• Home
 • »
 • News
 • »
 • national-international
 • »
 • Richest Country: ಶ್ರೀಮಂತ ರಾಜ್ಯಗಳ ಪಟ್ಟಿಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿರುವ ದಕ್ಷಿಣ ಭಾರತ

Richest Country: ಶ್ರೀಮಂತ ರಾಜ್ಯಗಳ ಪಟ್ಟಿಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿರುವ ದಕ್ಷಿಣ ಭಾರತ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸ್ವಾತಂತ್ರ್ಯದ ನಂತರದ ಕೆಲವೇ ವರ್ಷಗಳಲ್ಲಿ, ತಲಾ ಆದಾಯದ ಆಧಾರದ ಮೇಲೆ ನೋಡುವಾಗ ಪಶ್ಚಿಮ ಬಂಗಾಳವು ಭಾರತದ ಅತ್ಯಂತ ಶ್ರೀಮಂತ ದೇಶವಾಗಿತ್ತು. ಇದೀಗ ದಕ್ಷಿಣ ಭಾರತ ಸ್ಥಾನಗಿಟ್ಟಿಸಿಕೊಂಡಿದೆ.

 • Trending Desk
 • Last Updated :
 • New Delhi, India
 • Share this:

ಭಾರತ ದೇಶ ಎಂದರೆ ಎಲ್ಲರಿಗೂ ನೆನಪಾಗುವ ಒಂದು ಸಾಮಾನ್ಯ ಸಂಗತಿ ಎಂದರೆ ಅದು ವೈವಿಧ್ಯತೆಯಲ್ಲಿ ಏಕತೆ. ಹೌದು ಭಾರತದಲ್ಲಿ (India) ರಾಜ್ಯಗಳು ಒಂದಕ್ಕಿಂತ ಮತ್ತೊಂದು ಬಹಳ ಭಿನ್ನವಾಗಿವೆ. ದತ್ತಾಂಶ ವಿಜ್ಞಾನಿಯೊಬ್ಬರು (Scientist) ದಕ್ಷಿಣ ಭಾರತವು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ದೇಶದ ಉಳಿದ ರಾಜ್ಯಗಳನ್ನು (State) ಹಿಂದಿಕ್ಕುತ್ತಿದೆ ಎಂಬುದನ್ನು ಇಲ್ಲಿ ಚರ್ಚಿಸುತ್ತಿದ್ದಾರೆ. ಮತ್ತಷ್ಟು ಮಾಹಿತಿಗಾಗಿ ಮುಂದೆ ಓದಿ.ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದಾದ ಹರಿಯಾಣ ರಾಜ್ಯ, ಬಿಹಾರ ರಾಜ್ಯಕ್ಕಿಂತ ಆರು ಪಟ್ಟು ಶ್ರೀಮಂತವಾಗಿದೆ. ಸ್ವಾತಂತ್ರ್ಯದ ನಂತರದ ಕೆಲವೇ ವರ್ಷಗಳಲ್ಲಿ, ತಲಾ ಆದಾಯದ (Income) ಆಧಾರದ ಮೇಲೆ ನೋಡುವಾಗ ಪಶ್ಚಿಮ ಬಂಗಾಳವು ಭಾರತದ ಅತ್ಯಂತ ಶ್ರೀಮಂತ ದೇಶವಾಗಿತ್ತು (Richest Country) ಎಂಬ ಮಾಹಿತಿ ತಿಳಿದು ಬಂದಿದೆ.


ಪಶ್ಚಿಮ ಬಂಗಾಳ ರಾಜ್ಯದಂತೆ ಮಹಾರಾಷ್ಟ್ರ, ಪಂಜಾಬ್ ಮತ್ತು ಗುಜರಾತ್ ಅತ್ಯಂತ ಶ್ರೀಮಂತ ರಾಜ್ಯಗಳು ಅಲ್ಲದಿದ್ದರೂ ಅದಕ್ಕೆ ಸ್ವಲ್ಪ ಹತ್ತಿರದಲ್ಲಿರುವ ರಾಜ್ಯಗಳಾಗಿದ್ದವು. ಕಳೆದ ಆರು ದಶಕಗಳಲ್ಲಿ, ಪಶ್ಚಿಮ ಬಂಗಾಳವು ತನ್ನ ಮೊದಲ ಸ್ಥಾನದಿಂದ ಗಣನೀಯವಾಗಿ ಕುಸಿದಿದೆ ಎಂದು ದತ್ತಾಂಶ ವಿಜ್ಞಾನಿಗಳು ಹೇಳುತ್ತಾರೆ. ಈಗ ಈ ರಾಜ್ಯವು ಭಾರತೀಯ ಮಾನದಂಡಗಳ ಪ್ರಕಾರ ಕಡಿಮೆ ಆದಾಯದ ರಾಜ್ಯವಾಗಿದೆ.


ಶ್ರೀಮಂತ ದೊಡ್ಡ ರಾಜ್ಯಗಳ ಪಟ್ಟಿಗಳಲ್ಲಿ ಸ್ಥಾನ ಪಡೆದಿರುವ ದಕ್ಷಿಣ ರಾಜ್ಯಗಳು


ಆದರೆ ಮೇಲೆ ನೋಡಿದ ಪಟ್ಟಿಯಲ್ಲಿದ್ದ ಹೆಚ್ಚಿನ ರಾಜ್ಯಗಳು ಆದಾಯದಲ್ಲಿ ತುಲನಾತ್ಮಕವಾಗಿ ಸ್ಥಿರವಾದ ಆದಾಯವನ್ನು ಹೊಂದಿವೆ. ಹತ್ತು ಶ್ರೀಮಂತ ದೊಡ್ಡ ರಾಜ್ಯಗಳ ಪಟ್ಟಿಗಳಲ್ಲಿ ಸ್ಥಾನ ಪಡೆದಿರುವ ದಕ್ಷಿಣ ರಾಜ್ಯಗಳು ಅದೇನೇ ಇದ್ದರೂ, ಶ್ರೀಮಂತ ಮತ್ತು ಬಡ ರಾಜ್ಯಗಳ ನಡುವಿನ ಅಂತರವು ವಿಸ್ತರಿಸಿದೆ. ಆಶ್ಚರ್ಯಕರವಾಗಿ 2018-19 ರಲ್ಲಿ ದಕ್ಷಿಣದ ಎಲ್ಲಾ ಐದು ರಾಜ್ಯಗಳು, ಹತ್ತು ಶ್ರೀಮಂತ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ತಮ್ಮ ಸ್ಧಾನವನ್ನು ಗಿಟ್ಟಿಸಿಕೊಂಡಿವೆ.


ಹೊಸ ಸ್ವತಂತ್ರ ಭಾರತದಲ್ಲಿ ಚಾಲ್ತಿಯಲ್ಲಿರುವ ಸಿದ್ಧಾಂತವೆಂದರೆ ಕಾಲಾನಂತರದಲ್ಲಿ, ವಿವಿಧ ರಾಜ್ಯಗಳ ಆರ್ಥಿಕ ಬೆಳವಣಿಗೆ ಮತ್ತು ತಲಾ ಆದಾಯವು ಒಂದೇ ಆಗಿರುತ್ತದೆ. ಈ ಊಹೆಯು ಕೈಗಾರಿಕಾ ಯೋಜನೆಗೆ ಕೇಂದ್ರೀಕೃತ ವಿಧಾನದ ಮೇಲೆ ಆಧಾರವಾಗಿರುವ ಊಹೆಗಳಲ್ಲಿ ಒಂದಾಗಿದೆ. ಆದರೆ, ಆರ್ಥಿಕವಾಗಿ ಭಿನ್ನವಾಗಿರುವ ರಾಜ್ಯಗಳು ಒಂದೇ ಸ್ಥಿರ ಆದಾಯವನ್ನು ಹೊಂದಲು ಸಾಧ್ಯವಿಲ್ಲ ಎಂದು ಅನೇಕ ಸಂಶೋಧಕರು ಹೇಳುತ್ತಿದ್ದಾರೆ.


ಬಡ ರಾಜ್ಯಗಳು ಬಡತನದಿಂದಲೇ ಮುಂದುವರಿಯಬಾರದು


ಈ ಎಲ್ಲ ರಾಜ್ಯಗಳು ಬದಲಾಗಿ ಆದಾಯದ ವಿಭಿನ್ನ "ಸ್ಥಿರ" ಸ್ಥಿತಿಗಳನ್ನು ಹೊಂದಿವೆ. ಅಂದರೆ, ಬಡ ರಾಜ್ಯಗಳು ಬಡತನದಿಂದಲೇ ಮುಂದುವರಿದರೆ, ಶ್ರೀಮಂತ ರಾಜ್ಯಗಳು ಶ್ರೀಮಂತವಾಗಿಯೇ ಉಳಿಯುತ್ತವೆ. ಇನ್ನು ಕೆಲವು ಉತ್ತಮ ಸ್ಥಿತಿಯಲ್ಲಿರುವ ರಾಜ್ಯಗಳು ತಮ್ಮ ನೆರೆಹೊರೆಯ ಶ್ರೀಮಂತ ರಾಜ್ಯಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಅದಕ್ಕೆ ರಾಜ್ಯ ಮಟ್ಟದ ನೀತಿ ನಿರೂಪಣೆ ಮತ್ತು ಅನುಷ್ಠಾನವೇ ನೇರ ಕಾರಣ ಎಂದು ವಿವರಿಸಬಹುದು ಎಂದು ದತ್ತಾಂಶಗಳು ಸೂಚಿಸುತ್ತವೆ.


ಈ ಹಂತದಲ್ಲಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಇಲ್ಲಿ ಚರ್ಚೆ ಮಾಡುವುದು ಉಪಯುಕ್ತವಾಗಿದೆ: ಭಾರತದಲ್ಲಿ ಯಾವ ರಾಜ್ಯವನ್ನು ಶ್ರೀಮಂತ ರಾಜ್ಯವೆಂದು ಪರಿಗಣಿಸಲಾಗಿದೆ? ಒಂದು ರಾಜ್ಯಕ್ಕೆ ಮಾತ್ರ ಅವಕಾಶವಿದ್ದರೇ, ಹೆಚ್ಚಿನ ತಲಾ ಆದಾಯವಿರುವ ರಾಜ್ಯಕ್ಕೆ ಅವಕಾಶ ಸಿಗುವುದಿಲ್ಲ ಅಲ್ಲವೇ? ಅಥವಾ ಒಂದು ರಾಜ್ಯವು ತನ್ನನ್ನು ತಾನು ಆರ್ಥಿಕ ನಿರೀಕ್ಷೆಗಳ ಮಾನದಂಡಗಳಿಗೆ ಸೀಮಿತಗೊಳಿಸಿದ್ದರೂ ಸಹ ಇತರ ಸಮೃದ್ಧಿಯ ಗುರುತುಗಳನ್ನು ಹುಡುಕಬೇಕೇ?


ಅಲ್ಲದೆ, ಶ್ರೀಮಂತ ರಾಜ್ಯಗಳು ಏಕೆ ಶ್ರೀಮಂತವಾಗಿವೆ. ಹಾಗೆಯೇ ಬಡ ರಾಜ್ಯಗಳು ಇನ್ನು ಬಡ ರಾಜ್ಯಗಳಾಗಿ ಉಳಿದಿವೆ ಏಕೆ? ಎಂಬುದು ಪ್ರಮುಖ ಪ್ರಶ್ನೆಗಳಾಗುತ್ತವೆ.


ಪ್ರತಿ ರಾಜ್ಯದ ಆರ್ಥಿಕ ಪಥದಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು?


ಕೇಂದ್ರ ಸರ್ಕಾರ ರೂಪಿಸುವ ನೀತಿಗಳು ಪರಿಣಾಮ ಬೀರುತ್ತವೆಯೇ? ಬಡ ರಾಜ್ಯಗಳು ತಮ್ಮ ರಾಜ್ಯ ಶ್ರೀಮಂತವಾಗಲು ಏನು ಮಾಡಬೇಕು? ಈ ಎಲ್ಲ ನಿಯಮಗಳಿಗೆ ಭಾರತದ ಫೆಡರಲ್ ರಚನೆಯಲ್ಲಿ ಸ್ಥಾನವಿದೆಯೇ? ಹೀಗೆ ದತ್ತಾಂಶ ವಿಶ್ಲೇಷಕರು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ.


ಅನುತ್ಪಾದಕ ಕೃಷಿಯೇ ಕಾರಣ


ಸ್ವಾತಂತ್ರ್ಯದ ಸಮಯದಲ್ಲಿ ದೇಶದ ಆರ್ಥಿಕ ಉತ್ಪಾದನೆಯ ಮುಖ್ಯ ಆಧಾರವಾಗಿದ್ದ ಕೃಷಿಯು ಈಗ ವಿವಿಧ ಕಾರಣಗಳಿಗಾಗಿ ಅನುತ್ಪಾದಕ ಮತ್ತು ಕಡಿಮೆ ಇಳುವರಿ ನೀಡುವ ಆರ್ಥಿಕ ಚಟುವಟಿಕೆಯಾಗಿ ಉಳಿದಿದೆ.


ಅದರ ಹೊರತಾಗಿಯೂ, ಭಾರತದಲ್ಲಿ ಹೆಚ್ಚಿನ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಜೀವನಾಧಾರ ಬೇಸಾಯವು ಬಹಳ ಹಿಂದಿನಿಂದಲೂ ಬಡತನದ ಒಂದು ಮೂಲ ಲಕ್ಷಣವಾಗಿದೆ.


ಭಾರತದಲ್ಲಿ ಮತ್ತು ಹೆಚ್ಚಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಪ್ರಗತಿಯು ತಮ್ಮ ದೇಶದ ನಾಗರೀಕರನ್ನು ಕೃಷಿಯಿಂದ ದೂರ ಸರಿಸುತ್ತಿವೆ. ಆದ್ದರಿಂದ ಒಂದು ದೇಶದ ಆರ್ಥಿಕತೆ ಅದರ ಉತ್ಪಾದನೆ ಮತ್ತು ಸೇವೆಗಳಿಗೆ ಸಂಬಂಧಿಸಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಕಳೆದ ಶತಮಾನದಲ್ಲಿ ಒಂದು ದೇಶದ ಆರ್ಥಿಕತೆಯನ್ನು ನೋಡುವುದಾದರೇ ಯಾವುದೇ ದೇಶವು ಆಹಾರ ಬೆಳೆಗಳನ್ನು ಬೆಳೆಯುವ ಮೂಲಕ ಶ್ರೀಮಂತವಾಗಲಿಲ್ಲ. ದೇಶದ ಆರ್ಥಿಕತೆಯ ಜಿಡಿಪಿಗೆ ಕೃಷಿಯು ಶೇಕಡಾ 5 ಕ್ಕಿಂತ ಕಡಿಮೆ ಕೊಡುಗೆಯನ್ನು ನೀಡಿದೆ ಎಂಬುದು ನಿಜಕ್ಕೂ ವಿಷಾದನೀಯ ಸಂಗತಿ ಆಗಿದೆ.


ಹೈಡ್ರೋಫಿಲಿಕ್ ಬೆಳೆಗಳು


ಹೈಡ್ರೋಫಿಲಿಕ್ ಬೆಳೆಗಳಾದ ಭತ್ತ, ಗೋಧಿ ಮತ್ತು ಕಬ್ಬಿನ ಬೆಳೆಗಳ ಮೇಲೆ ಕೇಂದ್ರೀಕರಿಸಿದ ಕೃಷಿಯು ಭಾರತದ ಪರಿಸರವನ್ನು ಸಂಪೂರ್ಣವಾಗಿ ಹಾಳುಮಾಡಿದೆ. ಈ ಬೆಳೆಗಳು ಕನಿಷ್ಠ ಬೆಂಬಲ ಬೆಲೆಗಳನ್ನು (MSPs) ಹೊಂದಿದ್ದು, ಈ ಬೆಳೆಗಳು ಕಡಿಮೆ ನೀರು ಬೇಡುವ ಇತರ ಬೆಳೆಗಳ ವೆಚ್ಚದಲ್ಲಿ ತಮ್ಮ ಬಿತ್ತನೆಯನ್ನು ಉತ್ತೇಜಿಸುತ್ತವೆ.


ಕೀಟನಾಶಕಗಳ ಮೇಲೆ ಅತಿಯಾದ ಅವಲಂಬನೆ


 • ದೇಶದಲ್ಲಿ ಬೆಳೆ ವೈವಿಧ್ಯತೆಯು ಕೀಟನಾಶಕಗಳ ಮೇಲೆ ಅತಿಯಾದ ಅವಲಂಬನೆಯನ್ನು ಹೊಂದಿವೆ ಎಂದು ಡೇಟಾಗಳು ಸೂಚಿಸುತ್ತವೆ. ಇದು ಕೀಟನಾಶಕಗಳ ಹೆಚ್ಚಿನ ಬಳಕೆಗೆ ಕಾರಣವಾಗುತ್ತದೆ. ಈ ರೀತಿಯ ಕಳಪೆ ಕೃಷಿ ಪದ್ಧತಿಗಳು ನೀರಿನ ಕೊರತೆಯಿರುವ ಪ್ರದೇಶಗಳನ್ನು ಮರುಭೂಮಿಯಾಗಿಸಲು ಸಾಕಷ್ಟು ಕೊಡುಗೆಯನ್ನು ನೀಡುತ್ತಿವೆ ಎಂದು ವಿಶ್ಲೇಷಕರು ಹೇಳುತ್ತಾರೆ.

 • ವಿವಿಧ ರಾಜ್ಯಗಳ ಆರ್ಥಿಕತೆಯನ್ನು ಅರ್ಥಮಾಡಿಕೊಳ್ಳಲು ಉತ್ತಮ ಮಾರ್ಗವೆಂದರೆ ಆ ರಾಜ್ಯಗಳು ತಮ್ಮ ವಿವಿಧ ಕ್ಷೇತ್ರಗಳಿಗೆ ನೀಡುವ ಕೊಡುಗೆಗಳನ್ನು ವಿಶ್ಲೇಷಿಸುವುದು ಮುಖ್ಯವಾಗುತ್ತದೆ.

 • ಒಟ್ಟು ರಾಜ್ಯ ದೇಶೀಯ ಉತ್ಪನ್ನಕ್ಕೆ (ಜಿಎಸ್‌ಡಿಪಿ) ಕೃಷಿಯ ಕೊಡುಗೆಯ ಪ್ರಮಾಣವು ರಾಜ್ಯದ ಪ್ರಗತಿಯ ಉಪಯುಕ್ತ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. ಜಿಎಸ್‌ಡಿಪಿ ಅನುಪಾತಕ್ಕೆ ಕಡಿಮೆ ಕೃಷಿ ಉತ್ಪನ್ನವನ್ನು ಹೊಂದಿರುವ ರಾಜ್ಯಗಳು ಕೈಗಾರಿಕೀಕರಣದ ಹಾದಿಯಲ್ಲಿವೆ ಎಂದು ವಿಶ್ಲೇಷಕರು ಹೇಳುತ್ತಾರೆ.

 • ಇದರರ್ಥ ಕಡಿಮೆ ಕೃಷಿ ಉತ್ಪಾದನೆ ಹೊಂದಿರುವ ರಾಜ್ಯಗಳು ಎಂದಲ್ಲ. ಬದಲಿಗೆ, ಇತರ ವಲಯಗಳಲ್ಲಿ ಆ ರಾಜ್ಯಗಳ ಉತ್ಪಾದನೆಯು ಅಧಿಕವಾಗಿದೆ. ಕುತೂಹಲಕಾರಿಯಾಗಿ, ಉನ್ನತ ಮಟ್ಟದ ಮಾನವ ಅಭಿವೃದ್ಧಿ ಮತ್ತು ಸಾಪೇಕ್ಷ ಸಮೃದ್ಧಿಯನ್ನು ಹೊಂದಿರುವ ರಾಜ್ಯಗಳು ತಮ್ಮಜಿಎಸ್‌ಡಿಪಿ ಗೆ ಕೃಷಿಯ ಕೊಡುಗೆಯನ್ನು ಸಹ ಕಡಿಮೆ ಹೊಂದಿವೆ.

 • ಉದಾಹರಣೆಗೆ, ತಮಿಳುನಾಡಿನ GSDP ಗೆ ಕೃಷಿಯು ಕೇವಲ 3.91% ರಷ್ಟು ಕೊಡುಗೆಯನ್ನು ನೀಡುತ್ತದೆ. ಇದು ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಕೃಷಿಯಲ್ಲಿ ಕೇರಳವು ಸಹ ತನ್ನ ನೆರೆಯ ರಾಜ್ಯವನ್ನೆ ಅನುಸರಿಸುತ್ತದೆ ಅದರ ಪ್ರಮಾಣವು 4.07 % ರಷ್ಟು ಆಗಿದೆ.

 • ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ಇತರ ಪರ್ಯಾಯ ದ್ವೀಪ ರಾಜ್ಯಗಳು ತುಲನಾತ್ಮಕವಾಗಿ ಕಡಿಮೆ ಅನುಪಾತಗಳನ್ನು ಹೊಂದಿವೆ. ದಕ್ಷಿಣದ ರಾಜ್ಯಗಳಲ್ಲಿ, ಆಂಧ್ರಪ್ರದೇಶ ಮಾತ್ರ ಎರಡಂಕಿಯ ಅನುಪಾತವನ್ನು ಹೊಂದಿದೆ ಎ ಕೃಷಿಯು ಅದರ GSDP ಗೆ 11.5% ರಷ್ಟು ಕೊಡುಗೆ ನೀಡುತ್ತದೆ.

 • ಕೃಷಿಯು GSDP ಗೆ ಗಣನೀಯವಾಗಿ ಕೊಡುಗೆ ನೀಡುವ ರಾಜ್ಯಗಳ ಪಟ್ಟಿಯಲ್ಲಿ ಕಡಿಮೆ ಮಾನವ ಅಭಿವೃದ್ಧಿ ಸೂಚ್ಯಂಕಗಳು ಮತ್ತು ಕಡಿಮೆ ತಲಾ ಆದಾಯ ಹೊಂದಿರುವ ರಾಜ್ಯಗಳು, ಪ್ರಾಬಲ್ಯ ಹೊಂದಿವೆ.

 • ಪಂಜಾಬ್ ಭಾರತದ ಕೃಷಿಗೆ ಮಹತ್ತರ ಕೊಡುಗೆಯನ್ನು ನೀಡುತ್ತದೆ. ಇದು ಮಾನವ ಅಭಿವೃದ್ಧಿಯ ಸಮಂಜಸ ಮಟ್ಟಗಳೊಂದಿಗೆ ನೋಡುವುದಾದರೇ ತುಲನಾತ್ಮಕವಾಗಿ ಸಮೃದ್ಧ ರಾಜ್ಯವಾಗಿದೆ.

 • ಆರ್ಥಿಕ ಚಟುವಟಿಕೆಯಾಗಿ ಕೃಷಿಯ ಮೇಲೆ ಹೆಚ್ಚಿನ ಅವಲಂಬನೆಯನ್ನು ಹೊಂದಿದೆ. ಪಂಜಾಬ್‌ನ ಜಿಎಸ್‌ಡಿಪಿಗೆ ಕೃಷಿಯು ಶೇಕಡಾ 13.27 ರಷ್ಟು ಕೊಡುಗೆಯನ್ನು ನೀಡುತ್ತದೆ.

 • ಇದು ಪ್ರತಿ ಹೆಕ್ಟೇರ್‌ಗೆ ಹೆಚ್ಚಿನ ಇಳುವರಿಯನ್ನು ಹೊಂದಿರುವ ರಾಜ್ಯವಾಗಿದೆ. ಇದು ಇತರ ರಾಜ್ಯಗಳಿಗಿಂತ ಭಿನ್ನವಾದ ಕೃಷಿ ಪದ್ದತಿಯನ್ನು ಅಲ್ಲಿ ಅಳವಡಿಸಿಕೊಂಡಿದೆ. ಕೃಷಿಯನ್ನೆ ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡಿರುವ ಏಕೈಕ ರಾಜ್ಯ ಎಂದರೆ ತಪ್ಪಾಗಲಾರದು.

 • ಕೃಷಿಯು ಕಡಿಮೆ ಲಾಭದಾಯಕ ವೃತ್ತಿ ಆಗಿದ್ದು ಇದು ಕೃಷಿಯ ಈ ಸಮಸ್ಯೆಯು ಪ್ರಪಂಚದಾದ್ಯಂತದ ಒಂದು ವಿದ್ಯಮಾನವಾಗಿದೆ. ಆದರೆ ಭಾರತದಲ್ಲಿ, ಕಡಿಮೆ ಫಸಲು ನೀಡುವ ಸಣ್ಣ ಪ್ರಮಾಣದ ಭೂಮಿಯಲ್ಲಿ ಕೆಲಸ ಮಾಡುವ ಕೃಷಿಕರು ಹೆಚ್ಚಿದ್ದಾರೆ ಎಂದು ಹೇಳಬಹುದು.

First published: