ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ವಿಶೇಷ ಪೊಲೀಸ್ ಮಹಿಳಾ​ ಅಧಿಕಾರಿ ಸಾವು

ಎಸ್​ಪಿಎ ಖುಷ್ಬು ಜಾನ್​ ಶೋಪಿಯಾನ್ ಜಿಲ್ಲೆಯ ವೆಹಿಲ್ ಹಳ್ಳಿಯಲ್ಲಿ ತಮ್ಮ ಮನೆಯ ಹೊರಗಡೆ ನಿಂತಿದ್ದಾಗ ಉಗ್ರರು ನಡೆಸಿದ ಗುಂಡಿನ ದಾಳಿಗೆ ಮೃತಪಟ್ಟಿದ್ದಾರೆ.

HR Ramesh | news18
Updated:March 16, 2019, 4:28 PM IST
ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ವಿಶೇಷ ಪೊಲೀಸ್ ಮಹಿಳಾ​ ಅಧಿಕಾರಿ ಸಾವು
ಸಾಂದರ್ಭಿಕ ಚಿತ್ರ
HR Ramesh | news18
Updated: March 16, 2019, 4:28 PM IST
ಶೋಪಿಯಾನ್: ಜಮ್ಮು-ಕಾಶ್ಮೀರದ ಶೋಪಿಯಾನ್​ ಜಿಲ್ಲೆಯಲ್ಲಿ ಇಂದು ಉಗ್ರರ ಗುಂಡಿಗೆ ವಿಶೇಷ ಪೊಲೀಸ್​ ಮಹಿಳಾ ಅಧಿಕಾರಿ ಹುತಾತ್ಮರಾಗಿದ್ದಾರೆ.

ಎಸ್​ಪಿಎ ಖುಷ್ಬು ಜಾನ್​ ಶೋಪಿಯಾನ್ ಜಿಲ್ಲೆಯ ವೆಹಿಲ್ ಹಳ್ಳಿಯಲ್ಲಿ ತಮ್ಮ ಮನೆಯ ಹೊರಗಡೆ ನಿಂತಿದ್ದಾಗ ಉಗ್ರರು ನಡೆಸಿದ ಗುಂಡಿನ ದಾಳಿಗೆ ಮೃತಪಟ್ಟಿದ್ದಾರೆ.

ಮಧ್ಯಾಹ್ನ ಸುಮಾರು 2.40ರ ವೇಳೆಯಲ್ಲಿ ಅಗಂತುಕನೊಬ್ಬ ಮಹಿಳಾ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಧಿಕಾರಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿ ಕಳೆದ ಮೂರು ದಿನದಲ್ಲಿ ನಡೆದ ನಾಲ್ಕನೇ ದಾಳಿ ಇದಾಗಿದೆ.

ಇದನ್ನು ಓದಿ: ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಬಗ್ಗೆ ಆಯೋಗ ಮರುಚರ್ಚೆ!

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...