ಅಕ್ರಮ ಹಣ ವರ್ಗಾವಣೆ ಕೇಸ್​​: ಇಡಿ ಜಪ್ತಿ ಮಾಡಿದ ವಿಜಯ್ ಮಲ್ಯ ಆಸ್ತಿ ಹರಾಜಿಗೆ ಮುಂಬೈ ಕೋರ್ಟ್​ ಅನುಮತಿ ​​

2018ರ ಆಗಸ್ಟ್​ ತಿಂಗಳಲ್ಲಿ ಕೇಂದ್ರ ಸರಕಾರವು ತಲೆ ಮರೆಸಿಕೊಂಡ ಆರ್ಥಿಕ ಅಪರಾಧಿಗಳ ಕಾಯ್ದೆ (ಫುಜಿಟಿವ್ ಎಕನಾಮಿಕ್ ಅಫೆಂಡರ್ಸ್ ಆ್ಯಕ್ಟ್) ರೂಪಿಸಿತ್ತು. ಇದರ ಆಧಾರದ ಮೇಲೆ ಮುಂಬೈನ ವಿಶೇಷ ನ್ಯಾಯಾಲಯವೊಂದು ಕಳೆದ ವರ್ಷ ಜನವರಿ ತಿಂಗಳಲ್ಲಿ ಮಲ್ಯ ಅವರನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸಿತು.

news18-kannada
Updated:January 1, 2020, 4:53 PM IST
ಅಕ್ರಮ ಹಣ ವರ್ಗಾವಣೆ ಕೇಸ್​​: ಇಡಿ ಜಪ್ತಿ ಮಾಡಿದ ವಿಜಯ್ ಮಲ್ಯ ಆಸ್ತಿ ಹರಾಜಿಗೆ ಮುಂಬೈ ಕೋರ್ಟ್​ ಅನುಮತಿ ​​
ವಿಜಯ್ ಮಲ್ಯ
 • Share this:
ಬೆಂಗಳೂರು(ಜ.01): ಬ್ಯಾಂಕುಗಳಿಗೆ ಸಾಲ ಮರುಪಾವತಿಸದೆ ದೇಶದಿಂದ ಕಾಲ್ಕಿತ್ತಿದ್ದ ಮದ್ಯದ ದೊರೆ ವಿಜಯ್​ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ವಶಕ್ಕೆ ಪಡೆದ ವಿಜಯ್​​ ಮಲ್ಯಗೆ ಸೇರಿದ ಆಸ್ತಿ ಹರಾಜಿಗೆ ಮುಂಬೈ ಮನಿ ಲಾಂಡರಿಂಗ್ ತಡೆ ಕಾಯ್ದೆ(ಪಿಎಂಎಲ್‌ಎ) ಕೋರ್ಟ್​ ಅನುಮತಿ ನೀಡಿದೆ. ಜನವರಿ 18ನೇ ತಾರೀಕಿನ ಬಳಿಕ ಮಲ್ಯಾ ಆಸ್ತಿ ಹರಾಜಿಗೆ ಬ್ಯಾಂಕುಗಳಿಗೆ ಅನುಮತಿ ನೀಡಿದ ಕೋರ್ಟ್, ತನ್ನ ತೀರ್ಪನ್ನು ಬೇಕಾದರೆ ಮುಂಬೈ ಹೈಕೋರ್ಟ್​​ನಲ್ಲಿ ಪ್ರಶ್ನಿಸಬಹುದು ಎಂದು ಹೇಳಿದೆ. 

2018ರ ಆಗಸ್ಟ್​ ತಿಂಗಳಲ್ಲಿ ಕೇಂದ್ರ ಸರಕಾರವು ತಲೆ ಮರೆಸಿಕೊಂಡ ಆರ್ಥಿಕ ಅಪರಾಧಿಗಳ ಕಾಯ್ದೆ (ಫುಜಿಟಿವ್ ಎಕನಾಮಿಕ್ ಅಫೆಂಡರ್ಸ್ ಆ್ಯಕ್ಟ್) ರೂಪಿಸಿತ್ತು. ಇದರ ಆಧಾರದ ಮೇಲೆ ಮುಂಬೈನ ವಿಶೇಷ ನ್ಯಾಯಾಲಯವೊಂದು ಕಳೆದ ವರ್ಷ ಜನವರಿ ತಿಂಗಳಲ್ಲಿ ಮಲ್ಯ ಅವರನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸಿತು.

ಇದಾದ ನಂತರ ವಿಜಯ್ ಮಲ್ಯ ಅವರು ಬಾಂಬೆ ಹೈ ಕೋರ್ಟ್​ನಲ್ಲಿ ಎರಡು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದರು. ಒಂದು ಅರ್ಜಿಯಲ್ಲಿ ಅವರು ಕಾಯ್ದೆಯ ಕೆಲ ಕಾನೂನುಗಳನ್ನು ಪ್ರಶ್ನಿಸಿದರು. ತನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮವನ್ನೂ ಅವರು ಪ್ರಶ್ನಿಸಿದರು. ಮತ್ತೊಂದು ಅರ್ಜಿಯಲ್ಲಿ ಅವರು ತನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸಿದ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಗಡಿ ವಿವಾದದ ಬೆನ್ನಲ್ಲೇ ಭುಗಿಲೆದ್ದ ಉ.ಕ ಪ್ರತ್ಯೇಕ ರಾಜ್ಯದ ಕೂಗು: ಬೀದಿಗಿಳಿದ ಹೋರಾಟಗಾರರು

ಮಲ್ಯಾ ವಿರುದ್ಧ 9,000 ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡ ಮತ್ತು ಸಾಲವನ್ನು ಬೇರೆ ಕೆಲಸಕ್ಕೆ ಉಪಯೋಗಿಸಿದ ಆರೋಪಗಳಿವೆ. ಜತೆಗೆ ಲೇವಾದೇವಿ ಪ್ರಕರಣವೂ ದಾಖಲಾಗಿದೆ. 2016ರ ಮಾರ್ಚ್​ ತಿಂಗಳಲ್ಲಿ ಸಿಬಿಐ ಲುಕ್​ ಔಟ್​ ಸರ್ಕ್ಯುಲಾರ್​ ಹೊರಡಿಸಿದ ನಂತರ ಇಂಗ್ಲೆಂಡ್​ಗೆ ಮಲ್ಯಾ ಪರಾರಿಯಾಗಿದ್ದರು. ಅವರು ಭಾರತದಿಂದ ತಪ್ಪಿಸಿಕೊಂಡು ಹೋಗಲು ಬಿಜೆಪಿ ಪ್ರಭಾವಿ ನಾಯಕರ ಹಸ್ತಕ್ಷೇಪವೇ ಕಾರಣ ಎಂಬ ಆರೋಪಗಳನ್ನು ವಿರೋಧ ಪಕ್ಷ ಕಾಂಗ್ರೆಸ್​ ಮಾಡುತ್ತಲೇ ಬರುತ್ತಿದೆ.

ಮಲ್ಯಾ ಯಾವ ಬ್ಯಾಂಕ್‌ಗೆ ಎಷ್ಟು ನೀಡಬೇಕು...?
 • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ - 2,491 ಕೋಟಿ ರೂ.

 • ಪಂಜಾಬ್ ನ್ಯಾಶನಲ್ ಬ್ಯಾಂಕ್ - 1,191 ಕೋಟಿ ರೂ.

 • ಐಡಿಬಿಐ ಬ್ಯಾಂಕ್ - 1,301 ಕೋಟಿ ರೂ.

 • ಬ್ಯಾಂಕ್ ಆಫ್ ಇಂಡಿಯಾ - 650 ಕೋಟಿ ರೂ.

 • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ - 672 ಕೋಟಿ ರೂ.

 • ಯುಸಿಒ ಬ್ಯಾಂಕ್ - 517 ಕೋಟಿ ರೂ.

 • ಕಾರ್ಪೊರೇಶನ್ ಬ್ಯಾಂಕ್ - 440 ಕೋಟಿ ರೂ.

 • ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ - 150 ಕೋಟಿ ರೂ.

 • ಇಂಡಿಯನ್ ಓವರ್‌ಸೀಸ್ ಬ್ಯಾಂಕ್ - 228 ಕೋಟಿ ರೂ.

 • ಫೆಡರಲ್ ಬ್ಯಾಂಕ್ - 148 ಕೋಟಿ ರೂ.

 • ಪಂಜಾಬ್ & ಸಿಂದ್ ಬ್ಯಾಂಕ್ - 91 ಕೋಟಿ ರೂ.

 • ಆಕ್ಸಿಸ್ ಬ್ಯಾಂಕ್ - 81 ಕೋಟಿ ರೂ.

 • ಬ್ಯಾಂಕ್ ಆಫ್ ಬರೋಡಾ - 550 ಕೋಟಿ ರೂ.


First published:January 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading