ಈ ಕಂಪನಿಯ ಮಹಿಳಾ ಸಿಬ್ಬಂದಿ ಕನ್ನಡಕ ಹಾಕುವಂತಿಲ್ಲ!; ಕಾರಣ ಕೇಳಿದರೆ ಅಚ್ಚರಿ ಪಡುತ್ತೀರ...

ಇದೇರೀತಿ ಜಪಾನ್​ನಲ್ಲಿ ಹೈಹೀಲ್ಡ್​ ಚಪ್ಪಲಿಗಳನ್ನು ಧರಿಸುವ ವಿಚಾರದಲ್ಲಿಯೂ ಕಂಪನಿ ಮಹಿಳೆಯರ ಮೇಲೆ ನಿರ್ಬಂಧ ಹೇರಿತ್ತು. ಕೆಲಸದ ಸ್ಥಳಗಳಲ್ಲಿ ಹೈಹೀಲ್ಡ್​ ಧರಿಸಿ ಮಹಿಳೆಯರು ಕೆಲಸ ಮಾಡುವಂತಿಲ್ಲ ಎಂಬ ನಿಯಮ ಜಾರಿಗೆ ತಂದಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

news18-kannada
Updated:November 9, 2019, 3:24 PM IST
ಈ ಕಂಪನಿಯ ಮಹಿಳಾ ಸಿಬ್ಬಂದಿ ಕನ್ನಡಕ ಹಾಕುವಂತಿಲ್ಲ!; ಕಾರಣ ಕೇಳಿದರೆ ಅಚ್ಚರಿ ಪಡುತ್ತೀರ...
ಪ್ರಾತಿನಿಧಿಕ ಚಿತ್ರ
  • Share this:
ಕೆಲವೊಂದು ಖಾಸಗಿ ಕಂಪನಿಗಳಲ್ಲಿ ತನ್ನ ಉದ್ಯೋಗಿಗಳಿಗೆ ವಿಚಿತ್ರವಾದ ನಿಯಮಗಳನ್ನು ಹಾಕಲಾಗುತ್ತದೆ. ಅದರಿಂದ ಸಿಬ್ಬಂದಿಗಳಿಗೆ ಇರುಸುಮುರುಸಾಗುವ ಸಂದರ್ಭಗಳೂ ಇರುತ್ತವೆ. ಅದೇರೀತಿ ಜಪಾನ್​ನ ಕೆಲವು ಕಂಪನಿಗಳಲ್ಲಿ ಕೆಲಸ ಮಾಡಬೇಕೆಂದರೆ ಮಹಿಳೆಯರು ಕನ್ನಡಕ ಹಾಕಿಕೊಳ್ಳುವಂತಿಲ್ಲ. ಮಹಿಳಾ ಸಿಬ್ಬಂದಿಗಳು ಇಲ್ಲಿನ ಕಂಪನಿಯಲ್ಲಿ ಕನ್ನಡಕ ಧರಿಸುವುದು ಸಂಪೂರ್ಣ ನಿಷೇಧ.

ಇದೇನಿದು? ಹೀಗಾದರೆ ಕಣ್ಣಿನ ಸಮಸ್ಯೆ ಇರುವವರು ಏನು ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಇದೇ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ತಮ್ಮ ಕಂಪನಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅಲ್ಲದೆ, ಕಂಪನಿಗಳ ಈ ನಿಲುವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ವಿರೋಧ ವ್ಯಕ್ತವಾಗಿದೆ.

ಜಪಾನ್ ಮಾಧ್ಯಮದ ಪ್ರಕಾರ, ಅಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಕನ್ನಡಕ ಹಾಕುವಂತಿಲ್ಲ. ಕನ್ನಡಕ ಹಾಕಿಕೊಳ್ಳುವ ಸಿಬ್ಬಂದಿ ಜನರನ್ನು ಆಕರ್ಷಿಸುವಲ್ಲಿ ವಿಫಲರಾಗುವುದರಿಂದ ಈ ನಿಯಮ ಹೇರಲಾಗಿದೆ. ಇದರ ಜೊತೆಗೆ ಇನ್ನೂ ಅನೇಕ ಕಾರಣಗಳನ್ನೂ ಕಂಪನಿಗಳು ನೀಡಿವೆ ಎಂದು ಬಿಬಿಸಿ ವರದಿ ಮಾಡಿದೆ.

ಸುಂದರ ಯುವತಿಯ ಆಸೆ ಈಡೇರಿಸಿದ್ದಕ್ಕೆ ಸಸ್ಪೆಂಡ್ ಆದ ಪೈಲಟ್

ಮಹಿಳೆಯರನ್ನು ಕೇವಲ ಸೌಂದರ್ಯ ಅಥವಾ ನೋಡಲು ಆಕರ್ಷಕವಾಗಿರಬೇಕೆಂಬ ಉದ್ದೇಶಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ. ಹಾಗಿದ್ದರೆ, ಮಹಿಳೆಯರ ಪ್ರತಿಭೆಗೆ ಯಾವುದೇ ಬೆಲೆಯಿಲ್ಲವೇ? ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಜಪಾನ್​ನ ಜಾಲತಾಣಗಳಲ್ಲಿ #GlassesAreForBidden ಎಂಬ ಹ್ಯಾಶ್​ಟ್ಯಾಗ್​ನಡಿ ವಿರೋಧವೂ ವ್ಯಕ್ತವಾಗಿದೆ.ಇದೇರೀತಿ ಜಪಾನ್​ನಲ್ಲಿ ಹೈಹೀಲ್ಡ್​ ಚಪ್ಪಲಿಗಳನ್ನು ಧರಿಸುವ ವಿಚಾರದಲ್ಲಿಯೂ ಕಂಪನಿ ಮಹಿಳೆಯರ ಮೇಲೆ ನಿರ್ಬಂಧ ಹೇರಿತ್ತು. ಕೆಲಸದ ಸ್ಥಳಗಳಲ್ಲಿ ಹೈಹೀಲ್ಡ್​ ಧರಿಸಿ ಮಹಿಳೆಯರು ಕೆಲಸ ಮಾಡುವಂತಿಲ್ಲ ಎಂಬ ನಿಯಮ ಜಾರಿಗೆ ತಂದಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading