Anti-Drug campaign: "ರಿಯಲ್ ಹೀರೋ" ಸೋನು ಸೂದ್ ರಿಂದ ಮತ್ತೊಂದು ಒಳ್ಳೆ ಕಾರ್ಯ!

ಮಾದಕ ಮುಕ್ತ ಭಾರತಕ್ಕೆ ಸೋನು ಸೂದ್ ಪಣತೊಟ್ಟಿದ್ದಾರೆ. ಡ್ರಗ್ಸ್ ನಿಂದ ಹಾಳಾಗುತ್ತಿರುವ ಯುವಪೀಳಿಗೆಯನ್ನು ಸರಿ ದಾರಿಗೆ ತರಲು ಸೋನು ಸೂದ್ ಮುಂದಾಗಿದ್ದಾರೆ. ಮಾದಕ ವಸ್ತುಗಳಿಂದ ಜೀವಕ್ಕೆ ಅಪಾಯ ಎಂಬುದನ್ನು ತಿಳಿಸಲು ಸೋನು ಸೂದ್ ಮುಂದಾಗಿದ್ದಾರೆ.

ಸೋನು ಸೂದ್

ಸೋನು ಸೂದ್

  • Share this:
    ಸೋನು ಸೂದ್ ಈ ಹೆಸರು ಕೇಳಿದರೆ ಲಕ್ಷಾಂತರ ಮಂದಿ ಮನಸಲ್ಲಿ ಅದೇನೋ ಒಂಥರಾ ಖುಷಿ. ಹಾಗೆ ಅದೆಷ್ಟೋ ಮಂದಿಯ ಕಣ್ಣಲಿ ನೀರೂ ಬರುತ್ತೆ. ಯಾಕೆ ಅಂದರೆ ಕ್ರೂರಿ ಕೊರೋನಾ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದ್ದ ಸಾಮಾನ್ಯರ ಬೆನ್ನಿಗೆ ನಿಂತಿದ್ದೇ ಈ ಸೋನು ಸೂದ್. ಅದೆಷ್ಟೋ ಕಾರ್ಮಿಕರು ಲಾಕ್ ಡೌನ್ ಸಮಯದಲ್ಲಿ ತಮ್ಮ ಮನೆಗೆ ಹಿಂದಿರುಗಲಾಗದೆ ಪರದಾಟ ನಡೆಸುತ್ತಿದ್ದರು. ಇವರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮನೆ ತಲುಪಿಸಿದ್ದೇ ಈ ಸೋನು ಸೂದ್. ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಜೀವ ಉಳಿಸಿಕೊಳ್ಳಲು ಪರಿತಪಿಸುತ್ತಿದ್ದವರಿಗೆ ಸಹಾಯ ಹಸ್ತ ಚಾಚ್ಚಿದ್ದೇ ಈ ಸೋನು ಸೂದ್. ಹೌದು, ನಟ ಸೋನು ಸೂದ್, ತನ್ನ ಪರೋಪಕಾರಿ ಕೆಲಸದಿಂದಲೇ ಹೆಸರು ಗಳಿಸಿದವರು. ಸಿನಿಮಾದಲ್ಲಿ ಹೆಚ್ಚಾಗಿ ವಿಲನ್ ಆಗಿ ಕಾಣಿಸಿಕೊಳ್ಳುವ ಸೋನು ಸೂದ್, ನಿಜ ಜೀವನದಲ್ಲಿ ರಿಯಲ್ ಹೀರೋ ಆದ್ರು. ಕರೋನಾ ಬಂದಾಗಿನಿಂದಲೂ ಸೋನು ಸೂದ್ ಈ ರೀತಿಯ ಒಳ್ಳೆ ಕೆಲಸಗಳನ್ನು ಮಾಡಿಕೊಂಡೇ ಬಂದಿದ್ದಾರೆ. ನಟ ಸೋನು ಸೂದ್ ಇದೀಗ ಮತ್ತೊಂದು ಒಳ್ಳೆ ಕಾರ್ಯಕ್ಕೆ ಮುಂದಾಗಿದ್ದಾರೆ.

    ಸೋನು ಸೂದ್ ತಮ್ಮ ನಟನೆ ಹಾಗೂ ತಮ್ಮ ಪರೋಪಕಾರಿ ಕೆಲಸಗಳಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ಮಾದಕ ಲೋಕದ ವಿರುದ್ಧ ಯುದ್ಧಕ್ಕೆ ನಿಂತಿದ್ದಾರೆ ಸೋನು ಸೂದ್. ಮಾದಕ ವ್ಯಸನವನ್ನು ಎದುರಿಸಲು "ದೇಶ್ ಕೆ ಲಿಯೆ" ಅಭಿಯಾನವನ್ನ ಪ್ರಾರಂಭಿಸಿದ್ದಾರೆ. ಮಾದಕ ಮುಕ್ತ ಭಾರತಕ್ಕೆ ಸೋನು ಸೂದ್ ಪಣತೊಟ್ಟಿದ್ದಾರೆ. ಡ್ರಗ್ಸ್ ನಿಂದ ಹಾಳಾಗುತ್ತಿರುವ ಯುವಪೀಳಿಗೆಯನ್ನು ಸರಿ ದಾರಿಗೆ ತರಲು ಸೋನು ಸೂದ್ ಮುಂದಾಗಿದ್ದಾರೆ. ಮಾದಕ ವಸ್ತುಗಳಿಂದ ಜೀವಕ್ಕೆ ಅಪಾಯ ಎಂಬುದನ್ನು ತಿಳಿಸಲು ಸೋನು ಸೂದ್ ಮುಂದಾಗಿದ್ದಾರೆ.

    ಇದನ್ನೂ ಓದಿ:ಅ.14 ರಂದು ಒಟಿಟಿಯಲ್ಲಿ ರಿಲೀಸ್​ Jyotika ಅಭಿನಯದ 50ನೇ ಚಿತ್ರ Udanpirappe

    ಈ ಅಭಿಯಾನ ಆರಂಭಿಸಿದ ಬಳಿಕ ಮಾತನಾಡಿರುವ ಸೋನು ಸೂದ್ ಯುವಪೀಳಿಗೆಗೆ ಒಳ್ಳೆಯ ಸಂದೇಶವನ್ನ ನೀಡಿದ್ದಾರೆ. "ಮಾದಕ ವ್ಯಸನಕ್ಕೆ ಸಿಲುಕಿ
    ಬಳಲುತ್ತಿರುವ  ಸಂಖ್ಯೆ ಹೆಚ್ಚಿದೆ ಎಂದು ನಾನು ಭಾವಿಸುತ್ತೇನೆ. ಅದೆಷ್ಟೋ ಮಂದಿ ವ್ಯಸನದಿಂದ ಆಚೆ ಬರಲು ಯತ್ನಿಸಿದರು, ಅವರಿಂದ ಇದು ಸಾಧ್ಯವಾಗುತ್ತಿಲ್ಲ. ಈ ಹಿಂದೆ ನನ್ನನ್ನ ಪಂಜಾಬ್ Anti-Drug campaignಗೆ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಯಿತು. ಇದಾದ ಬಳಿಕ ನಾನು ಈ ಬಗ್ಗೆ ಆಳವಾಗಿ ತಿಳಿದುಕೊಂಡೆ. ಸಾವಿರಾರು ಪೋಷಕರು ತಮ್ಮ ಮಕ್ಕಳನ್ನು ಈ ಮಾದಕ ವ್ಯಸನದಿಂದ ಹೊರತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸೂಕ್ತವಾದ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಪರದಾಟ ನಡೆಸುತ್ತಿದ್ದಾರೆ".

    ಇಂಥವರ ಬೆನ್ನಿಗೆ ನಿಲ್ಲಲು "ದೇಶ್ ಕೆ ಲಿಯೆ" ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಮಾದಕ ವ್ಯಸನದಿಂದ ಹೊರಬರಲು ಇಚ್ಚಿಸುವವರು ಇಲ್ಲಿ ನೋಂದಾಯಿಸಿಕೊಳ್ಳಬಹುದು. ನಿಮ್ಮ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ನಾವು ಭರಿಸುತ್ತೇವೆ ಎಂದು ಸೋನು ಸೂದ್ ಹೇಳಿದ್ದಾರೆ. ಅಥವಾ ನಿಮಗೆ ಗೊತ್ತಿರುವ ಮಾದಕ ವ್ಯಸನಿಗಳ ಬಗ್ಗೆ ನಮಗೆ ಮಾಹಿತಿ ನೀಡಿ ಎಂದು ಸೋನು ಸೂದ್ ಕರೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಒಬ್ಬ ನಾಯಕನ ಜೀವ ಉಳಿಸಿ ನೀವು ನಾಯಕರಾಗಿ. ಹೀಗೆ ಮಾಡಿದರೆ ಲಕ್ಷಾಂತರ ಮಂದಿಯ ಜೀವವನ್ನು ನಾವು ಉಳಿಸಬಹುದು. ಭಾರತದಿಂದ ಬೇರಿನ ಸಮೇತ ಈ ಮಾದಕವನ್ನು ಕಿತ್ತು ತೆಗೆಯೋಣ. ಈ ಅಭಿಯಾನಕ್ಕೆ ನಮ್ಮ ಜೊತೆ ನೀವು ಕೈಜೋಡಿಸಿ ಎಂದು ಸೋನು ಸೂದ್ ಮನವಿ ಮಾಡಿಕೊಂಡಿದ್ದಾರೆ.

    ವರದಿ- ವಾಸುದೇವ್. ಎಂ
    Published by:Latha CG
    First published: