Sonu Sood: ಕೋವಿಡ್ ಸಂದರ್ಭದಲ್ಲಿ ಮಾನವೀಯತೆ ಮೆರೆದ ನಟ ಸೋನು ಸೂದ್ ತೆರಿಗೆ ವಂಚಿಸಿದ್ದಾರೆಯೇ?

ನಟ ಸೂನು ಸೂದ್​ ಮನೆಯಲ್ಲಿ ಐಟಿ ದಾಳಿಯಾದ ಬಳಿಕ ಮೊದಲ ಬಾರಿ ಈ ಕುರಿತು ಮೌನ ಮುರಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ತಿಳಿಸಿದ್ದಾರೆ.

Sonu Sood

Sonu Sood

  • Share this:

ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲನೆಯ ಅಲೆಯ ಸಮಯದಲ್ಲಿ 48 ವರ್ಷದ ನಟ ಸೋನು ಸೂದ್ (Actor Sonu Sood) ಅವರು ತೋರಿದಂತಹ ಮಾನವೀಯತೆಯನ್ನು ನಾವೆಲ್ಲಾ ಕಣ್ಣಾರೆ ಕಂಡಿದ್ದೇವೆ. ಅವರ ಉತ್ತಮ ಕೆಲಸಕ್ಕಾಗಿ ದೇಶಾದ್ಯಂತ ಜನರು ಅವರನ್ನು ಶ್ಲಾಘಿಸಿದರು. ಈ ವೇಳೆ ಅನೇಕರ ಪಾಲಿನ ನಿಜವಾದ ಜೀರೋ ಅವರಾದರು.  ಕಳೆದ ವರ್ಷದ ಲಾಕ್‌ಡೌನ್ ನಿಂದಾಗಿ ತಮ್ಮ ಊರುಗಳಿಗೆ ಹೋಗಲು ಆಗದಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವ ಸಾವಿರಾರು ವಲಸಿಗರಿಗಾಗಿ ತಮ್ಮ ಮನೆಗೆ ಸುರಕ್ಷಿತವಾಗಿ ತಲುಪಿಸಲು ವಿಶೇಷ ವಿಮಾನಗಳನ್ನು ಆಯೋಜಿಸಿದರು. ಎರಡನೇ ಅಲೆಯ ಉತ್ತುಂಗದಲ್ಲಿ, ಅವರು ಕೋವಿಡ್ ರೋಗಿಗಳಿಗೆ ಆಮ್ಲಜನಕವನ್ನು ಆಯೋಜಿಸುವ ಅತ್ಯಂತ ಸಕ್ರಿಯ ಕೆಲಸ ಮಾಡಿ ಅನೇಕರ ಪಾಲಿಗೆ ದೇವರಾದರು ಎಂದರು ತಪ್ಪಾಗಲಾರದು.


ಆದರೆ ಆದಾಯ ತೆರಿಗೆ ಇಲಾಖೆಯವರು (Income Tax Raid On sonu Sood house and office) ನಟ ಸೋನು ಸೂದ್ ಅವರ ಕಚೇರಿಗಳು, ಆಸ್ತಿ ಮತ್ತು ನಿವಾಸವನ್ನು ಸಮೀಕ್ಷೆ ಮಾಡಿದ ನಂತರ, ನಟ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಉತ್ತರವಾಗಿ ಸಾಮಾಜಿಕ ಮಾಧ್ಯಮದಲ್ಲಿರುವ ಅವರ ಖಾತೆಯ ಪುಟದಲ್ಲಿ ಒಂದು ಚಿಕ್ಕ ಟಿಪ್ಪಣಿಯನ್ನು ಬರೆದಿದ್ದಾರೆ.


ಇದರಲ್ಲಿ ನಟ 'ಈ ಕಥೆಯಲ್ಲಿ ತನ್ನ ಭಾಗವನ್ನು ಹೇಳುವ ಅಗತ್ಯವಿಲ್ಲ’ ಎಂದು ಹೇಳಿದರು. ಸೋನು ತನ್ನ ಫೌಂಡೇಶನ್ ನ ಪ್ರತಿಯೊಂದು ರೂಪಾಯಿಯೂ ಅಗತ್ಯವಿರುವವರಿಗೆ ಹೋಗುತ್ತದೆ ಅಥವಾ ಒಂದು ಜೀವವನ್ನು ಉಳಿಸುತ್ತದೆ ಎಂದು ಹೇಳಿದರು. ಅವರು ತಮ್ಮ ಜಾಹೀರಾತುಗಳ ಶುಲ್ಕವನ್ನು ಚಾರಿಟಿಗಳಿಗೆ ದಾನ ಮಾಡುವಂತೆ ಬ್ರ್ಯಾಂಡ್ ಗಳನ್ನು ಕೋರಿದ್ದಾರೆ ಎಂದು ಅವರು ಹೇಳಿದರು.


ಇದನ್ನು ಓದಿ: ಪಾಲಿಕೆ ಸೋಲಿನ ಬಳಿಕ ಎಂಇಎಸ್ ಪುಂಡಾಟ: ಪುಂಡರ ಚಳಿ ಬಿಡಿಸಿದ ಮಹಿಳಾ ಅಧಿಕಾರಿ!

ಅವರು ಕೆಲ ದಿನಗಳ ಕಾಲ ಜನರಿಗೆ ಸಹಾಯ ಮಾಡಲು ಆಗುವುದಿಲ್ಲ. ಏಕೆಂದರೆ ನಮ್ಮ ಮನೆಗೆ ಕೆಲವು ಅತಿಥಿಗಳು ಬರುವವರಿದ್ದಾರೆ. ಕೂಡಲೇ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಮತ್ತೆ ಮರಳುವುದಾಗಿ ಹೇಳಿಕೊಂಡಿದ್ದಾರೆ.


ನಟ ಈ ಪೋಸ್ಟ್‌ಗೆ ಹಿಂದಿ ದ್ವಿಪದಿಯೊಂದಿಗೆ ಶೀರ್ಷಿಕೆ ನೀಡಿದ್ದಾರೆ, ಪ್ರತಿಯೊಬ್ಬ ಭಾರತೀಯನ ಬೆಂಬಲ ಮತ್ತು ಶುಭ ಹಾರೈಕೆಗಳನ್ನು ಅವರು ಹೊಂದಿದ್ದಾರೆ ಎಂದು ಹೇಳಿದರು.


ಇದನ್ನು ಓದಿ: ನ್ಯಾಯಾಲಯದಲ್ಲಿ ಸ್ಟೇನೋಗ್ರಾಫರ್​, ಟೈಪಿಸ್ಟ್​ ಹುದ್ದೆ ಖಾಲಿ; SSLC ಪಾಸ್​ ಆಗಿದ್ರೆ ಸಾಕು

ನಟ ಸೂದ್ ಮತ್ತು ಅವರ ಸಹಚರರು 20 ಕೋಟಿ ರೂಪಾಯಿಗಳ ತೆರಿಗೆ ವಂಚಿಸಿದ್ದಾರೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಶನಿವಾರದಂದು ಆರೋಪಿಸಿದೆ. ಆದಾಯ ತೆರಿಗೆ ಇಲಾಖೆ ತನ್ನ ಮೇಲೆ ಮತ್ತು ಲಕ್ನೋ ಮೂಲದ ಸಂಬಂಧಿತ ಕಂಪೆನಿಯ ಮೇಲೆ ದಾಳಿ ನಡೆಸಿದ ನಂತರ, ಅವರು "ಅನೇಕ ನಕಲಿ ಘಟಕಗಳಿಂದ ನಕಲಿ ಅಸುರಕ್ಷಿತ ಸಾಲಗಳ ರೂಪದಲ್ಲಿ ಸಾಗಿಸಿದ್ದಾರೆ ಎಂದು ಕಂಡುಬಂದಿದೆ ಎಂದು ಹೇಳಿದೆ. ವಿದೇಶದಿಂದ ದೇಣಿಗೆ ಸಂಗ್ರಹಿಸುವಾಗ ಸೂದ್ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯನ್ನು ಸಹ (ಎಫ್‌ಸಿಆರ್‌ಎ) ಉಲ್ಲಂಘಿಸಿದ್ದಾರೆ ಎಂದು ಅದು ಆರೋಪಿಸಿದೆ.


"ನಟ ಮತ್ತು ಅವರ ಸಹಚರರನ್ನು ವಿಚಾರಿಸಿದಾಗ ಮತ್ತು ವಿವರಗಳನ್ನು ಪರಿಶೀಲಿಸಿದಾಗ ತೆರಿಗೆ ವಂಚನೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ನಟ ಸೋನು ಅನೇಕ ನಕಲಿ ಘಟಕಗಳಿಂದ ನಕಲಿ ಅಸುರಕ್ಷಿತ ಸಾಲಗಳ ರೂಪದಲ್ಲಿ ತನ್ನ ಲೆಕ್ಕಕ್ಕೆ ಸಿಗದ ಆದಾಯವನ್ನು ಸಾಗಿಸಿದ್ದಾರೆ", ಎಂದು ಸಿಬಿಡಿಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


First published: