ಸೋನು ಸೂದ್ ಅವರ ಸಮಾಜ ಸೇವೆ ಹೊಗಳಿಕೆಗೆ ಪದಗಳಿಲ್ಲ. ದೇಶದಲ್ಲಿ ಕಷ್ಟ ಎಂದವರ ಪಾಲಿನ ದೇವರಾಗಿದ್ದಾರೆ ಅವರು. ಈ ಮಾನವೀಯತೆಯ ಮೂರ್ತಿ ಈಗ ಮಹಿಳಾ ಶೂಟರ್ ಒಬ್ಬರ ನೆರವಿಗೆ ಆಗಮಿಸಿದ್ದು, ಆಕೆಯ ಕನಸಿಗೆ ರೆಕ್ಕೆ ಕಟ್ಟಿದ್ದಾರೆ. ಅಷ್ಟೇ ಅಲ್ಲದೇ, ಈ ಮೂಲಕ ಒಲಂಪಿಕ್ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರದ ಪದಕ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಜರ್ಖಂಡ್ನ ಕೊನಿಕಾ ಲಯಕ್ ಎಂಬ ರಾಜ್ಯ ಮಟ್ಟ ಮಹಿಳಾ ಶೂಟರ್ ಒಬ್ಬರು ಸೋನು ಸೂದ್ಗೆ ಸಹಾಯ ಕೋರಿ ಟ್ವೀಟ್ ಮೂಲಕ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿರುವ ಸೋನು ಸೂದ್ 3 ಲಕ್ಷ ರೂಪಾಯಿ ಮೌಲ್ಯದ ಜರ್ಮನ್ ರೈಫೆಲ್ ಅನ್ನು ಉಡುಗೊರೆಯಾಗಿ ನೀಡಿದ್ದು, ಅವರ ಅಭ್ಯಾಸಕ್ಕೆ ನೆರವಾಗಿದ್ದಾರೆ.
ಕಳೆದ ಜನವರಿಯಲ್ಲಿ ಸೋನ್ ಸೂದ್ ಟ್ವೀಟ್ ಮಾಡಿದ ಕೊನಿಕಾ ಲಯಕ್, ತಾವು ಜಾರ್ಖಂಡ್ನ 11ನೇ ರಾಜ್ಯ ರೈಫಲ್ ಶೂಟಿಂಗ್ ಚಾಪಿಂಯನ್ಶಿಪ್ನಲ್ಲಿ ಬೆಳ್ಳಿ ಮತ್ತು ಚಿನ್ನದ ಪದಕ ಗೆದಿದ್ದೇನೆ. ಆದರೂ ಕೂಡ ಸರ್ಕಾತ ತನ್ನ ಸಹಾಯಕ್ಕೆ ಬಂದಿಲ್ಲ. ಅಭ್ಯಾಸಕ್ಕಾಗಿ ತನಗೊಂದು ರೈಫಲ್ ನೀಡುವಂತೆ ಸರ್ಕಾರದ ಸಚಿವರು, ಅಧಿಕಾರಿಗಳು ಸೇರಿದಂತೆ ನಟ ಸೋನು ಸೂದ್ಗೆ ಟ್ಯಾಗ್ ಮಾಡಿ ಮನವಿ ಮಾಡಿದ್ದರು.
ಅವರ ಮನವಿಗೆ ಮಾರ್ಚ್ನಲ್ಲಿ ಸ್ಪಂದಿಸಿದ ಸೋನು ಸೂದ್ ಶೀಘ್ರದಲ್ಲೇ ರೈಫಲ್ ನೀಡುವ ಭರವಸೆ ನೀಡಿದ್ದರು.
ಜಾರ್ಖಂಡ್ನ ಧನ್ಬಾದ್ನ ಕೊನಿಕಾ ಎರಡು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಅರ್ಹತೆ ಪಡೆದಿದ್ದು, ಈ ವೇಳೆ ತನ್ನ ಕೋಚ್ ಹಾಗೂ ಸ್ನೇಹಿತರಿಂದ ರೈಫಲ್ ಪಡೆದು ಪ್ರದರ್ಶನ ನಡೆಸಿದ್ದರು. ಈ ಕುರಿತು ಮಾತನಾಡಿರುವ ಕೊನಿಕಾ, ರೈಫಲ್ ಬೆಲೆ ಸುಮಾರು 3 ಲಕ್ಷ ರೂ ಇದ್ದು, ಅದನ್ನು ಪಡೆಯುವಷ್ಟು ಹಣ ತಮ್ಮ ಬಳಿ ಇಲ್ಲ. ಇದೇ ಕಾರಣದಿಂದ ನಾನು ಕೋಚ್ ಮತ್ತು ಸ್ನೇಹಿತರನ್ನು ಅವಲಂಬಿಸುತ್ತಿದ್ದೆ. ರೈಫಲ್ ಪಡೆಯಬೇಕೆಂದು 80 ಸಾವಿರ ಹಣ ವ್ಯವಸ್ಥೆ ಮಾಡಿಕೊಂಡು 1 ಲಕ್ಷ ಲೋನ್ ಮಾಡಲು ಮುಂದಾಗಿದ್ದೆ. ಈಗಾಗಲೇ ಅರ್ಡರ್ ಮಾಡಿದ್ದು, ಅದು ಇನ್ನು ಎರಡೂವರೆ ತಿಂಗಳಲ್ಲಿ ಸಿಗಲಿದೆ. ಈ ವೇಳೆ ಅದೃಷ್ಟವಶಾತ್ ಸೋನು ಸೂದ್ ಫೌಂಡೇಶನ್ ನನಗೆ ಜರ್ಮನ್ ರೈಫಲ್ ಅನ್ನು ನೀಡಿದರು ಎಂದು ತಿಳಿಸಿದ್ದಾರೆ.
ರೈಫಲ್ ಸಿಗುತ್ತಲೇ ಕೊನಿಕಾ ಟ್ವಿಟರ್ ಮೂಲಕ ಸೋನು ಸೂದ್ಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ರೈಫಲ್ ಸಿಕ್ಕಿದ್ದು, ಇದರಿಂದ ಕುಟುಂಬ ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ, ಇಡೀ ಗ್ರಾಮ ನಿಮ್ಮ ಆಶೀರ್ವಾದಿಸುತ್ತಿದೆ ಎಂದಿದ್ದಾರೆ.
ಇದನ್ನು ಓದಿ: ಜು. 19ರಿಂದ ಮುಂಗಾರು ಅಧಿವೇಶನ ಆರಂಭ ಸಾಧ್ಯತೆ
ಇದಕ್ಕೆ ಪ್ರತಿಕ್ರಿಯಿಸಿರುವ ನಟ, ಮುಂದಿನ ಒಲಂಪಿಕ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಖಚಿತ. ಇದಕ್ಕಾಗಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.
ಸೋನು ಸೂದ್ ಅವರ ಈ ಕಾರ್ಯಕ್ಕೆ ಹಲವರು ಮೆಚ್ಚಿ ನಿಮ್ಮ ಸಹಾಯಕ್ಕೆ ಕೊನೆ ಎಂಬುದೇ ಇಲ್ಲ. ನಿಮ್ಮ ಕಾರ್ಯ ಅದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ