HOME » NEWS » National-international » SOUMITRA CHATTERJEE LEGENDARY ACTOR OF BENGALI CINEMA PASSES AWAY AT 85 RH

ಬಂಗಾಳದ ಹೆಸರಾಂತ ಹಿರಿಯ ನಟ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಸೌಮಿತ್ರ ಚಟರ್ಜಿ ನಿಧನ

ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಸೌಮಿತ್ರ ಚಟರ್ಜಿ ನೀಡಿರುವ ಸೇವೆಯನ್ನು ಪರಿಗಣಿಸಿ ಅವರಿಗೆ 2012ರಲ್ಲಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮತ್ತು ಇದಕ್ಕೂ ಮುನ್ನ 2004ರಲ್ಲಿ ಭಾರತದ ಅತ್ಯುನ್ನತ ಮೂರನೇ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಗೌರವಕ್ಕೂ ಭಾಜನರಾಗಿದ್ದಾರೆ. 

news18-kannada
Updated:November 15, 2020, 2:55 PM IST
ಬಂಗಾಳದ ಹೆಸರಾಂತ ಹಿರಿಯ ನಟ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಸೌಮಿತ್ರ ಚಟರ್ಜಿ ನಿಧನ
ಸೌಮಿತ್ರ ಚಟರ್ಜಿ
  • Share this:
ಬಂಗಾಳ ಸಿನಿಮಾ ಬಹುಖ್ಯಾತ ಹಿರಿಯ ನಟ ಸೌಮಿತ್ರ ಚಟರ್ಜಿ ಇಂದು ಬೆಳಗ್ಗೆ ಬೆಲ್ಲಿ ವ್ಯೂ ಕ್ಲಿನಿಕ್​ನಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಭಾರತ ಚಲನಚಿತ್ರ ರಂಗದಲ್ಲಿ ಖ್ಯಾತರಾಗಿದ್ದ ಚಟರ್ಜಿ ಅವರು ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಜಿತ್ ರೇ ಅವರೊಂದಿಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರೇ ಅವರೊಂದಿಗೆ ಚಟರ್ಜಿ ಅವರು 14 ಸಿನಿಮಾಗಳಲ್ಲಿ ನಟಿಸಿದ್ದಾರೆ.

85 ವರ್ಷದ ಚಟರ್ಜಿ ಅವರಿಗೆ ಕೊರೋನಾ ಸೋಂಕು ತಗುಲಿರುವುದು ಅಕ್ಟೋಬರ್ 5ರಂದು ಪರೀಕ್ಷೆಯಲ್ಲಿ ತಿಳಿದುಬಂದಿತ್ತು. ಜೊತೆಗೆ ಇತರೆ ಅಸ್ವಸ್ತತೆ ಸಮಸ್ಯೆ ಅವರಿಗಿತ್ತು. ಬಳಿಕ ಅಕ್ಟೋಬರ್ 9ರಂದು ಆಸ್ಪತ್ರೆಗೆ ದಾಖಲಾದರು. ಮರುದಿಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು.

ಅಕ್ಟೋಬರ್ 11ರಂದು ಎರಡು ಬಾರಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮಾಡಲಾಗಿದ್ದು. ಆದಾಗ್ಯೂ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿಲ್ಲ. ಉಸಿರಾಟದಲ್ಲಿ ಸುಧಾರಣೆ ಕಂಡುಬಂದರೂ ಅವರು ಶ್ವಾಸಕೋಶ ಮತ್ತು ಮೂತ್ರದ ಸೋಂಕಿನಿಂದ ಬಳಲುತ್ತಿದ್ದರು. ಕೋಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿ ಚಟರ್ಜಿ ಚಿಕಿತ್ಸೆ ಪಡೆಯುತ್ತಿದ್ದರು. 12 ಮಂದಿಯ ವೈದ್ಯಕೀಯ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೂ ವಯೋಸಹಜ ಕಾಯಿಲೆ ಜೊತೆಗೆ ಕೊರೋನಾದಿಂದ ಅವರು ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಇದನ್ನು ಓದಿ: ಚೀನಾ ಬೆಂಬಲಿತ RCEP ಒಪ್ಪಂದಕ್ಕೆ ಏಷ್ಯಾದ 15 ದೇಶಗಳ ಸಹಿ; ಹೆಚ್ಚಲಿದೆ ಡ್ರಾಗನ್ ಪ್ರಭಾವ

1935ರಂದು ಕೋಲ್ಕತ್ತದಲ್ಲಿ ಜನಿಸಿದ ಚಟರ್ಜಿ ಅವರು 1959ರಲ್ಲಿ ಮೊದಲ ಬಾರಿಗೆ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ, ಸತ್ಯಜಿತ್ ರೇ ಅವರ ವರ್ಲ್ಡ್ ಆಫ್ ಅಪು (ಅಪೂರ್ ಸಂಸಾರ್) ಸಿನಿಮಾದಲ್ಲಿ ನಟಿಸಿದರು. ರೇ ಅವರ ಸೋನಾರ್ ಕೆಳಾ (1974 ಹಾಗೂ ಜೊ  ಬಾಬಾ ಫೆಲುನಾಥ್ (1979) ಚಿತ್ರಗಳಲ್ಲಿ ಫೆಲುಡಾ ಸರಣಿಯ ಪುಸ್ತಕಗಳಲ್ಲಿ ಕಲ್ಕತ್ತಾದ ಪ್ರಸಿದ್ಧ ಖಾಸಗಿ ತನಿಖಾಧಿಕಾರಿ ಫೆಲುಡಾ / ಪ್ರದೋಷ್ ಚಂದ್ರ ಮಿಟ್ಟರ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇವು ಇಂದಿಗೂ ಸೌಮಿತ್ರ ಚಟರ್ಜಿ ಅವರ ಸ್ಮರಣೀಯ ಪಾತ್ರಗಳಾಗಿವೆ.

ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಸೌಮಿತ್ರ ಚಟರ್ಜಿ ನೀಡಿರುವ ಸೇವೆಯನ್ನು ಪರಿಗಣಿಸಿ ಅವರಿಗೆ 2012ರಲ್ಲಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮತ್ತು ಇದಕ್ಕೂ ಮುನ್ನ 2004ರಲ್ಲಿ ಭಾರತದ ಅತ್ಯುನ್ನತ ಮೂರನೇ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಗೌರವಕ್ಕೂ ಭಾಜನರಾಗಿದ್ದಾರೆ.
Published by: HR Ramesh
First published: November 15, 2020, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading