ಅಖಾಡಕ್ಕೆ ಧುಮಿಕಿದ ಸೋನಿಯಾ ಗಾಂಧಿ; ಫಲಿತಾಂಶಕ್ಕೆ ಮುನ್ನವೇ ಸರ್ಕಾರ ರಚನೆಗೆ ಕಸರತ್ತು, ಮಹಾಮೈತ್ರಿಗೆ ಮತ್ತೆ ಒತ್ತು

Lok Sabha Elections 2019: 2004ರಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಅವರ ಚೈತ್ರ ಯಾತ್ರೆಗೆ ತಡೆಯೊಡ್ಡಿದ್ದ ಸೋನಿಯಾ ಗಾಂಧಿ, ಇದೀಗ ಪ್ರಧಾನಿ ನರೇಂದ್ರ ಮೋದಿಗೂ ತಡೆಗೋಡೆಯಾಗಲಿದ್ದಾರೆಯೇ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಬೆಳವಣಿಗೆ ಬಿಜೆಪಿ ಪಾಳಕ್ಕೂ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ.

MAshok Kumar | news18
Updated:May 15, 2019, 7:43 PM IST
ಅಖಾಡಕ್ಕೆ ಧುಮಿಕಿದ ಸೋನಿಯಾ ಗಾಂಧಿ; ಫಲಿತಾಂಶಕ್ಕೆ ಮುನ್ನವೇ ಸರ್ಕಾರ ರಚನೆಗೆ ಕಸರತ್ತು, ಮಹಾಮೈತ್ರಿಗೆ ಮತ್ತೆ ಒತ್ತು
ಸೋನಿಯಾ ಗಾಂಧಿ
  • News18
  • Last Updated: May 15, 2019, 7:43 PM IST
  • Share this:
ನವ ದೆಹಲಿ (ಮೇ.15) : ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಹಾಗೂ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಕೊನೆಗೂ ರಾಷ್ಟ್ರ ರಾಜಕಾರಣದ ಅಖಾಡಕ್ಕೆ ಧುಮುಕಿದ್ದು, ಲೋಕಸಭೆ ಫಲಿತಾಂಶಕ್ಕೆ ಮುನ್ನವೇ ಸರ್ಕಾರ ರಚನೆಗೆ ಬೇಕಾದ ಮಹಾಮೈತ್ರಿಗೆ ಕಸರತ್ತು ಆರಂಭಿಸಿದ್ದಾರೆ. ಇದರ ಭಾಗವಾಗಿ ಎಲ್ಲಾ ಮಿತ್ರ ಪಕ್ಷಗಳಿಗೆ ಪತ್ರ ಬರೆಯುವ ಮೂಲಕ ಸಹಕಾರ ಕೋರಿದ್ದು, ರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಅಲ್ಲದೆ 2004ರಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಅವರ ಚೈತ್ರ ಯಾತ್ರೆಗೆ ತಡೆಯೊಡ್ಡಿದ್ದ ಸೋನಿಯಾ ಗಾಂಧಿ, ಇದೀಗ ಪ್ರಧಾನಿ ನರೇಂದ್ರ ಮೋದಿಗೂ ತಡೆಗೋಡೆಯಾಗಲಿದ್ದಾರೆಯೇ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಬೆಳವಣಿಗೆ ಬಿಜೆಪಿ ಪಾಳಯಕ್ಕೂ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ.

ಲೋಕಸಭೆ ಚುನಾವಣೆ 2019ರಲ್ಲಿ ಯಾವ ಪಕ್ಷಗಳಿಗೂ ಬಹುಮತ ಲಭ್ಯವಾಗುವುದಿಲ್ಲ. ಅಲ್ಲದೆ ಸರ್ಕಾರ ರಚನೆಯಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಈಗಾಗಲೇ ರಾಷ್ಟ್ರ ಮಟ್ಟದ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳು ಖಚಿತಪಡಿಸಿವೆ. ಈ ಹಿನ್ನೆಲೆಯಲ್ಲಿ ಫಲಿತಾಂಶಕ್ಕೆ ಮುನ್ನವೇ ಬಿಜೆಪಿ ವಿರೋಧಿ ಮನಸ್ಥಿತಿಯ ಪಕ್ಷಗಳನ್ನು ಒಟ್ಟಿಗೆ ಸೇರಿಸಲು ಮುಂದಾಗಿರುವ ಸೋನಿಯಾ ಗಾಂಧಿ ಯುಪಿಎ ಹಾಗೂ ಎನ್​ಡಿಎ ಮೈತ್ರಿಯಲ್ಲಿರುವ ಎಲ್ಲಾ ಪ್ರಾದೇಶಿಕ ಪಕ್ಷಗಳಿಗೆ ಪತ್ರ ಬರೆಯುವ ಮೂಲಕ ಸಹಕಾರ ಕೋರಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ರಾಷ್ಟ್ರಪತಿ ಸರ್ಕಾರ ರಚಿಸಲು ಮೊದಲು ತಮ್ಮನ್ನೆ ಆಹ್ವಾನಿಸುವಂತೆ ತಂತ್ರ ಹೆಣೆದಿರುವ ವಿಪಕ್ಷಗಳು; ಏನದು ಸ್ಟ್ರಾಟರ್ಜಿ?

ಸೋನಿಯಾ ಗಾಂಧಿ ರಣತಂತ್ರ : ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಗಳಾದರೂ ಈ ಬಾರಿಯ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್​ ಮೇಕರ್​ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ಎಎಪಿ, ಕೋಲ್ಕತಾದಲ್ಲಿ ತೃಣಮೂಲ ಕಾಂಗ್ರೆಸ್, ಉತ್ತರಪ್ರದೇಶದಲ್ಲಿ ಎಸ್​ಪಿ, ಬಿಎಸ್​ಪಿ, ಓಡಿಶಾದಲ್ಲಿ ಬಿಜು ಜನತಾದಳ, ಆಂಧ್ರಪ್ರದೇಶದಲ್ಲಿ ಟಿಡಿಪಿ, ವೈಎಸ್​ಆರ್​ ಕಾಂಗ್ರೆಸ್, ತೆಲಂಗಾಣದಲ್ಲಿ ಟಿಆರ್​ಎಸ್, ಮಹಾರಾಷ್ಟ್ರದಲ್ಲಿ ಎನ್​ಸಿಪಿ ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆ ಹಾಗೂ ಎಡಪಕ್ಷಗಳು ಈ ಬಾರಿ ಸರ್ಕಾರ ರಚನೆ ಮಾಡುವವರು ಯಾರು? ಹಾಗೂ ಪ್ರಧಾನಿ ಯಾರು? ಎಂಬುದನ್ನು ನಿರ್ಧರಿಸಲಿವೆ ಎಂಬುದು ಈಗಾಗಲೇ ಖಚಿತವಾಗಿದೆ.

ಇದೇ ಕಾರಣಕ್ಕೆ ಎನ್​ಡಿಎ, ಯುಪಿಎ ಹಾಗೂ ತೃತೀಯ ರಂಗಕ್ಕೆ ಸೇರಿದ ಎಲ್ಲಾ ಪ್ರಾದೇಶಿಕ ಪಕ್ಷಗಳಿಗೆ ಪತ್ರ ಬರೆದಿರುವ ಸೋನಿಯಾ ಗಾಂಧಿ “ಜಾತ್ಯಾತೀತ ಸರ್ಕಾರ ರಚಿಸಲು ಬಿಜೆಪಿ ವಿರೋಧಿ ಬಣ ಒಟ್ಟಾಗಬೇಕು ಹಾಗೂ ಇದಕ್ಕೆ ಎಲ್ಲಾ ಪಕ್ಷಗಳ ಸಹಕಾರ ಬೇಕು,” ಎಂದು ಮನವಿ ಮಾಡಿ ಪತ್ರ ಬರೆದಿದ್ದಾರೆ.ವರ್ಕೌಟ್ ಆಗುತ್ತಾ ಕಾಂಗ್ರೆಸ್ ಸ್ಟ್ರಾಟಜಿ? : ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನ ಭದ್ರನೆಲೆಯನ್ನು ಕಳೆದುಕೊಂಡು ದಶಕಗಳೇ ಆಗಿವೆ. ಬಿಜೆಪಿಗೂ ಇಲ್ಲಿ ಹೇಳಿಕೊಳ್ಳುವಂತಹ ಗಟ್ಟಿ ನೆಲೆ ಇಲ್ಲ. ಒಟ್ಟು 37 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಅವಳಿ ರಾಜ್ಯಗಳಲ್ಲಿ ಟಿಡಿಪಿ, ವೈಎಸ್​ಆರ್ ಕಾಂಗ್ರೆಸ್ ಹಾಗೂ ಟಿಆರ್​ಎಸ್​ ಪಕ್ಷಗಳದ್ದೇ ಮೇಲುಗೈ.

ಟಿಡಿಪಿ ಈಗಾಗಲೇ ಕಾಂಗ್ರೆಸ್​ ಮೈತ್ರಿಯಲ್ಲಿ ಗುರುತಿಸಿಕೊಂಡಿದೆ. ಅಲ್ಲದೆ ವೈಎಸ್​ಆರ್ ಕಾಂಗ್ರೆಸ್ ಅಧ್ಯಕ್ಷ ಜಗಮೋಹನ್​ ರೆಡ್ಡಿಯೂ ಸಹ ಇತ್ತೀಚೆಗೆ ಕಾಂಗ್ರೆಸ್ ಪರವಾದ ಹೇಳಿಕೆ ನೀಡಿದ್ದು ಚುನಾವಣೆ ನಂತರ ಕಾಂಗ್ರೆಸ್​ ಜೊತೆ ಕೈಜೋಡಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇನ್ನೂ ತೃತೀಯ ರಂಗ ರಚನೆಗಾಗಿ ಪ್ರಯತ್ನಿಸುತ್ತಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ್​ ರಾವ್ ಸಹ ಬಿಜೆಪಿ ವಿರೋಧಿ ನಿಲುವು ತಳೆದಿರುವುದು ಕಾಂಗ್ರೆಸ್ ಪಾಲಿಗೆ ವರದಾನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ : ಪಿಣರಾಯ್​​​​ ವಿಜಯನ್-ಕೆಸಿಆರ್​​ ಭೇಟಿ; ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿ ಬೆಳವಣಿಗೆ; ತೃತೀಯ ರಂಗಕ್ಕೆ ಸಿಕ್ತಾ ಚಾಲನೆ?​​​​​

ಇದಲ್ಲದೆ ತಮಿಳುನಾಡಿನಲ್ಲಿ ಈಗಾಗಲೇ ಕಾಂಗ್ರೆಸ್ ಜೊತೆ ಮೈತ್ರಿ ಸಾಧಿಸಿರುವ ಡಿಎಂಕೆ ಎಲ್ಲಾ 37 ಸ್ಥಾನಗಳಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ. ಇನ್ನೂ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್, ಒಡಿಶಾದ ಬಿಜು ಜನತಾದಳ ಹಾಗೂ ಉತ್ತರಪ್ರದೇಶದ ಎಸ್​ಪಿ-ಬಿಎಸ್​ಪಿ ಚುನಾವಣೆ ನಂತರ ಕಾಂಗ್ರೆಸ್​ಗೆ ಬೆಂಬಲಿಸುವುದು ಬಹುತೇಖ ಖಚಿತ ಎನ್ನಲಾಗುತ್ತಿದೆ. ಈ ಎಲ್ಲಾ ಪಕ್ಷಗಳ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದರೆ ಸೋನಿಯಾ ಸ್ಟ್ರಾಟಜಿ ವರ್ಕೌಟ್ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದೇ ಕಾರಣಕ್ಕೆ ಅವರು ಎಲ್ಲಾ ಪಕ್ಷಗಳಿಗೂ ಪತ್ರ ಬರೆಯುವ ಮೂಲಕ ಸಂಬಂಧ ಸುಧಾರಣೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸರ್ಕಾರ ರಚನೆ ಕುರಿತು ಕಳೆದ ವಾರ ಮೇ.8 ರಂದು ಸಭೆ ನಡೆಸಿದ್ದ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಮೇ.21 ರಂದು ಎಲ್ಲಾ ಪಕ್ಷಗಳ ಸಭೆ ನಡೆಸುವುದಾಗಿ ತಿಳಿಸಿದ್ದರು. ಅಲ್ಲದೆ ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ತಮ್ಮನ್ನೇ ಮೊದಲು ಸರ್ಕಾರ ರಚನೆಗೆ ಆಹ್ವಾನಿಸಬೇಕು ಎಂದು ಈಗಾಗಲೇ ರಣತಂತ್ರ ಹೆಣೆದಿದ್ದರು. ಆದರೆ, ಇದರ ಬೆನ್ನಿಗೆ ಕಳೆದ ಎರಡು ವರ್ಷಗಳಿಂದ ಸಕ್ರೀಯ ರಾಜಕಾರಣದಿಂದ ದೂರ ಉಳಿದಿದ್ದ ಸೋನಿಯಾ ಗಾಂಧಿ ಇದೀಗ ದಿಢೀರನೆ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವುದು ಹಾಗೂ ಎಲ್ಲಾ ಪಕ್ಷಗಳಿಗೂ ಪತ್ರ ಬರೆದು ಸಹಕಾರ ಕೋರಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading