ಸ್ನೇಹ (Friendship) ಎಂದರೆ ಈ ರೀತಿ ಇರ್ಬೇಕು ಎಂದು ಪ್ರಾಣ ಸ್ನೇಹಿತರು ಮಾಡಿ ತೋರಿಸಿದ್ದಾರೆ. ಕಳೆದ 30 ವರ್ಷಗಳ ಹಿಂದೆ ಒಂದೇ ತರಗತಿಯಲ್ಲಿ ಓದಿಕೊಂಡಿದ್ದ ಕ್ಲಾಸ್ಮೆಟ್ಸ್ (Classmates), ತಮ್ಮನ್ನು ಬಿಟ್ಟು ಹೋದ ಸ್ನೇಹಿತನ ಪುತ್ರಿಯ ವಿವಾಹ ಕಾರ್ಯಕ್ರಮವನ್ನು ಒಟ್ಟಿಗೆ ನಿಂತು ಮಾಡಿಕೊಟ್ಟಿದ್ದಾರೆ. ಹೌದು, ಇಂತಹ ಅಪರೂಪದ ಘಟನೆ ನಡೆದಿರೋದು ನೆರೆಯ ರಾಜ್ಯ ತೆಲಂಗಾಣದ (Telangana) ಖಮ್ಮಂ ಜಿಲ್ಲೆಯ ತಿರುಮಲಾಯಪಾಲೆಂ ಮಂಡಲದ ಬಿರೋಲು ಗ್ರಾಮದಲ್ಲಿ. ಇದೇ ಗ್ರಾಮದ ಜಡ್ಹೆಚ್ ಹೈಸ್ಕೂಲ್ನಲ್ಲಿ 1992-93ರ ಅವಧಿಯಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳು ತಮ್ಮ ಸ್ನೇಹ ಯಾವುದೇ ರಕ್ತ ಸಂಬಂಧಕ್ಕೂ ಕಡಿಮೆ ಇಲ್ಲ ಎಂದು ನಿರೂಪಿಸಿದ್ದಾರೆ.
ತಮ್ಮೊಂದಿಗೆ ಒಂದೇ ಶಾಲೆಯಲ್ಲಿ ಓದಿಕೊಂಡಿದ್ದ ಸ್ನೇಹಿತ ಜೊತೆಗಿರಲಿಲ್ಲ. ಅಲ್ಲದೇ ತಮಗೆ ಸಹಾಯ ಮಾಡಿ ಎಂದು ಆ ಕುಟುಂಬವು ಕೇಳಿರಲಿಲ್ಲ. ಅಸಲಿಗೆ ಇಂತಹ ಸ್ನೇಹಿತರಿದ್ದಾರೆ ಅಂತಲೂ ಆ ಕುಟುಂಬಸ್ಥರಿಗೆ ಗೊತ್ತಿರಲಿಲ್ಲ. ಆದರೂ ತಮ್ಮ ನಡುವೆ ಇಲ್ಲದ ಸ್ನೇಹಿತನಿಗಾಗಿ ಒಂದಾದ ಗೆಳೆಯರು, ಆ ಕುಟುಂಬಕ್ಕೆ ನೆರವು ನೀಡಿದ್ದಾರೆ. ಆ ಮೂಲಕ ತಮ್ಮ ಸ್ನೇಹಿತನ ಮೊದಲ ಮಗಳ ವಿವಾಹವನ್ನು ಒಟ್ಟಿಗೆ ಸೇರಿ ವಿಜೃಂಭಣೆಯಿಂದ ನೆರವೇರಿಸಿದ್ದಾರೆ.
ಸ್ನೇಹಿತರಲ್ಲ, ಆತ್ಮೀಯ ಬಂಧುಗಳು..
ತಮ್ಮ ಕ್ಲಾಸ್ಮೆಟ್ ಆಗಿದ್ದ ಕಂದುಕೂರಿ ಭಿಕ್ಷಮಾಚಾರಿ, ಆಕೆಯ ಪತ್ನಿ ನಾಗಮಣಿ ದಂಪತಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಸಾವನ್ನಪ್ಪಿದ್ದರು. ಮಕ್ಕಳು ತಾತ-ಅಜ್ಜಿಯೊಂದಿಗೆ ವಾಸಿಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು ಕೂಡ ಕಷ್ಪಪಟ್ಟು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಆದರೆ ಇದೇ ಕೆಲ ಸಮಯದ ಬಳಿಕ ಮನೆಗೆ ಆಧಾರವಾಗಿದ್ದ ಮೊಮ್ಮಗ ಸಾವನ್ನಪ್ಪಿದ್ದು, ವೃದ್ಧ ಪೋಷಕರಿಗೆ ಭಾರೀ ಸಂಕಟ ತಂದಿತ್ತು. ಆ ವೇಳೆ ಕುಟುಂಬದಲ್ಲಿ ಮದುವೆ ವಯಸ್ಸಿಗೆ ಬಂದಿದ್ದ ಇಬ್ಬರು ಮಕ್ಕಳು ಹಾಗೂ ವೃದ್ಧ ದಂಪತಿಗಳು ಮಾತ್ರ ಉಳಿದಿದ್ದರು. ಈ ವಿಚಾರ ತಿಳಿದುಕೊಂಡ ಭಿಕ್ಷಮಾಚಾರಿ ಕ್ಲಾಸ್ಮೇಟ್ಸ್, ಎಲ್ಲರೂ ಸೇರಿ ಸ್ನೇಹಿತನ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ.
ಇದನ್ನೂ ಓದಿ: Telangana: ಹಾಡಹಗಲೇ ಮನೆಗೆ ನುಗ್ಗಿ 100 ಮಂದಿಯಿಂದ ಯುವತಿಯ ಕಿಡ್ನ್ಯಾಪ್, ಶಾಕಿಂಗ್ ವಿಡಿಯೋ ವೈರಲ್
ಸ್ನೇಹ ಎಂದರೇ ಇದೇ ಅಲ್ವಾ?
ಭಿಕ್ಷಮಾಚಾರಿ ಮೊದಲ ಪುತ್ರಿಯಾದ ಮಹೇಶ್ವರಿ ಅವರಿಗೆ ಒಳ್ಳೆಯ ಹುಡುಗನನ್ನು ನೋಡಿದ ಸ್ನೇಹಿತ ಬಳಗ, ತಾವೇ ಮುಂದೆ ನಿಂತು ಮದುವೆ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ. ತಮ್ಮ ಕುಟುಂಬದ ಬಂಧುಗಳಂತೆ ಬಂತು ಮದುವೆ ಕಾರ್ಯಗಳನ್ನ ನಡೆಸಿಕೊಟ್ಟ ತಂದೆಯ ಸ್ನೇಹಿತರಿಗೆ ಮಹೇಶ್ವರಿ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Pawan Kalyan: ವಿವಾದಕ್ಕೆ ಕಾರಣವಾಯ್ತು ಚುನಾವಣಾ ಪ್ರಚಾರದ ವಾಹನ ಬಣ್ಣ; ಪವನ್ ಕಲ್ಯಾಣ್ ಹೇಳಿದ್ದೇನು?
ಸ್ನೇಹಿತ ಕುಟುಂಬಕ್ಕೆ ಧೈರ್ಯ ತುಂಬಿ, ಜೊತೆಗೆ ನಿಂತರು
ಡಿಸೆಂಬರ್ 7ರಂದು ಗ್ರಾಮದಲ್ಲಿ ವಿವಾಹ ಕಾರ್ಯಕ್ರಮಗಳು ಯಶ್ವಸಿಯಾಗಿ ನಡೆದಿದ್ದು, ಗ್ರಾಮಕ್ಕೆ ಆಗಮಿಸಿದ್ದ ಎಲ್ಲಾ ಸ್ನೇಹಿತರು ನವ ದಂಪತಿಗೆ ಶುಭ ಕೋರಿದ್ದಾರೆ. ಅಲ್ಲದೇ ತಂದೆ-ತಾಯಿ ಇಲ್ಲದ ತಮ್ಮ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತ ಸ್ನೇಹಿತರಿಗೆ ಧನ್ಯವಾದ ತಿಳಿಸಿರೋ ಹೆಣ್ಣು ಮಕ್ಕಳು, ಅವರೊಂದಿಗೆ ಫೋಟೋ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಸುಮಾರು 30 ವರ್ಷಗಳ ಹಿಂದಿನ ಸ್ನೇಹಿತನನ್ನು ನೆನಪು ಮಾಡಿಕೊಂಡು, ಆತನ ಇಲ್ಲದಿದ್ದರೂ ಕೂಡ ಕುಟುಂಬಕ್ಕೆ ಆಸರೆಯಾಗಿ ನಿಂತ ಸ್ನೇಹಿತರ ಕಾರ್ಯವನ್ನು ಗ್ರಾಮಸ್ಥರು ಮೆಚ್ಚುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ