ಕನ್ಯೆ ಎಂದ್ರೆ ಕುಮಾರಿ, ಮದುವೆಯಾಗದ ಹೆಂಗಸು ಎಂದರ್ಥ. ಇನ್ನೊಂದು ಅರ್ಥದಲ್ಲಿ ಹೇಳುವುದಾದ್ರೆ ಪುರುಷರ ಜೊತೆ ದೈಹಿಕ ಸಂಪರ್ಕ ಮಾಡದ ಹುಡುಗಿ ಎಂದು. ಕನ್ಯೆಯರಿಗೆ ವಿಶೇಷವಾದ ಗೌರವವಿದ್ದು, ನವರಾತ್ರಿಯಲ್ಲಿ ಕೆಲವರು ಕನ್ಯೆಯರ ಪೂಜೆ ಸಲ್ಲಿಸುತ್ತಾರೆ. ಆದ್ರೆ ಆ ದೇಶದಲ್ಲಿ ಕನ್ಯೆಯರಿಗೆ ಅಪಮಾನ ಮಾಡಿದ್ದಾರೆ. ಹೌದು, ದಕ್ಷಿಣ ಆಫ್ರಿಕಾದ (South Africa) ಡರ್ಬನ್ (Durban)ನಲ್ಲಿ ಯುವತಿಯರಿಗೆ ಕನ್ಯತ್ವ ಪರೀಕ್ಷೆ (Virginity Test) ಮಾಡಿಸುತ್ತಿದ್ದಾರಂತೆ. ಯುವತಿಯರು ಕನ್ಯೆಯರಿಗೆಯೇ ಉಳಿದಿದ್ದಾರೋ, ಇಲ್ವೋ ಎಂದು ಟೆಸ್ಟ್ (Test) ಮಾಡ್ತಿದ್ದಾರಂತೆ. ಕನ್ಯತ್ವ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮಾತ್ರ ಕನ್ಯತ್ವ ಪ್ರಮಾಣ ಪತ್ರ (Certificate) ನೀಡಲಾಗುತ್ತಿದೆಯಂತೆ. ಪ್ರಮಾಣ ಪತ್ರ ಹಿಡಿದು ಕೆಲ ಹುಡುಗಿಯರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ.
ಕನ್ಯೆಯರಿಗೆ ಕನ್ಯತ್ವ ಪರೀಕ್ಷೆ!
ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿರುವ ನಜರೆತ್ ಬ್ಯಾಪಿಸ್ಟ್ ಚರ್ಚ್ನಲ್ಲಿ ಈ ಕನ್ವತ್ವ ಪರೀಕ್ಷೆ ನಡೆದಿದೆ. ಕನ್ಯತ್ವ ಪರೀಕ್ಷೆಗೆ 18 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರು ಬಂದು ಪರೀಕ್ಷೆ ಮಾಡಿಸಿಕೊಳ್ತಾರಂತೆ. ಮಹಿಳೆಯರಲ್ಲಿ ಪರಿಶುದ್ಧತೆಯನ್ನು ಉತ್ತೇಜಿಸಲು ಈ ಟೆಸ್ಟ್ ಮಾಡುತ್ತಾರಂತೆ. ಕನ್ಯತ್ವ ಪರೀಕ್ಷೆ ಮುಗಿದ ಮೇಲೆ, ಆಕೆ ಕನ್ಯೆಯಾಗೆ ಉಳಿದಿದ್ರೆ, ಆಕೆಗೆ ಪ್ರಮಾಣ ಪತ್ರ ನೀಡುತ್ತಾರೆ. ನಂತರ ನೀವು ಪರಿಶುದ್ಧರು ಎಂದು ಹಣೆಗೆ ಬಿಳಿ ಗಂಧವನ್ನು ಹಚ್ಚುತ್ತಾರಂತೆ. ಆಗ ಆಕೆ ಪರಿಶುದ್ಧಳು ಎಂದರ್ಥವಂತೆ.
ಪ್ರತಿವರ್ಷವೂ ನಡೆಯುತ್ತಂತೆ ಕನ್ಯತ್ವ ಪರೀಕ್ಷೆ!
ದಕ್ಷಿಣ ಆಫ್ರಿಕಾದ ಬ್ಯಾಪಿಸ್ಟ್ ಚರ್ಚ್ನಲ್ಲಿ ಪ್ರತಿ ವರ್ಷವೂ ಕನ್ಯತ್ವ ಪರೀಕ್ಷೆ ನಡೆಯುತ್ತಂತೆ. ಈ ಚರ್ಚ್ 1910ರಲ್ಲಿ ಸ್ಥಾಪಿತವಾಗಿದೆ. ಇದು ದಕ್ಷಿಣ ಆಫ್ರಿಕಾದ ಅತಿ ದೊಡ್ಡ ಎರಡನೇ ಚರ್ಚ್. ಚರ್ಚ್ ಮುಖಂಡರು ಹೇಳುವ ಪ್ರಕಾರ ಇಲ್ಲಿ ಪ್ರತಿ ವರ್ಷವೂ ಕನ್ಯತ್ವ ಪರೀಕ್ಷೆ ನಡೆಯುತ್ತಂತೆ. ಮಹಿಳೆಯರಲ್ಲಿ ಪರಿಶುದ್ಧತೆಯನ್ನು ಉತ್ತೇಜಿಸುವ ಪ್ರಯತ್ನ ಇದು ಚರ್ಚ್ ಮುಖಂಡರು ಹೇಳಿದ್ದಾರೆ.
Unbelievable. Church in South Africa gives its female members "Virginity Certificates" after these women pass a "Virginity Test."
Miles to go before we rest... https://t.co/MbbZRDhVlg
— Tarek Fatah (@TarekFatah) July 18, 2022
ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ
ಕನ್ಯತ್ವ ಪರೀಕ್ಷೆ ಮಾಡಿಸಿ, ಪ್ರಮಾಣ ಪತ್ರ ಪಡೆದ ಮೇಲೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ಯತ್ವ ಪರೀಕ್ಷೆ ಮಾಡಿಸುವುದು ಒಂದು ಕೆಟ್ಟ ಸಂಪ್ರದಾಯ. ಇದೊಂದು ನಾಚಿಕೆಗೇಡಿನ ಸಂಗತಿ. ಇದನ್ನು ನಂಬಲು ಸಾಧ್ಯವಿಲ್ಲ. ಈ ರೀತಿಯ ಪರೀಕ್ಷೆ ಮಾಡಿಸುತ್ತಾರಾ? ಕನ್ಯೆಯರಿಗೆ ಮಾತ್ರ ಈ ಪರೀಕ್ಷೆನಾ, ಅಥವಾ ಪುರುಷರಿಗೂ ಮಾಡಿಸುತ್ತಾರಾ ಎಂದೆಲ್ಲಾ ಕಾಮೆಂಟ್ಗಳನ್ನು ಹಾಕಿದ್ದಾರೆ.
ಹುಡುಗಿಯರ ವಯಸ್ಸು 21 ಆಗುತ್ತಿದ್ದಂತೆ ಕನ್ಯತ್ವ ಪರೀಕ್ಷೆ!
ಆಫ್ರಿಕನ್ ದೇಶದ ಜನರ ಸಂಸ್ಕೃತಿಗಳು ಭಿನ್ನವಾಗಿದೆ. ಅಲ್ಲಿನ ಜುಲು ಬುಡಕಟ್ಟು ಜನರ ಪದ್ಧತಿಯೊಂದು ಕೇಳುಗರಿಗೆ ಅಚ್ಚರಿಯನ್ನುಂಟು ಮಾಡುವಂತಿದೆ.ಜುಲು ಜನಾಂಗದಲ್ಲಿ ಹುಡುಗಿಯರು 21 ವರ್ಷವರೆಗೆ ಕನ್ಯೆಯಾಗಿ ಉಳಿಯುವುದು ಕಡ್ಡಾಯವಾಗಿದೆ. ಹುಡುಗಿಯರಿಗೆ 21 ವರ್ಷ ತುಂಬಿದಾಗ ಕುಟುಂಬಸ್ಥರು ಕನ್ಯತ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಹುಡುಗಿ ಕನ್ಯೆ ಎಂದು ತಿಳಿದಾಗ ಕುಟುಂಬ ಸಂಭ್ರಮಿಸುತ್ತದೆ.
ಜುಲು ಬುಡಕಟ್ಟು ಜನಾಂಗದ ಉಮೆಮುಲೋ ಸಂಪ್ರದಾಯ
ಜುಲು ಬುಡಕಟ್ಟು ಜನಾಂಗ ಉಮೆಮುಲೋ ಹೆಸರಿನ ವಿಶಿಷ್ಟ ಸಂಪ್ರದಾಯವನ್ನು ಆಚರಿಸುತ್ತಾರೆ. ಹುಡುಗಿಯರ ಕನ್ಯತ್ವ ಸಾಬೀತುಪಡಿಸುವ ಕಾರ್ಯಕ್ರಮ ಇದಾಗಿದ್ದು, ಜುಲು ಜನಾಂಗದ ಈ ವಿಶೇಷ ಕಾರ್ಯಕ್ರಮವನ್ನು ತನ್ನ ಸಂಸ್ಕೃತಿಯನ್ನಾಗಿ ಆಚರಿಸಿಕೊಳ್ಳುತ್ತಾ ಬಂದಿದೆ. ಈ ಕಾರ್ಯಕ್ರ ಮದಲ್ಲಿ ಕುಟುಂಬದ ಸದಸ್ಯರು, ಸಂಬಂಧಿಕರು ಭಾಗಿಯಾಗುತ್ತಾರೆ. ಪ್ರಾಣಿಯನ್ನು ಬಲಿಕೊಡುವ ಸಂಪ್ರದಾಯವು ಇದೆ. ನಂತರ ಆ ಪ್ರಾಣಿಯ ಚರ್ಮದಿಂದ ಹುಡುಗಿ ದೇಹವನ್ನು ಮುಚ್ಚಲಾಗುತ್ತದೆ. ಕಾರ್ಯಕ್ರಮ ವೇಳೆ ಹುಡುಗಿಗೆ ಉಡುಗೊರೆಯನ್ನು ಕೊಡುವುದಿದೆ.
ಇದನ್ನೂ ಓದಿ: ಹುಡುಗಿಯರ ವಯಸ್ಸು 21 ಆಗುತ್ತಿದ್ದಂತೆ ಕನ್ಯತ್ವ ಪರೀಕ್ಷೆ! ಟಾಪ್ಲೆಸ್ ಆಗಿ ನಡೆಯುತ್ತೆ ಈ ಕಾರ್ಯಕ್ರಮ!
ಹುಡುಗಿದಗೆ 21 ವರ್ಷ ತುಂಬಿದ ನಂತರ ಕನ್ಯತ್ವ ಪರೀಕ್ಷೆ ನಡೆಸಲಾಗುತ್ತದೆ. ಮದುವೆಗೂ ಮುಂಚೆ ಹುಡುಗಿ ಯಾವುದೇ ಅನ್ಯ ಚಟುವಟಿಕೆಯಲ್ಲಿ ತೊಡಗಿರಬಾರದು ಮತ್ತು ಜುಲು ಜನಾಂಗ ಮದುವೆಗೂ ಮುಂಚೆ ಲೈಂಗಿಕತೆಯನ್ನು ಅಶುದ್ಧವೆಂದು ನಂಬಿಕೊಂಡು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ