ಅತಿ ದೊಡ್ಡ ಸ್ಪೈಕ್ಯಾಮ್​ ಸೆಕ್ಸ್​ ಜಾಲ ಬಯಲು: 800 ದಂಪತಿಗಳ ಸರಸ ವಿಡಿಯೋ ಲೈವ್..!

ಸುಮಾರು 30 ಹೋಟೆಲ್​ಗಳ 42 ರೂಮುಗಳಲ್ಲಿ ಈ ತಂಡ ಕಾರ್ಯ ನಿರ್ವಹಿಸಿದ್ದು, ಈ ಮೂಲಕ ಎಂಟು ನೂರಕ್ಕೂ ಅಧಿಕ ಮಂದಿಯ ರಹಸ್ಯಗಳನ್ನು ಈ ತಂಡ ರೆಕಾರ್ಡ್​ ಮಾಡಿಕೊಂಡಿದೆ.

zahir | news18
Updated:March 22, 2019, 5:10 PM IST
ಅತಿ ದೊಡ್ಡ ಸ್ಪೈಕ್ಯಾಮ್​ ಸೆಕ್ಸ್​ ಜಾಲ ಬಯಲು: 800 ದಂಪತಿಗಳ ಸರಸ ವಿಡಿಯೋ ಲೈವ್..!
@Corporate Bytes
zahir | news18
Updated: March 22, 2019, 5:10 PM IST
ದಕ್ಷಿಣ ಕೊರಿಯಾ ಪೊಲೀಸರು ಅತಿ ದೊಡ್ಡ ಸ್ಪೈಕ್ಯಾಮ್ (ರಹಸ್ಯ ಕ್ಯಾಮೆರಾ) ಸೆಕ್ಸ್ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಧಾನಿ ಸಿಯೋಲ್‍ನ ಹೋಟೆಲ್‍ಗಳಲ್ಲಿ ತಂಗಿದ್ದ ಸುಮಾರು 800 ದಂಪತಿಗಳ ಸರಸ ಸಲ್ಲಾಪದ ದೃಶ್ಯಗಳನ್ನು ಈ ತಂಡ ರಹಸ್ಯವಾಗಿ ಸ್ಪೈಕ್ಯಾಮೆರಾಗಳ ಮೂಲಕ ಸೆರೆ ಹಿಡಿಯುತ್ತಿತ್ತು. ಅಲ್ಲದೆ ಈ ವಿಡಿಯೋಗಳನ್ನು ನೇರಪ್ರಸಾರ (ಲೈವ್) ಮಾಡುತ್ತಿದ್ದರು.

ಈ ಸಂಬಂಧ ಹೊಟೇಲ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ. ದೇಶದ ಸೆಕ್ಸ್​ ವಿಡಿಯೋ ಪ್ರಕರಣದಲ್ಲೇ ಅತಿ ದೊಡ್ಡ ಮಾಫಿಯಾ ಇದಾಗಿದ್ದು ಹೀಗಾಗಿ ಇದರ ಹಿಂದಿರುವವರನ್ನು ಪತ್ತೆ ಹಚ್ಚಲು ಸಂಪೂರ್ಣ ಯೋಜನೆ ಹಾಕಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮಹಿಳೆಯರ ಶೌಚಾಲಯ ಹಾಗೂ ಮಾಲ್​ಗಳ ಟ್ರಯಲ್​ ರೂಮ್​ಗಳಲ್ಲಿ ಕ್ಯಾಮೆರಾಗಳನ್ನು ಇರಿಸುವ ಪ್ರಕರಣಗಳು ಈ ಹಿಂದೆ ಸಿಯೋಲ್​ನಲ್ಲಿ ಪತ್ತೆಯಾಗಿತ್ತು. ಆದರೆ ಈ ತಂಡ ಹೋಟೆಲ್​ನಲ್ಲಿ ಹೇರ್ ಡ್ರೈಯರ್, ಗೋಡೆ ಸಾಕೆಟ್ ಮತ್ತು ಡಿಜಿಟಲ್ ಟಿವಿ ಬಾಕ್ಸ್​ಗಳಲ್ಲಿ ಸ್ಪೈಕ್ಯಾಮೆರಾ ಅವರನ್ನು ಅಳವಡಿಸಿ ಲೈವ್ ಮಾಡಿದ್ದರು.

ಸುಮಾರು 30 ಹೋಟೆಲ್​ಗಳ 42 ರೂಮುಗಳಲ್ಲಿ ಈ ತಂಡ ಕಾರ್ಯ ನಿರ್ವಹಿಸಿದ್ದು, ಈ ಮೂಲಕ ಎಂಟು ನೂರಕ್ಕೂ ಅಧಿಕ ಮಂದಿಯ ರಹಸ್ಯಗಳನ್ನು ಈ ತಂಡ ರೆಕಾರ್ಡ್​ ಮಾಡಿಕೊಂಡಿದೆ. ಅದರಲ್ಲೂ ಒಂದು ವೆಬ್​ಸೈಟ್​ ತನ್ನ ಗ್ರಾಹಕರಿಗೆ ದಂಪತಿಗಳ ಸರಸಗಳನ್ನು 24 ಗಂಟೆಗಳ ಕಾಲ ಲೈವ್ ಮೂಲಕ ತೋರಿಸಿದೆ. ಇದಕ್ಕಾಗಿ ಪ್ರತಿಯೊಬ್ಬ ವೀಕ್ಷಕರಿಂದ ತಿಂಗಳಿಗೆ ಇಂತಿಷ್ಟು ಚಂದದಾರಿಕೆ ಹಣವನ್ನು ಪಡೆದುಕೊಂಡಿದೆ ಎಂದು ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಚಡ್ಡಿಗೂ ಸಿಕ್ತು ಸ್ಥಾನ..!

ಕಳೆದ ಮೂರು ತಿಂಗಳಿಂದ ಈ ತಂಡದ ಇಂತಹ ರಹಸ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಈ ಸ್ಪೈಕ್ಯಾಮೆರಾಗಳ ಮೂಲಕ ಸುಮಾರು 800 ದಂಪತಿಗಳ ವೈಯುಕ್ತಿಕ ಕಾರ್ಯಗಳನ್ನು ಮಾರಾಟ ಮಾಡಲಾಗಿದೆ. ಈ ಸಂಬಂಧ ಇಬ್ಬರು ಬಂಧಿಸಿರುವ ಸಿಯೋಲ್ ಪೊಲೀಸರು, ಇದರ ಹಿಂದಿರುವ ತಂಡಕ್ಕಾಗಿ ಬಲೆ ಬೀಸಿದ್ದಾರೆ.
Loading...

ಇದನ್ನೂ ಓದಿ: ಸರ್ಕಾರಿ ನೌಕರಿ: ONGC ಸಂಸ್ಥೆಯ 4 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

 
First published:March 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626