ಹೊಟ್ಟೆ ಸಂಬಂಧಿತ ಖಾಯಿಲೆಗೆ ತುತ್ತಾಗಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ (81) ಅವರು ಲಕ್ನೋದಲ್ಲಿರುವ ಮೆಡಂತಾ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಜಾರ್ಚ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಹಲವು ದಿನಗಳಿಂದ ಹೊಟ್ಟೆ ಸಂಬಂಧಿ ಖಾಯಿಲೆಯಿಂದಾಗಿ ಬಳಲುತ್ತಿರುವ ಮುಲಾಯಂ ಸಿಂಗ್ ಯಾದವ್ ಕಳೆದ ವರ್ಷ ಡಿಸೆಂಬರ್ ಮತ್ತು ಈ ವರ್ಷದ ಆರಂಭದಲ್ಲೇ ಮೇ ತಿಂಗಳಲ್ಲಿ ಮೆಡಂತಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೂ ಸಮಸ್ಯೆ ಸರಿಯಾಗದ ಕಾರಣ ಮುಲಾಯಂ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂಲಕ ಈ ವರ್ಷದಲ್ಲಿ ಮುಲಾಯಂ ಸಿಂಗ್ ಯಾದವ್ ಮೂರು ಬಾರಿ ಆಸ್ಪತ್ರೆಗೆ ದಾಖಲಾದಂತಾಗಿದೆ.
"ಮುಲಾಯಂ ಸಿಂಗ್ ಯಾದವ್ ಎಂದಿನಂತೆ ಇಂದು ವಾಡಿಕೆಯ ತಪಾಸೆಣೆಗಾಗಿಯಷ್ಟೇ ಆಸ್ಪತ್ರೆಗೆ ತೆರಳಿದ್ದರು. ಆದರೆ, ಸಮಸ್ಯೆ ಉಲ್ಭಣಿಸಿರುವ ಕಾರಣ ಆಸ್ಪತ್ರೆಯಲ್ಲೇ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಸಲಹೆ ಅನ್ವಯ ಅವರು ಚಿಕಿತ್ಸೆ ಪಡೆಯಲು ಒಪ್ಪಿಗೆ ಸೂಚಿಸಿ ಚಿಕಿತ್ಸೆ ಪಡೆದು ನಂತರ ಡಿಸ್ಜಾರ್ಚ್ ಆಗಿದ್ದಾರೆ" ಎಂದು ಸಮಾಜವಾದಿ ಪಕ್ಷದ ಹೇಳಿಕೆ ನೀಡಿದೆ.
ಮುಲಾಯಂ ಸಿಂಗ್ ಯಾದವ್ 1993 ರಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಪಕ್ಷ ಸ್ಥಾಪನೆಗೆ ಮುನ್ನವೇ 1989 ರಿಂದ 1991 ರವರೆಗೆ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಸೇವೆ ಸಲ್ಲಿಸಿದ್ದರು. ನಂತರ 1993 ರಿಂದ 1995 ರವರೆಗೆ ಮತ್ತೊಂದು ಅವಧಿಗೆ ಸಿಎಂ ಆಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ : ಆಗಸ್ಟ್ 10 ರಂದು ಅಂಡಮಾನ್ ನಿಕೋಬಾರ್‌ನಲ್ಲಿ ಜಲಂತರ್ಗಾಮಿ ಕೇಬಲ್ ಉದ್ಘಾಟಿಸಲಿರುವ ನರೇಂದ್ರ ಮೋದಿ
2003 ರಿಂದ 2007 ರವರೆಗೆ ಮೂರನೇ ಮತ್ತು ಅಂತಿಮವಾಗಿ ಭಾರತದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ ಸಿಎಂ ಆಗಿ ಸೇವೆ ಸಲ್ಲಿಸಿದರು. ಅವರ ಮಗ ಅಖಿಲೇಶ್ ಯಾದವ್ 2012 ರಲ್ಲಿ ಯುಪಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ