ನಾಳೆ 2ನೇ ಹಂತದ ಮತದಾನ; ನಕ್ಸಲ್, ಉಗ್ರರ ದಾಳಿ ಭೀತಿ; ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿಭದ್ರತೆ, ಪೊಲೀಸ್​​ ಕಣ್ಗಾವಲು!

ಮೊದಲ ಹಂತದ ಮತದಾನದ ವೇಳೆ ಆಂಧ್ರಪ್ರದೇಶದಲ್ಲಿ ಹಿಂಸಾಚಾರ ಸಂಭವಿಸಿದ್ದು, ಟಿಡಿಪಿ ಮತ್ತು ವೈಎಸ್​​ಆರ್​​ ಕಾಂಗ್ರೆಸ್​​ಗೆ ಸೇರಿದ ಇಬ್ಬರು ಅಮಾಯಕ ಕಾರ್ಯಕರ್ತರು ಬಲಿಯಾಗಿದ್ದರು. ಇದರಿಂದ ಎರಡನೇ ಹಂತದ ಮತದಾನ ವೇಳೆ ಹೀಗೆ ನಡೆಯಬಾರದು ಎಂದು ಮುನ್ನೆಚ್ಚರಿಕೆ ವಹಿಸಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

Ganesh Nachikethu | news18
Updated:April 17, 2019, 12:50 PM IST
ನಾಳೆ 2ನೇ ಹಂತದ ಮತದಾನ; ನಕ್ಸಲ್, ಉಗ್ರರ ದಾಳಿ ಭೀತಿ; ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿಭದ್ರತೆ, ಪೊಲೀಸ್​​ ಕಣ್ಗಾವಲು!
ಸಾಂದರ್ಭಿಕ ಚಿತ್ರ
  • News18
  • Last Updated: April 17, 2019, 12:50 PM IST
  • Share this:
ಬೆಂಗಳೂರು(ಏ.17): ಕೇಂದ್ರದಲ್ಲಿ ಗದ್ದುಗೆ ಹಿಡಿಯುವ ಸಲುವಾಗಿ ಲೋಕಸಭಾ ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಭಾರೀ ಸರ್ಕಸ್​​ ನಡೆಸುತ್ತಿವೆ. ದೇಶಾದ್ಯಂತ ನಾಳೆ 2ನೇ ಹಂತದ ಮತದಾನ ನಡೆಯಲಿದೆ. ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 97 ಕ್ಷೇತ್ರಗಳಲ್ಲಿ ಗುರುವಾರ ಮತದಾನಕ್ಕೆ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ದತೆ ನಡೆಸಿಕೊಂಡಿದೆ. ಇಲ್ಲಿನ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಕ್ಸಲ್​​ ಮತ್ತು ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ. ಹಾಗಾಗಿ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್​​​​​​ ನಡುವೆ ಚುನಾವಣಾ ಮತದಾನ ನಡೆಸಲು ಆಯೋಗ ಮುಂದಾಗಿದೆ.

​ನಕ್ಸಲ್​​ ಮತ್ತು ಉಗ್ರರು ದೇಶದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಮತದಾನ ನಡೆಯುವ ಪ್ರದೇಶಗಳಲ್ಲಿ ಆಯೋಗ ಹದ್ದಿನ ಕಣ್ಣಿನ ನಿಗಾವಹಿಸಿ ಅಭೂತಪೂರ್ವ ಭದ್ರತೆ ಆಯೋಜಿಸಿದೆ. ನಿನ್ನೆ ಸಂಜೆಯೇ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮತದಾರರ ಸೆಳೆಯಲು ರಾಜಕೀಯ ಪಕ್ಷಗಳ ಘಟಾನುಘಟಿಗಳು ಮತಯಾಚನೆ ಮಾಡುತ್ತಿದ್ದಾರೆ.

ಇನ್ನು ತಮಿಳುನಾಡಿನಲ್ಲಿ ಎಲ್ಲಾ 39 ಲೋಕಸಭಾ ಕ್ಷೇತ್ರಗಳು, ಕರ್ನಾಟಕದ 14, ಮಹಾರಾಷ್ಟ್ರದ 10, ಉತ್ತರಪ್ರದೇಶದ 8, ಅಸ್ಸಾಂ, ಬಿಹಾರ ಮತ್ತು ಒರಿಸ್ಸಾದ ತಲಾ 5, ಛತ್ತೀಸ್‍ಗಢ ಮತ್ತು ಪಶ್ಚಿಮ ಬಂಗಾಳದ ತಲಾ 3, ಜಮ್ಮು-ಕಾಶ್ಮೀರದ 2, ಮಣಿಪುರ, ತ್ರಿಪುರ ಹಾಗೂ ಪುದುಚೇರಿಯ ತಲಾ ಒಂದು ಕ್ಷೇತ್ರಗಳಲ್ಲಿ ನಾಳೆ ಎರಡನೇ ಹಂತದ ಮತದಾನ ನಡೆಯಲಿದೆ. ಉತ್ತರಪ್ರದೇಶದಲ್ಲಿ ಮಾತ್ರ 8 ಸ್ಥಾನಗಳಿಗೆ ಒಟ್ಟು 85 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನೂ ಕಸರತ್ತು ನಡೆಸುತ್ತಿವೆ. ಹಾಗಾಗಿ ದೇಶದ 97 ಲೋಕಸಭಾ ಕ್ಷೇತ್ರಗಳಲ್ಲೂ ಅಬ್ಬರದ ಪ್ರಚಾರ ನಡೆಸಲಾಗಿದೆ.

ಇದನ್ನೂ ಓದಿ: ಐಟಿ ಕಚೇರಿ ಮುಂದೆ ಪ್ರತಿಭಟನೆ; ಸಿಎಂ ಎಚ್​​ಡಿಕೆ, ಸಿದ್ದರಾಮಯ್ಯ ಸೇರಿ ದೋಸ್ತಿ ನಾಯಕರ ವಿರುದ್ಧ ಪ್ರಕರಣ ದಾಖಲು!

ಮೊದಲ ಹಂತದ ಮತದಾನದ ವೇಳೆ ಆಂಧ್ರಪ್ರದೇಶದಲ್ಲಿ ಹಿಂಸಾಚಾರ ಸಂಭವಿಸಿದ್ದು, ಟಿಡಿಪಿ ಮತ್ತು ವೈಎಸ್​​ಆರ್​​ ಕಾಂಗ್ರೆಸ್​​ಗೆ ಸೇರಿದ ಇಬ್ಬರು ಅಮಾಯಕ ಕಾರ್ಯಕರ್ತರು ಬಲಿಯಾಗಿದ್ದರು. ಇನ್ನೂ ಕೆಲವೆಡೆ ನಡೆದ ಗಲಾಟೆಯಲ್ಲಿ ಅನೇಕರು ಗಾಯಗೊಂಡಿದ್ದರು. ಇದರಿಂದ ಎರಡನೇ ಹಂತದ ಮತದಾನ ವೇಳೆ ಹೀಗೆ ನಡೆಯಬಾರದು ಎಂದು ಮುನ್ನೆಚ್ಚರಿಕೆ ವಹಿಸಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ: ನಾಳೆ ಕರ್ನಾಟಕ ಮೊದಲ ಹಂತದ ಮತದಾನ; ಬಹಿರಂಗ ಪ್ರಚಾರ ಅಂತ್ಯ; ಇಂದು ಮನೆಮನೆ ಪ್ರಚಾರಕ್ಕೆ ಅವಕಾಶ!

ಅದರಲ್ಲಿಯೂ ನಕ್ಸಲ್​​​ ಪೀಡಿತ ಪ್ರದೇಶಗಳಾದ ಛತ್ತೀಸ್‍ಗಢ, ಬಿಹಾರ ಮತ್ತು ಒರಿಸ್ಸಾದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಮಣಿಪುರ ಮತ್ತು ತ್ರಿಪುರ ರಾಜ್ಯಗಳಲ್ಲಿ ಉಗ್ರಗಾಮಿಗಳ ದಾಳಿ ಆತಂಕ ಮೂಡಿದೆ. ಹಾಗಾಗಿ ಇಲ್ಲಿಯೂ ಮುನ್ನೆಚ್ಚರಿಕೆ ಕ್ರಮವಾಗಿ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.-------------
First published: April 17, 2019, 12:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading