UP Elections: ಚುನಾವಣೋತ್ತರ ಮೈತ್ರಿಗೆ ಆಹ್ವಾನಿಸುತ್ತಿದೆ ಎಂದರೆ ಬಿಜೆಪಿ ಪರಿಸ್ಥಿತಿ ಬಗ್ಗೆ ಊಹಿಸಿ: ಅಖಿಲೇಶ್ ಯಾದವ್

ರಾಷ್ಟ್ರೀಯ ಲೋಕದಳ ಅಧ್ಯಕ್ಷ ಜಯಂತ್ ಚೌಧರಿ ಜೊತೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಖಿಲೇಶ್ ಯಾದವ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಖಿಲೇಶ್ ಯಾದವ್

ಅಖಿಲೇಶ್ ಯಾದವ್

  • Share this:
ನವದೆಹಲಿ, ಜ.‌ 28: ಫೆಬ್ರವರಿ 10 ರಂದು ಪ್ರಾರಂಭವಾಗಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ (Uttar Pradesh Assembly Elections) ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amith Sah) ನೀಡಿದ್ದ ಬಿಜೆಪಿ (BJP) ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಆಹ್ವಾನವನ್ನು ನಿನ್ನೆ (ಜನವರಿ 27) ರಾಷ್ಟ್ರೀಯ ಲೋಕದಳ (Rastriya Lokadal) ಅಧ್ಯಕ್ಷ ಜಯಂತ್ ಚೌಧರಿ (Jayanth Chowdari) ತಿರಸ್ಕರಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ (Samajavadi Party Leader Akhilesh Yadav) ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಬೇರೊಂದು ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವ ಪಕ್ಷಕ್ಕೆ ಮೈತ್ರಿ ಆಹ್ವಾನ ನೀಡುತ್ತಿದೆ ಎಂದರೆ ಬಿಜೆಪಿಯ ಪರಿಸ್ಥಿತಿ ಹೇಗಿದೆ ಎಂಬುದನ್ನು ನೀವೇ ಊಹಿಸಿ' ಎಂದು ಹೇಳಿದ್ದಾರೆ.

ಬಿಜೆಪಿ ಆಹ್ವಾನ ಸ್ವೀಕರಿಸುವವರು‌ ಯಾರು?
ಶುಕ್ರವಾರ ಸಂಜೆ ರಾಷ್ಟ್ರೀಯ ಲೋಕದಳ ಅಧ್ಯಕ್ಷ ಜಯಂತ್ ಚೌಧರಿ ಜೊತೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಖಿಲೇಶ್ ಯಾದವ್ ಅವರು,‌ ಮೊದಲಿಗೆ 'ಇಲ್ಲಿಗೆ ಬರುವುದನ್ನು ತಡೆಯುವ ಉದ್ದೇಶದಿಂದಲೇ ಬಿಜೆಪಿ ನಾಯಕರು ನನ್ನ ಹೆಲಿಕಾಪ್ಟರ್ ಅನ್ನು ದೆಹಲಿಯಲ್ಲಿ ನಿಲ್ಲಿಸಿ ವಿಳಂಬ ಮಾಡಿದರು' ಎಂದು ಹೇಳಿದರು. ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ಲೋಕದಳ ಪಕ್ಷಕ್ಕೆ ಬಿಜೆಪಿ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವಂತೆ ನೀಡಿದ್ದ ಆಹ್ವಾನದ ಬಗ್ಗೆ ಮಾತನಾಡಿದರು. "ಉನ್ಕಾ ನಿಯೋತಾ ಮಾನ್ ಕೌನ್ ರಹಾ ಹೈ? ಸೋಚಿಯೇ ಕೈಸೇ ಹಲಾತ್ ಹೈಂ ಉನ್ಕಿ ನಿಯೋತಾ ದೇನಾ ಪದ್ ರಹಾ ಹೈ. (ಅವರ ಆಹ್ವಾನವನ್ನು ಯಾರು ಸ್ವೀಕರಿಸುತ್ತಿದ್ದಾರೆ? ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂದು ಊಹಿಸಿ. ಅವರು ಆಹ್ವಾನಗಳನ್ನು ಕಳುಹಿಸುತ್ತಿದ್ದಾರೆ) ಎಂದು ಹೇಳಿದರು.

ಇದನ್ನು ಓದಿ: 5G ಪ್ರಕರಣದಲ್ಲಿ Juhi Chawlaಗೆ ಬಿಗ್ ರಿಲೀಫ್, ದಂಡದ ಮೊತ್ತ ಇಳಿಸಿದ ಹೈಕೋರ್ಟ್

ಬಿಜೆಪಿಗೆ ಜಯಂತ್ ಚೌಧರಿ ತಿರುಗೇಟು
ಈ ಬಗ್ಗೆ ಗುರುವಾರ ಸಿಎನ್ಎನ್-ನ್ಯೂಸ್ 18 ಜೊತೆ ಮಾತನಾಡಿದ್ದ ಜಯಂತ್ ಚೌಧರಿ ಅವರು, 'ಗೃಹ ಸಚಿವ ಅಮಿತ್ ಶಾ ಅಥವಾ ಬಿಜೆಪಿ ಜೊತೆಗಿನ ಯಾವುದೇ ಮೈತ್ರಿಯನ್ನು ತಮ್ಮ ಪಕ್ಷವು ತಳ್ಳಿಹಾಕುತ್ತದೆ. ಅಮಿತ್ ಶಾ ಅವರ ಅಥವಾ ಬಿಜೆಪಿಯ ಈ ನಡೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯವನ್ನು ಸೆಳೆಯಲು ಹೂಡಿರುವ "ಚುನಾವಣಾ ತಂತ್ರ" ಎಂದು ಅವರು ಹೇಳಿದ್ದಾರೆ.

ವಾಸ್ತವ ಏನೆಂದರೆ ಜಾಟ್ ಸಮುದಾಯ ಹೆಚ್ಚಾಗಿ ಕೃಷಿಯನ್ನು ನಂಬಿಕೊಂಡಿರುವ ಸಮುದಾಯ. ನಮ್ಮ ಸಮುದಾಯ ರಾಷ್ಟ್ರವ್ಯಾಪಿ ನಡೆದ ರೈತರ ಚಳವಳಿಯೊಂದಿಗೆ ಭಾವನಾತ್ಮಕವಾಗಿ ಕೂಡಿಕೊಂಡಿದೆ" ಎಂದು ಉಲ್ಲೇಖಿಸಿದ್ದಾರೆ. ಈ ಮೂಲಕ 'ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಮೈತ್ರಿ ಇಲ್ಲ' ಎಂಬ ಸಂದೇಶ ರವಾನಿಸಿದ್ದಾರೆ. ಇದಲ್ಲದೆ ಜಯಂತ್ ಚೌಧರಿ ಅವರು 'ಆಹ್ವಾನ ಕಳುಹಿಸಬೇಕಿರುವುದು ರೈತರ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ 700 ರೈತರ ಕುಟುಂಬಗಳಿಗೆ, ನನಗಲ್ಲ' ಎಂದು ಟ್ವೀಟ್ ಮೂಲಕವೂ ಬಿಜೆಪಿಗೆ ತಿರುಗೇಟು ನೀಡಿದ್ದರು.

ಇದನ್ನು ಓದಿ: NeoCoV ವೈರಸ್​​ ಬಗ್ಗೆ ಎಚ್ಚರಿಸಿದ ವುಹಾನ್ ವಿಜ್ಞಾನಿಗಳು; ಕೋವಿಡ್​ಗಿಂತಲೂ ಮಾರಾಣಾಂತಿಕ

ಅಮಿತ್ ಶಾಗೆ ಜಯಂತ್ ಚೌಧರಿ ಟಕ್ಕರ್
ಅಮಿತ್ ಶಾ ಎಲ್ಲರ ಗೃಹ ಸಚಿವರಾಗಿದ್ದಾರೆ. ಆದರೆ ಚುನಾವಣೆಗೂ ಮುನ್ನ ಜಾಟ್ ನಾಯಕರೊಂದಿಗೆ ವಿಶೇಷ ಸಭೆಯನ್ನು ಕರೆದಿದ್ದೇನೆ ಎಂದು ಹೇಳುತ್ತಿದ್ದಾರೆ. ರಾಷ್ಟ್ರೀಯವಾದಿ ಪಕ್ಷವೊಂದು ಜಾತಿ ಆಧಾರದಲ್ಲಿ ಸಭೆ ಕರೆದು ಅವರನ್ನು ಓಲೈಸಲು ಪ್ರಯತ್ನಿಸುತ್ತಿರುವುದು ವಿಚಿತ್ರವಾಗಿ ಕಾಣುತ್ತದೆ. ವಾಸ್ತವವೆಂದರೆ ಜಾಟ್ ಸಮುದಾಯದವರು ಹೆಚ್ಚಾಗಿ ಕೃಷಿಕರಾಗಿದ್ದಾರೆ.

ರೈತರ ಪ್ರತಿಭಟನೆ ನಡೆದ ರೀತಿ, ಅದನ್ನು ಹತ್ತಿಕ್ಕಲು ಯತ್ನಿಸಿದ ರೀತಿಗಳೆಲ್ಲವೂ ಈಗ ಮುಖ್ಯ. ನಿನ್ನೆ ಸಭೆಗೆ (ಜಾಟ್ ನಾಯಕರ) ಹಾಜರಾದವರು ಆ ಸಮಯದಲ್ಲಿ ಯಾಕೆ ಸುಮ್ಮನಿದ್ದರು? ಈಗ ಸಮುದಾಯದ ಮತಗಳನ್ನು ಪಡೆಯುವ ಉದ್ದೇಶದಿಂದ ನನ್ನ ಬಗ್ಗೆ ಸಹಾನುಭೂತಿಯನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಜಯಂತ್ ಚೌಧರಿ ಏಕಕಾಲಕ್ಕೆ ಅಮಿತ್ ಶಾಗೆ ಹಾಗೂ ಅವರ ಜೊತೆ ಸಭೆ ನಡೆಸಿದ ಜಾಟ್ ನಾಯಕರಿಗೆ ಚಾಟಿ ಬೀಸಿದ್ದರು.
Published by:Seema R
First published: