ಮತ್ತೆ ಆಪತ್ಬಾಂಧವನಾದ ನಟ ಸೋನು ಸೂದ್: Ukraineನಲ್ಲಿ ಸಿಲುಕಿರುವವರಿಗೆ ಹೇಗೆಲ್ಲಾ ಸಹಾಯ ಮಾಡ್ತಿದ್ದಾರೆ ನೋಡಿ..

ಯುದ್ಧ ಪೀಡಿತ ಉಕ್ರೇನ್​​ನಲ್ಲಿರುವ ಭಾರತೀಯರ ಸುರಕ್ಷಿತ ವಾಪಸ್ಸಾತಿಗೆ ಎಲ್ಲರೂ ಪ್ರಾರ್ಥಿಸುತ್ತಿರುವ ಸಮಯದಲ್ಲಿ, ಸೋನು ಮತ್ತೆ ಸಹಾಯಕ್ಕೆ ನಿಂತಿದ್ದಾರೆ. ಉಕ್ರೇನ್​​ನಿಂದ ಭಾರತಕ್ಕೆ ಮರಳಲು ಭಾರತೀಯರಿಗೆ ನೆರವು ನೀಡುತ್ತಿದ್ದಾರೆ.

ಸೋನು ಸೂದ್​

ಸೋನು ಸೂದ್​

  • Share this:
ಮುಂಬೈ: ಸೋನು ಸೂದ್(Sonu Sood)​​... ಕೊರೊನಾ (Corona) ಕಾಲದಲ್ಲಿ ಆಪತ್ಬಾಂಧವನಂತೆ ಭಾರತೀಯರ ನೆರವಿಗೆ ನಿಂತ ಬಾಲಿವುಡ್​​ ನಟ(Bollywood Actor). ಸಹಾಯಕ್ಕೆ ಮತ್ತೊಂದು ಹೆಸರು ಸೋನು ಎಂಬಂತ ಖ್ಯಾತಿಯನ್ನು ಗಳಿಸಿದ್ದಾರೆ. ಇತರೆ ಯಾವುದೇ ಹೀರೋ ಮಾಡದನ್ನು ಮಾಡುವ ಮೂಲಕ ನಿಜ ಜೀವನದಲ್ಲಿ ಹೀರೋ ಎನಿಸಿಕೊಂಡಿದ್ದಾರೆ. ಭಾರತೀಯರ ಸಂಕಷ್ಟಕ್ಕೆ ಮಿಡಿಯುವ ಸೋನು ಮನ ಉಕ್ರೇನ್​-ರಷ್ಯಾ ಬಿಕ್ಕಟ್ಟಿನ ಸಮಯಲ್ಲೂ ಮಿಡಿದಿದೆ. ಯುದ್ಧ ಪೀಡಿತ ಉಕ್ರೇನ್​​ನಲ್ಲಿರುವ ಭಾರತೀಯರ ಸುರಕ್ಷಿತ ವಾಪಸ್ಸಾತಿಗೆ ಎಲ್ಲರೂ ಪ್ರಾರ್ಥಿಸುತ್ತಿರುವ ಸಮಯದಲ್ಲಿ, ಸೋನು ಮತ್ತೆ ಸಹಾಯಕ್ಕೆ ನಿಂತಿದ್ದಾರೆ. ಉಕ್ರೇನ್​​ನಿಂದ ಭಾರತಕ್ಕೆ ಮರಳಲು ಭಾರತೀಯರಿಗೆ ನೆರವು ನೀಡುತ್ತಿದ್ದಾರೆ.

ಸೋನು ಸೂದ್ ನೆರವಿನ ಹಸ್ತ

ಕಳೆದೊಂದು ವಾರದಿಂದ ಉಕ್ರೇನ್​ ಮೇಲೆ ನಡೆಸುತ್ತಿರುವ ದಾಳಿಯನ್ನು ರಷ್ಯಾ ಮುಂದುವರೆಸಿದೆ. ರಷ್ಯಾದ ಆಕ್ರಮಣದಿಂದಾಗಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಈ ಸಂಕಷ್ಟದ ಸಮಯದಲ್ಲೂ ಪರೋಪಕಾರಿ ಸೋನು ಸೂದ್ ನೆರವಿನ ಹಸ್ತವನ್ನು ಚಾಚಿದ್ದಾರೆ. ಹಲವಾರು ವಿದ್ಯಾರ್ಥಿಗಳು ಸೋನು ಅವರ ಚಾರಿಟಿ ಸಂಸ್ಥೆಯಿಂದ ಸಹಾಯ ಪಡೆಯುವ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಅವರು ಸುರಕ್ಷಿತವಾಗಿ ಮನೆಗೆ ಮರಳಲು ಸಹಾಯ ಮಾಡುತ್ತಿದ್ದಾರೆ. ಈ ಬಗ್ಗೆ ನಟ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಯುದ್ಧಕ್ಕೆ ತುತ್ತಾಗಿರುವ ಕಾರ್ಕೀವ್​ ನಗರವನ್ನು ತೊರೆಯುವಂತೆ ಭಾರತ ತನ್ನ ಪ್ರಜೆಗಳಿಗೆ ಹೇಳಿದೆ. ಆದಷ್ಟು ಬೇಗ ಅಕ್ಕಪಕ್ಕದ ರಾಷ್ಟ್ರಗಳ ಗಡಿಯನ್ನು ತಲುಪಿ, ಅಲ್ಲಿಂದ ತನ್ನ ಪ್ರಜೆಗಳನ್ನು ಭಾರತಕ್ಕೆ ತರಲು ಕೇಂದ್ರ ಸರ್ಕಾರ, ರಾಯಭಾರ ಕಚೇರಿ ಪ್ರತಿಸುತ್ತಿದೆ. ಈ ರೀತಿ ಪೋಲೆಂಡ್​ ಬಾರ್ಡರ್​​ಗೆ ವಿದಯ್ಆರ್ಥಿಗಳು ತಲುಪಲು ನಟ ಸೋನು ಸೂದ್​ ಸಹಾಯ ಮಾಡಿದ್ದಾರೆ. ಈ ಬಗ್ಗೆ ನೆರವು ಪಡೆದವರು ವಿಡಿಯೋ ಮಾಡಿ ಸೋನುಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಯೋಜನೆಯನ್ನು ವಿವರಿಸಿರುವ ಸೋನು ಸೂದ್, ಸ್ಥಳೀಯ ಟ್ಯಾಕ್ಸಿಗಳನ್ನು ವಿದ್ಯಾರ್ಥಿಗಳ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಅವರನ್ನು ಖಾರ್ಕಿವ್‌ನ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ. ನಂತರ ಅಲ್ಲಿಂದ ಅವರು ರೈಲಿನಲ್ಲಿ ಎಲ್ವಿವ್ ನಗರದ ಸುರಕ್ಷಿತ ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಅಲ್ಲಿಂದ ಅವರನ್ನು ಪೋಲಿಷ್ ಗಡಿಗೆ ಸಾಗಿಸಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ನಟ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಅದೃಷ್ಟವಶಾತ್ ನಾವು ಅನೇಕ ವಿದ್ಯಾರ್ಥಿಗಳಿಗೆ ಗಡಿಯನ್ನು ದಾಟಿ ಸುರಕ್ಷಿತ ಪ್ರದೇಶ ಸೇರಲು ಸಹಾಯ ಮಾಡಿದ್ದೇವೆ. ಈ ಪ್ರಯತ್ನವನ್ನು ಮುಂದುವರಿಸೋಣ ಎಂದು ಟ್ವೀಟ್​ ಮಾಡಿದ್ದಾರೆ.

ಭಾರತೀಯರ ಕಷ್ಟಕ್ಕೆ ಮಿಡಿದಿರುವ ಸೋನು ಉಪಕಾರವನ್ನು ಎಲ್ಲರೂ ಕೊಂಡಾಡುತ್ತಿದ್ದಾರ. ಕೊರೊನಾ ಕಾಲದಲ್ಲೂ ಹಿಂದಿ ನಟ ತನ್ನೆಲ್ಲಾ ಇತಿಮಿತಿಗಳನ್ನು ಮೀರಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದರು. ಲಾಕ್​ಡೌನ್​ ಸಮಯದಲ್ಲಿ ಸುರಕ್ಷಿತವಾಗಿ ತಮ್ಮ ಊರುಗಳನ್ನು ಸೇರಲು ವಿಮಾನ, ಬಸ್​ಗಳ ಸಹಾಯ ಮಾಡಿದ್ದರು. ಕೊರೊನಾ 2ನೇ ಅಲೆ ವೇಳೆ ಎದುರಾದ ಆಕ್ಸಿಜನ್​ ಕೊರತೆ ಸಂದರ್ಭದಲ್ಲೂ ಸೋನು ನೆರವಿಗೆ ನಿಂತಿದ್ದರು. ಅವರ ಸಮಾಜಿಕ ಜಾಲತಾಣ ಮೂಲಕ ಜನರಿಗೆ ಸ್ಪಂದಿಸುವ ಪರಿ ಎಂಥವರನ್ನೂ ಅವರ ಅಭಿಮಾನಿಯನ್ನಾಗಿ ಮಾಡಿದೆ.

ಇದನ್ನೂ ಓದಿ: ರಾಕೆಟ್ ಮೇಲಿದ್ದ ಅಮೆರಿಕಾ, ಬ್ರಿಟನ್ ಧ್ವಜಗಳಿಗೆ ಕೊಕ್: ಭಾರತದ ಧ್ವಜವನ್ನು ಉಳಿಸಿಕೊಂಡ Russia.. ಏಕೆ?

ಕಳೆದೊಂದು ವಾರದಿಂದ ಉಕ್ರೇನ್​ ರಾಷ್ಟ್ರದ ಮೇಲೆ ರಷ್ಯಾ ನಿರಂತರ ಆಕ್ರಮಣದಲ್ಲಿ ತೊಡಗಿದೆ. ಮಾ.1ರಂದು ರಷ್ಯಾ ಪಡೆಗಳು ನಡೆಸಿದ ಶೆಲ್​ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆ ಮೂಲದ ಮೆಡಿಕಲ್​ ವಿದ್ಯಾರ್ಥಿ ನವೀನ್​​ (21) ಮೃತಪಟ್ಟಿದ್ದಾರೆ. ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ನವೀನ್​ ಕುಟುಂಬಕ್ಕೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ನವೀನ್​ ಮೃತದೇಹವನ್ನು ತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ.
Published by:Kavya V
First published: