ಸಮಾಜವಾದಿ ಪಕ್ಷಕ್ಕೆ ಶಾಕ್​ ನೀಡಿದ ಮುಲಾಯಂ ಸಿಂಗ್ ಯಾದವ್​ ಸೊಸೆ; ಬಿಜೆಪಿ ಸೇರಿದ Aparna Yadav

ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಮಗ ಹಾಗೂ ಅಖಿಲೇಶ್​ ಯಾದವ್​ ಅವರ ತಮ್ಮ ಪ್ರತೀಕ್ ಯಾದವ್​ ಅವರ ಪತ್ನಿ ಅಪರ್ಣಾ ಯಾದವ್​.

ಬಿಜೆಪಿ ಸೇರಿದ ಅಪರ್ಣಾ ಯಾದವ್​

ಬಿಜೆಪಿ ಸೇರಿದ ಅಪರ್ಣಾ ಯಾದವ್​

 • Share this:
  ಲಕ್ನೋ (ಜ. 19): ಉತ್ತರ ಪ್ರದೇಶ ಚುನಾವಣೆ (Uttar Pradesh Election) ಘೋಷಣೆಯಾದಾಗಿನಿಂದ ಪಕ್ಷಾಂತರ ಪರ್ವ ನಡೆಯುತ್ತಿದೆ. ಬಿಜೆಪಿ ಹಲವು ಪ್ರಮುಖ ನಾಯಕರು ಸಮಾಜವಾದಿ ಪಕ್ಷ (SP) ಸೇರಿದ ಬೆನ್ನಲ್ಲೇ ಇದೀಗ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್ (Akhilesh Yadv)​ ಸಹೋದರನ ಹೆಂಡತಿ ಅಪರ್ಣಾ ಯಾದವ್​ (Aparna Yadav) ಬಿಜೆಪಿ ಸೇರಿ ಶಾಕ್​ ನೀಡಿದ್ದಾರೆ. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ನಡೆದ ಈ ಘಟನೆ ಸಾಕಷ್ಟು ಅಚ್ಚರಿ ಮೂಡಿಸಿದೆ.

  ಅಖಿಲೇಶ್​ ಯಾದವ್​ ಕೊನೆಯ ಸೊಸೆ

  ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಮಗ ಹಾಗೂ ಅಖಿಲೇಶ್​ ಯಾದವ್​ ಅವರ ತಮ್ಮ ಪ್ರತೀಕ್ ಯಾದವ್​ ಅವರ ಪತ್ನಿ ಅಪರ್ಣಾ ಯಾದವ್​. ಇಂದು ಅಧಿಕೃತವಾಗಿ ಕೇಸರಿ ಪಾಳಯ ಸೇರಿದ ಅವರನ್ನು ಸ್ವಾಗತಿಸಿದ ಬಿಜೆಪಿ ಮುಖಂಡರು, ಮುಲಾಯಂ ಸಿಂಗ್ ಅವರ ಬಾಹು (ಸೊಸೆ) ಎಂದು ಕರೆದು ಗಮನ ಸೆಳೆದರು. ಅಪರ್ಣಾ ಯಾದವ್​ ಠಾಕೂರ್​ ಬಿಷ್ಟ್​ ಸಮುದಾಯದವರಾಗಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಕೂಡ ಇದೇ ಸಮುದಾಯದಾವರಾಗಿದ್ದಾರೆ.

  ಸಮಾಜವಾದಿ ನಾಯಕರಿಗೂ ಅಚ್ಚರಿ ಮೂಡಿಸಿದ ಅಪರ್ಣಾ ನಡೆ
  ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವಿನ ಕೌಟುಂಬಿಕ ಕಲಹ ಕೊನೆಗೊಂಡಿರುವ ಸಮಯದಲ್ಲಿ ಅಪರ್ಣಾ ಯಾದವ್ ಅವರ ನಿರ್ಧಾರವು ಸಮಾಜವಾದಿ ಪಕ್ಷಕ್ಕೂ ಆಶ್ಚರ್ಯವನ್ನುಂಟು ಮಾಡಿದೆ.

  ಮೋದಿ ಅವರಿಂದ ಸ್ಪೂರ್ತಿಗೊಂಡ ಬಿಜೆಪಿ ಸೇರ್ಪಡನೆ
  ಬಿಜೆಪಿ ಸೇರಿದ ಬಳಿಕ ಮಾತನಾಡಿದ ಅಪರ್ಣಾ ಯಾದವ್​, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಸ್ಪೂರ್ತಿಗೊಂಡು ಬಿಜೆಪಿ ಸೇರುವ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ. ಬಿಜೆಪಿಯ ಯೋಜನೆಗಳಿಂದ ತುಂಬಾ ಪ್ರಭಾವಿತನಾಗಿದ್ದೇನೆ ಮತ್ತು ನಾನು ಪಕ್ಷದಲ್ಲಿ ನನ್ನ ಕೈಲಾದಷ್ಟು ಮಾಡುತ್ತೇನೆ. ದೇಶದ ಅಭಿವೃದ್ಧಿಗೆ ಏನಾದರೂ ಉತ್ತಮ ಕೆಲಸ ಮಾಡಲು ನಾನು ಬಯಸುತ್ತೇನೆ ಎಂದು ಅವರು ತಿಳಿಸಿದರು.

  ಅಪರ್ಣಾ ಯಾದವ್​​ಮಾಜಿ ಪತ್ರಕರ್ತ, ಮಾಹಿತಿ ಆಯುಕ್ತರಾಗಿದ್ದ ಅರವಿಂದ್ ಸಿಂಗ್ ಬಿಶ್ತ್ ಅವರ ಮಗಳಾಗಿದ್ದಾರೆ. ಉತ್ತರಾಖಂಡದ ಮೂಲದವರು ಇವರಾಗಿದ್ದು, ಬ್ರಿಟನ್​ ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

  ಇದನ್ನು ಓದಿ: ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್ ಬಿಕಿನಿ ಫೋಟೋಗಳು ಇದೀಗ ಸಖತ್ ವೈರಲ್!

  ಈ ಹಿಂದೆಯೂ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಅಪರ್ಣಾ
  ಯಾದವ್​​ ಕುಟುಂಬದ ಸೊಸೆಯಾಗಿದ್ದರೂ ಅಪರ್ಣಾ ಸಮಾಜವಾದಿ ಪಕ್ಷದಲ್ಲಿ ಯಾವುದೇ ಜವಾಬ್ದಾರಿಯುತ ಸ್ಥಾನವನ್ನು ಹೊಂದಿಲ್ಲ. ಆದರೆ, ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿದ ಅವರು ಲಕ್ನೋ ಕ್ಯಾಂಟ್‌ನಲ್ಲಿ ರೀಟಾ ಬಹುಗುಣ ಜೋಶಿ ವಿರುದ್ಧ ಸೋತಿದ್ದರು

  ಇದನ್ನು ಓದಿ: ರಂಗೇರಿದ ಯುಪಿ ಚುನಾವಣಾ ಕಣ- ವಿಧಾನಸಭೆಗೆ ಸ್ಪರ್ಧಿಸಲು ಅಖಿಲೇಶ್ ಯಾದವ್ ನಿರ್ಧಾರ

  ಅಪರ್ಣಾ ಯಾದವ್ ಅವರು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಲಕ್ನೋದಲ್ಲಿ ಹಸುಗಳಿಗೆ ಆಶ್ರಯ ನೀಡುವ ಸಂಸ್ಥೆ - bAware - ಅನ್ನು ನಡೆಸುತ್ತಿದ್ದಾರೆ
  ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕ್ರಮಗಳನ್ನು ಹೊಗಳಿ ಈ ಹಿಂದೆ ಸುದ್ದಿಯಲ್ಲಿದ್ದರು. ಅಷ್ಟೇ ಅಲ್ಲದೇ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 11 ಲಕ್ಷ ರೂ ದೇಣಿಗೆ ನೀಡಿ ಗಮನ ಸೆಳೆದಿದ್ದರು

  ಅಪರ್ಣಾ ಯಾದವ್​ ಪಕ್ಷಕ್ಕೆ ಸ್ವಾಗತಿಸಿದ ಬಳಿಕ ಮಾತನಾಡಿದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ, ಅರ್ಪಣಾ ಅವರನ್ನು ನಾನು ಸ್ವಾಗತಿಸಲು ಬಯಸುತ್ತೇನೆ. ಅಖಿಲೇಶ್ ಯಾದವ್ ಅವರ ಕುಟುಂಬ ಮತ್ತು ರಾಜಕೀಯ ಎರಡರಲ್ಲೂ ವಿಫಲರಾಗಿದ್ದಾರೆ ಎಂದು ಟೀಕಿಸಿದ ಅವರು, ಅಪರ್ಣಾ ಈ ಹಿಂದೆಯೇ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದರು ಎಂದು ಇದೇ ವೇಳೆ ತಿಳಿಸಿದರು
  Published by:Seema R
  First published: