HOME » NEWS » National-international » SPECIALLY ABLED PERSONS SPIN THE BALL VIDEO VIRAL STG HG

ಒಂಟಿ ಕಾಲಿನಲ್ಲೇ ನಿಬ್ಬೆರಗಾಗುವಂತೆ ಫುಟ್‌ಬಾಲ್‌ ಆಟ: ವಿಶೇಷಚೇತನರ ವಿಡಿಯೋ ವೈರಲ್

ತಿಭೆಗೆ ಯಾವುದೇ ಮಿತಿ ಮತ್ತು ಯಾವುದೇ ಗಡಿಯಿಲ್ಲವೆಂಬುದನ್ನು ಈ ವಿಶೇಷಚೇತನ ವ್ಯಕ್ತಿಗಳು ಸಾಬೀತುಪಡಿಸಿದ್ದಾರೆ. ತಮ್ಮ ಫುಟ್‍ಬಾಲ್ ಆಡುವ ಕೌಶಲ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದಾರೆ.

news18-kannada
Updated:March 2, 2021, 2:30 PM IST
ಒಂಟಿ ಕಾಲಿನಲ್ಲೇ ನಿಬ್ಬೆರಗಾಗುವಂತೆ ಫುಟ್‌ಬಾಲ್‌ ಆಟ: ವಿಶೇಷಚೇತನರ ವಿಡಿಯೋ ವೈರಲ್
(video: Youtube)
  • Share this:
ಮನಸ್ಸಿದ್ದರೆ ಮಾರ್ಗ… ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ವ್ಯಕ್ತಿಗಳೇ ನಿದರ್ಶನ. ಒಂದು ಕಾಲು ಇಲ್ಲದಿದ್ದರೂ ಇವರು ಚೆನ್ನಾಗಿ ಫುಟ್‍ಬಾಲ್ ಆಡುತ್ತಾರೆ. ಇವರ ಫುಟ್‍ಬಾಲ್ ಆಡುವ ಕೌಶಲ್ಯಕ್ಕೆ ಕಾಲು ಇದ್ದವರೇ ನಾಚಿಕೊಳ್ಳಬೇಕು, ಆ ರೀತಿ ಇವರು ಫುಟ್‍ಬಾಲ್ ಆಡುತ್ತಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಹೌದು, ಪ್ರತಿಭೆಗೆ ಯಾವುದೇ ಮಿತಿ ಮತ್ತು ಯಾವುದೇ ಗಡಿಯಿಲ್ಲವೆಂಬುದನ್ನು ಈ ವಿಶೇಷಚೇತನ ವ್ಯಕ್ತಿಗಳು ಸಾಬೀತುಪಡಿಸಿದ್ದಾರೆ. ತಮ್ಮ ಫುಟ್‍ಬಾಲ್ ಆಡುವ ಕೌಶಲ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ವಿಡಿಯೋವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದು ತಿಳಿದುಬಂದಿಲ್ಲ.





ನಡುರಸ್ತೆಯಲ್ಲಿ ನಿಂತುಕೊಂಡಿರುವ ಇಬ್ಬರು ವಿಶೇಷ ಚೇತನ ವ್ಯಕ್ತಿಗಳು ಫುಟ್‍ಬಾಲ್ ಆಡುವ ಮೂಲಕ ನೆರೆದಿದ್ದ ಜನರ ಗಮನ ಸೆಳೆದಿದ್ದಾರೆ. ಅಂಗವೈಕಲ್ಯವಾಗಿರುವುದು ತಮ್ಮ ಕಾಲಿಗಷ್ಟೇ ಮನಸ್ಸಿಗಲ್ಲ ಎಂಬುದನ್ನು ತಮ್ಮ ಫುಟ್‍ಬಾಲ್ ಆಡುವ ಕೌಶಲ್ಯದಿಂದ ಇವರು ಸಾಬೀತುಪಡಿಸಿದ್ದಾರೆ. ಒಂಟಿ ಕಾಲಿನಲ್ಲಿ ನಿಂತು ಫುಟ್‍ಬಾಲ್ ತಿರುಗಿಸುತ್ತಾ ತಮ್ಮ ಕೌಶಲ್ಯ ಪ್ರದರ್ಶಿಸಿರುವ ಇವರ ಆಟಕ್ಕೆ ಸಾವಿರಾರು ಜನರು ಮನಸೋತಿದ್ದಾರೆ.
ಫುಟ್‍ಬಾಲ್ ಆಡುವ ವಿಶೇಷ ಕೌಶಲ್ಯವನ್ನು ಕರಗತ ಮಾಡಿಕೊಂಡಿರುವ ಇಬ್ಬರು ವಿಶೇಷಚೇತನರ ಈ ವಿಡಿಯೋ ಸದ್ಯ ಭಾರಿ ಸದ್ದು ಮಾಡುತ್ತಿದ್ದು, ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
Published by: Harshith AS
First published: March 2, 2021, 2:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories