Diamond: 500 ಕ್ಯಾರೆಟ್ ವಜ್ರ ಮರಳಿಸಿ! ಬ್ರಿಟನ್​ಗೆ ದಕ್ಷಿಣ ಆಫ್ರಿಕಾದಿಂದ ಒತ್ತಾಯ

ತಮಗೆ ಸೇರಿದ ಅತ್ಯಮೂಲ್ಯ ವಜ್ರವೊಂದನ್ನು ಹಿಂದಿರುಗಿಸುವಂತೆ ದಕ್ಷಿಣ ಆಫ್ರಿಕಾ ಬ್ರಿಟನ್‌ ಅನ್ನು ಒತ್ತಾಯಿಸುತ್ತಿದೆ. ಗ್ರೇಟ್‌ ಸ್ಟಾರ್‌ ಆಫ್‌ ಆಫ್ರಿಕಾ ಎಂದು ಕರೆಯಲ್ಪಡುವ ಅತಿದೊಡ್ಡ ವಜ್ರವನ್ನು ವಾಪಸ್‌ ನೀಡುವಂತೆ ಅಭಿಯಾನವನ್ನು ನಡೆಸುತ್ತಿದೆ.

ಆಫ್ರಿಕಾಕ್ಕೆ ಸೇರಿದ ಅತ್ಯಮೂಲ್ಯ ವಜ್ರ

ಆಫ್ರಿಕಾಕ್ಕೆ ಸೇರಿದ ಅತ್ಯಮೂಲ್ಯ ವಜ್ರ

  • Share this:
ನೂರಾರು ವರ್ಷ ಹಲವಾರು ರಾಷ್ಟ್ರಗಳನ್ನು ಆಳಿದ ಬ್ರಿಟಿಷರು (British) ದೋಚಿದ್ದು ಅಪಾರ ಆಸ್ತಿ ಸಂಪತ್ತನ್ನ ಅನ್ನೋದು ಜಗತ್ತಿಗೇ ಗೊತ್ತು. ವ್ಯಾಪಾರದ ನೆವ ಮಾಡಿ ಬಂದು ಅಲ್ಲಿನ ಆಡಳಿತವನ್ನೂ (Administration) ಕಿತ್ತುಕೊಂಡು ಸವಾರಿ ಮಾಡಿ ಬಳಿಕ ಅಲ್ಲಿರುವ ಅಷ್ಟೂ ಸಂಪತ್ತನ್ನು ಲೂಟಿ ಮಾಡಿ  ತಮ್ಮ ರಾಷ್ಟಕ್ಕೆ ಸಾಗಿಸಿಕೊಂಡಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ.  ಹಲವಾರು ರಾಷ್ಟ್ರಗಳು ಬ್ರಿಟನ್‌ (Britain) ಬಳಿ ಇರುವ ತಮ್ಮ ರಾಷ್ಟ್ರಕ್ಕೆ ಸೇರಿರುವ ಅಪರೂಪದ ಸಂಪತ್ತನ್ನು ವಾಪಸ್‌ ನೀಡಬೇಕೆಂದು ಆಗ್ರಹಿಸುತ್ತಲೇ ಬಂದಿವೆ. ಆದರೆ, ಇದ್ಯಾವುದಕ್ಕೂ ಬ್ರಿಟನ್‌ ಉತ್ತರ ನೀಡಿರಲಿಲ್ಲ. ಇದೀಗ ಇನ್ನು ಬ್ರಿಟನ್‌ ರಾಣಿ ಎಲಿಜಬೆತ್‌ ಸಾವಿನ ನಂತರ ಹಲವು ರಾಷ್ಟ್ರಗಳು ತಮ್ಮ ರಾಷ್ಟ್ರಕ್ಕೆ ಸೇರಿದ ಬೆಲೆಬಾಳುವ ಅತ್ಯಮೂಲ್ಯ ಆಭರಣಗಳನ್ನು  ಹಿಂತಿರುಗಿಸುವಂತೆ ಬೇಡಿಕೆ ಇಟ್ಟಿವೆ. ತಮ್ಮ ರಾಷ್ಟ್ರದ ಬೆಲೆಬಾಳುವ ವಜ್ರಗಳನ್ನು (Diamond) ಹಿಂದಿರುಗಿಸುವಂತೆ ಅಭಿಯಾನ ಮಾಡುತ್ತಿದ್ದಾರೆ.

ಕುಲಿನನ್‌ ಹಿಂದಿರುಗಿಸುವಂತೆ ಆಫ್ರಿಕಾ ಒತ್ತಾಯ
ತಮಗೆ ಸೇರಿದ ಅತ್ಯಮೂಲ್ಯ ವಜ್ರವೊಂದನ್ನು ಹಿಂದಿರುಗಿಸುವಂತೆ ದಕ್ಷಿಣ ಆಫ್ರಿಕಾ ಬ್ರಿಟನ್‌ ಅನ್ನು ಒತ್ತಾಯಿಸುತ್ತಿದೆ. ಗ್ರೇಟ್‌ ಸ್ಟಾರ್‌ ಆಫ್‌ ಆಫ್ರಿಕಾ ಎಂದು ಕರೆಯಲ್ಪಡುವ ಅತಿದೊಡ್ಡ ವಜ್ರವನ್ನು ವಾಪಸ್‌ ನೀಡುವಂತೆ ಒತ್ತಾಯಿಸಿದೆ.

ಈ ವಜ್ರವನ್ನು ಕುಲಿನನ್‌ 1 ಅಂತಲೂ ಕರೆಯುತ್ತಾರೆ. CNN ವರದಿಯ ಪ್ರಕಾರ, 1905 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ಮಾಡಿದ ದೊಡ್ಡ ರತ್ನದಿಂದ ಮಾಡಿದ ವಜ್ರ ಇದಾಗಿದೆ. ಈ ಅತ್ಯಮೂಲ್ಯ ವಜ್ರವನ್ನು ಆಫ್ರಿಕಾದ ವಸಾಹತುಶಾಹಿ ಆಡಳಿತಗಾರರು ಬ್ರಿಟಿಷ್ ರಾಜಮನೆತನಕ್ಕೆ ಹಸ್ತಾಂತರಿಸಿದ್ದರು. ಪ್ರಸ್ತುತ ರಾಣಿಗೆ ಸೇರಿದ ರಾಜದಂಡದ ಮೇಲೆ ಈ ವಜ್ರವನ್ನು ಅಳವಡಿಸಲಾಗಿದೆ.

ಆಫ್ರಿಕಾದಲ್ಲಿ ಶುರುವಾಗಿದೆ ಅಭಿಯಾನ
ಕುಲಿನನ್‌ ವಜ್ರವನ್ನು ಹಿಂದಿರುಗಿಸುವಂತೆ ದಕ್ಷಿಣ ಆಫ್ರಿಕಾದಲ್ಲಿ ಅಭಿಯಾನ ಆರಂಭವಾಗಿದೆ. ದಕ್ಷಿಣ ಆಫ್ರಿಕಾದ ಸಂಸತ್ತಿನ ಸದಸ್ಯರಾದ ವುಯೋಲ್ವೆತು ಝುಂಗುಲಾ ಅವರು "ಬ್ರಿಟನ್ ಮಾಡಿದ ಎಲ್ಲಾ ಹಾನಿಗಳಿಗೆ ಪರಿಹಾರ ನೀಡಬೇಕು" ಮತ್ತು "ಬ್ರಿಟನ್ ಕದ್ದ ಎಲ್ಲಾ ಚಿನ್ನ, ವಜ್ರಗಳನ್ನು ಹಿಂದಿರುಗಿಸಬೇಕು" ಎಂದು ಒತ್ತಾಯಿಸಿ ಟ್ವಿಟ್ಟರ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Queen Elizabeth and Prince Philip: ರಾಣಿ ಎಲಿಜಬೆತ್ ಮತ್ತು ಪ್ರಿನ್ಸ್ ಫಿಲಿಪ್ ಅವರ ಬದುಕಿನ ಅಪರೂಪದ ಚಿತ್ರಗಳು

ಇನ್ನು ಮಾಧ್ಯದ ವರದಿಯ ಪ್ರಕಾರ, "ಕುಲಿನನ್ ಡೈಮಂಡ್ ಅನ್ನು ತಕ್ಷಣದಿಂದಲೇ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಿಸಬೇಕು" ಎಂದು ಅಲ್ಲಿನ ಕಾರ್ಯಕರ್ತ ಥಂಡುಕ್ಸೊಲೊ ಸಬೆಲೊ ಸ್ಥಳೀಯ ಮಾಧ್ಯಮದಲ್ಲಿ ಆಗ್ರಹಿಸಿದ್ದಾರೆ. ಇನ್ನು ತನ್ನ ರಾಷ್ಟ್ರದ ವಜ್ರವನ್ನು ಹಿಂದಿರುಗಿಸುವಂತೆ change.org ನಲ್ಲಿ ಆನ್‌ಲೈನ್ ಅರ್ಜಿಯನ್ನು ಲಾಂಚ್‌ ಮಾಡಲಾಗಿದೆ. ಈ ಅಭಿಯಾನ ಬೆಂಬಲಿಸಿ 6,000 ಕ್ಕೂ ಹೆಚ್ಚು ಜನರು ಅರ್ಜಿಗೆ ಸಹಿ ಹಾಕಿದ್ದಾರೆ.

ಈ ಮಧ್ಯೆ 1600 ರ ದಶಕದ ಅವಧಿಯಲ್ಲಿ ಪಟ್ಟಾಭಿಷೇಕ ಸಮಾರಂಭಗಳಲ್ಲಿ ಮಾತ್ರ ಬಳಸಲ್ಪಡುತ್ತಿದ್ದ ಪವಿತ್ರ ವಸ್ತು ಎನ್ನಿಸಿಕೊಂಡಿದ್ದ 530.2 ಕ್ಯಾರಟ್ ನ ಡ್ರಾಪ್‌ ಆಕಾರದ ವಜ್ರವನ್ನು ರಾಜದಂಡಕ್ಕೆ ಸೇರಿಸಲಾಗಿದೆ ಅಂತ ಎಬಿಸಿ ನ್ಯೂಸ್‌ ವರದಿಯಲ್ಲಿ ಹೇಳಿದೆ.

ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದ ವಜ್ರಗಳು  
ಸದ್ಯ ಲಂಡನ್ ಟವರ್‌ನಲ್ಲಿರುವ ಜ್ಯುವೆಲ್ ಹೌಸ್‌ನಲ್ಲಿ ಈ ವಜ್ರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಔಟ್‌ಲೆಟ್ ತಿಳಿಸಿದೆ. ಆದರೆ ಈ ವಜ್ರದ ನಿಖರವಾದ ಮೌಲ್ಯವು ಅಸ್ಪಷ್ಟವಾಗಿದೆ. ಆದರೆ ಆ ಅಮೂಲ್ಯ ಸಂಪತ್ತಿನ ಇತಿಹಾಸವು ಅದರ ಮೌಲ್ಯವನ್ನು ಅಂದಾಜು ಮಾಡಲು ಸಹಕರಿಸುತ್ತದೆ.

ಇನ್ನು, ಬ್ರಿಟನ್‌ ರಾಣಿ ಎಲಿಜಬೆತ್‌ ಸಾವಿನ ನಂತರ ನೆಟ್ಟಿಗರು ಬ್ರಿಟಿಷ್ ಕುಟುಂಬದ ವಶದಲ್ಲಿರುವ ಹಲವಾರು ವಜ್ರಗಳನ್ನು ತಮ್ಮ ದೇಶಗಳಿಗೆ ಹಿಂದಿರುಗಿಸಬೇಕೆಂದು ಒತ್ತಾಯಿಸಿ ಅಭಿಯಾನಗಳನ್ನು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ:  Corgi Dogs: ರಾಣಿ ಎಲಿಜಬೆತ್ ನಿಧನದ ನಂತರ ಅವರ ನಾಯಿಗಳನ್ನು ನೋಡಿಕೊಳ್ಳುವವರು ಯಾರು?

ಅಲ್ಲದೇ, ಭಾರತದ ಅನೇಕ ನಾಗರಿಕರು ಕೂಡ ನಮಗೆ ಸೇರಿರುವ ಕೊಹಿನೂರ್‌ ವಜ್ರವನ್ನು ಹಿಂದಿರುಗಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದಾರೆ. ಎಲಿಜಬೆತ್‌ ಧರಿಸುತ್ತಿದ್ದ ರಾಜಕಿರೀಟದಲ್ಲಿರುವ ಅಪರೂಪದ ಅತ್ಯಮೂಲ್ಯ ಕೊಹಿನೂರ್‌ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಿ ಎಂದು ಕೇಳುತ್ತಿದ್ದಾರೆ.
Published by:Ashwini Prabhu
First published: