ಜೈಪುರ: ಹಿಂದೆಲ್ಲಾ ಮನೆಯೂಟ ಮಾಡಿ ಬೇಜಾರ್ ಆಗಿದ್ರೆ ತಕ್ಷಣ ಎದ್ದು ಎಲ್ಲಾದರೂ ಒಳ್ಳೆಯ ಹೋಟೆಲ್‌ಗೆ (Hotel Food) ಹೋಗಿ ಭರ್ಜರಿ ಬ್ಯಾಟಿಂಗ್ ಮಾಡ್ತಾ ಬರ್ತಾ ಇದ್ರು. ಈಗಲೂ ಆ ಸಂಖ್ಯೆ ಕಡಿಮೆ ಆಗಿದೆ ಅಂತೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹೋಟೆಲ್‌ಗೆ ಹೋಗಿ ಆಹಾರ ತಿನ್ನೋರಿಗಿಂತ ಆನ್‌ಲೈನ್‌ನಲ್ಲಿ ಆರ್ಡರ್ (Online Order) ಮಾಡಿ ಮನೆಗೆ ತರಿಸಿ ತಿನ್ನೋರ ಸಂಖ್ಯೆ ಹೆಚ್ಚುತ್ತಿದೆ. ಒಂದೇ ಕ್ಷಣದಲ್ಲಿ ನಮ್ಮ ಇಷ್ಟದ ಫುಡ್‌ಗಳನ್ನು ಆನ್‌ಲೈನ್‌ಲ್ಲಿ (Food Delivery) ಆರ್ಡರ್ ಮಾಡಿ ತರಿಸಿ ಮನೆಲೇ ತಿನ್ನಬಹುದು.
ಹಾಗೆ ಆರ್ಡರ್ ಮಾಡಿದ ನಂತರ ಅದು ಅರ್ಧ ಗಂಟೆಯಿಂದ ಒಂದೂವರೆ ಗಂಟೆಯೊಳಗೆ ನಮ್ಮ ಮನೆಗೆ ಬಂದು ಸೇರುತ್ತದೆ. ಆದರೆ ಇಷ್ಟಕ್ಕೆ ಮುಗೀತು ಅಂತ ತಿಳಿಯಬೇಡಿ. ಏಕೆಂದರೆ, ನಮಗೆ ಬೇಕಾದ ಆಹಾರ ಯಾವ ಹೊಟೇಲ್‌ನಲ್ಲಿ ಚೆನ್ನಾಗಿ ಮಾಡುತ್ತಾರೆ ಅಂತ ನಮಗೆ ಗೊತ್ತಾಗುವುದು ಈ ಗ್ರಾಹಕರು ನೀಡಿದ ರೇಟಿಂಗ್‌ಗಳನ್ನು ನೋಡಿದ ನಂತರ ಅಂತ ಹೇಳಬಹುದು.
ಊಟ ಸ್ವಲ್ಪ ಕೆಟ್ಟದಾಗಿದ್ದರೂ ಗ್ರಾಹಕರು ನೀಡ್ತಾರೆ ಕೆಟ್ಟ ರೇಟಿಂಗ್!
ಹೌದು.. ಗ್ರಾಹಕರು ತಾವು ಆ ನಿರ್ದಿಷ್ಟವಾದ ಅಡುಗೆಯನ್ನು ಆರ್ಡರ್ ಮಾಡಿಕೊಂಡು ತಿಂದ ನಂತರ ಅದಕ್ಕೆ ಎಷ್ಟು ರೇಟಿಂಗ್ ಕೊಟ್ಟಿದ್ದಾರೆ ಮತ್ತು ರೆಸ್ಟೋರೆಂಟ್‌ಗೆ ಎಷ್ಟು ರೇಟಿಂಗ್ ಕೊಟ್ಟಿದ್ದಾರೆ ಮತ್ತು ಗ್ರಾಹಕರು ಹಾಕಿದ ರಿವ್ಯೂಗಳನ್ನು ಓದಿಕೊಂಡು ಅನೇಕರು ಆರ್ಡರ್ ಮಾಡುತ್ತಾರೆ ಅನ್ನೋದು ಸತ್ಯ. ಎಷ್ಟೋ ಬಾರಿ ಯಾವುದಾದರೂ ರೆಸ್ಟೋರೆಂಟ್ ನಿಂದ ಊಟ ಆರ್ಡರ್ ಮಾಡಿದ್ದು, ಆ ಊಟ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸರಿ ಹೊಂದಿಲ್ಲ ಅಂತಾದರೆ ಕೂಡಲೇ ರೆಸ್ಟೋರೆಂಟ್ ಗೆ ಕೆಟ್ಟ ರೇಟಿಂಗ್ ಗಳನ್ನು ಕೊಟ್ಟು ಬಿಡುತ್ತಾರೆ.
ಇದನ್ನೂ ಓದಿ: Mumbai Taj Hotel: ತಾಜ್ ಹೋಟೆಲ್ನಲ್ಲಿ ತಿಂದು ಬಿಲ್ ಕೇಳಿದ್ರೆ ಚಿಲ್ಲರೆ ಕೊಟ್ಟ ಯುವಕ, ಆಮೇಲೆ ನಡೆದಿದ್ದು ಸಖತ್ ಫನ್ನಿ!
ಹೀಗಾಗಿ ಈಗ ರೆಸ್ಟೋರೆಂಟ್‌ಗಳು ತಮ್ಮ ಗ್ರಾಹಕರ ಕೋಪಕ್ಕೆ ಗುರಿಯಾಗದಂತೆ ಒಳ್ಳೆಯ ಸೇವೆಯನ್ನು ನೀಡಲು ಪ್ರಯತ್ನಿಸುತ್ತದೆ ಅಂದರೂ ತಪ್ಪಾಗಲಿಕ್ಕಿಲ್ಲ. ಇಲ್ಲೊಬ್ಬ ಮಹಿಳೆ ಆತುರದಿಂದ ಕೆಟ್ಟ ರೇಟಿಂಗ್ ಪಡೆದಿದ್ದ ಹೊಟೇಲ್‌ನಿಂದ ಊಟವನ್ನು ಆರ್ಡರ್ ಮಾಡಿದ್ದರು. ಆದರೆ ಊಟ ಬಂದ ನಂತರ ಅದನ್ನು ಸವಿದಾಗ ಆಕೆ ಆಶ್ಚರ್ಯಕ್ಕೊಳಗಾಗಿದ್ದಾರೆ. ಯಾಕೆಂದರೆ ಯಾವ ಕೆಟ್ಟ ರೇಟಿಂಗ್ ಪಡೆದಿದ್ದ ಹೋಟೆಲ್‌ನಿಂದ ಫುಡ್ ಆರ್ಡರ್ ಮಾಡಿದ್ದರೂ ಆ ಹೋಟೆಲ್‌ನ ಆಹಾರ ಸಖತ್ ಟೇಸ್ಟೀ ಆಗಿತ್ತಂತೆ.
ಹೌದು.. ಅಂದ ಹಾಗೆ ದಕ್ಷಿಣ ಕೊರಿಯಾದ ಮೆಗ್ಗಿ ಕಿಮ್ ಎಂಬ ಬ್ಲಾಗರ್ ಇತ್ತೀಚೆಗೆ ರಾಜಸ್ಥಾನದ ಜೈಪುರದ ‘ಕೆಟ್ಟ-ರೇಟಿಂಗ್’ ಪಡೆದಿದ್ದ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಿದ್ದರಂತೆ. ಈ ಬಗ್ಗೆ ಮೆಗ್ಗಿ ಕಿಮ್ ತನ್ನ ಇನ್‌ಸ್ಟಾಗ್ರಾಮ್ ವೀಡಿಯೋದಲ್ಲಿ ಹೇಳಿದ್ದು, ಒಳ್ಳೆಯ ಆಹಾರವನ್ನು ಒದಗಿಸುವ ಹೋಟೆಲ್‌ಗೆ ಕೂಡ ಕೆಲವು ಕೆಟ್ಟ ರೇಟಿಂಗ್ ಕೊಡುತ್ತಾರೆ. ಎಂದು ಹೇಳಿದ್ದಾರೆ.
ಕೆಟ್ಟ ರೇಟಿಂಗ್ ಹೋಟೆಲ್‌ನ ಫುಡ್ ಸಖತ್ ಟೇಸ್ಟೀ!
ಝೊಮ್ಯಾಟೊದಲ್ಲಿ 17 ವಿಮರ್ಶೆಗಳಿರುವ 2.8 ಸ್ಟಾರ್ ರೇಟಿಂಗ್ ಹೊಂದಿರುವ ‘ಹೌಸ್ ಆಫ್ ಚೀನಾ’ ಎಂಬ ರೆಸ್ಟೋರೆಂಟ್‌ನಿಂದ ಮೆಗ್ಗಿ ಕಿಮ್ ಊಟವನ್ನು ಆರ್ಡರ್ ಮಾಡಿದ್ದರು. ತನ್ನ ಆರ್ಡರ್‌ನಲ್ಲಿ ದಾಲ್, ರೈತಾ, ಎರಡು ಲಚ್ಚಾ ಪರಾಟಾ, ಅನ್ನ, ಮಿಕ್ಸ್ ವೆಜಿಟೆಬಲ್ ಕರಿ ಮತ್ತು ಸಲಾಡ್ ಅನ್ನು ಒಳಗೊಂಡ ಮೊಮೋಸ್ ಕಿಂಗ್ ವೆಜಿಟೇಬಲ್ ಥಾಲಿಯನ್ನು 60% ಆಫರ್‌ನೊಂದಿಗೆ 344.40 ರೂಪಾಯಿಗೆ ಆರ್ಡರ್ ಮಾಡಿದ್ದರು.
ಇದನ್ನೂ ಓದಿ: Ujire Ajji Hotel: ಧರ್ಮಸ್ಥಳ ಮಂಜುನಾಥನ ದರ್ಶನ ಆದ್ಮೇಲೆ ಭಕ್ತರು ವಿಸಿಟ್ ಹಾಕುವ ಅಜ್ಜಿ ಹೋಟೆಲ್!
ಅಚ್ಚರಿ ಎಂದರೆ ಅವರಿಗೆ ಆ ಊಟ ಟೇಸ್ಟಿ ಅನ್ನಿಸಿತಂತೆ. ‘ಇದು ತುಂಬಾನೇ ಚೆನ್ನಾಗಿದೆ’ ಎಂದು ಆಕೆ ವಿಡಿಯೋದಲ್ಲಿ ಹೇಳಿದ್ದು, ಸಖತ್ ಎಂಜಾಯ್ ಮಾಡ್ತಾ ಆಹಾರವನ್ನು ಸೇವಿಸಿದ್ದಾರೆ. ಅಲ್ಲದೇ ‘ನಾನು ಈ ಆಹಾರದಲ್ಲಿ ಕೆಟ್ಟ ರುಚಿಯನ್ನು ಕಂಡಿಲ್ಲ, ತುಂಬಾನೆ ಚೆನ್ನಾಗಿತ್ತು’ ಎಂದು ಹೇಳಿದ್ದಾರೆ.
ಇನ್ನು ಆ ಬ್ಲಾಗರ್‌ನ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಅನೇಕರು ಶೇರ್ ಮಾಡಿದ್ದಾರೆ. ಪೋಸ್ಟ್ ಮಾಡಿದಾಗಿನಿಂದ ಈ ವರೆಗೆ ಆ ವಿಡಿಯೋ 1 ಮಿಲಿಯನ್‌ಗೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಅನೇಕರು ಭಾರತೀಯ ಆಹಾರಕ್ಕೆ ಕೆಟ್ಟ ರೇಟಿಂಗ್ ನೀಡಿದರೂ ಫುಡ್ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಆ ಹೋಟೆಲ್‌ನ ಪ್ರತಿಸ್ಪರ್ಧಿಗಳು ತಮ್ಮ ವ್ಯವಹಾರವನ್ನು ಹೆಚ್ಚಿಸಲು ಆ ಹೋಟೆಲ್‌ಗೆ ಕೆಟ್ಟ ರೇಟಿಂಗ್ ನೀಡುತ್ತಾರೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ