸುಗಮ ಸಂಚಾರವನ್ನು ಒದಗಿಸಲು ನಗರ ಮತ್ತು ಅರೆ-ನಗರ ಭಾಗಗಳಲ್ಲಿ ವೇಗ ಮಿತಿ ನಿರ್ಬಂಧಗಳನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ಹೊರಡಿಸಿದೆ.


ಹೈವೇ, ಎಕ್ಸ್​​ಪ್ರೆಸ್​ ವೇಗದ ಮೀತಿ ಹೆಚ್ಚಳ!


ವೇಗದ ಮಿತಿಗೆ ಸಂಬಂಧಿಸಿದ ಈ ವಿಷಯವನ್ನು ಸಚಿವಾಲಯದೊಳಗೆ ಚರ್ಚಿಸಲಾಗಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ವಾಹನಗಳ ವೇಗವನ್ನು ನಿಯಂತ್ರಿಸುವ ನಿಯಮಗಳನ್ನು ವಿಶೇಷವಾಗಿ ದೇಶಾದ್ಯಂತ ನಿರ್ಮಿಸಲಾಗುತ್ತಿರುವ ಹೊಸ ಬಹು-ಪಥ ರಸ್ತೆಗಳು, ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು ಇತ್ಯಾದಿಗಳ ಪ್ರಯೋಜನಕ್ಕಾಗಿ ಈ ನಿಯಮವನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದು ಗಡ್ಕರಿ ವಿವರಿಸಿದರು.


140 ಕಿ. ಮೀ. ಹೆಚ್ಚಿಸಲು ಮುಂದಾದ ಕೇಂದ್ರ ಸರ್ಕಾರ


ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ 41ನೇ ಸಾರಿಗೆ ಅಭಿವೃದ್ಧಿ ಮಂಡಳಿ (ಟಿಡಿಸಿ) ಸಭೆಯು ರಾಜ್ಯಗಳಲ್ಲಿ ಮೋಟಾರು ವಾಹನ ಕಾಯ್ದೆಯ ಅನುಷ್ಠಾನದ ಸ್ಥಿತಿಯ ಕುರಿತು ಎಂಒಆರ್‌ಟಿಎಚ್ (ಎಂವಿಎಲ್) ಸಂಸ್ಥೆಯ ನಿರ್ದೇಶಕರು ಸಂಕ್ಷಿಪ್ತವಾಗಿ ಪ್ರೆಸೆಂಟೆಷನ್‌ ಅನ್ನು ನೀಡಿದರು. ರಸ್ತೆಯಲ್ಲಿ ತಡೆರಹಿತ ಸಂಚಾರವನ್ನು ಒದಗಿಸಲು ನಗರ ಮತ್ತು ಅರೆ-ನಗರ ಭಾಗಗಳಲ್ಲಿ ವೇಗ ಮಿತಿ ನಿರ್ಬಂಧಗಳನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಕೇಂದ್ರ ಸಚಿವಾಲಯ ಹೇಳಿದೆ.


ಇದನ್ನೂ ಓದಿ: ಆರೋಗ್ಯಕ್ಕೆ ಒಳ್ಳೆಯದು ಅಂತ ಜಾಸ್ತಿ ಬಿಸಿನೀರು ಕುಡಿಬೇಡಿ, ಇದರ ಅಡ್ಡಪರಿಣಾಮಗಳು ಒಂದೆರೆಡಲ್ಲ


ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ರಸ್ತೆಗಳ ಸುಧಾರಣಾ ಕ್ರಮಗಳ ಸಂಪೂರ್ಣ ಅನುಷ್ಠಾನದ ಮೇಲೆ ಉಂಟಾಗುವ ಪ್ರಯೋಜನಗಳ ಬಗ್ಗೆ ವಿಶೇಷ ಒತ್ತನ್ನು ನೀಡಬೇಕಾಗಿದೆ. ಅಂದರೆ ದೇಶದಾದ್ಯಂತ ರಸ್ತೆಯಲ್ಲಿ ತಡೆರಹಿತ ವಾಹನ ಚಾಲನೆಯನ್ನು ಉತ್ತೇಜಿಸುವುದು ಕೇಂದ್ರ ರಸ್ತೆ ಸಚಿವಾಲಯದ ಮುಖ್ಯ ಉದ್ದೇಶವಾಗಿದೆ.


ಇದರ ಜೊತೆಗೆ ಚಾಲಕರು ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಮತ್ತು ಆನ್‌ಲೈನ್ ಸೇವೆಯಿಂದ ಜನ ಸಾಮಾನ್ಯರಿಗೆ ರಸ್ತೆ ಸಾರಿಗೆ ವ್ಯವಹಾರವನ್ನು ಸುಲಭಗೊಳಿಸುವುದು, ಮುಂತಾದ ವಿಷಯಗಳಿಗೆ ಒತ್ತು ನೀಡಲಾಗಿದೆ ಎಂದು ಕೇಂದ್ರ ಸಚಿವಾಲಯ ಹೇಳಿಕೆಯನ್ನು ಬಿಡುಗಡೆ ಮಾಡಿದೆ.


ವಾಹನಗಳ ಗರಿಷ್ಠ ವೇಗದ ಮಿತಿ ಗಂಟೆಗೆ 140 ಕಿ. ಮೀ


ಇತ್ತೀಚೆಗಷ್ಟೇ ನಿತಿನ್ ಗಡ್ಕರಿ ಅವರು “ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳ ಗರಿಷ್ಠ ವೇಗದ ಮಿತಿಯನ್ನು ಪ್ರತಿ ಗಂಟೆಗೆ 140 ಕಿ. ಮೀ. ಗೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದ್ದರು. “ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅದರಲ್ಲಿ ನಾಲ್ಕು ಪಥದ ರಸ್ತೆಗಳಲ್ಲಿ ವೇಗದ ಮಿತಿ ಕನಿಷ್ಠ 100 ಕಿ.ಮೀ ಆಗಿರಬೇಕು. ದ್ವಿಪಥ ರಸ್ತೆಗಳು ಮತ್ತು ನಗರ ರಸ್ತೆಗಳ ಆಯಾ ವೇಗದ ಮಿತಿಗಳು ಗಂಟೆಗೆ 80 ಕಿಮೀ ಮತ್ತು 75 ಕಿಮೀ ಆಗಿರಬೇಕು” ಎಂದು ಗಡ್ಕರಿ ವಿವರಿಸುತ್ತಾರೆ.


ʼಹೊಸ ಭಾರತ್‌ ಸರಣಿʼ ನಿಯಮ ಆರಂಭ


ಇದಲ್ಲದೆ, 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಾಹನ ನೋಂದಣಿಗಾಗಿ ಹೊಸ ಭಾರತ್ ಸರಣಿಯನ್ನು (ಬಿಎಚ್-ಸರಣಿ) ಪ್ರಾರಂಭಿಸಿವೆ ಎಂದು ಸಾರಿಗೆ ಅಭಿವೃದ್ಧಿ ಮಂಡಳಿಯ ವಾರ್ಷಿಕ ಸಭೆಯಲ್ಲಿ ಬಹಿರಂಗಗೊಂಡಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಮರು-ನೋಂದಣಿ ಪ್ರಕ್ರಿಯೆಯಿಂದ ವಾಹನ ಮಾಲೀಕರಿಗೆ ವಿನಾಯಿತಿ ನೀಡುವ ಹೊಸ ವಾಹನ ನೋಂದಣಿ ಕ್ರಮವನ್ನು ಕೇಂದ್ರ ಸರ್ಕಾರವು ಸೂಚಿಸಿತ್ತು.


ಈ ಹಿಂದೆ ಭಾರತ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾರುಗಳಿಗೆ ಗರಿಷ್ಠ ವೇಗದ ಮಿತಿಯನ್ನು 100 ಕಿಮೀ / ಗಂ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ 120 ಕಿಮೀ / ಗಂ ಎಂದು ಸೂಚಿಸಿತ್ತು.ಅದರ ಜೊತೆಗೆ ರಾಜ್ಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ವೇಗದ ಮಿತಿಯನ್ನು ನಿರ್ಧರಿಸುವ ಅಂತಿಮ ಅಧಿಕಾರವನ್ನು ಹೊಂದಿದ್ದಾರೆ ಎಂದು ಕೂಡ ಹೇಳಿತ್ತು. ಇದರ ಪರಿಣಾಮವಾಗಿ, ವಿವಿಧ ರಾಜ್ಯಗಳ ನಡುವಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಮಿತಿಗಳು ಬದಲಾಗುತ್ತವೆ.


ಇದನ್ನೂ ಓದಿ: ಇಬ್ಬರು ಮಹಿಳೆಯರ ನರಬಲಿ; ಭೀಕರ ಕೃತ್ಯ ಎಸಗಿದ ದಂಪತಿ ಅರೆಸ್ಟ್


ಅದಲ್ಲದೆ, ಈ ನಿಯಮಗಳಿಂದ ಪ್ರಯಾಣಿಕರಿಗೆ ಸುರಕ್ಷಿತವಾಗಿ ಇವೆಯೇ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸಬೇಕು. 2030 ರ ವೇಳೆಗೆ ರಸ್ತೆ ಅಪಘಾತಗಳನ್ನು ಶೇಕಡಾ 50 ರಷ್ಟು ಕಡಿಮೆ ಮಾಡಲು ಭಾರತ ಸರ್ಕಾರ ಬದ್ಧವಾಗಿದೆ ಮತ್ತು 2025 ರ ವೇಳೆಗೆ ಆ ಕಾರ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ” ಎಂದು ಗಡ್ಕರಿ ಹೇಳಿದರು.

Published by:ವಾಸುದೇವ್ ಎಂ
First published: