ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ಇಸ್ರೊ (ISRO) ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸದ್ಯ ಸ್ಪೇಸ್ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ಗಮನ ಸೆಳೆದಿರುವ ಇಸ್ರೊ ಈ ವರ್ಷ ಆರಂಭವಾದ ಮೊದಲ ಐದು ತಿಂಗಳವರೆಗೆ ಹಲವು ಘರ್ಷಣೆಗಳುಂಟಾಗಿ ಗಗನದಲ್ಲಿರುವ ಭಾರತೀಯ ಸ್ಪೇಸ್ (Indian Space) ಸಂಪತ್ತಿಗೆ ಆಪತ್ತು ತಂದೊಡ್ಡಬಹುದಾಗಿದ್ದ ಕನಿಷ್ಠ ಹತ್ತು ಅಪಘಾತಗಳನ್ನು ತಪ್ಪಿಸಿದೆ. ಹೇಗೆ ಭೂಮಿಯಲ್ಲಿ ತ್ಯಾಜ್ಯವಿರುತ್ತದೋ ಅದೇ ರೀತಿಯಲ್ಲಿ ಆಗಸದಲ್ಲೂ ತ್ಯಾಜ್ಯ ನೋಡಬಹುದಾಗಿದ್ದು ಅದನ್ನು ಸ್ಪೇಸ್ ಡೆಬ್ರಿಸ್ (Space Debris) ಎಂದು ಕರೆಯುತ್ತಾರೆ. ಇದು ಛಿದ್ರವಾದ ಕೃತಕ ಉಪಗ್ರಹಗಳ ಭಾಗಗಳಿರಬಹುದು ಅಥವಾ ಇತರೆ ಕಣಗಳಿರಬಹುದು.
ಈ ವರ್ಷದಲ್ಲಿ ಹತ್ತು ಅಪಘಾತಗಳನ್ನು ತಪ್ಪಿಸಿದ ಇಸ್ರೋ
ಮೂಲ ಒಂದರ ಪ್ರಕಾರ, ಸದ್ಯ ಇಸ್ರೋ ಈ ವರ್ಷದಲ್ಲಿ ಇಲ್ಲಿಯವರೆಗೂ ಹತ್ತು ಅಪಘಾತಗಳನ್ನು ತಪ್ಪಿಸಿದ್ದು ಅವು ಎಲ್ಲ ಲೋ ಆರ್ಬಿಟ್ ನಲ್ಲಿ ಸುತ್ತುತ್ತಿದ್ದವು ಎನ್ನಲಾಗಿದೆ. ಕಳೆದ ವರ್ಷ 2021 ರಲ್ಲಿ ಇಸ್ರೊದ ಡೈರಕ್ಟರೇಟ್ ಆಫ್ ಸ್ಪೇಸ್ ಸಿಚುವೇಷನಲ್ ಆಂಡ್ ಮ್ಯಾನೇಜ್ಮೆಂಟ್ (DSSAM) ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿತು. ಅಲ್ಲಿಂದ ಇಲ್ಲಿಯವರೆಗೆ ಇಸ್ರೊ ಒಟ್ಟು 20 ಘರ್ಷಣೆ ತಪ್ಪಿಸುವ ತಂತ್ರಗಳನ್ನು ನಡೆಸಿದ್ದು ಅದರಲ್ಲಿ 15 ಕ್ರಿಯೆಗಳು ಲಿಯೋನಲ್ಲಿ ನಡೆದಿದ್ದರೆ 5 ಜಿಯೋ ಸ್ಟೆಷನರಿ ಆರ್ಬಿಟ್ ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಆಗಸದಲ್ಲಿ ಘರ್ಷಣೆಯಾಗುವಿಕೆಯನ್ನು ತಪ್ಪಿಸಲು ಕ್ಯಾಮ್ ಕ್ರಿಯೆ
ಕ್ಯಾಮ್ (CAM) ಅಂದರೆ ಕೊಲಿಜನ್ ಅವಾಯ್ಡನ್ಸ್ ಮ್ಯಾನುವರ್, ಎಂಬುದು ಒಂದು ವಿಧಾನ ಅಥವಾ ತಂತ್ರವಾಗಿದ್ದು ಆಗಸದಲ್ಲಿ ಘರ್ಷಣೆಯಾಗುವಿಕೆಯನ್ನು ತಪ್ಪಿಸಲು ಈ ಕ್ರಿಯೆಯನ್ನು ನಡೆಸಲಾಗುತ್ತದೆ. ಹಾಗೆ ನೋಡಿದರೆ ಈ ಕ್ಯಾಮ್ ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೆ ಬಂದಿದ್ದು 2015 ರಿಂದ ಇಲ್ಲಿಯವರೆಗೆ 70 ಕ್ಯಾಮ್ ಗಳನ್ನು ನಡೆಸಲಾಗಿದೆ. 2021 ಹಾಗೂ 2022 ಈ ಎರಡು ವರ್ಷಗಳಲ್ಲೇ ಅತಿ ಹೆಚ್ಚು ಅಂದರೆ 70 ರಲ್ಲಿ 31 ಕ್ಯಾಮ್ ಗಳನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ.
ತನ್ನ ಕಾರ್ಯಕ್ರಮಗಳ ಒಂದು ಭಾಗವಾಗಿರುವ ಸ್ಪೇಸ್ ಸಿಚುವೇಷನಲ್ ಅವೇರ್ನೆಸ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿರಿಸಲು ನೇತ್ರಾ ಯೋಜನೆಯನ್ನು ಭಾರತವು ಅನುಷ್ಠಾನಗೊಳಿಸಿದೆ. ಈ ಯೋಜನೆ ಒಂದೊಮ್ಮೆ ಕಾರ್ಯಾರಂಭವಾದ ಮೇಲೆ ಭಾರತದ ಆಗಸದಲ್ಲಿರುವ ಸಂಪತ್ತುಗಳಿಗೆ ಯಾವುದಾದರೂ ಆಗಸ ತ್ಯಾಜ್ಯದಿಂದ ಅಪಾಯ ಉಂಟಾಗಬಹುದಾದ ಸಂದರ್ಭದಲ್ಲಿ ವ್ಯವಸ್ಥೆಯು ಮುಂಚಿತವಾಗಿಯೇ ಎಚ್ಚರಿಕೆಯನ್ನು ನೀಡುತ್ತದೆ.
ಏನಿದು ನೇತ್ರಾ ಯೋಜನೆ?
ಇಸ್ರೊದ ಪ್ರಕಾರ, "ನೇತ್ರಾ ಯೋಜನೆಯು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳ ಆಧಾರದ ಮೇಲೆ ಸಕ್ಷಮವಾಗಿ ಕಾರ್ಯ ನಿರ್ವಹಿಸಲಿದ್ದು ಸ್ಪೇಸ್ ಡೆಬ್ರಿಸ್ ಅನ್ನು ದಕ್ಷವಾಗಿ ಗುರುತಿಸಿ, ನಿಗಾ ಇಡುತ್ತ ಆ ಬಗ್ಗೆ ಸಂದೇಶ ನೀಡಲಿದೆ. ಈ ಯೋಜನೆಯ ಅಡಿಯಲ್ಲಿ ಇಸ್ರೊ ತನ್ನದೆ ಆದ ನಿಯಂತ್ರಣ ಕೊಠಡಿ, ದೂರದರ್ಶಕ, ಮಲ್ಟಿ-ಆಬ್ಜೆಕ್ಟ್ ಟ್ರ್ಯಾಕ್ ಮಾಡುವ ರಾಡಾರ್ ಗಳನ್ನು ಹೊಂದಲಿದೆ" ಎನ್ನಲಾಗಿದೆ.
ಇದನ್ನೂ ಓದಿ: Marriage Age: ಬಾಲ್ಯ ವಿವಾಹ ಎತ್ತಿ ಹಿಡಿದ ಕೋರ್ಟ್! ಮುಸ್ಲಿಂ ಯುವತಿಗೆ 16 ವರ್ಷಕ್ಕೆ ಮದುವೆಗೆ ಅನುಮತಿ
ಈಗಾಗಲೇ ಈ ಯೋಜನೆಯ ಅಡಿಯಲ್ಲಿ ಲಡಾಖ್ ಪ್ರಾಂತದಲ್ಲಿರುವ ಹಾನ್ಲೆ ಎಂಬಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಸ್ಟ್ರೋಫಿಸಿಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ನೇತ್ರಾ ಆಪ್ಟಿಕಲ್ ಟೆಲಿಸ್ಕೋಪ್ ಅನ್ನು ಸ್ಥಾಪಿಸಲಾಗುತ್ತಿದೆ. ಈ ದೂರದರ್ಶಕವು ಆಗಸದಲ್ಲಿ 40 ಸೆ.ಮೀ ಗಾತ್ರದಂತಹ ತ್ಯಾಜ್ಯವನ್ನೂ ಸಹ ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ.
Got caught with an emergency yesterday. Hence, the delay.
Here we go: During Jan-may 2022 @isro performed at least 10 collision avoidance manoeuvres (CAMs), reiterating the problem #space debris pose to active, operational assets. 1/n#Thread #Update #Debris | Pic: @esa https://t.co/ptResB1ajr pic.twitter.com/6CDCXrKMhC
— Chethan Kumar (@Chethan_Dash) June 19, 2022
ಅಲ್ಲದೆ, ಈ ಟೆಲಿಸ್ಕೋಪ್ ಸ್ಥಾಪಿಸಲು ಅವಶ್ಯಕವಾಗಿರುವ ಟೊಪೋಗ್ರಾಫಿಕಲ್ ಸರ್ವೆ, ಸೈಟ್ ಲವೆಲ್ ಮಾಡುವುದು, ವಿನ್ಯಾಸ, ರಸ್ತೆಗಳ ನಿರ್ಮಾಣ ಮುಂತಾದ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು ಈ ಟಲಿಸ್ಕೋಪ್ ಅನ್ನು ನಿಯಂತ್ರಿಸಲಿರುವ ಡೈರಕ್ಟರೇಟ್ ಆಫ್ ಸ್ಪೇಸ್ ಸಿಚುವೇಷನಲ್ ಆಂಡ್ ಮ್ಯಾನೇಜ್ಮೆಂಟ್ ದೂರದರ್ಶಕವನ್ನು ಪಡೆಯುವ ಕೊನೆಯ ಹಂತದ ಪ್ರಕ್ರಿಯೆಯಲ್ಲಿದೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರು "ನಾವು ಆರು ತಿಂಗಳ ಹಿಂದೆಯೇ ಇದಕ್ಕಾಗಿ ಟೆಂಡರ್ ಕರೆದಿದ್ದೆವು. ಈಗ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡು ಕಾರ್ಯಾಚರಣೆ ನಡೆಸುವಂತಾಗಲು ಇನ್ನು ಹಲವು ತಿಂಗಳುಗಳು ಬೇಕಾಗಬಹುದು" ಎಂದು ಹೇಳಿದ್ದಾರೆ.
ಭಾರತದ ಎಲ್ಲ ಎಸ್ ಎಸ್ ಎ ಚಟುವಟಿಕೆಗಳ ದೊಡ್ಡ ಹಬ್
ಆರ್ಬಿಟ್ ನಲ್ಲಿ ಪತ್ತೆಹಚ್ಚುವಿಕೆ, ಗ್ರಹಣ ದತ್ತಾಂಶಗಳ ಸಂಸ್ಕರಣ ಮಾಡುವುದು ಸೇರಿದಂತೆ ಹಲವು ಮಲ್ಟಿ ಟಾಸ್ಕಿಂಗ್ ಕಾರ್ಯಾಚರಣೆಯ ಕೆಲಸಗಳು ಪ್ರಾಥಮಿಕ ಆವೃತ್ತಿಯಲ್ಲಿದ್ದು ಕಂಪ್ಯೂಟೆಷನಲ್ ನೆಟ್ವರ್ಕಿಂಗ್ ಸಹ ಪ್ರಗತಿಯಲ್ಲಿರುವುದಾಗಿ ಹೇಳಿರುವ ಇಸ್ರೊ ಅಧಿಕಾರಿಯು ಈ ಕೇಂದ್ರವು ಭಾರತದ ಎಲ್ಲ ಎಸ್ ಎಸ್ ಎ ಚಟುವಟಿಕೆಗಳ ದೊಡ್ಡ ಹಬ್ ಆಗಿ ರೂಪಗೊಳ್ಳಲಿದೆ ಎಂದಿದ್ದಾರೆ.
ಇದನ್ನೂ ಓದಿ: Board Exams: 30 ವರ್ಷಗಳ ಬಳಿಕ ಹತ್ತನೆ ತರಗತಿ ಪರೀಕ್ಷೆ ಪಾಸ್ ಆದ ತಂದೆ, ಫೇಲ್ ಆದ ಮಗ
ಏತನ್ಮಧ್ಯೆ 2500 ಕಿ.ಮೀ ವ್ಯಾಪ್ತಿಯಲ್ಲಿ ಕೇವಲ 10 ಸೆ.ಮೀ ಹಾಗೂ ಅದಕ್ಕಿಂತ ಹೆಚ್ಚಿನ ಗಾತ್ರದ ಆಗಸ ತ್ಯಾಜ್ಯವನ್ನು ಪತ್ತೆಹಚ್ಚಬಲ್ಲ ಸಾಮರ್ಥ್ಯದ ಮತ್ತೊಂದು ರಾಡಾರ್ ಅನ್ನು ಸಹ ನೇತ್ರಾದಡಿಯಲ್ಲಿ ರೂಪಿಸಲಾಗಿದ್ದು ಅದು ಈಶಾನ್ಯ ಭಾರತದಲ್ಲಿ ಬರಲಿದೆ ಎಂದಿರುವ ಇಸ್ರೊ ಅಧಿಕಾರಿ ಅದಕ್ಕಾಗಿ ಈಗಾಗಲೇ ಯಾವ ಪ್ರದೇಶ ಎಂಬುದರ ಮೇಲೆ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ