ಎಸ್​ಪಿ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಉ.ಪ್ರ. ಪೊಲೀಸರಿಂದ ಲಾಠಿ ಚಾರ್ಜ್

ಯೂನಿವರ್ಸಿಟಿ ವಿದ್ಯಾರ್ಥಿ ಮುಖಂಡನ ಪ್ರಮಾಣವಚನ ಕಾರ್ಯಕ್ರಮಕ್ಕೆ ಬರುತ್ತಿದ್ದ ಅಖಿಲೇಶ್ ಯಾದವ್ ಅವರನ್ನ ತಡೆದದ್ದಕ್ಕೆ ಎಸ್​​ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು.

Vijayasarthy SN | news18
Updated:February 12, 2019, 5:20 PM IST
ಎಸ್​ಪಿ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಉ.ಪ್ರ. ಪೊಲೀಸರಿಂದ ಲಾಠಿ ಚಾರ್ಜ್
ಎಸ್​ಪಿ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿ ಚಾರ್ಜ್
Vijayasarthy SN | news18
Updated: February 12, 2019, 5:20 PM IST
ಲಕ್ನೋ(ಫೆ. 12): ಪ್ರಯಾಗರಾಜ್ (ಅಲಾಹಾಬಾದ್) ನಗರ ಪ್ರವೇಶಿಸಲು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಅನುಮತಿ ನಿರಾಕರಿಸಿದ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರದ ವಿರುದ್ಧ ಪ್ರಯಾಗ್​ರಾಜ್ ನಗರದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಎಸ್​ಪಿ ಸಂಸದ ಧರ್ಮೇಂದ್ರ ಯಾದವ್ ಸೇರಿದಂತೆ ಹಲವು ಜನರು ಗಾಯಗೊಂಡರು. ಸಮಾಜವಾದಿ ಪಕ್ಷದ ಮುಖಂಡರು ಈ ಘಟನೆಯನ್ನು ಉ.ಪ್ರ. ರಾಜ್ಯಪಾಲ ರಾಮ್ ನಾಯಕ್ ಅವರ ಗಮನಕ್ಕೆ ತರಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಕಳೆದ 10 ವರ್ಷದಲ್ಲಿ ಕೈಯನ್ನೇ ತೊಳೆದಿಲ್ಲ: ಸಾಮಾಜಿಕ ತಾಣದಲ್ಲಿ ವೈರಲ್​ ಆಯ್ತು ನಿರೂಪಕನ 'ಕೊಳಕು' ಮಾತು!

ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿನ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ತನ್ನನ್ನು ಲಕ್ನೋದ ಚೌಧರಿ ಚರಣ್ ಸಿಂಗ್ ಏರ್​ಪೋರ್ಟ್​ನಲ್ಲೇ ತಡೆಯಲಾಯಿತು ಎಂದು ಮಾಜಿ ಮುಖ್ಯಮಂತ್ರಿಯೂ ಆದ ಅಖಿಲೇಶ್ ಯಾದವ್ ಅವರು ಹೇಳಿಕೊಂಡಿದ್ದರು. “ವಿದ್ಯಾರ್ಥಿ ಮುಖಂಡನ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸರಕಾರ ಭಯಪಟ್ಟುಕೊಂಡಿದೆ. ನಾನು ಅಲಹಾಬಾದ್​ಗೆ ಬರದಂತೆ ಏರ್​ಪೋರ್ಟ್​ನಲ್ಲೇ ತಡೆದಿದೆ,” ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದರು. ಜೊತೆಗೆ, ಏರ್​ಪೋರ್ಟ್​ನಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ತಾನು ಮಾತನಾಡುತ್ತಿರುವ ಫೋಟೋಗಳನ್ನ ಸಾಕ್ಷಿಯಾಗಿ ಟ್ವೀಟ್​ನಲ್ಲಿ ಲಗತ್ತಿಸಿದ್ದರು.

ಇದನ್ನೂ ಓದಿ: ತನ್ನನ್ನು ಹುಟ್ಟಿಸಿದ್ದೇ ತಪ್ಪೆಂದು ಅಪ್ಪ-ಅಮ್ಮನ ಮೇಲೆ ದೂರು ನೀಡಿದ ಮಗರಾಯ!

ಈ ಘಟನೆಯು ಸಮಾಜವಾದಿ ಪಕ್ಷದವರಿಗೆ ಹೊಸ ಪ್ರತಿಭಟನಾ ಅಸ್ತ್ರ ಒದಗಿಸಿತು. ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಈ ವಿಚಾರ ಸದ್ದು ಮಾಡಿತು. ಸಂಸತ್​ನಲ್ಲೂ ಪ್ರತಿಧ್ವನಿಸಿತು. ಲಕ್ನೋ ಏರ್​ಪೋರ್ಟ್​ನಲ್ಲೂ ಪ್ರತಿಭಟನೆಗಳು ನಡೆದವು. ಪ್ರಯಾಗ್​ರಾಜ್​ನಲ್ಲಿ ಹೆಚ್ಚು ಕಾರ್ಯಕರ್ತರು ಜಮಾವಣೆಗೊಂಡು ಯೋಗಿ ವಿರುದ್ಧ ಘೋಷಣೆಗಳನ್ನ ಕೂಗಿದರು.

ಇದನ್ನೂ ಓದಿ: Viral Video : ಮದುವೆ ಮಂಟಪಕ್ಕೆ ರೋಡ್​ ರೋಲರ್​ ಮೂಲಕ ಆಗಮಿಸಿದ ವರ

ಅಖಿಲೇಶ್ ಯಾದವ್ ಅವರು ಬರುವುದನ್ನು ತಡೆಯಿರಿ ಎಂದು ಅಲಹಾಬಾದ್ ಯೂನಿವರ್ಸಿಟಿಯೇ ಮನವಿ ಮಾಡಿಕೊಂಡಿತ್ತು. ಹಾಗಾಗಿಯೇ ಸರಕಾರ ಈ ಕ್ರಮ ಕೈಗೊಂಡಿತು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವೇಳೆ ಸ್ಪಷ್ಟಪಡಿಸಿದ್ದಾರೆ.
First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...